AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2027: ಐಪಿಎಲ್​ಗೆ ಸ್ಟಾರ್ ಆಟಗಾರರು ಡೌಟ್!

IPL 2027: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್-20 ಮಾರ್ಚ್ 10 ರಿಂದ ಶುರುವಾಗಲಿದೆ. ಅಂದರೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿ ಮುಗಿದ ಬೆನ್ನಲ್ಲೇ ಐಪಿಎಲ್ ಆರಂಭವಾಗಲಿದೆ. ಆದರೆ, ಅತ್ತ ಟೀಮ್ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿ ಮುಗಿಯುತ್ತಿದ್ದಂತೆಯೇ ಆಸ್ಟ್ರೇಲಿಯಾ ಆಟಗಾರರು ಆ್ಯಶಸ್ ಸರಣಿಗೆ ಸಿದ್ಧತೆಗಳನ್ನು ಆರಂಭಿಸಲಿದ್ದಾರೆ.

IPL 2027: ಐಪಿಎಲ್​ಗೆ ಸ್ಟಾರ್ ಆಟಗಾರರು ಡೌಟ್!
Australian PlayersImage Credit source: IPL
ಝಾಹಿರ್ ಯೂಸುಫ್
|

Updated on: Aug 01, 2026 | 2:26 PM

Share

ಐಪಿಎಲ್ 2027ರ ಮೆಗಾ ಟೂರ್ನಿಗೆ ಮುನ್ನವೇ ಫ್ರಾಂಚೈಸಿಗಳಿಗೆ ಭಾರಿ ಆಘಾತ ಎದುರಾಗಿದೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ತ್ರಿಮೂರ್ತಿಗಳಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೇಝಲ್​ವುಡ್​ ಮುಂಬರುವ ಐಪಿಎಲ್ ಆವೃತ್ತಿಯಿಂದ ಸಂಪೂರ್ಣವಾಗಿ ಹೊರಗುಳಿಯುವ ಸಾಧ್ಯತೆಯಿದೆ. ರಾಷ್ಟ್ರೀಯ ತಂಡದ ಜವಾಬ್ದಾರಿ ಹಾಗೂ ತೀವ್ರ ಕೆಲಸದ ಒತ್ತಡ ನಿರ್ವಹಣೆಯ ಕಾರಣದಿಂದಾಗಿ ಈ ಮೂವರೂ ಆಟಗಾರರು ಐಪಿಎಲ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇವರೊಂದಿಗೆ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದಲ್ಲಿರುವ ಟ್ರಾವಿಸ್ ಹೆಡ್ ಸೇರಿದಂತೆ ಕೆಲ ಪ್ರಮುಖ ಆಟಗಾರರು ಕೂಡ ಐಪಿಎಲ್​ನ ದ್ವಿತೀಯಾರ್ಧಕ್ಕೆ ಅಲಭ್ಯರಾಗಲಿದ್ದಾರೆ.

ಈ ಬಗ್ಗೆ ಮಾತನಾಡಿರುವ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ “ಮುಂದಿನ ವರ್ಷ ನಮ್ಮ ವೇಳಾಪಟ್ಟಿ ಅತ್ಯಂತ ಬ್ಯುಸಿಯಾಗಿದೆ. ದೇಶಕ್ಕಾಗಿ ಆಡುವ ಟೆಸ್ಟ್ ಪಂದ್ಯಗಳು ಅಥವಾ ಏಕದಿನ ವಿಶ್ವಕಪ್‌ ಅನ್ನು ನಾವು ಕೈಬಿಡಲು ಸಾಧ್ಯವಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ನಾವು ಏನನ್ನಾದರೂ ಒಂದನ್ನು ತ್ಯಾಗ ಮಾಡಲೇಬೇಕಾಗುತ್ತದೆ,” ಎಂದು ಹೇಳುವ ಮೂಲಕ ಐಪಿಎಲ್​ನಿಂದ ಹಿಂದೆ ಸರಿಯುವ ಸುಳಿವು ನೀಡಿದ್ದಾರೆ.

ಹೊರಗುಳಿಯಲು ಕಾರಣವೇನು?

ಆಸ್ಟ್ರೇಲಿಯಾ ತಂಡವು 2027ರಲ್ಲಿ ಸತತವಾಗಿ ದೊಡ್ಡ ಸರಣಿಗಳನ್ನು ಆಡಬೇಕಾಗಿದೆ. ಇದೇ ಕಾರಣದಿಂದಾಗಿ ಆಟಗಾರರು ಐಪಿಎಲ್​ ವೇಳೆ ವಿಶ್ರಾಂತಿ ಪಡೆಯಲಿದ್ದಾರೆ ಎಂದು ವರದಿಯಾಗಿದೆ.

  • ಜನವರಿ-ಫೆಬ್ರವರಿಯಲ್ಲಿ ಭಾರತದ ವಿರುದ್ಧ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆಡಲಿದೆ.
  • ಮಾರ್ಚ್​ನಲ್ಲಿ ಇಂಗ್ಲೆಂಡ್ ವಿರುದ್ಧ 150ನೇ ವರ್ಷದ ಐತಿಹಾಸಿಕ ಟೆಸ್ಟ್ ಪಂದ್ಯವನ್ನಾಡಲಿದೆ.
  • ಜೂನ್-ಜುಲೈನಲ್ಲಿ ಇಂಗ್ಲೆಂಡ್‌ ವಿರುದ್ಧ ಪ್ರತಿಷ್ಠಿತ 5 ಪಂದ್ಯಗಳ ಆ್ಯಶಸ್ ಟೆಸ್ಟ್‌ ಸರಣಿ ನಡೆಯಲಿದೆ.
  • ಆಸ್ಟ್ರೇಲಿಯಾ ಅರ್ಹತೆ ಪಡೆದರೆ 2027ರ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯವಾಡಲಿದೆ.
  • ಅಕ್ಟೋಬರ್-ನವೆಂಬರ್‌ನಲ್ಲಿ ಏಕದಿನ ವಿಶ್ವಕಪ್​ನಲ್ಲೂ ಕಣಕ್ಕಿಳಿಯಬೇಕಿದೆ.

ಅಂದರೆ ಜನವರಿಯಿಂದ ಶುರುವಾಗುವ ಆಸ್ಟ್ರೇಲಿಯಾದ ವೇಳಾಪಟ್ಟಿ ನಿಲ್ಲುವುದು ನವೆಂಬರ್​ನಲ್ಲಿ. ಅಂದರೆ ಇಲ್ಲಿ ಜನವರಿ-ಜುಲೈ ನಡುವೆ ಆಸ್ಟ್ರೇಲಿಯಾ 11 ಪ್ರತಿಷ್ಠಿತ ಟೆಸ್ಟ್ ಪಂದ್ಯಗಳನ್ನಾಡಬೇಕಿದೆ. ಇದರ ನಡುವೆ, ಅಂದರೆ ಮಾರ್ಚ್-ಮೇ ನಡುವೆ ಐಪಿಎಲ್ ನಡೆಯಲಿದೆ.

ಇತ್ತ ಮೇ ಅಂತ್ಯದಲ್ಲಿ ಐಪಿಎಲ್ ಮುಗಿಸಿ ಆಸ್ಟ್ರೇಲಿಯನ್ನರು ಜೂನ್​ನಲ್ಲಿ ಟೆಸ್ಟ್ ಸರಣಿಗೆ ತೆರಳುವ ಸಾಧ್ಯತೆಯಿಲ್ಲ. ಹೀಗಾಗಿ ಪ್ಯಾಟ್ ಕಮಿನ್ಸ್, ಜೋಶ್ ಹೇಝಲ್​ವುಡ್ ಹಾಗೂ ಮಿಚೆಲ್ ಸ್ಟಾರ್ಕ್​ನಂತಹ ಪ್ರಮುಖ ವೇಗಿಗಳು ಐಪಿಎಲ್​ನಿಂದ ಹಿಂದೆ ಸರಿಯುವುದು ಖಚಿತ.

ಇನ್ನು ಟ್ರಾವಿಸ್ ಹೆಡ್​, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್ ಸೇರಿದಂತೆ ಕೆಲ ಆಟಗಾರರು ಐಪಿಎಲ್​ನ ಮೊದಲಾರ್ಧದಲ್ಲಿ ಮಾತ್ರ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅಂದರೆ ದ್ವಿತೀಯಾರ್ಧದ ಆರಂಭಕ್ಕೂ ಮುನ್ನ ಈ ಆಟಗಾರರು ಟೆಸ್ಟ್ ತಂಡವನ್ನು ಕೂಡಿಕೊಳ್ಳುವುದು ಖಚಿತ ಎಂದೇ ಹೇಳಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಐಪಿಎಲ್ 2027ರ ಸೀಸನ್ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರನ್ನು ನೆಚ್ಚಿಕೊಂಡಿರುವ ಫ್ರಾಂಚೈಸಿಗಳಿಗೆ ಅಕ್ಷರಶಃ ಅಗ್ನಿಪರೀಕ್ಷೆಯಾಗಲಿದೆ. ವಿಶ್ವಕಪ್ ಹಾಗೂ ಪ್ರತಿಷ್ಠಿತ ಆಶಸ್ ಸರಣಿಗಾಗಿ ದೇಶದ ಜವಾಬ್ದಾರಿಗೆ ಮೊದಲ ಆದ್ಯತೆ ನೀಡಿರುವ ಆಸೀಸ್ ಆಟಗಾರರ ನಿರ್ಧಾರ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದೆ.

ಇದನ್ನೂ ಓದಿ: ಏಕದಿನ ವಿಶ್ವಕಪ್​ಗೆ ಬಲಿಷ್ಠ ಭಾರತ ತಂಡ ಹೆಸರಿಸಿದ ಡಿಕೆ

ಪ್ರಮುಖ ವೇಗಿಗಳ ಸಂಪೂರ್ಣ ಗೈರು ಒಂದೆಡೆಯಾದರೆ, ಟ್ರಾವಿಸ್ ಹೆಡ್ ಮತ್ತು ಕ್ಯಾಮರೋನ್ ಗ್ರೀನ್ ಅವರಂತಹ ಮ್ಯಾಚ್ ವಿನ್ನರ್‌ಗಳು ಟೂರ್ನಿಯ ದ್ವಿತೀಯಾರ್ಧದಲ್ಲಿ ಲಭ್ಯವಿರುವುದಿಲ್ಲ ಎಂಬುದು ತಂಡಗಳ ಪ್ಲೇ-ಆಫ್ಸ್ ರಣತಂತ್ರಕ್ಕೆ ದೊಡ್ಡ ಹಿನ್ನಡೆ ತರಲಿದೆ. ಹೀಗಾಗಿಯೇ ಮಿನಿ ಹರಾಜಿನಲ್ಲಿ ಸೂಕ್ತ ಬದಲಿ ಆಟಗಾರರನ್ನು ಹುಡುಕಿ, ಹೊಸ ರಣತಂತ್ರ ಹೆಣೆಯುವುದೇ ಈಗ ಐಪಿಎಲ್​ ಫ್ರಾಂಚೈಸಿಗಳ ಮುಂದಿರುವ ಬಹುದೊಡ್ಡ ಸವಾಲು.

Follow Us
'ತಮಿಳುನಾಡಿಗೆ ಇನ್ನೂ ನೀರು ಹರಿಸಿಲ್ಲ': ಡಿಕೆ ಶಿವಕುಮಾರ್
'ತಮಿಳುನಾಡಿಗೆ ಇನ್ನೂ ನೀರು ಹರಿಸಿಲ್ಲ': ಡಿಕೆ ಶಿವಕುಮಾರ್
ಮೋದಿ ಭೇಟಿ ಹಿನ್ನೆಲೆ ಮೈಸೂರಿನಲ್ಲಿ ಬಿಗಿ ಬಂದೋಬಸ್ತ್: ಭದ್ರತೆ ಹೇಗಿದೆ ನೋಡಿ
ಮೋದಿ ಭೇಟಿ ಹಿನ್ನೆಲೆ ಮೈಸೂರಿನಲ್ಲಿ ಬಿಗಿ ಬಂದೋಬಸ್ತ್: ಭದ್ರತೆ ಹೇಗಿದೆ ನೋಡಿ
ಎಲ್ಲರೂ ಸೇರಿದ್ರೆ ಸಿನಿಮಾ, ನಿರ್ದೇಶಕರಿಗೆ ಹಲವು ಆಯ್ಕೆ ಇರುತ್ತೆ; ಗುರುದತ್
ಎಲ್ಲರೂ ಸೇರಿದ್ರೆ ಸಿನಿಮಾ, ನಿರ್ದೇಶಕರಿಗೆ ಹಲವು ಆಯ್ಕೆ ಇರುತ್ತೆ; ಗುರುದತ್
ರವಿ ಕರ್ಕಾಟಕ, ಚಂದ್ರ ಕುಂಭರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ರವಿ ಕರ್ಕಾಟಕ, ಚಂದ್ರ ಕುಂಭರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಪರಪ್ಪನ ಅಗ್ರಹಾರ ಜೈಲಿನಿಂದ ನಗುನಗುತ್ತಲೇ ಹೊರ ಬಂದ ವಿನಯ್ ಕುಲಕರ್ಣಿ
ಪರಪ್ಪನ ಅಗ್ರಹಾರ ಜೈಲಿನಿಂದ ನಗುನಗುತ್ತಲೇ ಹೊರ ಬಂದ ವಿನಯ್ ಕುಲಕರ್ಣಿ
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ
ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ