AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾನ್ಸರ್ ಪೀಡಿತ ಗಂಡನ ಚಿಕಿತ್ಸೆಗೆಂದು ಕೆಲಸ ಮಾಡ್ತಿದ್ದ ಮನೆಯಲ್ಲೇ ಕದ್ದು ಸಿಕ್ಕಿಬಿದ್ದ ಮಹಿಳೆ: ದೋಚಿದ್ದಿದ್ದು 12.5 ಕೆಜಿ ಬೆಳ್ಳಿ!

ಬೆಂಗಳೂರಿನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕ್ಯಾನ್ಸರ್ ಪೀಡಿತ ಗಂಡನ ಚಿಕಿತ್ಸೆ ವೆಚ್ಚಕ್ಕಾಗಿ ಪತ್ನಿಯೋರ್ವಳು ತಾನು ಕೆಲಸ ಮಾಡುತ್ತಿದ್ದ ಮನೆಯಿಂದಲೇ 12.5 ಕೆಜಿ ಬೆಳ್ಳಿ ಕದ್ದಿದ್ದಾಳೆ. ಜೀವನ್ ಭೀಮಾ ನಗರ ಪೊಲೀಸರು ಆರೋಪಿಯನ್ನು ಬಂಧಿಸಿ, 35 ಲಕ್ಷ ಮೌಲ್ಯದ ಬೆಳ್ಳಿ ಹಾಗೂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಚಿನ್ನದಂಗಡಿ ಮಾಲೀಕನ ಹೆಸರಿನಲ್ಲಿ ಸರ ಪಡೆದು ವಂಚಿಸಿದ್ದ ಆರೋಪಿಯನ್ನು ಬೆಂಗಳೂರಿನ ಭಾರತಿನಗರ ಪೊಲೀಸರು ಬಂಧಿಸಿದ್ದಾರೆ.

ಕ್ಯಾನ್ಸರ್ ಪೀಡಿತ ಗಂಡನ ಚಿಕಿತ್ಸೆಗೆಂದು ಕೆಲಸ ಮಾಡ್ತಿದ್ದ ಮನೆಯಲ್ಲೇ ಕದ್ದು ಸಿಕ್ಕಿಬಿದ್ದ ಮಹಿಳೆ: ದೋಚಿದ್ದಿದ್ದು 12.5 ಕೆಜಿ ಬೆಳ್ಳಿ!
ಬಂಧಿತ ಮಹಿಳೆImage Credit source: Tv9 Kannada
ಪ್ರದೀಪ್​ ಚಿಕ್ಕಾಟಿ
| Edited By: |

Updated on:Feb 27, 2026 | 1:23 PM

Share

ಬೆಂಗಳೂರು, ಫೆಬ್ರವರಿ 27: ಕ್ಯಾನ್ಸರ್ ಪೀಡಿತ ಗಂಡನ ಚಿಕಿತ್ಸೆ ಖರ್ಚಿಗೆಂದು ಕೆಲಸ ಮಾಡ್ತಿದ್ದ ಮನೆಯಲ್ಲಿಯೇ ಹೆಂಡತಿಯೋರ್ವಳು ಬೆಳ್ಳಿ ಕದ್ದಿರುವ ಘಟನೆ ಸಂಬಂಧ ಜೀವನ ಭೀಮಾನಗರ ಪೊಲೀಸರು ಚೈತ್ರಾ ಎಂಬಾಕೆಯನ್ನು ಬಂಧಿಸಿದ್ದಾರೆ. ಪ್ರತಿಷ್ಟಿತ ಆಸ್ಪತ್ರೆ ಒಂದರಲ್ಲಿ ಸರ್ಜನ್ ಆಗಿದ್ದವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಚೈತ್ರಾ, ಹಂತ ಹಂತವಾಗಿ ಒಂದೊಂದೇ ಬೆಳ್ಳಿ ಪಾತ್ರೆಯಂತೆ ಒಟ್ಟು ಒಟ್ಟು 12.5 ಕೆಜಿ ಬೆಳ್ಳಿ ದೋಚಿದ್ದಳು. ಈಕೆಯ ಗಂಡ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆ ಖರ್ಚಿಗೆ ಹೆಚ್ಚಿನ ಹಣದ ಅವಶ್ಯಕತೆ ಇತ್ತು. ಹೀಗಾಗಿ ಕಳೆದ ಒಂದೂವರೆ ವರ್ಷದಿಂದ ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲಿ ಈಕೆ ಕಳ್ಳತನಕ್ಕೆ ಇಳಿದಿದ್ದಳು ಎನ್ನಲಾಗಿದೆ.

ಮಹಡಿ ಮೇಲೆ ಕೆಲ ಬೆಳ್ಳಿ ಸಾಮಗ್ರಿಗಳ ಕೂಡಿಟ್ಟಿದ್ದ ಮನೆಯವರು, ಹಬ್ಬದ ಸಂದರ್ಭದಲ್ಲಿ ಮಾತ್ರ ಆ ಪಾತ್ರೆಗಳನ್ನ ಉಪಯೋಗ ಮಾಡುತ್ತಿದ್ದರು. ಈ ಹಿನ್ನೆಲೆ ಅವುಗಳನ್ನು ಒಂದೊಂದಾಗಿ ಎಗರಿಸಿದ್ದ ಚೈತ್ರಾ, ಅವನ್ನು ಅಡವಿಟ್ಟು ಹಣ ಪಡೆದು ಬಳಕೆ ಮಾಡುತ್ತಿದ್ದಳು. ನಂತರ ಅನುಮಾನ ಬಾರದಂತೆ ಬಂದು ಅದೇ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು.  ದೀಪಾವಳಿ ಹಬ್ಬದ ನಂತರ ಆಕೆ ಕೆಲಸ ಬಿಟ್ಟಿದ್ದು, ದಸರಾ ಹಬ್ಬಕ್ಕೆ ಬೇಕೆಂದು ಪಾತ್ರೆ ಚೀಲ ಓಪನ್ ಮಾಡಿದ್ದ ಮನೆಯವರು ಶಾಕ್​​ ಆಗಿದ್ದಾರೆ. ಈ ವೇಳೆ ಬೆಳ್ಳಿ ಪಾತ್ರೆಗಳು, ಪೂಜಾ ಸಾಮಗ್ರಿಗಳು ಕಾಣೆಯಾಗಿರೋದು ಕುಟುಂಬಸ್ಥರ ಗಮನಕ್ಕೆ ಬಂದಿದೆ. ಅವರು ನೀಡಿದ್ದ ದೂರಿನ ಅನ್ವಯ ತನಿಖೆಗೆ ಮುಂದಾದ ಪೊಲೀಸರು, ಅನುಮಾನಗೊಂಡು ಮನೆ ಕೆಲಸದವರ ವಿಚಾರಣೆ ನಡೆಸಿದ್ದಾರೆ. ಚೈತ್ರಾಳ ವಿಚಾರಣೆ ವೇಳೆ ಬೆಳ್ಳಿ ಸಾಮಗ್ರಿ ಕಳ್ಳತನ ಮಾಡಿರುವ ಸತ್ಯ ಬಯಲಾಗಿದ್ದು, ಬಂಧಿತಳಿಂದ 35 ಲಕ್ಷ ಮೌಲ್ಯದ 12.5 ಕೆಜಿ ಬೆಳ್ಳಿ, 7.5 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲೂ ಅಂಡಾಣು ಮಾರಾಟ ದಂಧೆ? ಐವಿಎಫ್ ಕೇಂದ್ರಗಳ ಮೇಲೆ ಕಟ್ಟುನಿಟ್ಟಿನ ನಿಗಾಕ್ಕೆ ಆರೋಗ್ಯ ಇಲಾಖೆ ಸೂಚನೆ

ಚಿನ್ನದಂಗಡಿ ಮಾಲೀಕನ ಹೆಸರಿನಲ್ಲಿ ಸರ ಪಡೆದು ವಂಚಿಸಿದ ಆರೋಪಿಯನ್ನು ಬೆಂಗಳೂರಿನ ಭಾರತಿನಗರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ 5 ತಿಂಗಳ ಬಳಿಕ ರಾಜಸ್ಥಾನ ಮೂಲದ ಆರೋಪಿ ಧರ್ಮವೀರ್​ ಸಿಂಗ್​ ಬಂಧಿಸಲಾಗಿದ್ದು, ಸುಮಾರು 33 ಲಕ್ಷ ರೂ. ಮೌಲ್ಯದ 239 ಗ್ರಾಂ ಚಿನ್ನದ ಸರವನ್ನು ಈತನಿಂದ ವಶಕ್ಕೆ ಪಡೆಯಲಾಗಿದೆ. ಮಹಾವೀರ್ ಜ್ಯುವೆಲ್ಲರಿ ಶಾಪ್​ನಲ್ಲಿ ಕೆಲಸ ಮಾಡ್ತಿದ್ದ ಧರ್ಮವೀರ್ ಸಿಂಗ್, ಬೇರೆ ಚಿನ್ನದ ಅಂಗಡಿಗಳ ಜೊತೆ ಎಕ್ಸ್​ಚೇಂಜ್​ ವ್ಯವಹಾರ ನಡೆಸುತ್ತಿದ್ದ. ಜ್ಯುವೆಲ್ಲರಿ ಅಂಗಡಿ ಮಾಲೀಕ ಹೈದರಾಬಾದ್​ಗೆ ಹೋದಾಗ ಮಾಲೀಕನ ಹೆಸರು ಹೇಳಿ 7 ಲಾಂಗ್​ ಚೈನ್​ ಪಡೆದುಕೊಂಡಿದ್ದ ಆರೋಪಿ, ಅವುಗಳ ಸಮೇತ ರಾಜಸ್ಥಾನಕ್ಕೆ ಪರಾರಿಯಾಗಿದ್ದ. ಪೊಲೀಸರ ಕಣ್ಣುತಪ್ಪಿಸಿ 5 ತಿಂಗಳು ತಲೆಮರೆಸಿಕೊಂಡಿದ್ದ ಈತನನ್ನು ಕೊನೆಗೂ ಪೊಲೀಸರು ಖೆಡ್ಡಾಕ್ಕೆ ಕೆಡಿವಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:23 pm, Fri, 27 February 26

Follow Us
ಪ್ರದೀಪ್​ ಚಿಕ್ಕಾಟಿ
ಪ್ರದೀಪ್​ ಚಿಕ್ಕಾಟಿ

ಮೂಲತಃ ಚಾಮರಾಜನಗರ ಜಿಲ್ಲೆಯವನಾಗಿದ್ದು, ಶಾಲಾ ದಿನಗಳಿಂದಲೂ ಮಾಧ್ಯಮಕ್ಕೆ ಸೇರುವ ಹಂಬಲ ಇತ್ತು. ಹೀಗಾಗಿ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಕೆಲಸಕ್ಕೆ ಸೇರಿದ್ದರು ಅ ಕೆಲಸ ಬಿಟ್ಟು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡಿದೆ. ಬಳಿಕ ಸುಮಾರು 7 ವರ್ಷ‌ದಿಂದ ಮೈಸೂರು, ಹೈದರಾಬಾದ್ ನ ಕೆಲ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಪ್ರಸ್ತುತ Tv9 ಕನ್ನಡದ ಕ್ರೈಂ ವರದಿಗಾರನಾಗಿದ್ದೇನೆ. ಓದು, ಬರಹ, ಪ್ರವಾಸ ನನ್ನಿಷ್ಟದ ಹವ್ಯಾಸಗಳು.

Read More
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್