AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣೇಶ ಹಬ್ಬಕ್ಕೆ ಷೇರು ಮಾರುಕಟ್ಟೆ ಕ್ಲೋಸ್: ಬೆಂಗಳೂರು ಸೇರಿ ಹಲವೆಡೆ ಬ್ಯಾಂಕ್​ಗಳು ಬಂದ್, ಎಟಿಎಂ-ಯುಪಿಐ ಎಂದಿನಂತೆ ಲಭ್ಯ

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಷೇರು ಮಾರುಕಟ್ಟೆಗಳು ಹಾಗೂ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಆದಾಗ್ಯೂ, ಯುಪಿಐ, ನೆಟ್ ಬ್ಯಾಂಕಿಂಗ್ ಮತ್ತು ಎಟಿಎಂ ಸೇವೆಗಳು ಎಂದಿನಂತೆ 24 ಗಂಟೆಯೂ ಲಭ್ಯವಿರುತ್ತವೆ. ಸೆಪ್ಟೆಂಬರ್ 15 ಮತ್ತು 18 ರಂದು ಕೆಲವೆಡೆ ಬ್ಯಾಂಕ್ ಬಂದ್ ಇದ್ದು, ಸೆಪ್ಟೆಂಬರ್ 19ರಂದು ಬ್ಯಾಂಕ್ ತೆರೆದಿರುತ್ತದೆ. ಸೆಪ್ಟೆಂಬರ್ 20 ರಂದು ಭಾನುವಾರದ ರಜೆ ಇರಲಿದೆ.

ಗಣೇಶ ಹಬ್ಬಕ್ಕೆ ಷೇರು ಮಾರುಕಟ್ಟೆ ಕ್ಲೋಸ್: ಬೆಂಗಳೂರು ಸೇರಿ ಹಲವೆಡೆ ಬ್ಯಾಂಕ್​ಗಳು ಬಂದ್, ಎಟಿಎಂ-ಯುಪಿಐ ಎಂದಿನಂತೆ ಲಭ್ಯ
ಬ್ಯಾಂಕ್ Image Credit source: Mint
ನಯನಾ ರಾಜೀವ್
|

Updated on:Sep 14, 2026 | 8:33 AM

Share

ನವದೆಹಲಿ, ಸೆಪ್ಟೆಂಬರ್ 14: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಇಂದು ದೇಶದ ಪ್ರಮುಖ ಷೇರು ಮಾರುಕಟ್ಟೆಗಳಾದ ಬಿಎಸ್‌ಇ (BSE) ಮತ್ತು ಎನ್‌ಎಸ್‌ಇ (NSE) ವಹಿವಾಟು ಬಂದ್ ಆಗಿರಲಿದ್ದು, ಬೆಂಗಳೂರು, ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಬ್ಯಾಂಕ್‌ಗಳಿಗೂ ರಜೆ ಘೋಷಿಸಲಾಗಿದೆ. ನೀವು ಬ್ಯಾಂಕ್ ಶಾಖೆಗೆ ತೆರಳುವ ಮುನ್ನ ಈ ವಾರದ ರಜಾ ದಿನಗಳ ಪಟ್ಟಿಯನ್ನು ಪರಿಶೀಲಿಸುವುದು ಉತ್ತಮ. ಆದರೆ ಯುಪಿಐ , ನೆಟ್ ಬ್ಯಾಂಕಿಂಗ್ ಮತ್ತು ಎಟಿಎಂ ಸೇವೆಗಳು ಎಂದಿನಂತೆ ಲಭ್ಯವಿರುತ್ತವೆ.

ಈ ವಾರ ಸೆಪ್ಟೆಂಬರ್ 15 ರಂದು ಮಂಗಳವಾರ ಅಹಮದಾಬಾದ್, ಭುವನೇಶ್ವರ ಮತ್ತು ಪಣಜಿಯಲ್ಲಿ ಗಣೇಶೋತ್ಸವದ ಎರಡನೇ ದಿನದ ನಿಮಿತ್ತ ಬ್ಯಾಂಕುಗಳು ಮುಚ್ಚಿರುತ್ತವೆ. ಸೆಪ್ಟೆಂಬರ್ 19 ಮೂರನೇ ಶನಿವಾರವಾಗಿರುವುದರಿಂದ ದೇಶಾದ್ಯಂತ ಎಲ್ಲಾ ಬ್ಯಾಂಕುಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಸೆಪ್ಟೆಂಬರ್ 20 ರಂದು ಭಾನುವಾರದ ಸಾರ್ವತ್ರಿಕ ರಜೆ ಇರಲಿದೆ.

ಶಾಖೆಗಳು ಮುಚ್ಚಿದ್ದರೂ ಎಟಿಎಂ, ಯುಪಿಐ, ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ದಿನದ 24 ಗಂಟೆಯೂ ಗ್ರಾಹಕರಿಗೆ ಯಾವುದೇ ಅಡಚಣೆಯಿಲ್ಲದೆ ಲಭ್ಯವಿರುತ್ತವೆ. ಇನ್ನು ಕಮಾಡಿಟಿ ಮಾರುಕಟ್ಟೆಯಾದ ಎಂಸಿಎಕ್ಸ್  ಬೆಳಗಿನ ಅವಧಿಯಲ್ಲಿ ಮುಚ್ಚಿರಲಿದ್ದು, ಸಂಜೆ 5ಗಂಟೆಯ ನಂತರ ಎಂದಿನಂತೆ ವಹಿವಾಟು ಆರಂಭವಾಗಲಿದೆ.

ಮತ್ತಷ್ಟು ಓದಿ:ಗಣೇಶ ಚತುರ್ಥಿಯಂದು ಈ ನಿಯಮ ತಪ್ಪದೇ ಪಾಲಿಸಿ: ಪ್ರಸಿದ್ಧ ವೈದಿಕ ವಿದ್ವಾಂಸರು ನೀಡಿದ ಪೂಜಾ ಮಹತ್ವದ ವಿವರಣೆ

ಸೆಪ್ಟೆಂಬರ್ 14, 2026 (ಸೋಮವಾರ): ಗಣೇಶ ಚತುರ್ಥಿ/ವರಸಿದ್ಧಿ ವಿನಾಯಕ ವ್ರತದ ಪ್ರಯುಕ್ತ ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈ, ಬೇಲಾಪುರ, ಭುವನೇಶ್ವರ, ಪಣಜಿ, ನಾಗ್ಪುರ ಮತ್ತು ವಿಜಯವಾಡ ವಲಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ.

ಸೆಪ್ಟೆಂಬರ್ 15, 2026 (ಮಂಗಳವಾರ): ಸಂವತ್ಸರಿ / ನುವಾಖಾಯಿ / ಗಣೇಶ ಚತುರ್ಥಿಯ ಎರಡನೇ ದಿನದ ನಿಮಿತ್ತ ಭುವನೇಶ್ವರ, ಅಹಮದಾಬಾದ್ ಮತ್ತು ಪಣಜಿಯಲ್ಲಿ ಬ್ಯಾಂಕ್ ಶಾಖೆಗಳು ಬಂದ್ ಆಗಿರುತ್ತವೆ.

ಸೆಪ್ಟೆಂಬರ್ 18, 2026(ಶುಕ್ರವಾರ): ಯೂನಿಟೇರಿಯನ್ ವಾರ್ಷಿಕೋತ್ಸವದ ಅಂಗವಾಗಿ ಶಿಲ್ಲಾಂಗ್‌ನಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

ಸೆಪ್ಟೆಂಬರ್ 19, 2026 (ಶನಿವಾರ): ಇದು ತಿಂಗಳ 3ನೇ ಶನಿವಾರವಾಗಿರುವುದರಿಂದ ದೇಶಾದ್ಯಂತ ಎಲ್ಲಾ ಬ್ಯಾಂಕುಗಳು ಎಂದಿನಂತೆ ತೆರೆದಿರುತ್ತವೆ (ಕೇವಲ 2 ಮತ್ತು 4ನೇ ಶನಿವಾರ ಮಾತ್ರ ರಜೆ ಇರುತ್ತದೆ).

ಸೆಪ್ಟೆಂಬರ್ 20, 2026 (ಭಾನುವಾರ): ಸಾಪ್ತಾಹಿಕ ಸಾರ್ವತ್ರಿಕ ರಜೆಯ ಕಾರಣ ದೇಶಾದ್ಯಂತ ಎಲ್ಲಾ ಬ್ಯಾಂಕುಗಳು ಮುಚ್ಚಿರುತ್ತವೆ.

ಷೇರು ಮಾರುಕಟ್ಟೆ : ಗಣೇಶ ಚತುರ್ಥಿಯ ಕಾರಣದಿಂದ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (BSE) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (NSE) ನಲ್ಲಿ ಈಕ್ವಿಟಿ, ಡೆರಿವೇಟಿವ್ಸ್ ಹಾಗೂ ಎಸ್‌ಎಲ್‌ಬಿ ವಿಭಾಗಗಳ ಯಾವುದೇ ವಹಿವಾಟು ಇಂದು ನಡೆಯುವುದಿಲ್ಲ.

ಕಮಾಡಿಟಿ ಮಾರುಕಟ್ಟೆ : ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (MCX) ಬೆಳಗಿನ ಅವಧಿಯಲ್ಲಿ (ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ) ಮುಚ್ಚಿರುತ್ತದೆ. ಆದರೆ ಸಂಜೆಯ ಅವಧಿಯ ವಹಿವಾಟು ಸಂಜೆ 5 ಗಂಟೆಗೆ ಪುನರಾರಂಭಗೊಳ್ಳಲಿದೆ. ಬುಲಿಯನ್ (ಚಿನ್ನ-ಬೆಳ್ಳಿ) ಭೌತಿಕ ಮಾರುಕಟ್ಟೆಗಳು ಬಹುತೇಕ ಮುಚ್ಚಿರುತ್ತವೆ

ಡಿಜಿಟಲ್ ಬ್ಯಾಂಕಿಂಗ್ ಎಂದಿನಂತೆ ಲಭ್ಯ: ಬ್ಯಾಂಕ್ ಶಾಖೆಗಳು ಮುಚ್ಚಲ್ಪಟ್ಟಿದ್ದರೂ, ಗ್ರಾಹಕರಿಗೆ ಯುಪಿಐ , ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಆ್ಯಪ್‌ಗಳು ಹಾಗೂ ಎಟಿಎಂ ಸೇವೆಗಳು ದಿನದ 24 ಗಂಟೆಯೂ ಯಾವುದೇ ಅಡಚಣೆಯಿಲ್ಲದೆ ಲಭ್ಯವಿರುತ್ತವೆ. ಆದ್ದರಿಂದ ತುರ್ತು ಹಣ ವರ್ಗಾವಣೆ ಮತ್ತು ನಗದು ಹಿಂಪಡೆಯುವಿಕೆಗೆ ಯಾವುದೇ ತೊಂದರೆ ಇರುವುದಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:25 am, Mon, 14 September 26

Follow Us