AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿವ ಸಂಪುಟ ವಿಸ್ತರಣೆಗೆ ಮೆಗಾ ಟ್ವಿಸ್ಟ್: ಪಟ್ಟಿಯಲ್ಲಿ ಹೆಸರಿದ್ದರೂ ಮಂಕಾಳು ವೈದ್ಯಗೆ ತಪ್ಪಿದ ಮಂತ್ರಿಗಿರಿ; ಟೈಪಿಂಗ್ ಮಿಸ್ಟೇಕ್ ಎಂದ ಎಐಸಿಸಿ!

ಸಿಎಂ ಡಿಕೆಶಿ ಸಚಿವ ಸಂಪುಟ ವಿಸ್ತರಣೆ ಸಂಬಂಧ ಕೊನೇ ಕ್ಷಣದಲ್ಲಿ ಭಾರಿ ಬೆಳವಣಿಗೆಗಳು ನಡೆದಿವೆ. ಲಿಸ್ಟ್​​ನಲ್ಲಿ ಹೆಸರಿದ್ದ ಹೊರತಾಗಿಯೂ ಭಟ್ಕಳ ಶಾಸಕ ಮಂಕಾಳು ವೈದ್ಯಗೆ ಸಚಿವ ಸ್ಥಾನ ಕೈತಪ್ಪಿದೆ. ಟೈಪಿಂಗ್​​ ಮಿಸ್ಟೇಕ್​​ನಿಂದ ಅವರ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಬಗ್ಗೆ ಎಐಸಿಸಿ ಸ್ಪಷ್ಟನೆ ನೀಡಿದ್ದು, ಅವರ ಬದಲಿಗೆ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕರಾಗಿರುವ ಎಸ್.ಎಸ್.ಮಲ್ಲಿಕಾರ್ಜುನಗೆ ಸ್ಥಾನ ನೀಡಲಾಗಿದೆ.

ಸಚಿವ ಸಂಪುಟ ವಿಸ್ತರಣೆಗೆ ಮೆಗಾ ಟ್ವಿಸ್ಟ್: ಪಟ್ಟಿಯಲ್ಲಿ ಹೆಸರಿದ್ದರೂ ಮಂಕಾಳು ವೈದ್ಯಗೆ ತಪ್ಪಿದ ಮಂತ್ರಿಗಿರಿ; ಟೈಪಿಂಗ್ ಮಿಸ್ಟೇಕ್ ಎಂದ ಎಐಸಿಸಿ!
ಮಂಕಾಳು ವೈದ್ಯImage Credit source: Mankalu Vaidya Facebook
ಪ್ರಮೋದ್​ ಶಾಸ್ತ್ರಿ ಜಿ.
| Edited By: |

Updated on:Aug 03, 2026 | 3:09 PM

Share

ಮುಖ್ಯಾಂಶಗಳು

  • ಸಚಿವ ಸಂಪುಟ ವಿಸ್ತರಣೆ ನಡುವೆ ಅಚ್ಚರಿಯ ಬೆಳವಣಿಗೆ
  • ಭಟ್ಕಳ ಶಾಸಕ ಮಂಕಾಳು ವೈದ್ಯಗೆ ತಪ್ಪಿದ ಸಚಿವ ಸ್ಥಾನ
  • ಪಟ್ಟಿಯಲ್ಲಿ ಹೆಸರಿದ್ದ ಹೊರತಾಗಿಯೂ ದಕ್ಕದ ಮಂತ್ರಿಗಿರಿ

ಬೆಂಗಳೂರು, ಆಗಸ್ಟ್​​ 03: ಸಿಎಂ ಡಿಕೆ ಶಿವಕುಮಾರ್​​ ಅವರ ಸಚಿವ ಸಂಪುಟ ವಿಸ್ತರಣೆ ಸಂಬಂಧ 20 ಜನ ನೂತನ ಮಂತ್ರಿಗಳ ಹೆಸರನ್ನು ಎಐಸಿಸಿ ಪ್ರಕಟಿಸಿದ ಬಳಿಕವೂ ಭಾರಿ ಬದಲಾವಣೆ ನಡೆದಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಪಟ್ಟಿಯಲ್ಲಿ ಹೆಸರಿದ್ದ ಹೊರತಾಗಿಯೂ ಭಟ್ಕಳ ಕ್ಷೇತ್ರದ ಶಾಸಕ ಮಂಕಾಳು ವೈದ್ಯಗೆ ಮಂತ್ರಿ ಸ್ಥಾನ ಕೈತಪ್ಪಿದೆ. ಈ ವಿಚಾರವಾಗಿ ಎಐಸಿಸಿ ಸ್ಪಷ್ಟನೆ ನೀಡಿದ್ದು, ನೂತನ ಸಚಿವರ ಪಟ್ಟಿಯಲ್ಲಿ ಮಂಕಾಳು ವೈದ್ಯ ಹೆಸರಿರಲಿಲ್ಲ. ಇದು ಕೇವಲ ಟೈಪಿಂಗ್ ಮಿಸ್ಟೇಕ್ ಎಂದು ತಿಳಿಸಿದೆ. ಆದರೆ ಕೊನೇ ಕ್ಷಣದಲ್ಲಿ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕರಾಗಿರುವ ಎಸ್.ಎಸ್.ಮಲ್ಲಿಕಾರ್ಜುನಗೆ ಸ್ಥಾನ ನೀಡಲಾಗಿದೆ.

ಡಿಕೆಶಿ ಜೊತೆ ಮಾತುಕತೆ ಯತ್ನ

ಸಚಿವಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಸಿಎಂ ನಿವಾಸಕ್ಕೆ ಮಂಕಾಳು ವೈದ್ಯ ಭೇಟಿ ನೀಡಿದ್ದಾರೆ. ಕೊನೇ ಕ್ಷಣದ ನಿರ್ಧಾರದ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚೆಗೆ ಅವರು ಆಗಮಿಸಿದ್ದರಾದರೂ ಡಿಕೆಶಿ ಜೊತೆ ಮಾತುಕತೆ ಸಾಧ್ಯವಾಗಿಲ್ಲ ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್​​ ಶಾಸಕ ಪ್ರತಿಕ್ರಿಯೆ ನೀಡಿದ್ದು, ನಾನು ಸಿಎಂ ಅವರನ್ನ ಭೇಟಿ ಆಗಿಲ್ಲ, ಅವರು ಸಿಕ್ಕಿಲ್ಲ. ಮತ್ತೊಮ್ಮೆ ಬರುತ್ತೇನೆ ಎಂದಷ್ಟೇ ಹೇಳಿ ಸಿಎಂ ಮನೆಯಿಂದ ಸಿಟ್ಟಲ್ಲೇ ಹೊರಟ ಪ್ರಸಂಗ ನಡೆದಿದೆ.

ಇದನ್ನೂ ಓದಿ: ಸಿಎಂ ಡಿಕೆಶಿ ಕ್ಯಾಬಿನೆಟ್​​ನಲ್ಲಿ 11 ಮಂದಿ ಮಾತ್ರ ಹೊಸಬರು: ಸಿದ್ದರಾಮಯ್ಯ ಸಂಪುಟದಲ್ಲಿದ್ದ ಹಲವರಿಗೆ ಕೊಕ್​

ಎಸ್​.ಎಸ್​​. ಮಲ್ಲಿಕಾರ್ಜುನ್​​ಗೆ ಸಚಿವ ಸ್ಥಾನ ನೀಡಿದ್ದೇಕೆ?

ಮಂತ್ರಿಗಿರಿಗಾಗಿ ಪಟ್ಟು ಹಿಡಿದಿದ್ದ ಎಸ್​​.ಎಸ್​​. ಮಲ್ಲಿಕಾರ್ಜುನ್​​ ಅವರು ಸಚಿವ ಸ್ಥಾನ ಸಿಗದಿದ್ದರೆ ರಾಜೀನಾಮೆ ನೀಡೋದಾಗಿ ತಿಳಿಸಿದ್ದಾರೆ. ಸಂಸದರಾಗಿರುವ ಪತ್ನಿ ಮತ್ತು ಶಾಸಕರಾಗಿರುವ ಮಗ ಕೂಡ ಸ್ಥಾನ ತೊರೆಯಲಿದ್ದಾರೆ ಎಂದು ಹೈಕಮಾಂಡ್​​ ಮೇಲೆ ಒತ್ತಡ ಹಾಕಿದ್ದಾರೆ. ಇದೇ ಕಾರಣಕ್ಕೆ ಮಂಕಾಳು ವೈದ್ಯಗೆ ಕೊನೇ ಕ್ಷಣದಲ್ಲಿ ಕೊಕ್​​ ನೀಡಿ ಮಲ್ಲಿಕಾರ್ಜುನ್​​ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂಬ ಮಾಹಿತಿ ಇದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:49 pm, Mon, 3 August 26

Follow Us
ನಿರುದ್ಯೋಗಿ ಯುವಕ ಯುವತಿಯರೇ ಟಾರ್ಗೆಟ್: ಈತನ ಮೊಬೈಲ್​​​ನಲ್ಲಿ ಶಾಕಿಂಗ್ ಅಂಶ
ನಿರುದ್ಯೋಗಿ ಯುವಕ ಯುವತಿಯರೇ ಟಾರ್ಗೆಟ್: ಈತನ ಮೊಬೈಲ್​​​ನಲ್ಲಿ ಶಾಕಿಂಗ್ ಅಂಶ
ಕೃಷ್ಣ ಜನ್ಮಾಷ್ಟಮಿ; ಗೋಪೂಜೆ ಸಲ್ಲಿಸಿದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ
ಕೃಷ್ಣ ಜನ್ಮಾಷ್ಟಮಿ; ಗೋಪೂಜೆ ಸಲ್ಲಿಸಿದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ
ಲಕ್ಷ್ಮೇಶ್ವರ ತಾಲೂಕು ಘೋಷಣೆಯಾಗಿ 9 ವರ್ಷ ಕಳೆದರೂ ಜನರಿಗೆ ತಪ್ಪದ ಪರದಾಟ!
ಲಕ್ಷ್ಮೇಶ್ವರ ತಾಲೂಕು ಘೋಷಣೆಯಾಗಿ 9 ವರ್ಷ ಕಳೆದರೂ ಜನರಿಗೆ ತಪ್ಪದ ಪರದಾಟ!
15 ಸಾವಿರ ಶಿಕ್ಷಕರ ನೇಮಕಾತಿ: ಸರ್ವರ್ ಸಮಸ್ಯೆಯಿಂದ ಆಕಾಂಕ್ಷಿಗಳ ಪರದಾಟ
15 ಸಾವಿರ ಶಿಕ್ಷಕರ ನೇಮಕಾತಿ: ಸರ್ವರ್ ಸಮಸ್ಯೆಯಿಂದ ಆಕಾಂಕ್ಷಿಗಳ ಪರದಾಟ
4ನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಬಳ್ಳಾರಿ ಚಲೋ, ಮುಸ್ಲಿಮರ ಸಾಥ್!
4ನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಬಳ್ಳಾರಿ ಚಲೋ, ಮುಸ್ಲಿಮರ ಸಾಥ್!
ಮೈಸೂರು ದಸರಾ 2026: ಶ್ರೀಕಂಠ ಪಟ್ಟದ ಆನೆ, ಏಕಲವ್ಯ ನಿಶಾನೆ ಆನೆಯಾಗಿ ಆಯ್ಕೆ
ಮೈಸೂರು ದಸರಾ 2026: ಶ್ರೀಕಂಠ ಪಟ್ಟದ ಆನೆ, ಏಕಲವ್ಯ ನಿಶಾನೆ ಆನೆಯಾಗಿ ಆಯ್ಕೆ
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯ ಸಂಭ್ರಮ ಹೇಗಿದೆ ನೋಡಿ
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯ ಸಂಭ್ರಮ ಹೇಗಿದೆ ನೋಡಿ
ರೈತರಿಗೆ ವಿದ್ಯುತ್ ಕೊಡಲು ಸೋಲಾರ್ ಪ್ಲಾಟ್ ಸ್ಥಾಪಿಸುತ್ತಿದೆ ಎಂಇಐಎಲ್ ಕಂಪನ
ರೈತರಿಗೆ ವಿದ್ಯುತ್ ಕೊಡಲು ಸೋಲಾರ್ ಪ್ಲಾಟ್ ಸ್ಥಾಪಿಸುತ್ತಿದೆ ಎಂಇಐಎಲ್ ಕಂಪನ
ಕೃಷ್ಣ ಜನ್ಮಾಷ್ಟಮಿ: ಬೆಂಗಳೂರು ಇಸ್ಕಾನ್ ಕೇಂದ್ರಗಳಲ್ಲಿನ ಮಹೋತ್ಸವದ ವಿವರ
ಕೃಷ್ಣ ಜನ್ಮಾಷ್ಟಮಿ: ಬೆಂಗಳೂರು ಇಸ್ಕಾನ್ ಕೇಂದ್ರಗಳಲ್ಲಿನ ಮಹೋತ್ಸವದ ವಿವರ
ರಾಜ್​ಕುಮಾರ್​ಗೆ ಪೌರಾಣಿಕ ಕಥೆ ಹೇಳಿದ್ದ ನಾಗತಿಹಳ್ಳಿ ಚಂದ್ರಶೇಖರ್
ರಾಜ್​ಕುಮಾರ್​ಗೆ ಪೌರಾಣಿಕ ಕಥೆ ಹೇಳಿದ್ದ ನಾಗತಿಹಳ್ಳಿ ಚಂದ್ರಶೇಖರ್