Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಲಮಂಗಲ: ತಮ್ಮದೇ ಜಮೀನಿನಲ್ಲಿ ಬೆಂಕಿ ಆರಿಸಲು ಹೋಗಿದ್ದ ವೃದ್ಧ ಸಜೀವದಹನ

ಬೆಂಗಳೂರು ಉತ್ತರ ತಾಲೂಕಿನ ಕಗ್ಗಲಿಪಾಳ್ಯದಲ್ಲಿ ನೀಲಗಿರಿ ತೋಟದಲ್ಲಿ ಬೆಂಕಿ ಅವಘಡ ಸಂಭವಿಸಿ 65 ವರ್ಷದ ಕಬ್ಬಾಳಯ್ಯ ಎಂಬ ವೃದ್ಧ ಸಾವನ್ನಪ್ಪಿದ್ದಾರೆ. ತಮ್ಮ ಜಮೀನಿನಲ್ಲಿ ಬೆಂಕಿ ನಂದಿಸುವ ಪ್ರಯತ್ನದ ವೇಳೆ ಈ ಅವಘಡ ಸಂಭವಿಸಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನೆಲಮಂಗಲ: ತಮ್ಮದೇ ಜಮೀನಿನಲ್ಲಿ ಬೆಂಕಿ ಆರಿಸಲು ಹೋಗಿದ್ದ ವೃದ್ಧ ಸಜೀವದಹನ
ನೆಲಮಂಗಲ: ತಮ್ಮದೇ ಜಮೀನಿನಲ್ಲಿ ಬೆಂಕಿ ಆರಿಸಲು ಹೋಗಿದ್ದ ವೃದ್ಧ ಸಜೀವದಹನ
Follow us
ಬಿ ಮೂರ್ತಿ, ನೆಲಮಂಗಲ
| Updated By: ಗಂಗಾಧರ​ ಬ. ಸಾಬೋಜಿ

Updated on: Feb 10, 2025 | 9:37 PM

ಬೆಂಗಳೂರು, ಫೆಬ್ರವರಿ 10: ನೀಲಗಿರಿ ತೋಪಿನಲ್ಲಿ ಬೆಂಕಿ (Fire) ಆರಿಸಲು ಹೋಗಿದ್ದ ವೃದ್ಧ ಸಜೀವದಹನವಾಗಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಕಗ್ಗಲಿಪಾಳ್ಯದಲ್ಲಿ ನಡೆದಿದೆ. ತಮ್ಮ ಜಮೀನಿನಲ್ಲಿ ಬೆಂಕಿ ನಂದಿಸುತ್ತಿದ್ದ ಕಬ್ಬಾಳಯ್ಯ(65) ಮೃತರು. ಮನೆಯವರು ಜಮೀನು ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತಿಯ ಜಿಮ್​ನಲ್ಲೇ ಪತ್ನಿ ನೇಣಿಗೆ ಶರಣು

ಪತಿಯ ಜಿಮ್​ನಲ್ಲೇ ಪತ್ನಿ ನೇಣುಬಿಗಿದುಕೊಂಡು ಆತ್ಮಹತ್ಯೆಕೊಂಡಿರುವಂತಹ ಘಟನೆ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ನಡೆದಿದೆ. ದಿವ್ಯ (27) ಮೃತ ಗೃಹಿಣಿ. ಪತಿ ಗಿರೀಶ್ ಅನೈತಿಕ ಸಂಬಂಧ ಹೊಂದಿದ್ದ ಆರೋಪ ಹಿನ್ನೆಲೆ ಮನನೊಂದು ಪತ್ನಿ ದಿವ್ಯಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ರಾಜ್ಯದ ಫೇಮಸ್ ಜಾತ್ರೆಗಳೇ ಈ ಗ್ಯಾಂಗ್​ನ ಟಾರ್ಗೆಟ್: ಈ ಖದೀಮರ ತಂಡ ಏನ್ ಮಾಡುತ್ತೆ ಗೊತ್ತಾ?

ಮೃತ ದಿವ್ಯಾ ಸಂಬಂಧಿಕರಿಂದ ಜಿಮ್​ನಲ್ಲಿದ್ದ ಪೀಠೋಪಕರಣ ಧ್ವಂಸ ಮಾಡಲಾಗಿದ್ದು, ಪತಿ ಗಿರೀಶ್ ಮತ್ತು ಆತನ ತಾಯಿ ಕಿರುಕುಳ ನೀಡುತ್ತಿದ್ದ ಆರೋಪ ಮಾಡಲಾಗಿದೆ. ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಹೊತ್ತಿ ಉರಿದ ಕರಿಘಟ್ಟ ಅರಣ್ಯ

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕರಿಘಟ್ಟ ಅರಣ್ಯ ಪ್ರದೇಶ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಕರಿಘಟ್ಟ ಅರಣ್ಯ ಹೊತ್ತಿ ಉರಿದ ಘಟನೆ ನಡೆದಿದೆ. ಅಗ್ನಿಶಾಮಕ, ಅರಣ್ಯ ಇಲಾಖೆ ಸಿಬ್ಬಂದಿಯಿಂದ ಬೆಂಕಿ‌ನಂದಿಸಲಾಗಿದೆ. 6 ದಿನ ಹಿಂದೆ ಕೆ.ಶೆಟ್ಟಿಹಳ್ಳಿ ಮೀಸಲು ಅರಣ್ಯದಲ್ಲೂ ಬೆಂಕಿ ಕಾಣಿಸಿಕೊಂಡಿತ್ತು. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪಿಕ್ ಅಪ್ ವಾಹನ

ಅಕ್ರಮವಾಗಿ ಕೋಣ ಸಾಗಿಸುತ್ತಿದ್ದ ಪಿಕ್ ಅಪ್ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕೆ ಹೊಡೆದ ಘಟನೆ ಉಡುಪಿ ನಗರದ ಅಂಬಾಗಿಲಿನಲ್ಲಿ ನಡೆದಿದೆ. ಅಪಘಾತದ ವೇಳೆ ವಾಹನ ಪರಿಶೀಲಿಸಿದಾಗ ಹಿಂಸಾತ್ಮಕ ಸ್ಥಿತಿಯಲ್ಲಿದ್ದ 7 ಕೋಣಗಳು ಪತ್ತೆ ಆಗಿವೆ.

ಇದನ್ನೂ ಓದಿ: ಕಾಶಿಯಲ್ಲಿ ನದಿಯಲ್ಲಿ ಮುಳುಗಿ ಬಾಗಲಕೋಟೆ ಮೂಲದ ವ್ಯಕ್ತಿ ಸಾವು

ಬೆಳಗಾವಿಯಿಂದ ಮಂಜೇಶ್ವರಕ್ಕೆ ಅಕ್ರಮವಾಗಿ ಕೋಣ ಸಾಗಟ ಮಾಡಲಾಗುತ್ತಿತ್ತು. ವಾಹನದಲ್ಲಿದ್ದ ಇಬ್ಬರ ಪೈಕಿ ಓರ್ವ ಪರಾರಿ ಆಗಿದ್ದಾನೆ. ಇದೀಗ ಓರ್ವನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.