AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ನಿಧಿ ಯಾರ ಕಾಲದ್ದು ಗೊತ್ತಾ? ಇದರ ಬೆಲೆ ಕೇಳಿದ್ರೆ ಶಾಕ್​​​ ಆಗುವುದು ಗ್ಯಾರಂಟಿ!

ಲಕ್ಕುಂಡಿಯಲ್ಲಿ ಪತ್ತೆಯಾದ 500-600 ವರ್ಷಗಳ ಹಳೆಯ ಚಿನ್ನದ ನಿಧಿಯು ಚಾಲುಕ್ಯ-ವಿಜಯನಗರ ಕಾಲದ ಅಪೂರ್ವ ದಾಖಲೆಯಾಗಿದೆ. ಇದು ಸಾಮಾನ್ಯ ಆಭರಣವಲ್ಲ, ಬದಲಿಗೆ ದೇವತೆಗಳಿಗೆ ಅರ್ಪಿಸಲಾಗಿದ್ದ 465 ಗ್ರಾಂ ಚಿನ್ನ, ರತ್ನಖಚಿತ ಒಡವೆಗಳಾಗಿವೆ. ಇದರ 'ಆ್ಯಂಟಿಕ್' ಮೌಲ್ಯ ಸುಮಾರು 8 ಕೋಟಿ ರೂಪಾಯಿ ಎಂದು ಪುರಾತತ್ವ ಶಾಸ್ತ್ರಜ್ಞರು ದೃಢಪಡಿಸಿದ್ದಾರೆ. ಇದು ಗದಗ ಇತಿಹಾಸಕ್ಕೆ ಹೊಸ ಆಯಾಮ ನೀಡಿದೆ.

ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ನಿಧಿ ಯಾರ ಕಾಲದ್ದು ಗೊತ್ತಾ? ಇದರ ಬೆಲೆ ಕೇಳಿದ್ರೆ  ಶಾಕ್​​​ ಆಗುವುದು ಗ್ಯಾರಂಟಿ!
,ಲಕ್ಕುಂಡಿ ಚಿನ್ನImage Credit source: Tv9 kannada
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on:Mar 11, 2026 | 10:13 AM

Share

ಗದಗ, ಮಾ.11: ಲಕ್ಕುಂಡಿಯಲ್ಲಿ (Lakkundi Gold Treasure) ಈ ವರ್ಷದ (2026) ಜನವರಿ 10ರಂದು ಪತ್ತೆಯಾಗಿದ್ದ ಚಿನ್ನದ ನಿಧಿಯ ಕುರಿತು ಕುತೂಹಲಕಾರಿ ವಿಷಯಗಳು ಹೊರಬಂದಿವೆ. ರಿತ್ತಿ ಕುಟುಂಬದ ಮನೆಯ ಪಾಯ ತೋಡುವಾಗ ಸಿಕ್ಕಿದ್ದ ಈ ಆಭರಣಗಳು ಕೇವಲ ಬಂಗಾರವಲ್ಲ, ಅವು ಇತಿಹಾಸದ ಅಮೂಲ್ಯ ದಾಖಲೆಗಳಾಗಿವೆ. ಗದಗ ಜಿಲ್ಲಾಡಳಿತ ಭವನದಲ್ಲಿ ಡಿಸಿ ನೇತೃತ್ವದಲ್ಲಿ ನಡೆದ ಪರಿಶೀಲನೆಯಲ್ಲಿ ಪುರಾತತ್ವ ಶಾಸ್ತ್ರಜ್ಞರ ಸಮಿತಿ ಈ ಕೆಲವೊಂದು ಅಚ್ಚರಿಯ ವಿಚಾರಗಳನ್ನು ತಿಳಿಸಿದೆ. ಈ ಆಭರಣಗಳು ಯಾವ ಕಾಲದ್ದೂ, ಯಾರಿಗೆ ಸೇರಬೇಕಿರುವುದು, ಹಾಗೂ ಇದರ ಮೌಲ್ಯಗಳು ಎಷ್ಟು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಆಭರಣಗಳು ಸುಮಾರು 500 ರಿಂದ 600 ವರ್ಷಗಳಷ್ಟು ಹಳೆಯವು. ಇವು ಕಲ್ಯಾಣ ಚಾಲುಕ್ಯರು ಮತ್ತು ವಿಜಯನಗರ ಅರಸರ ಕಾಲದ ಕಲೆ ಮತ್ತು ಸಂಸ್ಕೃತಿಯನ್ನು ಸಾರಿ ಹೇಳುತ್ತಿವೆ. ಇವು ಸಾಮಾನ್ಯ ಮಹಿಳೆಯರು ಧರಿಸುವ ಒಡವೆಗಳಲ್ಲ, ಬದಲಿಗೆ ಹೆಣ್ಣು ದೇವರಿಗೆ ಅಥವಾ ಉತ್ಸವ ಮೂರ್ತಿಗಳಿಗೆ ಅಲಂಕರಿಸುವ ಅಪರೂಪದ ಆಭರಣಗಳಾಗಿವೆ. ಇದರಲ್ಲಿ ಹೆಣ್ಣು ದೇವರ ಮೂರ್ತಿಯೂ ಪತ್ತೆಯಾಗಿದೆ.ಚಿನ್ನದ ಜೊತೆಗೆ ಈ ಆಭರಣಗಳಲ್ಲಿ ಅತ್ಯಂತ ಅಪರೂಪದ ನೀಲಮಣಿ, ಸ್ಪಟಿಕ, ಹವಳ ಸೇರಿದಂತೆ ರತ್ನಗಳನ್ನು ಬಳಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಬನಶಂಕರಿ ದೇವಸ್ಥಾನಕ್ಕೂ ತಟ್ಟಿದ ಯುದ್ಧದ ಬಿಸಿ: ಭಕ್ತರ ಗಮನಕ್ಕೆ ಇಂದಿನಿಂದ ಈ ಸೇವೆ ಸ್ಥಗಿತ

ಕೇವಲ ಚಿನ್ನದ ತೂಕದ (465 ಗ್ರಾಂ) ಲೆಕ್ಕಾಚಾರ ಹಾಕಿದರೆ ಇಂದಿನ ಮಾರುಕಟ್ಟೆ ದರದಲ್ಲಿ ಸುಮಾರು 35-40 ಲಕ್ಷ ರೂ. ಆಗಬಹುದು. ಆದರೆ ಇವುಗಳ ‘ಆ್ಯಂಟಿಕ್’ (ಪ್ರಾಚೀನ) ಮೌಲ್ಯ ಅಂದಾಜು 8 ಕೋಟಿ ರೂಪಾಯಿ! ಅಂದರೆ ಈಗಿನ ದರಕ್ಕಿಂತ ಹತ್ತು ಪಟ್ಟು ಹೆಚ್ಚು. ಸಮಿತಿ ಚೇರ್ಮನ್ ಎಂ.ಎಸ್. ಕೃಷ್ಣಮೂರ್ತಿ ನೇತೃತ್ವದಲ್ಲಿ ಕಲಾ ಇತಿಹಾಸಗಾರರಾದ ರಾಘವೇಂದ್ರ ಕುಲಕರ್ಣಿ, ಪ್ರೊ. ಚೂಡಾಮಣಿ ನಂದಗೋಪಾಲ, ಶಾಸನ ತಜ್ಞ ಹನುಮಾಪಕ್ಷಿ ಗೋಗಿ, ರತ್ನಶಾಸ್ತ್ರಜ್ಞ ಪ್ರಭು ಕಮ್ಮಾರ ಮತ್ತು ಡಾ. ಶೇಜೇಶ್ವರ ಅವರ ತಂಡ ನಾಲ್ಕೈದು ಗಂಟೆಗಳ ಕಾಲ ಒಂದೊಂದು ಆಭರಣವನ್ನು ಸೂಕ್ಷ್ಮವಾಗಿ ಪರಿಶೀಲಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:13 am, Wed, 11 March 26

Follow Us