ಅನೈತಿಕ ಸಂಬಂಧಕ್ಕೆ ಅಡ್ಡಿ: ಪ್ರಿಯಕರನೊಂದಿಗೆ ಸೇರಿ ಗಂಡನನ್ನ ಹತ್ಯೆ ಮಾಡಿ ನದಿಗೆ ಎಸೆದ ಪತ್ನಿ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ಪತಿಯ ಹತ್ಯೆ ಮಾಡಿ ಪತ್ನಿ ಮತ್ತು ಅವಳ ಪ್ರಿಯಕರ ಪರಾರಿಯಾಗಿದ್ದರು. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಕಲ್ಲಿನಿಂದ ಹೊಡೆದು ಕೊಂದು ಕೃಷ್ಣಾ ನದಿಗೆ ಎಸೆದಿದ್ದರು. ಸದ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆಘಾತ ಉಂಟುಮಾಡಿದೆ.

ಚಿಕ್ಕೋಡಿ, ಫೆಬ್ರವರಿ 08: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಪ್ರಿಯಕರನ ಜೊತೆಗೆ ಸೇರಿಕೊಂಡು ಪತ್ನಿ ಹತ್ಯೆ (kill) ಮಾಡಿ ಕೃಷ್ಣಾ ನದಿಗೆ ಎಸೆದಿರುವಂತಹ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಬಾವನಸೌದತ್ತಿ ಗ್ರಾಮದಲ್ಲಿ ನಡೆದಿದೆ. ಬಸ್ತವಾಡ ಗ್ರಾಮದ ಅಪ್ಪಾಸಾಬ ಅಲಿಯಾಸ್ ಮಚ್ಚೇಂದ್ರ ಓಲೇಕಾರ (45) ಕೊಲೆಯಾದ ಗಂಡ. ಹೆಂಡತಿ ಸಿದ್ದವ್ವ ಓಲೇಕಾರ್ ಮತ್ತು ಪ್ರಿಯಕರ ಗಣಪತಿ ಕಾಂಬಳೆಯನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.
ಜ.5ರಂದು ಸುಗಂಧಾದೇವಿ ದರ್ಶನಕ್ಕೆ ಹೋಗೋಣ ಅಂತಾ ಕರೆದುಕೊಂಡು ಬಂದಿದ್ದು, ಕೃಷ್ಣಾ ನದಿ ದಂಡೆ ಮೇಲೆ ಸ್ನಾನ ಮಾಡುವಾಗ ಪತ್ನಿ ಸಿದ್ದವ್ವ ಮತ್ತು ಗಣಪತಿಯಿಂದ ಕಲ್ಲಿನಿಂದ ಹೊಡೆದು ಮಚ್ಚೇಂದ್ರನನ್ನು ಹತ್ಯೆ ಮಾಡಲಾಗಿದೆ. ಕೊಂದ ಬಳಿಕ ಶವವನ್ನ ಕೃಷ್ಣಾ ನದಿಗೆ ಎಸೆದು ಪರಾರಿಯಾಗಿದ್ದರು.
ಇದನ್ನೂ ಓದಿ: ಕೇರಳ ಮೂಲದ ಕುಖ್ಯಾತ ಕಳ್ಳ ಬೆಂಗಳೂರಲ್ಲಿ ನಿಗೂಢ ಸಾವು: ಸುಳಿವು ನೀಡಿತು ಟ್ಯಾಟೂ
ನದಿಯಲ್ಲಿ ಶವ ಸಿಕ್ಕ ಬಳಿಕ ಕೊಲೆ ಕೇಸ್ ದಾಖಲಿಸಿಕೊಂಡಿದ್ದ ರಾಯಬಾಗ ಪೊಲೀಸರು, ತನಿಖೆ ವೇಳೆ ಹೆಂಡತಿ ಮತ್ತು ಪ್ರಿಯಕರ ಕೊಲೆ ಮಾಡಿದ್ದು ಬಹಿರಂಗವಾಗಿದೆ. ಇಬ್ಬರ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಕೊಲೆ ಮಾಡಲಾಗಿದೆ ಎಂದು ಪೊಲೀಸರ ಮುಂದೆ ಆರೋಪಿಗಳು ಸತ್ಯ ಬಾಯಿಬಿಟ್ಟಿದ್ದಾರೆ.
ಜಮೀನಿಗೆ ಕೆಲಸಕ್ಕೆ ಹೋದ ಮಹಿಳೆಗೆ ಹಾವು ಕಡಿದು ಸಾವು
ಜಮೀನಿಗೆ ಕೆಲಸಕ್ಕೆ ಹೋದ ಮಹಿಳೆಗೆ ಹಾವು ಕಡಿದು ಸಾವನ್ನಪ್ಪಿರುವಂತಹ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಅಂಕಣಾಪುರ ಗ್ರಾಮದಲ್ಲಿ ನಡೆದಿದೆ. ಸುಜಾತ (37) ಮೃತ ದುರ್ದೈವಿ. ದಿನ ನಿತ್ಯ ಜಮೀನಿಗೆ ಅರಿಶಿಣ ಬಿಡಿಸಲು ಸುಜಾತ ತೆರಳುತ್ತಿದ್ದರು. ಇಂದು ಜಮೀನಿನಲ್ಲಿ ಅರಶಿಣ ಬಿಡಿಸುವಾಗ ವಿಷ ಸರ್ಪ ಕಡಿದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪೊಲೀಸ್ ಬಲೆಗೆ ಬಿದ್ದ ಲಕ್ಕಿ ಭಾಸ್ಕರ್ ಮಾದರಿ ಗ್ಯಾಂಗ್: ಎಟಿಎಂ ಹಣ ಎಗರಿಸುತ್ತಿದ್ದವರು ಅರೆಸ್ಟ್
ಹಾವು ಕಡಿದ ತಕ್ಷಣ ಸಹ ಕೆಲಸಗಾರರು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ವೈದ್ಯಕೀಯ ಸಿಬ್ಬಂದಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.