ಹೈಕೋರ್ಟ್ನಲ್ಲಿ ನ್ಯಾಯ ಸಿಕ್ಕು ಮುಡಾ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸುವ ಭರವಸೆ ಇದೆ: ಸ್ನೇಹಮಯಿ ಕೃಷ್ಣ
ಮುಖ್ಯಮಂತ್ರಿಯವರ ಕುಟುಂಬಕ್ಕೆ ಕ್ಲೀನ್ ಚಿಟ್ ಕೊಡುವುದು ಸಾಧ್ಯವೇ ಇಲ್ಲ, ಯಾಕೆಂದರೆ ಮುಡಾದಲ್ಲಿ ಅವರು ನಡೆಸಿರುವ ಅಕ್ರಮಕ್ಕೆ ಸೂಕ್ತ ದಾಖಲಾತಿಗಳನ್ನು ಒದಗಿಸಲಾಗಿದೆ ಎಂದು ಕೃಷ್ಣ ಹೇಳುತ್ತಾರೆ. ಮುಡಾ ಅಧಿಕಾರಿಗಳಿಂದ ಪ್ರಮಾದ ಜರುಗಿದೆ ಎಂದು ಲೋಕಾಯುಕ್ತ ಹೇಳುತ್ತದೆ, ಅದು ನಿಜವೇ ಆಗಿದ್ದಲ್ಲಿ ಬೇರೆಯವರ ವಿಷಯದಲ್ಲೂ ಅವರಿಂದ ತಪ್ಪು ಜರುಗಿರಬೇಕಲ್ಲ ಎಂದು ಕೃಷ್ಣ ಪ್ರಶ್ನಿಸುತ್ತಾರೆ.
ಹುಬ್ಳಳ್ಳಿ: ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಅಧಿಕಾರಿಗಳು ತನಿಖೆಯನ್ನು ವಿಚಾರಣೆಯನ್ನು ಮುಗಿಸಿ ಕೋರ್ಟ್ ಗೆ ವರದಿಯನ್ನು ಸಲ್ಲಿಸಿದ್ದಾರೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ಸಿಕ್ಕಿರುವ ವದಂತಿ ಇದೆ. ಏತನ್ಮಧ್ಯೆ, ದೂರುದಾರ ಸ್ನೇಹಮಯಿ ಕೃಷ್ಣ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಹೈಕೋರ್ಟ್ ಮೊರೆ ಹೊಕ್ಕಿದ್ದಾರೆ ಮತ್ತು ಇವತ್ತು ಧಾರವಾಡದ ಉಚ್ಚ ನ್ಯಾಯಾಲಯ ಪೀಠದಲ್ಲಿ ವಿಚಾರಣೆ ನಡೆಯಲಿದೆ. ನಮ್ಮ ಹುಬ್ಬಳ್ಳಿ ವರದಿಗಾರನೊಂದಿಗೆ ಮಾತಾಡಿರುವ ಕೃಷ್ಣ, ಲೋಕಾಯುಕ್ತ ಅಧಿಕಾರಿಗಳು ಸಮರ್ಪಕ ತನಿಖೆ ನಡೆಸಿಲ್ಲ, ಪ್ರಕರಣದಲ್ಲಿ ಮುಖ್ಯಮಂತ್ರಿ ಮತ್ತು ಅವರ ಕುಟುಂಬ ಪ್ರಮುಖ ಆರೋಪಿಯಾಗಿರುವುದರಿಂದ ಅವರನ್ನು ಬಚಾವ್ ಮಾಡುವ ಕೆಲಸ ನಡೆಯುತ್ತಿದೆ, ಆದರೆ ಹೈಕೋರ್ಟ್ನಲ್ಲಿ ತಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಡಾ ಪ್ರಕರಣ ನಿಭಾಯಿಸುವಲ್ಲಿ ಸಿಎಂ ಫೇಲ್, ಸಿದ್ದರಾಮಯ್ಯ ವಿರುದ್ಧ ಸಚಿವರು ಬೇಸರ
Published on: Jan 27, 2025 12:12 PM
Latest Videos