AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಲಮಂಗಲ: ದಪ್ಪಗಿರುವುದಕ್ಕೆ ಹುಡುಗಿ ಸಿಗುತ್ತಿಲ್ಲವೆಂದು ಆಟೋ ಚಾಲಕ ನೇಣಿಗೆ ಶರಣು

ಇತ್ತೀಚೆಗೆ ಯುವ ಸಮೂಹ ಮಾನಸಿಕ ಒತ್ತಡ, ಖಿನ್ನತೆಗೆ ಒಳಗಾಗುತ್ತಿರುವುದು ಸಾಕಷ್ಟು ವರದಿಗಳಾಗಿವೆ. ಅಷ್ಟೇ ಅಲ್ಲದೆ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬರುತ್ತಿದ್ದಾರೆ. ಇದೀಗ ಇಂತಹದೇ ಘಟನೆಯೊಂದು ನೆಲಮಂಗಲದಲ್ಲಿ ನಡೆದಿದ್ದು, ದಪ್ಪಗಿರುವುದಕ್ಕೆ ಹುಡುಗಿ ಸಿಗುತ್ತಿಲ್ಲವೆಂದು ಯುವಕ ನೇಣಿಗೆ ಶರಣಾಗಿದ್ದಾನೆ. ಅದೇ ರೀತಿಯಾಗಿ ಆನ್​ ಲೈನ್​​ ಗೇಮ್ ಆಡಬೇಡ ಎಂದಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನೆಲಮಂಗಲ: ದಪ್ಪಗಿರುವುದಕ್ಕೆ ಹುಡುಗಿ ಸಿಗುತ್ತಿಲ್ಲವೆಂದು ಆಟೋ ಚಾಲಕ ನೇಣಿಗೆ ಶರಣು
ನೆಲಮಂಗಲ: ದಪ್ಪಗಿರುವುದಕ್ಕೆ ಹುಡುಗಿ ಸಿಗುತ್ತಿಲ್ಲವೆಂದು ಆಟೋ ಚಾಲಕ ನೇಣಿಗೆ ಶರಣು
Follow us
ಬಿ ಮೂರ್ತಿ, ನೆಲಮಂಗಲ
| Updated By: ಗಂಗಾಧರ​ ಬ. ಸಾಬೋಜಿ

Updated on: Jan 17, 2025 | 4:33 PM

ನೆಲಮಂಗಲ, ಜನವರಿ 17: ದಪ್ಪಗಿರುವುದಕ್ಕೆ ಹುಡುಗಿ ಸಿಗುತ್ತಿಲ್ಲವೆಂದು ಯುವಕ ನೇಣಿಗೆ ಶರಣಾಗಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ನಾರಾಯಣಪ್ಪನಪಾಳ್ಯದಲ್ಲಿ ನಡೆದಿದೆ. ಬಾಡಿಗೆ ಮನೆಯಲ್ಲಿ ಆಟೋ ಚಾಲಕ ವೆಂಕಟೇಶ್‌(29) ಆತ್ಮಹತ್ಯೆ (death) ಮಾಡಿಕೊಂಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋವಿಂದರಾಜು ಮತ್ತು ಮಂಗಳಮ್ಮ ದಂಪತಿ ಪುತ್ರ ವೆಂಕಟೇಶ್​ ಮದುವೆಯಾಗಲು ಸುಮಾರು 15 ಹುಡುಗಿಯರನ್ನ ನೋಡಿದ್ದರು. ಎಲ್ಲಾ ಹುಡುಗಿ ಪೋಷಕರು ಹುಡುಗ ದಪ್ಪಗಿದ್ದಾನೆಂದು ನಿರಾಕರಿಸಿದ್ದರು. ಇದರಿಂದ ಮನನೊಂದು ನೇಣಿಗೆ ಶರಣಾಗಿದ್ದಾರೆ. ಫೋನ್ ತೆಗೆಯದಿದ್ದಕ್ಕೆ ಚಿಕ್ಕಮ್ಮ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಆನ್​ ಲೈನ್​​ ಗೇಮ್ ಆಡಬೇಡವೆಂದು ಬುದ್ಧವಾದ ಹೇಳಿದ ತಾಯಿ: ಮಗ ಆತ್ಮಹತ್ಯೆ 

ಆನ್​ ಲೈನ್​​ ಗೇಮ್ ಆಡಬೇಡ ಎಂದು ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಮಗ ನೇಣು‌ ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ತುಮಕೂರು ನಗರದ ಹೊರಪೇಟೆಯ ಬಾರ್ ಲೈನ್ ರಸ್ತೆಯಲ್ಲಿ ನಿನ್ನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಟಿಎಸ್​​ ಭರತ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ.

ಇದನ್ನೂ ಓದಿ: 2 ಸಾವಿರ ಹಣಕ್ಕಾಗಿ ಕೊಲೆ ಮಾಡಿ ಊರಲ್ಲಿ ಜಾಲಿಯಾಗಿ ಇದ್ದ ಆರೋಪಿಗಳು ಅರೆಸ್ಟ್​ ಆಗಿದ್ದೇ ರೋಚಕ

ಮೃತ ಭರತ್ ಇತ್ತೀಚೆಗೆ ಆನ್​​ ಲೈನ್​ ಗೇಮ್​ನಲ್ಲಿ‌ 20 ಸಾವಿರ ರೂ. ಹಣ ಕಳೆದುಕೊಂಡಿದ್ದ. ವಿಚಾರ ಗೊತ್ತಾಗಿ ಇನ್ಮುಂದೆ ಆನ್​ ಲೈನ್​​ ಗೇಮ್ ಆಡಬೇಡ ಅಂತ ತಾಯಿ ಜಗದಾಂಬ ಬೈದು ಬುದ್ದಿ ಹೇಳಿದ್ದಾರೆ. ತಮ್ಮ ಮನೆ ಬಳಿಯೇ ಇದ್ದ ಹಳೆ ಹೆಂಚಿನ ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್‌ ದಾಖಲಾಗಿದೆ.

ಪಕ್ಕದ ಮನೆಯ ಬಾವಿಗೆ ಹಾರಿ ವೃದ್ಧ ಆತ್ಮಹತ್ಯೆ 

ಮತ್ತೊಂದು ಪ್ರಕರಣದಲ್ಲಿ ಧಾರವಾಡ ಮಾಳಮಡ್ಡಿ ಬಡಾವಣೆಯಲ್ಲಿ ಬಾವಿಗೆ ಹಾರಿ ವೃದ್ಧ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಸುರೇಶ್ ಕುಲಕರ್ಣಿ (68) ಆತ್ಮಹತ್ಯೆ ಮಾಡಿಕೊಂಡ ವೃದ್ಧ. ಬಾವಿಗೆ ಹಾರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಮಾವ ಎನ್ನುವ ಕಾಮ‌ ಕ್ರಿಮಿಯ ಸಂಗ ಮಾಡಿ ಸಾವಿನ ಮನೆ ಸೇರಿದ ಸೊಸೆ ಟೆಕ್ಕಿ

ಪಕ್ಕದ ಮನೆಯ ಹಿಂದಿನ ಬಾವಿಗೆ ಮಧ್ಯಾಹ್ನದ ಹೊತ್ತಿಗೆ ಸುರೇಶ್ ಹಾರಿದ್ದಾರೆ. ಬಾವಿ ಬಳಿ ಚಪ್ಪಲಿ, ಮೊಬೈಲ್ ಪತ್ತೆ ಆಗಿದೆ. ಇದನ್ನು ನೋಡಿ ಹುಡುಕಾಡಿದ ಮನೆಯವರು, ಅಕ್ಕಪಕ್ಕದ ಮನೆಗಳ ಸಿಸಿ ಕ್ಯಾಮೆರಾಗಳ ಪರಿಶೀಲನೆ ಮಾಡಿದಾಗ ಬಾವಿ ಕಟ್ಟೆಯ ಮೇಲೆ ನಿಂತು ಜಿಗಿದಿದ್ದಾರೆ. ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ಆರಂಭಿಸಿದ್ದು, ಬಾವಿ ಸಾಕಷ್ಟು ಆಳವಾಗಿದ್ದು, ನೀರು ತುಂಬಿ ಕೊಂಡಿರುವ ಹಿನ್ನೆಲೆ ಪತ್ತೆ ಕಾರ್ಯ ಜಟಿಲವಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.