ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಮಹಿಳಾ ಹಾಕಿ ತಂಡಕ್ಕೆ ಪುಷ್ಪವೃಷ್ಟಿಯ ಸ್ವಾಗತ
44 ವರ್ಷಗಳ ನಂತರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪುಷ್ಪವೃಷ್ಟಿ ಹಾಗೂ ಡೊಳ್ಳು ಕುಣಿತದೊಂದಿಗೆ ಕ್ರೀಡಾಭಿಮಾನಿಗಳು ಭರ್ಜರಿ ಸ್ವಾಗತ ಕೋರಿದರು. ಅಭಿಮಾನಿಗಳಿಗೆ ಟೋಗ್ರಾಫ್ ನೀಡುವ ಮೂಲಕ ವಿಜೇತ ತಂಡದ ಸದಸ್ಯರೂ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ದೇವನಹಳ್ಳಿ, ಅಕ್ಟೋಬರ್ 04: ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಮಹಿಳಾ ಹಾಕಿ ತಂಡಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಭರ್ಜರಿ ಸ್ವಾಗತ ಕೋರಲಾಗಿದೆ. 44 ವರ್ಷಗಳ ಬಳಿಕ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ಹಾಕಿ ತಂಡ ಚಿನ್ನ ಗೆದ್ದಿರುವ ಹಿನ್ನೆಲೆ ಪುಷ್ಪವೃಷ್ಟಿ ಮೂಲಕ ತಂಡವನ್ನು ಕ್ರೀಡಾಭಿಮಾನಿಗಳು ಸ್ವಾಗತಿಸಿದ್ದಾರೆ. ಹೂವಿನ ಮಾಲೆ ಹಾಕಿ, ಡೊಳ್ಳು ಕುಣಿತದ ಮೂಲಕ ವಿಜೇತರಿಗೆ ಶುಭಾಶಯ ತಿಳಿಸಲಾಗಿದೆ. ಅಭಿಮಾನಿಗಳಿಗೆ ಟೋಗ್ರಾಫ್ ನೀಡುವ ಮೂಲಕ ವಿಜೇತ ತಂಡದ ಸದಸ್ಯರೂ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us

