AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬೆಂಗಳೂರು ಜಾತ್ರೆ’ಗೆ ಆಕ್ಷೇಪ: ಬೆಂಗಳೂರಿನ ಸ್ಥಿತಿ ಉಲ್ಲೇಖಿಸಿ ಕಾಂಗ್ರೆಸ್​​ಗೆ ಕುಟುಕಿದ ಜೆಡಿಎಸ್​​

ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ‘ಬೆಂಗಳೂರು ಜಾತ್ರೆ’ಗೆ ಜೆಡಿಎಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ರಸ್ತೆ ಗುಂಡಿ, ಮೂಲಸೌಕರ್ಯ ಕೊರತೆ ನಡುವೆ 200 ಕೋಟಿ ರೂ. ವೆಚ್ಚದ ಜಾತ್ರೆ ಬದಲು ರೈತರಿಗೆ ನೆರವು ನೀಡಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ರೈತರು ಬದುಕಿದರೆ ಮಾತ್ರ ರಾಜ್ಯಕ್ಕೆ ಉಳಿವು. ಹೀಗಾಗಿ ರೋಮ್ ಹೊತ್ತಿ ಉರಿಯುವಾಗ ಪಿಟೀಲು ಬಾರಿಸಿದ ಕಥೆ ನಮಗೆ ಬೇಡ ಎಂದು ತಿಳಿಸಿದೆ.

'ಬೆಂಗಳೂರು ಜಾತ್ರೆ'ಗೆ ಆಕ್ಷೇಪ: ಬೆಂಗಳೂರಿನ ಸ್ಥಿತಿ ಉಲ್ಲೇಖಿಸಿ ಕಾಂಗ್ರೆಸ್​​ಗೆ ಕುಟುಕಿದ ಜೆಡಿಎಸ್​​
ಸಾಂದರ್ಭಿಕ ಚಿತ್ರImage Credit source: PTI
ಸುನಿಲ್​ ಎಮ್​ ಹೆಚ್​
| Edited By: |

Updated on: Oct 04, 2026 | 12:47 PM

Share

ಬೆಂಗಳೂರು, ಅಕ್ಟೋಬರ್​​ 04: ಡಿಸೆಂಬರ್ 4ರಿಂದ 13ರ ವರೆಗೆ `ಬೆಂಗಳೂರು ಜಾತ್ರೆ’ ನಡೆಯಲಿರುವ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಘೋಷಣೆ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಎಕ್ಸ್​ ಖಾತೆ ಮೂಲಕ ಜೆಡಿಎಸ್​​ ತೀವ್ರ ವಾಗ್ದಾಳಿ ನಡೆಸಿದೆ. ಕರ್ನಾಟಕ ಕಾಂಗ್ರೆಸ್​ ಸರ್ಕಾರದ ಬರಗೆಟ್ಟ ಆಡಳಿತ, ಇಟಲಿ ದೇಶದ ರೋಮ್ ನಗರವು ಹೊತ್ತಿ ಉರಿಯುವಾಗ ದೊರೆ ನೀರೋ ಅರಮನೆಯಲ್ಲಿ ಕೂತು ಪಿಟೀಲು ಬಾರಿಸಿದಂತಿದೆ. ಟೇಕಾಫ್​ ಆಗದ ಸರ್ಕಾರ, ನೂರು ದಿನದ ಕಾರ್ಯಕ್ರಮಕ್ಕೆ ಈಗಾಗಲೇ ನೂರಾರು ಕೋಟಿ ರೂ. ಖರ್ಚು ಮಾಡಿದ್ದಾಯಿತು. ಈಗ ಬೆಂಗಳೂರು ಜಾತ್ರೆ ಹೆಸರಲ್ಲಿ ಲೂಟಿ ಹೊಡೆಯಲು ಹೊರಟಿದ್ದೀರಿ ಎಂದು ಆರೋಪಿಸಿದೆ.

‘200 ಕೋಟಿ ಸುರಿದು ‘ಬೆಂಗಳೂರು ಜಾತ್ರೆ’ ಮಾಡಲು ಯಾರು ಕೇಳಿದ್ರು?’

ಬೆಂಗಳೂರಿನ ರಸ್ತೆ ಗುಂಡಿಗಳಲ್ಲಿ ನಿತ್ಯವೂ ರೋಲರ್ ಕೋಸ್ಟರ್ ಅನುಭವವಾಗುತ್ತಿದ್ದು, ಟ್ರಾಫಿಕ್​ಜಾಮ್‌ನಲ್ಲಿ ವಾಹನಗಳ ಹಾರ್ನ್‌‌ಗಳೇ ಸಂಗೀತದ ರಸದೌತಣ ನೀಡುತ್ತಿವೆ. ಇಷ್ಟೆಲ್ಲಾ ‘ಉಚಿತ’ವಾಗಿ ಸಿಗುತ್ತಿರುವಾಗ ಮತ್ತೆ 200 ಕೋಟಿ ಸುರಿದು ‘ಬೆಂಗಳೂರು ಜಾತ್ರೆ’ ಮಾಡಲು ಯಾರು ಕೇಳಿದ್ರು? ರಸ್ತೆ, ನೀರು, ವಿದ್ಯುತ್ ಸೇರಿ ಅಗತ್ಯ ಮೂಲಸೌಕರ್ಯ ಒದಗಿಸುವಲ್ಲಿ ವಿಫಲವಾಗಿರುವ ಡಿ.ಕೆ.ಶಿವಕುಮಾರ್​ ಸರ್ಕಾರ ಈಗ ಬಿಡಿಎ, ಬೆಸ್ಕಾಂ, ಜಲಮಂಡಳಿ ಮತ್ತು ಮೆಟ್ರೋದಂತಹ ಸಂಸ್ಥೆಗಳ ಹಣ ಕಿತ್ತುಕೊಂಡು ಜಾತ್ರೆಗೆ ಸುರಿದು ಮೋಜು-ಮಸ್ತಿಗೆ ಹೊರಟಿರುವುದು ವಿಪರ್ಯಾಸ ಎಂದು ಜೆಡಿಎಸ್​​ ಕುಟುಕಿದೆ.

ಇದನ್ನೂ ಓದಿ: ಡಿ.4ರಿಂದ 13ರವರೆಗೆ ‘ಬೆಂಗಳೂರು ಜಾತ್ರೆ’: 10 ದಿನ ನಡೆಯುವ ಈ ಹಬ್ಬದಲ್ಲಿ ಏನೆಲ್ಲ ಇರಲಿವೆ?

ಮಳೆ, ಬೆಳೆ ಇಲ್ಲದೆ ರೈತ ಸಾಲದ ಸುಳಿಯಲ್ಲಿ ಸಿಲುಕಿ ಕಣ್ಣೀರು ಹಾಕುತ್ತಿದ್ದಾನೆ. ರೈತರ ಹೊಟ್ಟೆ ತಣ್ಣಗಿದ್ದರೆ ತಾನೇ ನಾಡಿಗೆ ಕಲೆ, ಸಾಹಿತ್ಯ, ಹಬ್ಬ, ಜಾತ್ರೆ ಎಲ್ಲವೂ? ಎಂದು ಪ್ರಶ್ನಿಸಿರುವ ಜೆಡಿಎಸ್​​, ಈ ಸರ್ಕಾರಕ್ಕೆ ಜನರ ಮೇಲೆ ಕಾಳಜಿ ಇದ್ದರೆ ಆಡಂಬರದ ಜಾತ್ರೆಗಳನ್ನು ಬಿಟ್ಟು, ಇದರ ಸಂಪೂರ್ಣ ಮೊತ್ತವನ್ನು ತಕ್ಷಣವೇ ಸಂಕಷ್ಟದಲ್ಲಿರುವ ರೈತರಿಗೆ ಕೊಡಬೇಕು ಎಂದು ಆಗ್ರಹಿಸಿದೆ. ರೈತರು ಬದುಕಿದರೆ ಮಾತ್ರ ರಾಜ್ಯಕ್ಕೆ ಉಳಿವು. ಹೀಗಾಗಿ ರೋಮ್ ಹೊತ್ತಿ ಉರಿಯುವಾಗ ಪಿಟೀಲು ಬಾರಿಸಿದ ಕಥೆ ನಮಗೆ ಬೇಡ ಎಂದು ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಸುನಿಲ್​ ಎಮ್​ ಹೆಚ್​
ಸುನಿಲ್​ ಎಮ್​ ಹೆಚ್​
ಭೀಕರ ಜಲ ಸಂಕಷ್ಟ: ರಾಯಚೂರು, ಕಲಬುರಗಿ, ಬೀದರಲ್ಲಿ ಕುಡಿಯುವ ನೀರಿಗಾಗಿ ಪರದಾಟ
ಭೀಕರ ಜಲ ಸಂಕಷ್ಟ: ರಾಯಚೂರು, ಕಲಬುರಗಿ, ಬೀದರಲ್ಲಿ ಕುಡಿಯುವ ನೀರಿಗಾಗಿ ಪರದಾಟ
ವಿಜಯಲಕ್ಷ್ಮಿ-ಧನ್ವೀರ್ ವಿವಾದದ ಬಗ್ಗೆ ದರ್ಶನ್​​ಗೆ ತಿಳಿಸುತ್ತೇವೆಂದ ವಕೀಲ
ವಿಜಯಲಕ್ಷ್ಮಿ-ಧನ್ವೀರ್ ವಿವಾದದ ಬಗ್ಗೆ ದರ್ಶನ್​​ಗೆ ತಿಳಿಸುತ್ತೇವೆಂದ ವಕೀಲ
RSS ಪಥಸಂಚಲನಕ್ಕೆ ಸಿದ್ಧತೆ: ಕೆಲವೆಡೆ ಷರತ್ತುಬದ್ಧ ಅನುಮತಿ; ಕೆಲವೆಡೆ ನಕಾರ
RSS ಪಥಸಂಚಲನಕ್ಕೆ ಸಿದ್ಧತೆ: ಕೆಲವೆಡೆ ಷರತ್ತುಬದ್ಧ ಅನುಮತಿ; ಕೆಲವೆಡೆ ನಕಾರ
‘ಪ್ರೇಮದ ಊರಲಿ’ ಸಿನಿಮಾ ಸಂಗೀತ ನಿರ್ದೇಶಕರಿಗೆ ಸಿಕ್ಕ ಸಂಭಾವನೆ ಎಷ್ಟು?
‘ಪ್ರೇಮದ ಊರಲಿ’ ಸಿನಿಮಾ ಸಂಗೀತ ನಿರ್ದೇಶಕರಿಗೆ ಸಿಕ್ಕ ಸಂಭಾವನೆ ಎಷ್ಟು?
ದೊಡ್ಡಬಳ್ಳಾಪುರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಲಘು ಭೂಕಂಪನ
ದೊಡ್ಡಬಳ್ಳಾಪುರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಲಘು ಭೂಕಂಪನ
ಸುದೀಪ್ ಮಾತಿಗೆ ಕಣ್ಣೀರಿಟ್ಟ ತಾಂಡವ್, ಕುಣಿದಾಡಿದ ಸೌಂದರ್ಯಾ: ವಿಡಿಯೋ
ಸುದೀಪ್ ಮಾತಿಗೆ ಕಣ್ಣೀರಿಟ್ಟ ತಾಂಡವ್, ಕುಣಿದಾಡಿದ ಸೌಂದರ್ಯಾ: ವಿಡಿಯೋ
ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮತ್ತೆ ಭೂಕಂಪನ; ಸ್ಥಳೀಯರಲ್ಲಿ ಆತಂಕ
ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮತ್ತೆ ಭೂಕಂಪನ; ಸ್ಥಳೀಯರಲ್ಲಿ ಆತಂಕ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ