ರಾಜ್ಯದ ಫೇಮಸ್ ಜಾತ್ರೆಗಳೇ ಈ ಗ್ಯಾಂಗ್ನ ಟಾರ್ಗೆಟ್: ಈ ಖದೀಮರ ತಂಡ ಏನ್ ಮಾಡುತ್ತೆ ಗೊತ್ತಾ?
ಕಲಬುರಗಿಯ ನಾಲವಾರದ ಕೋರಿ ಸಿದ್ದೇಶ್ವರ ಜಾತ್ರೆಯಲ್ಲಿ ನಡೆದ ಕಾರು ಕಳ್ಳತನ ಪ್ರಕರಣದಲ್ಲಿ ಒಬ್ಬ ಖದೀಮನನ್ನು ವಾಡಿ ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್ ರಾಜ್ಯದ ಪ್ರಸಿದ್ಧ ಜಾತ್ರೆಗಳನ್ನು ಗುರಿಯಾಗಿಸಿಕೊಂಡು ಕಾರುಗಳನ್ನು ಕಳವು ಮಾಡುತ್ತಿತ್ತು. ಬಂಧಿತ ಆರೋಪಿ ಮಹಾರಾಷ್ಟ್ರ ಮೂಲದವನಾಗಿದ್ದು, ಇನ್ನೋವಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಕಲಬುರಗಿ, ಫೆಬ್ರವರಿ 09: ಜಾತ್ರೆಯಲ್ಲಿ ಪಾರ್ಕಿಂಗ್ ಮಾಡಿರುವ ಕಾರ್ಗಳನ್ನು ಕಳ್ಳತನ (car theft) ಮಾಡುತ್ತಿದ್ದ ಗ್ಯಾಂಗ್ನ ಓರ್ವ ಖದೀಮನನ್ನು ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ರಾಜ್ಯದ ಫೇಮಸ್ ಜಾತ್ರೆಗಳನ್ನೇ ಈ ಗ್ಯಾಂಗ್ ಟಾರ್ಗೆಟ್ ಮಾಡುತ್ತಿತ್ತು. ಅದೇ ರೀತಿಯಾಗಿ ಜ.30 ರಂದು ಕಲಬುರಗಿಯ ನಾಲವಾರದ ಕೋರಿ ಸಿದ್ದೇಶ್ವರ ಜಾತ್ರೆಯಲ್ಲಿ ಇನ್ನೋವಾ ಕಾರು ಕಳ್ಳತನ ಮಾಡಿದ್ದರು. ಪ್ರಕರಣ ಬೆನ್ನು ಹತ್ತಿಹೋದ ಪೊಲೀಸರಿಗೆ ಖದೀಮರ ಅಸಲಿ ವಿಚಾರ ತಿಳಿದಿದೆ.
ಸದ್ಯ ಮಹಾರಾಷ್ಟ್ರ ಮೂಲದ ವಿಠ್ಠಲ್ ಲಷ್ಕರೆ ಎಂಬಾತನನ್ನು ಬಂಧಿಸಲಾಗಿದ್ದು, ಇನ್ನುಳಿದ ನಾಲ್ವರಿಗಾಗಿ ಖಾಕಿ ಪಡೆ ಶೋಧ ನಡೆಸಿದೆ. ಬಂಧಿತನಿಂದ ಇನ್ನೋವಾ ಕಾರು ವಶಕ್ಕೆ ಪಡೆಯಲಾಗಿದೆ. ಉಳಿದ ಆರೋಪಿಗಳು ಹಾಗೂ ಕದ್ದ ಕಾರುಗಳ ಬಗ್ಗೆ ತನಿಖೆ ನಡೆಯುತ್ತಿದೆ. ಇಷ್ಟೇ ಅಲ್ಲದೆ ಇನ್ನು ಹಲವು ಕಾರು ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಆನೇಕಲ್: ಸ್ನೇಹಿತರ ಕಣ್ಣೆದುರಲ್ಲೇ ನೀರುಪಾಲಾದ ಮತ್ತಿಬ್ಬರು ಸ್ನೇಹಿತರು
ಪ್ರಸಿದ್ಧ ಜಾತ್ರಾ ಮಹೋತ್ಸವಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಗ್ಯಾಂಗ್, ಜಾತ್ರೆಗೆ ಬಂದಿದ್ದ ಜನರ ಕಾರ್ ಗಳನ್ನೆ ಕಳ್ಳತನ ಮಾಡುತ್ತಿದ್ದರು. ಕಾರ್ ಕೀಗಳನ್ನ ಬೆಲ್ಟ್ಗೆ ಹಾಕುವವರನ್ನು ಹಿಂಬಾಲಿಸುತ್ತಿದ್ದ ಗ್ಯಾಂಗ್, ಬಳಿಕ ಕೀ ಎಗರಿಸಿ ಕಾರು ಕಳ್ಳತನ ಮಾಡುತ್ತಿದ್ದರು.
ಬದಾಮಿ ಬನಶಂಕರಿ ದೇವಿ ಜಾತ್ರೆಯಲ್ಲಿ ಎರಡು ಕಾರ್, ಎಮ್ಮಿಗನೂರು ಜಾತ್ರೆಯಲ್ಲಿ ಒಂದು ಕಾರು ಕದ್ದು ಪಾರಾರಿಯಾಗಿದ್ದಾರೆ. ಅಲ್ಲದೇ ಮುಂದಿನ ಜಾತ್ರೆಗಳ ಬಗ್ಗೆ ತಮ್ಮ ಡೈರಿಯಲ್ಲಿ ಬರೆದುಕೊಂಡಿದ್ದರು. ಇನ್ನು ಕದ್ದ ಕಾರ್ಗಳನ್ನ ಅಕ್ರಮ ಚಟುವಟಿಕೆಗೆ ಬಳಸುತ್ತಿದ್ದರು. ಸದ್ಯ ವಾಡಿ ಪೊಲೀಸರಿಂದ ಓರ್ವನ ಬಂಧನ ಮಾಡಲಾಗಿದೆ.
ಬುಕ್ಕಾಪಟ್ಟಣದಲ್ಲಿ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ: ಓರ್ವನ ಬಂಧನ
ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ ಕೊರಟಗೆರೆ ಪೊಲೀಸರು ದಾಳಿ ಮಾಡಿರುವಂತಹ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬುಕ್ಕಾಪಟ್ಟಣದಲ್ಲಿ ನಡೆದಿದೆ. ಕೋಳಿ ಶೆಡ್ನಲ್ಲಿ ಗ್ಯಾಸ್ ರೀಫಿಲ್ಲಿಂಗ್ ದಂಧೆ ನಡೀತಿತ್ತು. ವಕೀಲರು, ಪತ್ರಕರ್ತರ ನಕಲಿ ಐಡಿಗಳನ್ನ ಬಳಸಿ ಕೃತ್ಯವೆಸಗಲಾಗಿದೆ.
ಇದನ್ನೂ ಓದಿ: ಕಾಶಿಯಲ್ಲಿ ನದಿಯಲ್ಲಿ ಮುಳುಗಿ ಬಾಗಲಕೋಟೆ ಮೂಲದ ವ್ಯಕ್ತಿ ಸಾವು
ದಾಳಿ ವೇಳೆ 138 ಗ್ಯಾಸ್ ಸಿಲಿಂಡರ್‌ಗಳು ಸೀಜ್ ಮಾಡಲಾಗಿದೆ. ಆರೋಪಿ ರಘು ಎಂಬುವವನನ್ನ ಪೊಲೀಸರು ಬಂಧಿಸಿದ್ದಾರೆ. ರೀಫಿಲ್ಲಿಂಗ್ಗೆ ಬಳಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.