ಹುಬ್ಬಳ್ಳಿ: ಪ್ರೇಯಸಿಯ ಖಾಸಗಿ ವಿಡಿಯೋ, ಫೋಟೋ ಶೇರ್ ಮಾಡಿ ಪ್ರಿಯಕರ ಆತ್ಮಹತ್ಯೆ
ಪ್ರೇಯಸಿಯೊಂದಿಗೆ ಮನಸ್ತಾಪ ಮಾಡಿಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಪ್ರೇಯಸಿಯ ಖಾಸಗಿ ವಿಡಿಯೋ, ಫೋಟೋ ಹಾಗೂ ವಾಟ್ಸಪ್ ಚಾಟ್ ಸಾಮಾಜಿ ಜಾಲತಾಣಗಳಲ್ಲಿ ಹರಿಬಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ನನ್ನ ಸಾವಿಗೆ ಸಂಜನಾ ಕಾರಣ ಎಂದು ತಾಯಿ ವಾಯ್ಸ್ ಮೆಸೇಜ್ ಕಳುಹಿಸಿ ಸಾವಿಗೆ ಶರಣಾಗಿದ್ದಾನೆ.
ಹುಬ್ಬಳ್ಳಿ, (ಜನವರಿ 14): ಪ್ರೇಯಸಿಯ ಕಾಟದಿಂದ ಬೇಸತ್ತು ಯುವಕನೋರ್ವ ಆತ್ಮಹತ್ಯೆ ಶರಣಾಗಿರುವ ಘಟನೆ ಹುಬ್ಬಳ್ಳಿಯ ಉಣಕಲ್‌ನಲ್ಲಿ ನಡೆದಿದೆ. ಹುಬ್ಬಳ್ಳಿಯ ನವನಗರ ನಿವಾಸಿಯಾಗಿವು 27 ವರ್ಷದ ಸಂದೇಶ್ ಉಣಕಲ್ ಆತ್ಮಹತ್ಯೆಗೆ ಮಾಡಿಕೊಂಡ ಯುವಕ. ಶನಿವಾರ ಮನೆಯಿಂದ ನಾಪತ್ತೆಯಾಗಿದ್ದ ಸಂದೇಶ, ಉಣಕಲ್ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ನನ್ನ ಸಾವಿಗೆ ಸಂಜನಾ ಕಾರಣ ಎಂದು ತಾಯಿ ವಾಯ್ಸ್ ಮೆಸೇಜ್ ಕಳುಹಿಸಿ ಸಾವಿಗೆ ಶರಣಾಗಿದ್ದಾನೆ. ಆತ್ಮಹತ್ಯೆಗೂ ಮುನ್ನ ತನ್ನ ತಾಯಿಗೆ ವಾಯ್ಸ್ ಮೆಸೇಜ್ ಕಳಸಿದ್ದು, ನನ್ನ ಸಾವಿಗೆ ಸಂಜನಾ(ಪ್ರೇಯಸಿ) ಕಾರಣ ಎಂದು ಹೇಳಿದ್ದಾನೆ.
ಹುಬ್ಬಳ್ಳಿಯ ನವನಗರ ನಿವಾಸಿಯಾಗಿರೋ ಸಂದೇಶ, ಮೋಟಾರ್ ಬೈಕ್ ಶೋ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದ. ಆದ್ರೆ, ಏಕಾಏಕಿ ಶನಿವಾರ ಮನೆಯಿಂದ ನಾಪತ್ತೆಯಾಗಿದ್ದ. ಈ ಕುರಿತು ಕುಟುಂಬಸ್ಥರು ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದ್ರೆ, ಇದೀಗ ಸಂದೇಶ ಹುಬ್ಬಳ್ಳಿಯ ಉಣಕಲ್ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಇದನ್ನೂ ಓದಿ: 2 ಮಕ್ಕಳ ತಂದೆಯನ್ನ ಮದ್ವೆಯಾಗಲು ಇಬ್ಬರು ಮಹಿಳೆಯರ ನಡುವೆ ಕಿತ್ತಾಟ, ಚಾಕು ಇರಿತ
ಆತ್ಮಹತ್ಯೆಗೂ ಮುನ್ನ ತನ್ನ ಪ್ರೇಯಸಿಯ ಜೊತೆಗಿನ ಖಾಸಗಿ ವಿಡಿಯೋ, ವಾಟ್ಸಪ್ ಚಾಟ್, ಸಂಭಾಷಣೆ ಮತ್ತು ಫೋಟೋಗಳನ್ನು ತನ್ನ ಸ್ನೇಹಿತರಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ. ಅಲ್ಲದೇ ನನ್ನ ಸಾವಿಗೆ ಸಂಜನಾ ಕಾರಣ ಎಂದು ತನ್ನ ತಾಯಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದಾನೆ. ಇನ್ನು ಮಗನನ್ನ ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಏಕಾಏಕಿ ಸಂದೇಶ ಏಕೆ ಆತ್ಮಹತ್ಯೆ ಮಾಡಿಕೊಂಡ? ತನ್ನ ಸಾವಿಗೆ ಪ್ರೇಯಸಿ ಕಾರಣ ಎಂದು ಏಕೆ ಹೇಳಿದ್ದ? ಇಬ್ಬರ ಮಧ್ಯೆ ಏನಾದರೂ ಜಗಳವಾಗಿತ್ತಾ? ಅಥವಾ ಇನ್ನೇನಾದರೂ ನಡೆದಿತ್ತಾ? ಎನ್ನುವ ಅನುಮಾನಗಳು ಹುಟ್ಟಿಕೊಂಡಿದ್ದು, ಪೊಲೀಸ ತನಿಖೆಯಲ್ಲಿ ಸಂದೇಶ ಆತ್ಮಹತ್ಯೆಗೆ ಕಾರಣವೇನು ಎನ್ನುವುದು ತಿಳಿದುಬರಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ