AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಕ್ಕುಂಡಿ ನಿಧಿ ಪ್ರಕರಣಕ್ಕೆ ಟ್ವಿಸ್ಟ್​​: ರಿತ್ತಿ ಕುಟುಂಬದಿಂದ ಹೊಸ ಡಿಮ್ಯಾಂಡ್​​

ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ಅಡಿಪಾಯ ಅಗೆಯುವಾಗ 470 ಗ್ರಾಂ ಚಿನ್ನದ ನಿಧಿ ಪತ್ತೆಯಾಗಿತ್ತು. ಪ್ರಜ್ವಲ್ ರಿತ್ತಿ ಕುಟುಂಬವು ಪ್ರಾಮಾಣಿಕವಾಗಿ ಅದನ್ನು ಸರ್ಕಾರಕ್ಕೆ ಒಪ್ಪಿಸಿತು. ಈಗ, ಪುರಾತತ್ವ ತಜ್ಞರು ಇದರ ಪ್ರಾಚೀನ ಮೌಲ್ಯ 8 ಕೋಟಿ ಎಂದು ಅಂದಾಜಿಸಿದ್ದು, ಕುಟುಂಬವು ಈ ಮೊತ್ತದಲ್ಲಿ ಐದರಲ್ಲಿ ಒಂದು ಭಾಗ ಪಾಲನ್ನು ಸರ್ಕಾರದಿಂದ ಬೇಡಿಕೆ ಇಟ್ಟಿದೆ. ಪ್ರಾಮಾಣಿಕತೆಗೆ ಪ್ರತಿಫಲವಾಗಿ ಸೂಕ್ತ ಪರಿಹಾರ ನಿರೀಕ್ಷಿಸಲಾಗಿದೆ.

ಲಕ್ಕುಂಡಿ ನಿಧಿ ಪ್ರಕರಣಕ್ಕೆ  ಟ್ವಿಸ್ಟ್​​: ರಿತ್ತಿ ಕುಟುಂಬದಿಂದ ಹೊಸ ಡಿಮ್ಯಾಂಡ್​​
ಲಕ್ಕುಂಡಿಯಲ್ಲಿ ಸಿಕ್ಕಿದ್ದ ಬಂಗಾರImage Credit source: Google
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on:Mar 12, 2026 | 6:54 AM

Share

ಗದಗ, ಮಾರ್ಚ್​ 12: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆಗಾಗಿ ಅಡಿಪಾಯ ತೆಗೆಯುವಾಗ ಸುಮಾರು 470 ಗ್ರಾಂ ಚಿನ್ನಾಭರಣಗಳು ಪತ್ತೆಯಾಗಿದ್ದವು. ಸಿಕ್ಕ ನಿಧಿಯನ್ನು ಪ್ರಜ್ವಲ್ ರಿತ್ತಿ ಕುಟುಂಬ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿತ್ತು. ಆ ಬಳಿಕ ಬಹಳ ಬೆಳವಣಿಗೆಗಳು ನಡೆದಿದ್ದವು. ಈ ನಡುವೆ ಪ್ರಕರಣಕ್ಕೆ ಹೊಸ ಟ್ವಿಸ್ಟ್​​ ಸಿಕ್ಕಿದೆ. ಅಂದು ಸಿಕ್ಕಿದ್ದ ಬಂಗಾರದ ಬೆಲೆ ಇಂದಿಗೆ ಸುಮಾರು 80 ಲಕ್ಷ ರೂಪಾಯಿಗಳಾಗಿದ್ದು, ಆ್ಯಂಟಿಕ್​​ ಮೌಲ್ಯ ಸುಮಾರು 8 ಕೋಟಿ ಎಂದು ತಜ್ಞರು ಹೇಳಿದ್ದಾರೆ. ಈ ಬೆನ್ನಲ್ಲೇ ಪ್ರಜ್ವಲ್ ರಿತ್ತಿ‌ ಕುಟುಂಬ ಹೊಸ ಬೇಡಿಕೆ ಮುಂದಿಟ್ಟಿದ್ದು, 8 ಕೋಟಿ ಮೊತ್ತಕ್ಕೆ ಐದರಲ್ಲಿ ಒಂದು  ಪಾಲು ತಮಗೆ ಬೇಕು ಎಂದಿದೆ.

ಪ್ರಜ್ವಲ್ ರಿತ್ತಿ‌ ಕುಟುಂಬ ಹೇಳಿದ್ದೇನು?

ಸಿಕ್ಕ ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ್ದೇವೆ. ಹೀಗಾಗಿ ತಜ್ಞರು ಹೇಳಿರುವ ಸಿಕ್ಕ ಬಂಗಾರದ ಆ್ಯಂಟಿಕ್​​ ಮೌಲ್ಯದಲ್ಲಿ ತಮಗೆ ಐದರಲ್ಲಿ ಒಂದು ಭಾಗ ಪಾಲು ನೀಡಬೇಕು. ಸರ್ಕಾರ ಕೂಡ ನಮಗೆ ಪ್ರಾಮಾಣಿಕವಾಗಿ ಪರಿಹಾರ ನೀಡಬೇಕು. ಈಗಿನ ಬೆಲೆಯನ್ನು ಕೊಡುತ್ತೇವೆ ಎಂದರೆ ನಾವು ಅದನ್ನು ಒಪ್ಪಲ್ಲ. ಸಚಿವ ಎಚ್. ಕೆ. ಪಾಟೀಲ್, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ರಾಜ್ಯ ಸಲಹಾ ಸಮಿತಿ ಸದಸ್ಯ ಸಿದ್ದು ಪಾಟೀಲ್ ನಮಗೆ ಭರವಸೆ ನೀಡಿದ್ದರು. ಹೀಗಾಗಿ ಅವರ ಮೇಲೆ ನಮಗೆ ನಂಬಿಕೆ ಇದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ: ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ನಿಧಿ ಯಾರ ಕಾಲದ್ದು ಗೊತ್ತಾ? ಇದರ ಬೆಲೆ ಕೇಳಿದ್ರೆ ಶಾಕ್​​​ ಆಗುವುದು ಗ್ಯಾರಂಟಿ!

ಪುರಾತತ್ವ ತಜ್ಞರು ಏನು ಹೇಳಿದ್ದರು?

ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ನಿಧಿ‌ಯ ಇಂದಿನ ವ್ಯಾಲ್ಯೂ ಸುಮಾರು 80 ಲಕ್ಷ ರೂ., ಆ್ಯಂಟಿಕ್ ಮೌಲ್ಯ ಹತ್ತು ಪಟ್ಟು ಹಾಕಿದ್ರೆ ಬಹಳ ಆಗುತ್ತೆ ಎಂದು ಗದಗದಲ್ಲಿ ಪುರಾತತ್ವ ತಜ್ಞೆ ಚೂಡಾಮಣಿ ಹೇಳಿದ್ದರು. ಲಕ್ಕುಂಡಿಯ ದೇವರಿಗೆ ಹಾಕುವ ಆಭರಣದ ಮೌಲ್ಯ ಹೇಳೋಕೆ ಆಗಲ್ಲ. ಇಲ್ಲಿಯ ಆಭರಣ ಬಹಳ ಅತ್ಯಮೂಲ್ಯವಾಗಿದ್ದು, ಸೂಕ್ಷ್ಮ ಕೆತ್ತನೆ ಮತ್ತು ಕುಸುರಿಯಿಂದ ಕೂಡಿವೆ. ಹರಳು ಮಾಣಿಕ್ಯ, ನೀಲಮಣಿ, ಪಚ್ಚೆ ಸೇರಿ ಹಲವಾರು ಅತ್ಯಮೂಲ್ಯವಾಗಿವೆ. ಕಿವಿಗೆ ಧರಿಸುವ ನಾಗಹೆಡೆಯ ಆಭರಣ ಸೂಕ್ಷ್ಮ ಕೆತ್ತನೆ ಹೊಂದಿದೆ. ಈ ರೀತಿ ಆಭರಣಗಳನ್ನು ಮಾಡಲು ಬೇರೆಯವರಿಂದ ಸಾಧ್ಯವಿಲ್ಲ. ಆದರೆ ನೂರಾರು ವರ್ಷ ಭೂಮಿಯಲ್ಲಿ ಸಿಲುಕಿ ಅವುಗಳು ಆಕಾರ ಕಳೆದುಕೊಂಡಿವೆ ಎಂದು ತಿಳಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:52 am, Thu, 12 March 26

Follow Us
ವಿವಾದಿತ ‘ದಿ ಕೇರಳ ಸ್ಟೋರಿ 2’ ಸಿನಿಮಾ ವೀಕ್ಷಿಸಿದ ಬಿಜೆಪಿ ಶಾಸಕರು
ವಿವಾದಿತ ‘ದಿ ಕೇರಳ ಸ್ಟೋರಿ 2’ ಸಿನಿಮಾ ವೀಕ್ಷಿಸಿದ ಬಿಜೆಪಿ ಶಾಸಕರು
ನಿಜವಾದ ಕೇರಳ ಸ್ಟೋರಿ: ಮುಸ್ಲಿಂ ಯುವಕನ ಜತೆ ಮದುವೆ ಆದ ಕುಂಭಮೇಳದ ಹುಡುಗಿ
ನಿಜವಾದ ಕೇರಳ ಸ್ಟೋರಿ: ಮುಸ್ಲಿಂ ಯುವಕನ ಜತೆ ಮದುವೆ ಆದ ಕುಂಭಮೇಳದ ಹುಡುಗಿ
ಉದ್ಘಾಟನೆಯಾದ 6 ತಿಂಗಳೊಳಗೆ ಬಂಗಾಳದ ಫ್ಲೈಓವರ್ ಗೋಡೆ ಕುಸಿತ
ಉದ್ಘಾಟನೆಯಾದ 6 ತಿಂಗಳೊಳಗೆ ಬಂಗಾಳದ ಫ್ಲೈಓವರ್ ಗೋಡೆ ಕುಸಿತ
ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ
ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ
ಏರ್ ಇಂಡಿಯಾ ವಿಮಾನ ಹಾರ್ಡ್​ ಲ್ಯಾಂಡಿಂಗ್, ಪುಡಿ ಪುಡಿಯಾದ ಚಕ್ರ
ಏರ್ ಇಂಡಿಯಾ ವಿಮಾನ ಹಾರ್ಡ್​ ಲ್ಯಾಂಡಿಂಗ್, ಪುಡಿ ಪುಡಿಯಾದ ಚಕ್ರ
ಗ್ಯಾಸ್ ನೋ ಸ್ಟಾಕ್: ಬೆಂಗಳೂರಿನಲ್ಲಿ ಬಂಕ್ ಬಂದ್, ಆಟೋದವರ ದುಡಿಮೆಗೂ ಕುತ್ತು
ಗ್ಯಾಸ್ ನೋ ಸ್ಟಾಕ್: ಬೆಂಗಳೂರಿನಲ್ಲಿ ಬಂಕ್ ಬಂದ್, ಆಟೋದವರ ದುಡಿಮೆಗೂ ಕುತ್ತು
ಯುಗಾದಿ ವರ್ಷ ಭವಿಷ್ಯ; ಈ ರಾಶಿಯವರು ಆರೋಗ್ಯದ ಬಗ್ಗೆ ಅತ್ಯಂತ ಜಾಗರೂಕರಾಗಿರಿ
ಯುಗಾದಿ ವರ್ಷ ಭವಿಷ್ಯ; ಈ ರಾಶಿಯವರು ಆರೋಗ್ಯದ ಬಗ್ಗೆ ಅತ್ಯಂತ ಜಾಗರೂಕರಾಗಿರಿ