AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರದೀಪ್​ ಚಿಕ್ಕಾಟಿ

ಪ್ರದೀಪ್​ ಚಿಕ್ಕಾಟಿ

Crime Reporter - TV9 Kannada

pradeep.chikkati@tv9.com

ಮೂಲತಃ ಚಾಮರಾಜನಗರ ಜಿಲ್ಲೆಯವನಾಗಿದ್ದು, ಶಾಲಾ ದಿನಗಳಿಂದಲೂ ಮಾಧ್ಯಮಕ್ಕೆ ಸೇರುವ ಹಂಬಲ ಇತ್ತು. ಹೀಗಾಗಿ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಕೆಲಸಕ್ಕೆ ಸೇರಿದ್ದರು ಅ ಕೆಲಸ ಬಿಟ್ಟು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡಿದೆ. ಬಳಿಕ ಸುಮಾರು 7 ವರ್ಷ‌ದಿಂದ ಮೈಸೂರು, ಹೈದರಾಬಾದ್ ನ
ಕೆಲ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಪ್ರಸ್ತುತ Tv9 ಕನ್ನಡದ ಕ್ರೈಂ ವರದಿಗಾರನಾಗಿದ್ದೇನೆ.
ಓದು, ಬರಹ, ಪ್ರವಾಸ ನನ್ನಿಷ್ಟದ ಹವ್ಯಾಸಗಳು.

Read More
Follow On:
ಕೆಪಿಎಸ್​ಸಿ ನೇಮಕಾತಿ ಹಗರಣ: ಬಗೆದಷ್ಟು ಬಯಲಾಗ್ತಿದೆ ಕರ್ಮಕಾಂಡ, ಸಿಐಡಿ ತನಿಖೆಯಲ್ಲಿ ಮತ್ತಷ್ಟು ಸ್ಫೋಟಕ ವಿಚಾರ ಬಯಲು

ಕೆಪಿಎಸ್​ಸಿ ನೇಮಕಾತಿ ಹಗರಣ: ಬಗೆದಷ್ಟು ಬಯಲಾಗ್ತಿದೆ ಕರ್ಮಕಾಂಡ, ಸಿಐಡಿ ತನಿಖೆಯಲ್ಲಿ ಮತ್ತಷ್ಟು ಸ್ಫೋಟಕ ವಿಚಾರ ಬಯಲು

ಕೆಪಿಎಸ್ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣದಲ್ಲಿ ಸಿಐಡಿ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಮೂವರು ಅಭ್ಯರ್ಥಿಗಳಿಂದ ಬಸವರಾಜ್ ಕನ್ನಾಳೆಗೆ ₹60 ಲಕ್ಷ ನಗದು ಪಾವತಿಯಾಗಿದೆ. ಸದ್ಯ ಬ್ಯಾಂಕ್ ಖಾತೆಗಳಿಂದ ₹1.5 ಕೋಟಿ ಹಣವನ್ನು ಜಪ್ತಿ ಮಾಡಲಾಗಿದ್ದು, ಐಎಎಸ್ ಅಧಿಕಾರಿ ಜ್ಞಾನೇಂದ್ರ ಸೇರಿ ಐವರು ಮಧ್ಯವರ್ತಿಗಳ ಪಾತ್ರ ಬಯಲಾಗಿದೆ.

ಟ್ರೇಡಿಂಗ್ ಹೆಸರಿನಲ್ಲಿ 93 ಲಕ್ಷ ರೂ ವಂಚನೆ: ಮ್ಯೂಲ್ ಅಕೌಂಟ್​ಗಳಿಗೆ ಹಣ ವರ್ಗಾವಣೆ; ಮೂವರ ಬಂಧನ

ಟ್ರೇಡಿಂಗ್ ಹೆಸರಿನಲ್ಲಿ 93 ಲಕ್ಷ ರೂ ವಂಚನೆ: ಮ್ಯೂಲ್ ಅಕೌಂಟ್​ಗಳಿಗೆ ಹಣ ವರ್ಗಾವಣೆ; ಮೂವರ ಬಂಧನ

ಟ್ರೇಡಿಂಗ್ ಹೆಸರಿನಲ್ಲಿ 93 ಲಕ್ಷ ರೂ ವಂಚಿಸಿದ್ದ ಮೂವರು ಅಂತಾರಾಜ್ಯ ವಂಚಕರನ್ನು ಸೈಬರ್ ಕಮಾಂಡ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 6 ಮೊಬೈಲ್‌ಗಳು, 507 ಮ್ಯೂಲ್ ಅಕೌಂಟ್ ವಿವರಗಳು ಪತ್ತೆಯಾಗಿದ್ದು, ಎಲ್ಲವನ್ನು ಜಪ್ತಿ ಮಾಡಲಾಗಿದೆ. ಇನ್ನು ಪ್ರಕರಣದ ಕಿಂಗ್‌ಪಿನ್‌ಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಬೆಂಗಳೂರಿನಲ್ಲಿ ಗಿಫ್ಟ್ ಐಟಂಗಳ ಗೋಡೌನ್​​ನಲ್ಲಿ ಭಾರೀ ಬೆಂಕಿ ಅವಘಡ

ಬೆಂಗಳೂರಿನಲ್ಲಿ ಗಿಫ್ಟ್ ಐಟಂಗಳ ಗೋಡೌನ್​​ನಲ್ಲಿ ಭಾರೀ ಬೆಂಕಿ ಅವಘಡ

ಬೆಂಗಳೂರಿನಲ್ಲಿ ಗಿಫ್ಟ್ ಐಟಂಗಳ ಗೋಡೌನ್​​ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಪಟ್ಟಣಗೆರೆ ಮೆಟ್ರೋ ನಿಲ್ದಾಣ ಬಳಿ ಇರುವ ಮಜಿದ್ ಅಲಿ ಎಂಬುವರ MF ಎಂಟರ್ ಪ್ರೈಸ್​ ನ ಗೋಡೌನ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡ ಶಂಕೆ ವ್ಯಕ್ತವಾಗಿದ್ದು, ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಣಕ್ಕಾಗಿ 13 ವರ್ಷದ ಬಾಲಕನ ಕಿಡ್ನ್ಯಾಪ್​ ಮಾಡಿ ಕೊಲೆ: ಕಾರಿನ ಡಿಕ್ಕಿಯಲ್ಲಿ ಶವಕಂಡು ಪೊಲೀಸರಿಗೇ ಶಾಕ್​​!

ಹಣಕ್ಕಾಗಿ 13 ವರ್ಷದ ಬಾಲಕನ ಕಿಡ್ನ್ಯಾಪ್​ ಮಾಡಿ ಕೊಲೆ: ಕಾರಿನ ಡಿಕ್ಕಿಯಲ್ಲಿ ಶವಕಂಡು ಪೊಲೀಸರಿಗೇ ಶಾಕ್​​!

ಹಣಕ್ಕಾಗಿ 13 ವರ್ಷದ ಬಾಲಕನನ್ನು ಅಪಹರಿಸಿ ಹಾಲೋಬ್ರಿಕ್ಸ್‌ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಪ್ರಕರಣ ಸಂಬಂಧ ಮೃತ ಬಾಲಕನ ಏರಿಯಾದ್ದೇ ನಿವಾಸಿಯಾಗಿರುವ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದು, ಘಟನೆ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.

ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ: ₹5 ಕೋಟಿಗೂ ಹೆಚ್ಚು ಹಣದ ವಹಿವಾಟು ಪತ್ತೆಹಚ್ಚಿದ ಸಿಐಡಿ

ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ: ₹5 ಕೋಟಿಗೂ ಹೆಚ್ಚು ಹಣದ ವಹಿವಾಟು ಪತ್ತೆಹಚ್ಚಿದ ಸಿಐಡಿ

ಕೆಪಿಎಸ್​ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ₹5 ಕೋಟಿಗೂ ಹೆಚ್ಚು ಹಣದ ವಹಿವಾಟು ನಡೆದಿರುವುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ. ₹85 ಲಕ್ಷ ಹಣ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿದ್ದು, 273 ಮಂದಿಯನ್ನು ವಿಚಾರಣೆ ನಡೆಸಲಾಗಿದೆ ಎಂಬುದು ತಿಳಿದುಬಂದಿದೆ. ಕೆಪಿಎಸ್​ಸಿ ಸದಸ್ಯೆ ಶಾಂತಾ ಹೊಸಮನಿ ವಿರುದ್ಧವೂ ಆರೋಪಗಳು ಕೇಳಿಬಂದಿದ್ದು, ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಮತ್ತೊಮ್ಮೆ ನೋಟಿಸ್ ನೀಡಲು ಸಿದ್ಧತೆ ನಡೆದಿದೆ.

ನಕಲಿ ಮೆಡಿಸಿನ್ ದಂಧೆ ಬಗ್ಗೆ ಮತ್ತಷ್ಟು ಕರಾಳ ಸತ್ಯ ಅನಾವಣರ: ಟರ್ಕಿವರೆಗೂ ಲಿಂಕ್​​ ಬಗ್ಗೆ ಮಾಹಿತಿ ಬಹಿರಂಗ

ನಕಲಿ ಮೆಡಿಸಿನ್ ದಂಧೆ ಬಗ್ಗೆ ಮತ್ತಷ್ಟು ಕರಾಳ ಸತ್ಯ ಅನಾವಣರ: ಟರ್ಕಿವರೆಗೂ ಲಿಂಕ್​​ ಬಗ್ಗೆ ಮಾಹಿತಿ ಬಹಿರಂಗ

ರಾಮನಗರದ ದೊಡ್ಡೇರಿ ಫಾರ್ಮ್‌ಹೌಸ್‌ನಲ್ಲಿ ಪತ್ತೆಯಾದ ನಕಲಿ ಔಷಧ ಜಾಲ ಪ್ರಕರಣದ ತನಿಖೆ ವೇಳೆ ಅಂತಾರಾಷ್ಟ್ರೀಯ ಲಿಂಕ್ ಪತ್ತೆಯಾಗಿದ್ದು, ಟರ್ಕಿಯಿಂದ ನಕಲಿ ಲೇಬಲ್ ತರಿಸಿ 100ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಔಷಧಿ ಸರಬರಾಜು ಮಾಡುತ್ತಿದ್ದ ವಿಚಾರ ಬಹಿರಂಗಗೊಂಡಿದೆ. ದಂಧೆಯ ಅಸಲಿ ಕಿಂಗ್‌ಪಿನ್ ವೀರೇಶ್ ಜೈನ್ ಎಂಬ ಶಂಕೆ ವ್ಯಕ್ತವಾಗಿದ್ದು, ಮಂಗಳವಾರದ ನಂತರ ಆತನನ್ನು ಕಸ್ಟಡಿಗೆ ಪಡೆದು ಎಸ್​ಐಟಿ ಅಸಲಿ ವಿಚಾರಣೆ ಆರಂಭಿಸಲಿದೆ ಎನ್ನಲಾಗಿದೆ.

ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್​​ ಪ್ರಕರಣ: ತನಿಖೆಗಾಗಿ ಖುದ್ದು ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್

ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್​​ ಪ್ರಕರಣ: ತನಿಖೆಗಾಗಿ ಖುದ್ದು ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್

ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿ ಪ್ರದೇಶಗಳ ಮೇಲೆ ಇಡಿ ದಾಳಿ ಬೆನ್ನಲ್ಲೇ ಮಹತ್ವದ ಬೆಳವಣಿಗೆಗಳು ನಡೆದಿವೆ. ಸಚಿವರ ಮನೆಯಲ್ಲಿ ನಗದು ಮತ್ತು ವಿದೇಶಿ ಕರೆನ್ಸಿ ಪತ್ತೆಯಾಗಿದ್ದ ಹಿನ್ನೆಲೆ, ಪ್ರಕರಣದ ಪರಿಶೀಲನೆಗೆ ಇಡಿ ನಿರ್ದೇಶಕ ರಾಹುಲ್ ನವೀನ್ ನೇತೃತ್ವದ ತಾಂತ್ರಿಕ ತಂಡ ಬೆಂಗಳೂರಿಗೆ ಆಗಮಿಸಿದ್ದು, ಪ್ರಮುಖ ಕಡತಗಳನ್ನು ಪರಿಶೀಲಿಸಲಿದೆ. ಜೊತಗೆ ಕೆಪಿಎಸ್ಸಿ ಹಗರಣ, ಮೂಡಾ ಕೇಸ್ ಮತ್ತು ವಾಲ್ಮೀಕಿ ಪ್ರಕರಣಗಳ ಸಂಬಂಧವೂ ಮಾಹಿತಿ ಕಲೆಗೆ ಮುಂದಾಗಿದೆ.

ಕೆಪಿಎಸ್​ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: 5 ಕೋಟಿ ರೂ. ವಹಿವಾಟು ಬೆಳಕಿಗೆ; ಇನ್ನೂ ಹಲವರ ಬಂಧನ ಸಾಧ್ಯತೆ

ಕೆಪಿಎಸ್​ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: 5 ಕೋಟಿ ರೂ. ವಹಿವಾಟು ಬೆಳಕಿಗೆ; ಇನ್ನೂ ಹಲವರ ಬಂಧನ ಸಾಧ್ಯತೆ

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದಲ್ಲಿ 5 ಕೋಟಿ ರೂ. ವಹಿವಾಟು ನಡೆದಿರುವುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದ್ದು, ಇದುವರೆಗೆ 15 ಅಭ್ಯರ್ಥಿಗಳು ಸೇರಿ ಕೆಲ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ KPSCಯ 3 ನೇಮಕಾತಿಯಲ್ಲೂ ಕೆಪಿಎಸ್‌ಸಿ ಸದಸ್ಯೆ ಶಾಂತ ಹೊಸಮನಿ ಎಡವಟ್ಟು ಮಾಡಿಕೊಂಡಿರೋದು ತನಿಖೆ ವೇಳೆ ಬಯಲಾಗಿದೆ.

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ರಾಮನಗರದ ಬಿಡದಿ ಹಾಗೂ ದೊಡ್ಡೇರಿ ಭಾಗದಲ್ಲಿ ಪತ್ತೆಯಾದ ನಕಲಿ ಔಷಧ ಜಾಲದ ವ್ಯಾಪ್ತಿ ಶೋಧಿಸ ಹೊರಟ ಎಸ್​ಐಟಿ ತಂಡಕ್ಕೆ ಬೆಂಗಳೂರಿಲ್ಲೇ ಶಾಕ್ ಎದುರಾಗಿದೆ! ಬೆಂಗಳೂರಿನ ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ದಾಳಿ ನಡೆಸಿದ್ದು, ನಕಲಿ ಔಷಧಿಗಳ ಭಾರಿ ಸಂಗ್ರಹ ಪತ್ತೆಯಾಗಿದೆ. ಕ್ಯಾನ್ಸರ್‌ ಮಾತ್ರೆಗಳು, ಐಸಿಯು ಇಂಜೆಕ್ಷನ್‌ಗಳನ್ನು ಆಸ್ಪತ್ರೆಗಳಿಗೆ ಪೂರೈಸಿದ ಆರೋಪದಲ್ಲಿ ಮಾಲೀಕನ ಬಂಧನವಾಗಿದೆ.

ಕೆಪಿಎಸ್‌ಸಿ ನೇಮಕಾತಿ ಹಗರಣ: ಸ್ಕ್ಯಾಮ್ ಹಣದಲ್ಲಿ ಪ್ರಿಯತಮೆಗೆ ಚಿನ್ನ ಗಿಫ್ಟ್ ನೀಡಿದ್ದ ಜ್ಞಾನೇಂದ್ರ

ಕೆಪಿಎಸ್‌ಸಿ ನೇಮಕಾತಿ ಹಗರಣ: ಸ್ಕ್ಯಾಮ್ ಹಣದಲ್ಲಿ ಪ್ರಿಯತಮೆಗೆ ಚಿನ್ನ ಗಿಫ್ಟ್ ನೀಡಿದ್ದ ಜ್ಞಾನೇಂದ್ರ

ಕೆಪಿಎಸ್‌ಸಿ ನೇಮಕಾತಿ ಹಗರಣದಲ್ಲಿ ಮಧ್ಯವರ್ತಿ ಬಸವರಾಜ್ ಕನ್ನಾಳೆಯಿಂದ ಐಎಎಸ್​​ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹಣ ಪಡೆದಿರುವ ಆರೋಪದ ನಡುವೆ, ತಮ್ಮ ಪ್ರೇಯಸಿಗೆ 26 ಲಕ್ಷ ರೂ. ಮೌಲ್ಯದ ಚಿನ್ನದ ಗಿಫ್ಟ್ ನೀಡಿರುವ ಬಗ್ಗೆಯೂ ಆರೋಪಗಳು ಕೇಳಿಬಂದಿವೆ. ಆದರೆ ಕೆಪಿಎಸ್​ಸಿ ಹಗರಣಕ್ಕೂ ಚಿನ್ನಕ್ಕೂ ಸಂಬಂಧವಿಲ್ಲ ಎಂದು ಅವರ ಗೆಳತಿ ತಿಳಿಸಿದ್ದಾರೆ ಎನ್ನಲಾಗಿದೆ.

ರಾಮನಗರ ನಕಲಿ ಔಷಧ ಜಾಲ: ಮಹಾರಾಷ್ಟ್ರ, ಹಿಮಾಚಲ ಪ್ರದೇಶ ಸೇರಿ 6 ರಾಜ್ಯಗಳ 10 ಕಡೆ ಕರ್ನಾಟಕ ಎಸ್‌ಐಟಿ ದಾಳಿ

ರಾಮನಗರ ನಕಲಿ ಔಷಧ ಜಾಲ: ಮಹಾರಾಷ್ಟ್ರ, ಹಿಮಾಚಲ ಪ್ರದೇಶ ಸೇರಿ 6 ರಾಜ್ಯಗಳ 10 ಕಡೆ ಕರ್ನಾಟಕ ಎಸ್‌ಐಟಿ ದಾಳಿ

ದೊಡ್ಡೇರಿ ಫಾರ್ಮ್‌ಹೌಸ್‌ನಲ್ಲಿ ಪತ್ತೆಯಾದ ನಕಲಿ ಔಷಧ ಜಾಲದ ತನಿಖೆ ಚುರುಕುಗೊಂಡಿದ್ದು, ಕರ್ನಾಟಕ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಆರು ರಾಜ್ಯಗಳ 10 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿವೆ. ಕ್ಯಾನ್ಸರ್ ಸೇರಿದಂತೆ ಹಲವು ಔಷಧ ಪೂರೈಕೆಯ ಆರೋಪದ ಬಗ್ಗೆ ತನಿಖೆ ಮುಂದುವರಿದಿದೆ.

ಸಿಕ್ಕ ಹಣ ನಮ್ಮದೇ: 37 ಗಂಟೆಗಳ ಕಾಲ ಇಡಿ ದಾಳಿಯ ಮಾಹಿತಿ ಹಂಚಿಕೊಂಡ ಸತೀಶ್ ಜಾರಕಿಹೊಳಿ

ಸಿಕ್ಕ ಹಣ ನಮ್ಮದೇ: 37 ಗಂಟೆಗಳ ಕಾಲ ಇಡಿ ದಾಳಿಯ ಮಾಹಿತಿ ಹಂಚಿಕೊಂಡ ಸತೀಶ್ ಜಾರಕಿಹೊಳಿ

ವಿದೇಶದಲ್ಲಿ ಹೂಡಿಕೆ ಶಂಕೆ ಮೇರೆಗೆ ಇಡಿ ಅಧಿಕಾರಿಗಳು ಸಚಿವ ಸತೀಶ್ ಜಾರಕಿಹೊಳಿಗೆ ಶಾಕ್ ನೀಡಿದ್ದಾರೆ. ನಿನ್ನೆ (ಸೆ,09) ಬೆಳಗ್ಗೆ ದಾಳಿ ನಡೆಸಿದ ಇಡಿ, ಇವತ್ತೂ (ಸೆ.10) ಸಂಜೆ ವರೆಗೂ ಪರಿಶೀಲನೆ ನಡೆಸಿದೆ. ಬರೋಬ್ಬರು ಸತತ 37 ಗಂಟೆಗಳ ಕಾಲ ಬೆಂಗಳೂರು ಹಾಗೂ ಬೆಳಗಾವಿ ನಿವಾಸದಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ಮಾಡಿ ತೆರಳಿದ್ದಾರೆ. ಸತತ 37 ಗಂಟೆಗಳ ಪರಿಶೀಲನೆ ಮುಕ್ತಾಯ ಮಾಡಿ ಇಡಿ ಅಧಿಕಾರಿಗಳು ಮನೆಯಿಂದ ತೆರಳುತ್ತಿದ್ದಂತೆಯೇ ಇತ್ತ ಸಚಿವ ಸತೀಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ದಾಳಿ ಬಗ್ಗೆ ವಿವರಿಸಿದ್ದಾರೆ.