ಗಂಡ್ಮಕ್ಳು ಮಾತ್ರ ಕೆಟ್ಟವರು, ಹುಡ್ಗಿರು ಏನೇ ಮಾಡಿದ್ರೂ ಲೆಕ್ಕಕ್ಕೆ ಬರಲ್ಲ..ವಿಡಿಯೋ ಮಾಡಿ ಪ್ರಾಣ ಬಿಟ್ಟ ಯುವಕ

ತಾನು ಪ್ರೀತಿಸಿದ ಯುವತಿಯಿಂದ ಮನನೊಂದು ವಿಷ ಸೇವಿಸಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಯುವಕ ಚಿಕಿತ್ಸೆ ಫಲಿಸದೇ ಮಂಗಳೂರು (Mangaluru) ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸಾಯುವ ಮುನ್ನ ಆತ್ಮಹತ್ಯೆಗೆ ಕಾರಣ ತಿಳಿಸಿ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಯುವ ಮುನ್ನ ಯುವಕ ಮಾಡಿದ್ದ ವಿಡಿಯೋನಲ್ಲಿದೆ? ಸಾವಿಗೆ ಕಾರಣ ಏನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಗಂಡ್ಮಕ್ಳು ಮಾತ್ರ ಕೆಟ್ಟವರು, ಹುಡ್ಗಿರು ಏನೇ ಮಾಡಿದ್ರೂ ಲೆಕ್ಕಕ್ಕೆ ಬರಲ್ಲ..ವಿಡಿಯೋ ಮಾಡಿ ಪ್ರಾಣ ಬಿಟ್ಟ ಯುವಕ
Hassan Kavan
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Jan 12, 2025 | 1:13 PM

ಹಾಸನ, (ಜನವರಿ 12): ಪ್ರೀತಿಸಿದ ಹುಡುಗಿ ಹಾಗೂ ಪೊಲೀಸರ ನಡೆ ಬಗ್ಗೆ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವನ್ನಪ್ಪಿದ್ದಾನೆ. ಪ್ರೀತಿಸಿದ ಯುವತಿಯಿಂದ ಮನನೊಂದು ವಿಷ ಸೇವಿಸಿದ್ದ ಪ್ರಿಯಕರ ಚಿಕಿತ್ಸೆ ಫಲಿಸದೇ ಮಂಗಳೂರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಹಾಸನ ಜಿಲ್ಲೆಯ ಸಕಲೇಶಪುರ (Sakleshpur) ತಾಲೂಕಿನ ಬಾಳೆಗದ್ದೆ ಗ್ರಾಮದ ಕವನ್ (30) ಆತ್ಮಹತ್ಯೆಗೆ ಶರಣಾದ ಯುವಕ. ಸಾಯುವ ಮುನ್ನ ಕವನ್ ಸಾವಿಗೆ ಕಾರಣ ತಿಳಿಸಿ ವೀಡಿಯೋ ಮಾಡಿಟ್ಟು ಒಂದು ವಾರದ ಹಿಂದೆ ವಿಷ ಸೇವಿಸಿದ್ದ. ನನ್ನ ಸಾವಿಗೆ ತಾನುಪ್ರೀತಿಸಿದ ಹುಡುಗಿ ಹಾಗೂ ವಿನಯ್ ಎಂಬಾತ ಕಾರಣ ಎಂದು ವಿಡಿಯೋದಲ್ಲಿ ಎಳೆಎಳೆಯಾಗಿ ಯುವಕ ಕಾರಣ ಬಿಚ್ಚಿಟ್ಟಿದ್ದಾನೆ. ಅಲ್ಲದೇ ಪೊಲೀಸರ ಕ್ರಮದ ಬಗ್ಗೆ ಅಸಮಾಧಾನ ಹೊರಹಾಕಿದ್ದಾನೆ.

ಯುವಕ ಮಾಡಿದ್ದ ವೀಡಿಯೋನಲ್ಲಿ ಏನಿದೆ?

ನನ್ನ ಸಾವಿಗೆ ನಾನು ಪ್ರೀತಿಸಿದ ಹುಡುಗಿ ಅಂಜಲಿಯೇ ಕಾರಣ. ಆಕೆ 2021ರಲ್ಲಿ ನನ್ನ ಮನೆ ಹಿಂದೆ ವಾಸವಿದ್ದಳು. ನನ್ನ ಜೀವನದಲ್ಲಿ ಅವಳು ಬಂದಳು. ಇಬ್ಬರೂ ಪ್ರೀತಿಸುತ್ತಿದ್ದೆವು. ನಮ್ಮ ನಡುವೆ ಎ ಟು ಜೆಡ್ ಎಲ್ಲಾ ಆಗಿದೆ. ನೀನು ನನಗೆ ಬೇಕೇಬೇಕು ಎಂದು ಹಠ ಹಿಡಿದಿದ್ದಳು. ಅನಂತರ ಅವಳ ನಡವಳಿಕೆ ಕಂಡು ದೂರವಾದೆ. ಬಳಿಕ 2023-2024ರಲ್ಲಿ ನನ್ನ ಮೇಲೆ ಪೋಲಿಸ್ ಠಾಣೆಗೆ ಆಕೆ ದೂರು ನೀಡಿದ್ದಳು. ಹುಡುಗಿಯರು ಏನೇ ಮಾಡಿದರೂ ಪೊಲೀಸರಿಗೆ ಲೆಕ್ಕಕ್ಕೆ ಬರಲ್ಲ. ಗಂಡುಮಕ್ಕಳು ಮಾತ್ರ ಕೆಟ್ಟವರು.

ಇದನ್ನೂ ಓದಿ: ತ್ರಿಕೋನ ಪ್ರೇಮ: ವ್ಯಕ್ತಿಯನ್ನು ಹೊಡೆದು ಕೊಂದ ಗೆಳತಿಯ ಪ್ರಿಯಕರ, ಐವರ ಬಂಧನ

ಆ ಹೆಣ್ಣು ಏನು ಎಂದು ಇಡೀ ಸಕಲೇಶಪುರ ಪೊಲೀಸರಿಗೆ ಗೊತ್ತು. ಆಕೆ ಏನು ಅಂತ ಗೊತ್ತಿದ್ದರೂ ಪೊಲೀಸರು ಅವಳ ಬೆಂಬಲಕ್ಕೆ ನಿಂತರು. ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ. ಇವಳ ವಿಷಯದಿಂದ ಅಪ್ಪ, ಅಮ್ಮ ಎಲ್ಲಾ ನನ್ನ ಬಿಟ್ಟಿದ್ದಾರೆ. ಬಳಿಕ ಕೇಸ್ ವಾಪಸ್ ತೆಗೆದುಕೊಂಡಳು. ನನ್ನ ಪಾಡಿಗೆ ನಾನು ಇದ್ದೆ, ಮತ್ತೆ ಬಂದು ನನ್ನ ಲೈಫ್ ಹಾಳು ಮಾಡಿದಳು. ಇವತ್ತು ಒಂದು ದಿನ ನನ್ನ ಜೊತೆ ಇರು ಎಂದು ಮೈಸೂರು ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಹೋದಳು. ನನ್ನ ವೀಕ್ನೆಸ್ ಅವಳಿಗೆ ಗೊತ್ತಿತ್ತು. ನಾನು ಕುಡಿತೀನಿ, ಕುಡಿದ ಮೇಲೆ ಹೇಳಲ್ಲ ಎಂದು ಅವಳಿಗೆ ಗೊತ್ತು. ಮೊಬೈಲ್‌ಗೆ ಫಿಂಗರ್ ಪ್ರಿಂಟ್ ಇಟ್ಟಿದ್ದೆ. ಅದೇ ನಾನು ಮಾಡಿದ ತಪ್ಪು. ಪ್ಯಾಟರ್ನ್ ಪಾಸ್‌ವರ್ಡ್ ಇಟ್ಟಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ. ನನ್ನ ಲೈಫ್ ಹಾಳು ಮಾಡಿ 307 ಕೇಸ್ ಹಾಕಿದಳು.

ನನ್ನ ಮೊಬೈಲ್‌ನಲ್ಲಿ ಪರ್ಸನಲ್ ಫೋಟೋ ತೆಗೆದುಕೊಂಡು ಇನ್ನೊಬ್ಬರ ಹೆಂಡತಿಗೆ ಕಳುಹಿಸಿದ್ದಾಳೆ. ಅದು ಎಲ್ಲೆಲ್ಲೋ ಹೋಗಿ ಏನೇನೋ ಆಯಿತು, ಗಲಾಟೆ ಆಯಿತು. ನಾನು ಸಾಯಲು ಇಷ್ಟೇ ಕಾರಣ. ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಯಾವುದನ್ನೂ ಸರಿಯಾಗಿ ತನಿಖೆ ಮಾಡಲ್ಲ. ಅವಳು ಎಂಥವಳು ಅಂತ ಸ್ಟೇಷನ್‌ಗೆ ಗೊತ್ತಿರುತ್ತದೆ. ಅವಳು ಕಂಪ್ಲೆಂಟ್ ಕೊಡಲು ಬಂದಾಗ ತನಿಖೆ ಮಾಡಲ್ಲ. ಏಕೆಂದರೆ ಅವಳು ಹೆಣ್ಣು, ನಾನು ಗಂಡು.

ಡಿಸೆಂಬರ್ 12 ರಂದು ವಿನಯ್ ನನ್ನ ಮೇಲೆ ಕಂಪ್ಲೆಂಟ್ ಕೊಟ್ಟ. ಆಕೆ ಕಳುಹಿಸಿರುವ ಫೋಟೋ ಇಟ್ಟುಕೊಂಡು ನಮ್ಮ ಮನೆಯವರನ್ನು ವಿನಯ್ ದೂರ ಮಾಡಿದ. ನನ್ನದು ತಪ್ಪಿದೆ, ನನ್ನ ಪರ್ಸನಲ್ ಫೋಟೋ ಯಾರಿಗೂ ಕಳಿಸಬೇಡಿ, ನಾನು ಬಂದು ಕ್ಷಮೆ ಕೇಳುತ್ತೇನೆ ಎಂದು ವಿನಯ್‌ಗೆ ಹೇಳಿದೆ. ಆದರೆ ಗಲಾಟೆ ಮಾಡಿ ದೊಡ್ಡ ವಿಷಯ ಮಾಡಿದ. ಆಕೆ ಕಳುಹಿಸಿರುವ ಫೋಟೋ ಟಿವಿಯಲ್ಲಿ ಬರಬಹುದು. ನನ್ನ ಮೊಬೈಲ್‌ನಿಂದ ವಾಟ್ಸಪ್ ಮೂಲಕ ನನ್ನ ಫೋಟೋ ಕಳುಹಿಸಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣ ಅವರದ್ದು ಆದರೆ ಮಾತ್ರ ನ್ಯೂಸ್. ಕಾಮನ್ ಜನರಿಗೆ ಬೆಲೆ ಇಲ್ವಾ, ಮೊದಲು ನ್ಯಾಯ ಕೊಡಿಸಿ.

ಆಕೆಯನ್ನು ಕರೆದುಕೊಂಡು ಬಂದು ಒಂದು ತಪ್ಪು ಮಾಡಿದೆ. ನನ್ನ ಸಂಸಾರ ರೋಡಿಗೆ ಬಂತು. ವಿನಯ್ ಅವನ ಹೆಂಡತಿ ಮೇಲೆ ಕಂಪ್ಲೆಂಟ್ ಕೊಟ್ಟ. ಕಂಪ್ಲೆಂಟ್ ಕೊಟ್ಟು ಅವರು ನೆಮ್ಮದಿಯಾಗಿದ್ದಾರೆ. ನಾನೇನು ತಪ್ಪು ಮಾಡಿದೆ, ವಿನಯ್ ಹೆಂಡತಿ ಏನು ತಪ್ಪು ಮಾಡಿದ್ಲು? ನಮ್ಮನ್ನು ರೋಡಿಗೆ ಏಕೆ ತಂದ್ರಿ? ಸ್ಟೇಷನ್‌ನಲ್ಲಿ ಸೆಟಲ್‌ಮೆಂಟ್ ಆಗಬೇಕಿತ್ತು. ಪೊಲೀಸರಿಗೆ ಕೇಸ್ ಬೇಕಿತ್ತು. ನಾನು ಏನು ತಪ್ಪು ಮಾಡಿದೆ ಅಂತ ಈ ಶಿಕ್ಷೆ? ನನ್ನ ಸಾವಿಗೆ ಕಾರಣ ನಾನು ಪ್ರೀತಿಸಿದ ಹುಡುಗಿ ಹಾಗೂ ವಿನಯ್. ವಿನಯ್ ಪತ್ನಿ ನನಗೆ ತೊಂದರೆ ಕೊಟ್ಟಿಲ್ಲ. ವಿನಯ್ ನನಗೆ ಏನೆಲ್ಲಾ ಬೆದರಿಕೆ ಹಾಕಿದ್ದ. ನನ್ನ ಸಾವಿಗೆ ನನ್ನ ಮನೆಯವರು, ಅಣ್ಣ, ತಮ್ಮ, ಅಕ್ಕ, ತಂಗಿ, ಸ್ನೇಹಿತರು ಯಾರೂ ಕಾರಣ ಅಲ್ಲ. ವಿನಯ್ ಹೆಂಡತಿಯೂ ಅಲ್ಲ. ನನ್ನ ಸಾವಿಗೆ ಕಾರಣ ವಿನಯ್ ಹಾಗೂ ಆಕೆ. ಅವಳು ಫೋಟೋ ಕಳುಹಿಸಿ ಇಷ್ಟೆಲ್ಲಾ ಮಾಡಿದ್ದಾಳೆ ಎಂದು ಕವನ್ ವಿಷ ಸೇವಿಸುವ ಮುನ್ನ ತನ್ನ ನೋವನ್ನು ವಿಡಿಯೋ ಮಾಡಿ ಹೇಳಿಕೊಂಡಿದ್ದಾನೆ.‌

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ನ್ಯೂಝಿಲೆಂಡ್ ತಂಡ ಪ್ರಕಟ
Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ನ್ಯೂಝಿಲೆಂಡ್ ತಂಡ ಪ್ರಕಟ
ಮನೆ ಮಂದಿಗೆ ಶಾಕ್ ಕೊಟ್ಟ ಕಿಚ್ಚ ಸುದೀಪ್, ಬಚ್ಚಿಟ್ಟುಕೊಂಡ ಹನುಮಂತ
ಮನೆ ಮಂದಿಗೆ ಶಾಕ್ ಕೊಟ್ಟ ಕಿಚ್ಚ ಸುದೀಪ್, ಬಚ್ಚಿಟ್ಟುಕೊಂಡ ಹನುಮಂತ
ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ