AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ಮಕ್ಕಳ ತಂದೆಯನ್ನ ಮದ್ವೆಯಾಗಲು ಇಬ್ಬರು ಮಹಿಳೆಯರ ನಡುವೆ ಕಿತ್ತಾಟ, ಚಾಕು ಇರಿತ

ಓರ್ವ ವ್ಯಕ್ತಿಗಾಗಿ ಇಬ್ಬರು ಮಹಿಳೆಯರು ಪರಸ್ಪರ ಕಿತ್ತಾಡಿಕೊಂಡು ರಂಪಾಟ ಮಾಡಿಕೊಂಡಿರುವ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ಈಗಾಗಲೇ ಪತ್ನಿಯನ್ನು ಕಳೆದುಕೊಂಡಿರುವ ವ್ಯಕ್ತಿಯನ್ನು ಮದುವೆಯಾಗಲು ಇಬ್ಬರು ಮಹಿಳೆಯರ ನಡುವೆ ಪೈಪೋಟಿ ನಡೆದಿದ್ದು, ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ಮಹಿಳೆಯೋರ್ವಳು ಮತ್ತೊಬ್ಬ ಮಹಿಳೆಗೆ ಚಾಕುವಿನಿಂದ ಇರಿದಿದ್ದಾಳೆ. ಅರೇ ಇದೇನಿದು ಒಬ್ಬನನ್ನು ಮದ್ವೆಯಾಗಲು ಇಬ್ಬರು ಹೆಣ್ಮಕ್ಕಳ ಜಗಳ ಅಂತೀರಾ? ಅಚ್ಚರಿ ಅನ್ನಿಸಿದರೂ ಸತ್ಯ.

2 ಮಕ್ಕಳ ತಂದೆಯನ್ನ ಮದ್ವೆಯಾಗಲು ಇಬ್ಬರು ಮಹಿಳೆಯರ ನಡುವೆ ಕಿತ್ತಾಟ, ಚಾಕು ಇರಿತ
ವ್ಯಕ್ತಿಗಾಗಿ ಇಬ್ಬರು ಮಹಿಳೆಯರ ರಂಪಾಟ
ಬಿ ಮೂರ್ತಿ, ನೆಲಮಂಗಲ
| Edited By: |

Updated on: Jan 13, 2025 | 4:21 PM

Share

ಬೆಂಗಳೂರು, (ಜನವರಿ 13): ಒಬ್ಬ ವ್ಯಕ್ತಿಯನ್ನು ಮದುವೆಯಾಗಲು ಇಬ್ಬರು ಮಹಿಳೆಯರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅಂಜನಾನಗರದಲ್ಲಿ ನಡೆದಿದೆ. ಈಗಾಗಲೇ ಪತ್ನಿಯನ್ನು ಕಳೆದುಕೊಂಡಿರುವ ರವಿಗೆ ಎರೆಡು ಮಕ್ಕಳು ಸಹ ಇವೆ. ಆದರೂ ಸಹ ರವಿಯನ್ನು ಮದುವೆಯಾಗಲು ಇಬ್ಬರು ಮಹಿಳೆಯರು ಕಿತ್ತಾಡಿಕೊಂಡಿದ್ದು, ಈ ಜಗಳ ತಾರಕಕಕ್ಕೇರಿ ಕೊನೆಗೆ ಓರ್ವ ಮಹಿಳೆ ಚಾಕುವಿನಿಂದ ಇರಿದಿದ್ದಾಳೆ. ರವಿಯನ್ನು ವಿವಾಹವಾಗಲು ರುಕ್ಮಿಣಿ(38) ಹಾಗೂ ಭಾಗ್ಯ(40) ರಂಪಾಟ ಮಾಡಿಕೊಂಡಿದ್ದು, ಈ ವೇಳೆ ಭಾಗ್ಯ, ರುಕ್ಮಿಣಿಗೆ ಚಾಕುವಿನಿಂದ ಇರಿದಿದ್ದಾಳೆ.

ರವಿ ಕಳೆದ 11ವರ್ಷದ ಹಿಂದೆ ಲಕ್ಷ್ಮೀಯನ್ನ ಮದುವೆಯಾಗಿದ್ದು, ಇವರಿಗೆ ಇಬ್ಬರು ಮಕ್ಕಳು ಸಹ ಇದಾರೆ. ಆದ್ರೆ, ಲಕ್ಷ್ಮೀ ಮೃತಪಟ್ಟಿದ್ದು, ಬಳಿಕ ರವಿ, ಮಾಜಿ ಲವರ್ ರುಕ್ಮಿಣಿಯನ್ನ ಮನೆಗೆ ಕರೆತಂದಿದ್ದ. ಈ ಹಿಂದೆ ರುಕ್ಮಿಣಿಯೂ ಸಹ ಪತಿಯನ್ನ ತೊರೆದಿದ್ದಳು. ಹೀಗಾಗಿ ರವಿ ಮತ್ತು ರುಕ್ಮುಣಿ ಮದುವೆಯಾಗಲು ತಯಾರಾಗಿದ್ದರು. ಈ ನಡುವೆ ಮೃತ ಮೊದಲ ಪತ್ನಿ ಲಕ್ಷ್ಮೀ ಅಕ್ಕ ಭಾಗ್ಯ ಕೂಡ ಪತಿಯನ್ನ ಬಿಟ್ಟು ರವಿಯನ್ನ ಮದುವೆಯಾಗಲು ಮುಂದೆ ಬಂದಿದ್ದಾಳೆ.

ಇದನ್ನೂ ಓದಿ: ಗಂಡ್ಮಕ್ಳು ಮಾತ್ರ ಕೆಟ್ಟವರು, ಹುಡ್ಗಿರು ಏನೇ ಮಾಡಿದ್ರೂ ಲೆಕ್ಕಕ್ಕೆ ಬರಲ್ಲ..ವಿಡಿಯೋ ಮಾಡಿ ಪ್ರಾಣ ಬಿಟ್ಟ ಯುವಕ

ಇಬ್ಬರು ಮಕ್ಕಳನ್ನ ನೋಡಿ ಕೊಳ್ಳುವೆ. ನೀನು ನನ್ನನ್ನು ಮದುವೆಯಾಗಬೇಕೆಂದು ಭಾಗ್ಯ, ರವಿಗೆ ಪಟ್ಟು ಹಿಡಿದಿದ್ದಳು. ಆದ್ರೆ, ರುಕ್ಮುಣಿ ಮನೆಯಲ್ಲಿರುವುದು ಗೊತ್ತಾಗಿದ್ದು, ರವಿ ಕೆಲಸಕ್ಕೆ ಹೋಗಿದ್ದಾಗ ಮನೆಗೆ ಬಂದ ಭಾಗ್ಯ, ರುಕ್ಮಿಣಿ ಜೊತೆ ಜಗಳಕ್ಕೆ ಇಳಿದಿದ್ದಾಳೆ. ಅಲ್ಲದೇ ಮನೆಯಿಂದ ಹೊರಗೆ ದೂಡಲು ಯತ್ನಿಸಿದ್ದಾಳೆ. ಗಲಾಟೆ ವಿಕೋಪಕ್ಕೆ ತಿರುಗಿ ದೊಣ್ಣೆಯಿಂದ ಬಡಿದು ಬಳಿಕ ಚಾಕುವಿನಿಂದ ಇರಿದಿದ್ದಾಳೆ.

ಸದ್ಯ ಗಾಯಗೊಂಡ ರುಕ್ಮಿಣಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ. ಇನ್ನು ತಂಗಿ ಗಂಡನಿಗಾಗಿ ಚಾಕು ಹಾಕಿದ ಭಾಗ್ಯಳನ್ನು ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಒಟ್ಟಿನಲ್ಲಿ ಕಟ್ಟಿಕೊಂಡ ಗಂಡನನ್ನು ಬಿಟ್ಟು ತಂಗಿ ಗಂಡನ ಜೊತೆ ಸಂಸಾರ ಮಾಡಲು ಬಂದ್ದಿದ್ದ ಮಹಿಳೆ ಇದೀಗ ಜೈಲು ಪಾಲಾಗಿದ್ದು, ರುಕ್ಮುಣಿ ತನ್ನ ಮಾಜಿ ಪ್ರಿಯಕರ ರವಿ ಜೊತೆ ಮತ್ತೆ ಒಂದಾಗಿದ್ದಾಳೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ