AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2027: ಐಪಿಎಲ್ ಟ್ರೇಡ್ ವಿಂಡೋ: ತೆರೆಮರೆಯ ರಣತಂತ್ರಗಳು

IPL 2027: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-20ರ ಮಿನಿ ಹರಾಜಿಗೂ ಮುನ್ನ ಆಟಗಾರರ ಟ್ರೇಡ್ ನಡೆಸಲು ಐಪಿಎಲ್ ಗವರ್ನರ್ ಕೌನ್ಸಿಲ್ ಗ್ರೀನ್ ಸಿಗ್ನಲ್ ನೀಡಿದೆ. ಫ್ರಾಂಚೈಸಿಗಳು ತಮ್ಮ ತಂಡದ ಸಮತೋಲನವನ್ನು ಸುಧಾರಿಸಲು ಆಟಗಾರರ ಅದಲು-ಬದಲು ಪ್ರಕ್ರಿಯೆಯನ್ನು ಆರಂಭಿಸಿವೆ. ಆಟಗಾರರ ಒಪ್ಪಿಗೆಯೊಂದಿಗೆ ನೇರ ನಗದು ಒಪ್ಪಂದ ಅಥವಾ ಆಟಗಾರರ ವಿನಿಮಯಕ್ಕೆ  ಅವಕಾಶವಿರುವುದರಿಂದ, ಈ ಬಾರಿಯ ಟ್ರೇಡ್ ವಿಂಡೋ ಐಪಿಎಲ್ ಇತಿಹಾಸದಲ್ಲೇ ರೋಚಕ ತಿರುವುಗಳಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ. 

IPL 2027: ಐಪಿಎಲ್ ಟ್ರೇಡ್ ವಿಂಡೋ: ತೆರೆಮರೆಯ ರಣತಂತ್ರಗಳು
Ipl 2027Image Credit source: IPL
ಝಾಹಿರ್ ಯೂಸುಫ್
|

Updated on: Aug 03, 2026 | 2:25 PM

Share

ಐಪಿಎಲ್ 2027ರ ಸೀಸನ್‌ಗಾಗಿ ಬಿಸಿಸಿಐ (BCCI) ಅಧಿಕೃತ ಟ್ರೇಡ್ ವಿಂಡೋವನ್ನು ಮುಕ್ತಗೊಳಿಸಿದ್ದು, ಫ್ರಾಂಚೈಸಿಗಳು ಹರಾಜಿಗೂ ಮುನ್ನವೇ ಆಟಗಾರರ ಅದಲು-ಬದಲಿಗೆ ಭರ್ಜರಿ ರಣತಂತ್ರ ರೂಪಿಸುತ್ತಿವೆ. ಮುಂಬರುವ ಮಿನಿ ಹರಾಜಿಗೂ ಮುನ್ನ ತಂಡಗಳ ಸಮತೋಲನವನ್ನು ಸರಿಪಡಿಸಿಕೊಳ್ಳಲು ಈ ವಿಂಡೋ ಅತ್ಯಂತ ನಿರ್ಣಾಯಕವಾಗಿದೆ. ಐಪಿಎಲ್ ಟ್ರೇಡ್ ಪ್ರಕ್ರಿಯೆಯನ್ನು ನಿಯಂತ್ರಿಸುವ ಸಂಪೂರ್ಣ ನಿಯಮಗಳು ಮತ್ತು ವಿವರಗಳ ಸಂಪೂರ್ಣ ಮಾಹಿತಿ ಇಲ್ಲಿದೆ…

ಟ್ರೇಡ್ ವಿಂಡೋ ಎಂದರೇನು?

ಐಪಿಎಲ್ ಟ್ರೇಡ್ ವಿಂಡೋ ಎಂದರೆ ಹರಾಜಿನಲ್ಲಿ ಭಾಗವಹಿಸದೆ, ಫ್ರಾಂಚೈಸಿಗಳು ಪರಸ್ಪರ ಒಪ್ಪಂದದ ಮೂಲಕ ಆಟಗಾರರನ್ನು ವರ್ಗಾವಣೆ ಮಾಡಿಕೊಳ್ಳುವ ವಿಶೇಷ ಪ್ರಕ್ರಿಯೆ.

ಸಾಮಾನ್ಯವಾಗಿ ಐಪಿಎಲ್​ ಸೀಸನ್ ಮುಗಿದ ಒಂದು ತಿಂಗಳ ನಂತರ ಈ ವಿಂಡೋ ಆರಂಭವಾಗುತ್ತದೆ. ಅಲ್ಲದೆ ಮುಂದಿನ ಸೀಸನ್‌ನ ಮಿನಿ ಹರಾಜು ಪ್ರಕ್ರಿಯೆ ಆರಂಭವಾಗಲು ಇನ್ನು 7 ದಿನಗಳು ಬಾಕಿ ಇರುವಾಗ ಈ ವಿಂಡೋ ಅಧಿಕೃತವಾಗಿ ಮುಚ್ಚಲ್ಪಡುತ್ತದೆ.

ಟ್ರೇಡ್ ಮಾಡುವ ವಿಧಾನಗಳು:

ಐಪಿಎಲ್ ಫ್ರಾಂಚೈಸಿಗಳು ಪ್ರಮುಖವಾಗಿ ಎರಡು ಆಯ್ಕೆಗಳ ಮೂಲಕ ಆಟಗಾರರನ್ನು ಟ್ರೇಡ್ ಮಾಡಿಕೊಳ್ಳಬಹುದು.

  • ನೇರ ನಗದು ಒಪ್ಪಂದ: ಖರೀದಿಸುವ ತಂಡವು ಆಟಗಾರನ ಸಂಪೂರ್ಣ ಹರಾಜು ಮೊತ್ತವನ್ನು ನಗದಾಗಿ ನೀಡಿ, ಆತನನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಬಹುದು.
  • ಆಟಗಾರರ ವಿನಿಮಯ: ಎರಡು ತಂಡಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಇಬ್ಬರು ಆಟಗಾರರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬಹುದು. ಈ ವೇಳೆ ಇಬ್ಬರ ಸಂಭಾವನೆಯಲ್ಲಿ ವ್ಯತ್ಯಾಸವಿದ್ದರೆ, ಆ ಮೊತ್ತವನ್ನು ಹಣದ ರೂಪದಲ್ಲಿ ಸರಿದೂಗಿಸಲು ಅವಕಾಶವಿದೆ.

ಬಿಸಿಸಿಐನ ಕಟ್ಟುನಿಟ್ಟಿನ ನಿಯಮಗಳು:

ಟ್ರೇಡ್ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿರಲು ಬಿಸಿಸಿಐ ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.

  • ಆಟಗಾರನ ಒಪ್ಪಿಗೆ ಕಡ್ಡಾಯ: ಯಾವುದೇ ತಂಡವು ಆಟಗಾರನಿಗೆ ಇಷ್ಟವಿಲ್ಲದೆ ಬಲವಂತವಾಗಿ ಬೇರೆ ತಂಡಕ್ಕೆ ಮಾರಾಟ ಮಾಡಲು ಸಾಧ್ಯವಿಲ್ಲ. ಆಟಗಾರನು ಅಧಿಕೃತ ಒಪ್ಪಿಗೆ ಪತ್ರಕ್ಕೆ ಸಹಿ ಹಾಕುವುದು ಕಡ್ಡಾಯ.
  • ಹರಾಜು ಪರ್ಸ್ ನಿಯಮ: ಆಟಗಾರನ ಮೂಲ ಹರಾಜು ಬೆಲೆ ಎಷ್ಟಿರುತ್ತದೆಯೋ, ಅಷ್ಟು ಮೊತ್ತ ಮಾತ್ರ ಖರೀದಿಸುವ ತಂಡದ ಹರಾಜು ಪರ್ಸ್‌ನಿಂದ ಕಡಿತಗೊಳ್ಳುತ್ತದೆ. ಹಾಗೆಯೇ ಮಾರಾಟ ಮಾಡಿದ ತಂಡದ ಪರ್ಸ್‌ಗೆ ಮರಳಿ ಸೇರುತ್ತದೆ.
  • ವರ್ಗಾವಣೆ ಶುಲ್ಕ: ಆಟಗಾರನನ್ನು ಸೆಳೆಯಲು ಫ್ರಾಂಚೈಸಿಗಳು ಮೂಲ ಬೆಲೆಗಿಂತ ಹೆಚ್ಚಿನ ಮೊತ್ತವನ್ನು ‘ವರ್ಗಾವಣೆ ಶುಲ್ಕ’ವಾಗಿ ನೀಡಬಹುದು. ಈ ಹೆಚ್ಚುವರಿ ಹಣ ಹರಾಜು ಪರ್ಸ್‌ಗೆ ಒಳಪಡುವುದಿಲ್ಲ.
  • ಫಿಟ್‌ನೆಸ್ ಮತ್ತು ಅನುಮೋದನೆ: ಟ್ರೇಡ್ ಆಗುವ ಆಟಗಾರನು ವೈದ್ಯಕೀಯವಾಗಿ ಫಿಟ್ ಇರಬೇಕು. ಪ್ರತಿಯೊಂದು ಟ್ರೇಡ್ ಒಪ್ಪಂದಕ್ಕೂ ಐಪಿಎಲ್ ಗವರ್ನಿಂಗ್ ಕೌನ್ಸಿಲ್‌ನ ಅಂತಿಮ ಅನುಮೋದನೆ ಅತ್ಯಗತ್ಯ.

ಇದನ್ನೂ ಓದಿ: ಟೀಮ್ ಇಂಡಿಯಾಗೆ ಜಮ್ಮು-ಕಾಶ್ಮೀರ ವೇಗಿ ಎಂಟ್ರಿ

ಈ ಬಾರಿ ಯಾರ ಮೇಲೆ ಕಣ್ಣು?

ಪ್ರಸಕ್ತ ಸೀಸನ್‌ನಲ್ಲಿ ನಾಯಕತ್ವದ ಬದಲಾವಣೆ, ಆಟಗಾರರ ಅಸಮಾಧಾನ ಮತ್ತು ತಂಡದ ಸಂಯೋಜನೆಯ ಕಾರಣಗಳಿಂದಾಗಿ ಕೆಲವು ಹೈ-ಪ್ರೊಫೈಲ್ ಆಟಗಾರರು ಟ್ರೇಡ್ ವಿಂಡೋ ಮೂಲಕ ಬೇರೆ ತಂಡ ಸೇರುವ ಸಾಧ್ಯತೆ ದಟ್ಟವಾಗಿದೆ. ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಟ್ರೇಡ್ ವಿಂಡೋದಲ್ಲಿ ಸಕ್ರಿಯವಾಗಿವೆ ಎಂದು ವರದಿಯಾಗಿದೆ.

Follow Us
ಶೂಟಿಂಗ್ ವೇಳೆ ರಶ್ಮಿಕಾಗೆ ಗಾಯ; ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?
ಶೂಟಿಂಗ್ ವೇಳೆ ರಶ್ಮಿಕಾಗೆ ಗಾಯ; ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ