AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರ ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಬೇಟೆಗಾರರು ಇನ್ನು ಸಕ್ರೀಯ: ಸ್ಫೋಟಕ ವಿಚಾರ ಬೆಳಕಿಗೆ

ಚಾಮರಾಜನಗರ ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಬೇಟೆಗಾರರು ಇನ್ನು ಸಕ್ರೀಯ: ಸ್ಫೋಟಕ ವಿಚಾರ ಬೆಳಕಿಗೆ

ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on: Sep 13, 2026 | 5:24 PM

Share

ಚಾಮರಾಜನಗರ ಜಿಲ್ಲೆಯಲ್ಲಿ, ವಿಶೇಷವಾಗಿ ಹನೂರು ತಾಲ್ಲೂಕು ಹಾಗೂ ತಮಿಳುನಾಡು ಗಡಿಭಾಗದಲ್ಲಿ, 40ಕ್ಕೂ ಹೆಚ್ಚು ಸಕ್ರಿಯ ಬೇಟೆಗಾರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಟಿವಿ9 ಡಿಜಿಟಲ್‌ಗೆ ಲಭ್ಯವಾಗಿದೆ. ಅಕ್ರಮ ನಾಡಬಂದೂಕುಗಳನ್ನು ಬಳಸಿ ಜಿಂಕೆ, ಕಡವೆಗಳಂತಹ ವನ್ಯಜೀವಿಗಳನ್ನು ಬೇಟೆಯಾಡುತ್ತಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಎಚ್ಚರಿಕೆಯ ನಂತರವೂ ಶಸ್ತ್ರಾಸ್ತ್ರಗಳನ್ನು ಒಪ್ಪಿಸದಿದ್ದರೆ, ಬೃಹತ್ ಕಾರ್ಯಾಚರಣೆ ಅನಿವಾರ್ಯ.

ಚಾಮರಾಜನಗರ, ಸೆಪ್ಟೆಂಬರ್​ 13: ಜಿಲ್ಲೆಯಲ್ಲಿ ಕುಖ್ಯಾತ ಕಾಡುಗಳ್ಳ ವೀರಪ್ಪನ್ ಹತನಾದ ಬಳಿಕವೂ ಕಾಡುಗಳ್ಳತನ ನಿಂತಿಲ್ಲ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದ್ದು, ಜಿಲ್ಲೆಯ ಹನೂರು ತಾಲೂಕು ಸೇರಿದಂತೆ ತಮಿಳುನಾಡು ಗಡಿಭಾಗದ ಸುಮಾರು 14 ಗ್ರಾಮಗಳಲ್ಲಿ ಬರೋಬ್ಬರಿ 40ಕ್ಕೂ ಹೆಚ್ಚು ಬೇಟೆಗಾರರು ಇಂದಿಗೂ ಸಕ್ರಿಯರಾಗಿದ್ದಾರೆ. ಕನ್ನೂರು ಎನ್‌ಕೌಂಟರ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರ ಗ್ರೌಂಡ್‌ ರಿಪೋರ್ಟ್‌ನಲ್ಲಿ ಈ ವಿಚಾರ ಬಯಲಾಗಿದ್ದು, ಈ ಕಿಡಿಗೇಡಿಗಳು ಪರವಾನಗಿ ರಹಿತ ನಾಡಬಂದೂಕು ಹಾಗೂ ಕೋವಿಗಳನ್ನು ಇಟ್ಟುಕೊಂಡು ಜಿಂಕೆ, ಕಡವೆ ಸೇರಿದಂತೆ ವನ್ಯಪ್ರಾಣಿಗಳನ್ನು ಬೇಟೆಯಾಡಿ ಆಹಾರಕ್ಕಾಗಿ ಹಾಗೂ ಮಾರಾಟಕ್ಕಾಗಿ ಮಾಂಸ ಸಾಗಾಟ ಮಾಡುತ್ತಿದ್ದಾರೆ. ತಮಿಳುನಾಡು ಭಾಗದಿಂದಲೂ ಬೇಟೆಗಾರರು ರಾಜ್ಯದ ಅರಣ್ಯಕ್ಕೆ ನುಸುಳಿ ಬೇಟೆಯಾಡುತ್ತಿರುವುದು ಪತ್ತೆಯಾಗಿದ್ದು, ಅಕ್ರಮ ಬಂದೂಕುಗಳನ್ನು ತಕ್ಷಣವೇ ಶರಣಾಗಿಸದಿದ್ದರೆ ಅರಣ್ಯ ಪ್ರದೇಶದಲ್ಲಿ ಪೊಲೀಸರು ಮತ್ತು ಸಿಐಡಿ ಅಧಿಕಾರಿಗಳು ಬೃಹತ್ ಕಾರ್ಯಾಚರಣೆ ನಡೆಸಲು ಸಿದ್ಧತೆ ಕೈಗೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us