AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದೂ ಬರಲಿಲ್ಲ ಪ್ರಜ್ವಲ್ ರೇವಣ್ಣ, ಕೆಐಎನಲ್ಲಿ ಕಾದು ಕಾದು ಸುಸ್ತಾದ ಪೊಲೀಸರು!

ಇಂದೂ ಬರಲಿಲ್ಲ ಪ್ರಜ್ವಲ್ ರೇವಣ್ಣ, ಕೆಐಎನಲ್ಲಿ ಕಾದು ಕಾದು ಸುಸ್ತಾದ ಪೊಲೀಸರು!

ಅರುಣ್​ ಕುಮಾರ್​ ಬೆಳ್ಳಿ
|

Updated on:May 15, 2024 | 6:05 PM

Share

ರಾಜ್ಯ ಸರ್ಕಾರ ಪ್ರಜ್ವಲ್ ವಿರುದ್ಧ ಬ್ಲೂ ಕಾರ್ನರ್ ನೋಟೀಸ್ ಜಾರಿ ಮಾಡಲಾಗಿದೆ ಎಂದು 10-12 ದಿನಗಳಿಂದ ಹೇಳುತ್ತಿದೆ. ಕುಖ್ಯಾತ ಅಪರಾಧಿಗಳನ್ನು ಕ್ಷಣಾರ್ಧದಲ್ಲಿ ಟ್ರೇಸ್ ಮಾಡಿ ವಶಕ್ಕೆ ಪಡೆಯುವ ಇಂಟರ್ ಪೋಲ್ ಅಧಿಕಾರಿಗಳಿಗೆ ಭಾರತದ ಒಬ್ಬ ಸಂಸದನನ್ನು ಹಿಡಿಯುವುದು ಕಷ್ಟವಾಗುತ್ತಿದೆಯೇ?

ಬೆಂಗಳೂರು: ಅಶ್ಲೀಲ ವಿಡಿಯೋಗಳ ಪ್ರಕರಣದಲ್ಲಿ ಆರೋಪಿ ಎನಿಸಿಕೊಂಡಿರುವ ಪ್ರಜ್ವಲ್ ರೇವಣ್ಣ (Prajwal Revanna) ಬೆಂಗಳೂರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಜರ್ಮನ್ ಕಾಲಮಾನದ (German time) ಪ್ರಕಾರ ಪ್ರಜ್ವಲ್ ರೇವಣ್ಣ ಇಂದು ಮಧ್ಯಾಹ್ನ 12.20 ಕ್ಕೆ ಅಲ್ಲಿಂದ ವಿಮಾನವೊಂದರಿಂದ ಬೆಂಗಳೂರು ಬರಬೇಕಿತ್ತು, ಅವರು ಟಿಕೆಟ್ ತೆಗೆದುಕೊಂಡ ಬಗ್ಗೆ ನಗರದ ಪೊಲೀಸರಿಗೆ ಖಚಿತ ಮಾಹಿತಿ ಇತ್ತು. ಆದರೆ ಕೊನೆಕ್ಷಣದಲ್ಲಿ ಅವರು ಆ ವಿಮಾನ ಹತ್ತದೆ ಅಲ್ಲೇ ಉಳಿದುಬಿಟ್ಟಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ (KIA) ವಿಮಾನ ಲ್ಯಾಂಡ್ ಆಗಿ ಅವರು ಹೊರಬರುತ್ತಿದ್ದಂತೆಯೇ ದಸ್ತಗಿರಿ ಮಾಡಬೇಕೆಂದು ಕಾಯುತ್ತಿದ್ದ ಪೊಲೀಸರಿಗೆ ನಿರಾಶೆ ಎದುರಾಯಿತು. ಅವರು ಇಂದು ವಾಪಸ್ಸು ಬರಲಿರುವ ಬಗ್ಗೆ ದಟ್ಟ ವದಂತಿಗಳು ಹರಡಿದ್ದು ಸುಳ್ಳಲ್ಲ. ಅವರು ಜರ್ಮನಿಯಲ್ಲಿರುವುದು ಖಚಿತವಾಗಿದೆ. ಅದರೆ, ಇಂಟರ್ ಪೋಲ್ ಏನು ಮಾಡುತ್ತಿದೆ ಅನ್ನುವ ಪ್ರಶ್ನೆ ಉದ್ಭವಿಸುತ್ತದೆ. ರಾಜ್ಯ ಸರ್ಕಾರ ಪ್ರಜ್ವಲ್ ವಿರುದ್ಧ ಬ್ಲೂ ಕಾರ್ನರ್ ನೋಟೀಸ್ ಜಾರಿ ಮಾಡಲಾಗಿದೆ ಎಂದು 10-12 ದಿನಗಳಿಂದ ಹೇಳುತ್ತಿದೆ. ಕುಖ್ಯಾತ ಅಪರಾಧಿಗಳನ್ನು ಕ್ಷಣಾರ್ಧದಲ್ಲಿ ಟ್ರೇಸ್ ಮಾಡಿ ವಶಕ್ಕೆ ಪಡೆಯುವ ಇಂಟರ್ ಪೋಲ್ ಅಧಿಕಾರಿಗಳಿಗೆ ಭಾರತದ ಒಬ್ಬ ಸಂಸದನನ್ನು ಹಿಡಿಯುವುದು ಕಷ್ಟವಾಗುತ್ತಿದೆಯೇ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಕೇಸ್​: ತಮ್ಮ ಆಪ್ತರ ಬಂಧನಕ್ಕೆ ಸ್ಪಷ್ಟನೆ ನೀಡಿದ ಪ್ರೀತಂಗೌಡ

Published on: May 15, 2024 06:03 PM