AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾವ ಎನ್ನುವ ಕಾಮ‌ ಕ್ರಿಮಿಯ ಸಂಗ ಮಾಡಿ ಸಾವಿನ ಮನೆ ಸೇರಿದ ಸೊಸೆ ಟೆಕ್ಕಿ

ಆತ ಸಂಬಂಧದಲ್ಲಿ ಮಾವ ಆಗಬೇಕು. ಮಾವನಿಗೆ ಮದುವೆ ಆಗಿದ್ರು ಯುವತಿ ಆತನಿಗೆ ಸನಿಹವಾಗಿದ್ದಳು. ಪತ್ನಿಗೆ ಗೊತ್ತಾಗದಂತೆ ಕದ್ದು ಮುಚ್ಚಿ ಲವ್ವಿಡವ್ವಿ ನಡೆಸುತ್ತಿದ್ದರು. ಆದ್ರೆ, ಏಕಾಂತದ ಫೋಟೊ,ವೀಡಿಯೋ ಇಟ್ಟುಕೊಂಡ ಅದೇ ಮಾವ ಬ್ಲಾಕ್ ಮೇಲ್ ಶುರು ಮಾಡಿದ್ದ. ರೂಂ ಬುಕ್ ಮಾಡಿ ದೈಹಿಕ ಸಂಪರ್ಕಕ್ಕೆ ಬಾ ಬಾ ಎಂದು ಪೀಡಿಸುತ್ತಿದ್ದ. ಇದರಿಂದ ಬೇಸತ್ತು ಬೆಂಕಿ ಹಚ್ಚಿಕೊಂಡು ಸುಟ್ಟು ಭಸ್ಮವಾಗಿದ್ದಾಳೆ.

ಮಾವ ಎನ್ನುವ ಕಾಮ‌ ಕ್ರಿಮಿಯ ಸಂಗ ಮಾಡಿ ಸಾವಿನ ಮನೆ ಸೇರಿದ ಸೊಸೆ ಟೆಕ್ಕಿ
ಪ್ರವೀಣ್ ಸಿಂಗ್, ಸುಹಾಸಿ ಸಿಂಗ್
ರಾಚಪ್ಪಾಜಿ ನಾಯ್ಕ್
| Edited By: |

Updated on: Jan 16, 2025 | 11:02 PM

Share

ಬೆಂಗಳೂರು, (ಜನವರಿ 16): ಅದು ಜನವರಿ 12ರಂದು ಸಂಜೆ 7.30 ರ ಸಮಯ. ಬೆಂಗಳೂರಿನ ಐಟಿಪಿಎಲ್ ಮುಖ್ಯ ರಸ್ತೆಯಲ್ಲಿರುವ ರಾಧ ಹೋಮ್ಟೆಲ್ ಹೋಟೆಲ್​ನಲ್ಲಿ ಘನಘೋರವೇ ನಡೆದು ಹೋಗಿತ್ತು. ಹೋಟೆಲ್​ನ ಒಂದು ಕೊಠಡಿಯಲ್ಲಿ 24 ವರ್ಷದ ಯುವತಿಯೋರ್ವಳು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದ್ರೆ, ಆಗಲೇ ಅರ್ಧ ಸುಟ್ಟಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗಿದೆ ಕೊನೆಯುಸಿರೆಳೆದಿದ್ದಾಳೆ. ಅಷ್ಟಕ್ಕೂ ಆಕೆ ಸುಟ್ಟು ಭಸ್ಮವಾಗಿದ್ದು ಮಾತ್ರ ಮಾವನ ಕಾಮದ ಕಾಟಕ್ಕೆ.

ಹೌದು..ಯುವತಿಯ ಹೆಸರು ಸುಹಾಸಿ ಸಿಂಗ್. ಇನ್ನು ಆಕೆಯ ಮಾವನ ಹೆಸರು ಈತ ಪ್ರವೀಣ್ ಸಿಂಗ್. ಇಬ್ಬರು ಸಂಬಂಧದಲ್ಲಿ ಸುಹಾಸಿಗೆ ಪ್ರವೀಣ್ ಸಿಂಗ್ ಮಾವ ಆಗಬೇಕು. ಅಂದ್ರೆ, ತಂದೆಯ ತಂಗಿ ಗಂಡ. ಪ್ರವೀಣ್ ಸಿಂಗ್​ ಈಗಾಗಲೇ ಮದುವೆಯಾಗಿದ್ದು, ಕೆ.ಆರ್.ಪುರಂ ಆಲ್ಫಾ ಗಾರ್ಡನ್ ನಲ್ಲಿರುವ ಎಸ್ ವಿ ಎಸ್ ಪ್ಯಾರಡೈಸ್ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ. ಸುಹಾಸಿ ಸಿಂಗ್ ಸಹ ಅವರ ಮನೆಯಿಂದಲೇ ಕೆಲಸಕ್ಕೆ ಹೋಗುತ್ತಿದ್ದಳು.

ಇದನ್ನೂ ಓದಿ: ಹುಬ್ಬಳ್ಳಿ: ಪ್ರೇಯಸಿಯ ಖಾಸಗಿ ವಿಡಿಯೋ, ಫೋಟೋ ಶೇರ್ ಮಾಡಿ ಪ್ರಿಯಕರ ಆತ್ಮಹತ್ಯೆ

ರಜಾ ದಿನಗಳಲ್ಲಿ ಪ್ರವೀಣ್ ಹಾಗೂ ಆತನ ಪತ್ನಿ ಜೊತೆಗೆ ಈಕೆ ಕೂಡ ಟ್ರಿಪ್ ಹೋಗುತ್ತಿದ್ದಳು. ದಿನ ಕಳೆದಂತೆ ಇಬ್ಬರ ನಡುವೆ ಸಲುಗೆ ಬೆಳೆದಿದೆ. ಅದೆ ಸಲುಗೆ ದೈಹಿಕ ಸಂಪರ್ಕದವರೆಗೆ ಕೂಡ ಹೋಗಿತ್ತು. ಕಳೆದ ಎರಡು ವರ್ಷದಿಂದ ಇವರ ಕಣ್ಣಾಮುಚ್ಚಾಲೆ ಆಟ ನಡೆಯುತ್ತಲೇ ಇತ್ತು.

ಹೀಗಿರುವಾಗ ಇಬ್ಬರು ಒಟ್ಟಿಗೆ ಕಳೆದ ಖಾಸಗಿ ಕ್ಷಣವನ್ನು ಪ್ರವೀಣ್ ಸಿಂಗ್ ಮೊಬೈಲ್ ನಲ್ಲಿ ವೀಡಿಯೋ ಮಾಡಿಟ್ಟುಕೊಂಡಿದ್ದ. ಅದನ್ನ ಪೆನ್ ಡ್ರೈವ್ ನಲ್ಲಿ ಸಹ ಸೇವ್ ಮಾಡಿಟ್ಟಿದ್ದ. ಆದ್ರೆ ಇತ್ತೀಚೆಗೆ ಬೇರೊಬ್ಬ ಯುವಕನ ಜೊತೆಗೆ ಸುಹಾಸಿ ಸಿಂಗ್ ಆತ್ಮೀಯವಾಗಿದ್ದಳು.ಇದು ಪ್ರವೀಣ್ ಸಿಂಗ್ ನಿಂದ ಅಂತರ ಕಾಯ್ದುಕೊಳ್ಳುವಂತೆ ಮಾಡಿತ್ತು .ಅಷ್ಟೇ ಅಲ್ಲ ಅವರ ವಾಟ್ಸಪ್ ಚಾಟ್ ನೋಡಿ ಸಿಟ್ಟಿಗೆದ್ದಿದ್ದ. ಬಳಿಕ ಪದೇ ಪದೇ ಫೋನ್ ಮಾಡಿ ಸುಹಾಸಿ ಸಿಂಗ್ ನನ್ನ ದೈಹಿಕ‌ ಸಂಪರ್ಕಕ್ಕಾಗಿ ಪೀಡಿಸ್ತಿದ್ದ. ಬರದಿದ್ದರೆ ನಗ್ನ ಫೋಟೊ ಹಾಗೂ ವೀಡಿಯೊ ವೈರಲ್ ಮಾಡುವುದಾಗಿ ಬೆದರಿ ಹಾಕಿದ್ದಾನೆ. ಇದರಿಂದ ಯುವತಿ ಸಾಕಷ್ಟು ರೋಸಿಹೋಗಿದ್ದಳು. ಹೀಗೆ ಒಂದು ದಿನ ಅಂದರೆ ಜನವರಿ 12 ರಂದು ಐಟಿಪಿಎಲ್ ಮುಖ್ಯ ರಸ್ತೆಯಲ್ಲಿರುವ ರಾಧ ಹೋಟೆಲ್ ನಲ್ಲಿ ರೂಂ ಬುಕ್ ಮಾಡಿದ್ದ. ಬಳಿಕ ಸುಹಾಸಿ ಸಿಂಗ್​ಗೆ ಫೋನ್ ಮಾಡಿ ಹೋಟೆಲ್​ಗೆ ಬರುವಂತೆ ಪೀಡಿಸಿದ್ದಾನೆ.

ಇದನ್ನೂ ಓದಿ: ಮೈಸೂರು: ಪರ ಪುರಷನೊಂದಿಗೆ ಓಡಿಹೋಗಿದ್ದ ಹೆಂಡ್ತಿಯ ಶಿರಚ್ಛೇದ ಮಾಡಿದ ಪತಿ

ಪ್ರವೀಣ್ ಕಾಟ ತಾಳಲಾರ ಆಕೆ ಸಾಯುವ ನಿರ್ಧಾರ ಮಾಡಿಬಿಟ್ಟಿದ್ದಳು. ಸ್ಕೂಟರ್ ನಲ್ಲಿ ಬರುವಾಗ ಪೆಟ್ರೊಲ್ ಬಂಕ್​ನಲ್ಲಿ ಬಾಟಲ್​ ಪೆಟ್ರೋಲ್ ತುಂಬಿಸಿಕೊಂಡು ಪ್ರವೀಣ್ ಬುಕ್ ಮಾಡಿದ್ದ ಹೋಟೆಲ್ ರೂಂಗೆ ಬಂದಿದ್ದಾಳೆ. ಹೀಗೆ ಬಂದವಳಿಗೆ ಲೈಂಗಿಕತೆಗೆ ಸಹಕರಿಸುವಂತೆ ಕೇಳಿಕೊಂಡಿದ್ದ. ಈ ವೇಳೆ ಸುಹಾಸಿ ಸಿಂಗ್ ಇದೆಲ್ಲ ಇಲ್ಲಿಗೆ ನಿಲ್ಲಿಸಿ ಬಿಡೋಣ ಎಂದಿದ್ದಾಳೆ.

ಇದರಿಂದ ಸಿಟ್ಟಿಗೆದ್ದ ಪ್ರವೀಣ್ಮ ಪೆನ್ ಡ್ರೈವ್ ನಲ್ಲಿದ್ದ ಇಬ್ಬರ ನಡುವಿನ ಖಾಸಗಿ ವೀಡಿಯೊ ತೋರಿಸಿದ್ದಾನೆ. ಅಲ್ಲದೇ ಸಹಕರಿಸದಿದ್ದರೆ ತಂದೆ, ತಾಯಿಗೆ ವೀಡಿಯೊ ಕಳಿಸೋದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ನೊಂದ ಆಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ‌ ಹಚ್ಚಿಕೊಂಡಿದ್ದಾಳೆ.

ಬೆಂಕಿ‌ ಹಚ್ಚಿಕೊಳ್ಳುತ್ತಿದ್ದಂತೆಯೇ ಆರಿಸಲು ಪ್ರವೀಣ್ ಸಿಂಗ್ ಯತ್ನಿಸಿದ್ದಾನೆ. ತಕ್ಷಣ ಸ್ನಾನದ ಕೊಣೆಗೆ ಎತ್ತಿಕೊಂಡು ಹೋಗಿ ಶವರ್ ಆನ್ ಮಾಡಿದ್ದ. ಅಷ್ಟರಲ್ಲಾಗಲ್ಲೇ ಸಂಪೂರ್ಣ ಸುಟ್ಟು ಹೋಗಿದ್ದ ಯುವತಿ ಸುಹಾಸಿ ಸಿಂಗ್ ಳನ್ನ ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ಸುಹಾಸಿ ಸಿಂಗ್ ರವಾನೆ ಮಾಡಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಜನವರಿ 12 ರಂದು ರಾತ್ರಿ 10 ಗಂಟೆಗೆ ಸುಹಾಸಿ ಸಿಂಗ್ ಸಾವನ್ನಪ್ಪಿದ್ದಾಳೆ.

ಮೃತ ಯುವತಿ ತಾಯಿ ನೀಡಿದ ದೂರಿದ ಆಧಾರದ ಮೇಲೆ ಘಟನೆ ಸಂಬಂಧ ಎಫ್ಐಆರ್ ದಾಖಲಿಸಿಕೊಂಡ ಹೆಚ್ಎಎಲ್ ಪೊಲೀಸರು, ಆರೋಪಿ ಪ್ರವೀಣ್ ಸಿಂಗ್ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅದೇನೆ ಹೇಳಿ ಬಾಳಿ ಬದುಕ ಬೇಕಾದ ಯುವತಿ ಕಾಮ‌ ಕ್ರಿಮಿಯ ಸಂಗ ಮಾಡಿ ಸಾವಿನ ಮನೆ ಸೇರಿರೋದು ಮಾತ್ರ ನಿಜಕ್ಕೂ ದುರಂತ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
ರಾಚಪ್ಪಾಜಿ ನಾಯ್ಕ್
ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ