AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳ ಹಂಚಿಕೆ ರಾಜ್ಯಮಟ್ಟದ ಬಿಜೆಪಿ ನಾಯಕರೊಬ್ಬರ ಅಣತಿ ಮೇರೆಗೆ ನಡೆದಿದೆ: ರವಿ ಗಣಿಗ, ಶಾಸಕ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳ ಹಂಚಿಕೆ ರಾಜ್ಯಮಟ್ಟದ ಬಿಜೆಪಿ ನಾಯಕರೊಬ್ಬರ ಅಣತಿ ಮೇರೆಗೆ ನಡೆದಿದೆ: ರವಿ ಗಣಿಗ, ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: May 14, 2024 | 12:53 PM

Share

ಈ ಪ್ರಕರಣದ ಹಿಂದೆ ರಾಜ್ಯಮಟ್ಟದ ಬಿಜೆಪಿ ನಾಯಕನ ಕೈವಾಡವಿದೆ ಮತ್ತು ಇದರಲ್ಲಿ ಒಬ್ಬ ಮಾರ್ಕೆಟಿಂಗ್ ಮ್ಯಾನೇಜರ್ ಹಾಗೆ ಪ್ಲ್ಯಾನ್ ಎಕ್ಸಿಕ್ಯೂಟ್ ಮಾಡಿದ್ದು ಹಾಸನದ ಮಾಜಿ ಬಿಜೆಪಿ ಶಾಸಕ ಎಂದರು. ಈ ಶಾಸಕನ ಬಲಗೈ ಮತ್ತು ಎಡಗೈಯನ್ನು ಎಸ್ಐಟಿ ಅಧಿಕಾರಿಗಳು ಈಗಾಗಲೇ ವಶಕ್ಕೆ ಪಡೆದಿದ್ದಾರೆ ಅವರು ಬಾಯಿ ಬಿಡಿಸಲಿದ್ದಾರೆ ಎಂದು ಗಣಿಗ ಹೇಳಿದರು.

ಮಂಡ್ಯ: ನಗರದಲ್ಲಿ ಇಂದು ಮಾಧ್ಯಮಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಕಾಂಗ್ರೆಸ್ ಶಾಸಕ ಪಿ ರವಿಕುಮಾರ್ ಗೌಡ ಗಣಿಗ, (Ravi Ganiga) ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳ (Prajwal Revanna sleaze videos) ಹಂಚಿಕೆಯಲ್ಲಿ ಬಿಜೆಪಿ ನಾಯಕರ (BJP leaders) ಕೈವಾಡವಿದೆ, ಜೆಡಿಎಸ್ ಪಕ್ಷದ ರಾಜಕೀಯ ಅಸ್ತಿತ್ವ ಕೊನೆಗಾಣಿಸಿ ಆ ಪಕ್ಷದ ಮುಖಂಡರನ್ನು ತಮ್ಮ ಪಕ್ಷಕ್ಕೆ ಎಳೆದುಕೊಳ್ಳಲು ಅವರು ಹೂಡಿರುವ ರಣತಂತ್ರ ಇದು ಎಂದು ಹೇಳಿದರು. ಅಸಲಿಗೆ ಜಿದ್ದಾಜಿದ್ದಿ ನಡೆಯುತ್ತಿರೋದು ಬಿಜೆಪಿ ಮತ್ತು ಜೆಡಿಎಸ್ ನಾಯಕರ ನಡುವೆ, ಸುಖಾಸುಮ್ಮನೆ ಕಾಂಗ್ರೆಸ್ ನಾಯಕರನ್ನು ಪ್ರಕರಣದಲ್ಲಿ ಎಳೆತರುವ ಕೆಲಸ ನಡೆಯುತ್ತಿದೆ ಎಂದು ಅವರು ಹೇಳಿದರು. ತಾನ್ಯಾವತ್ತೂ ಹಿಟ್ ಅಂಡ್ ರನ್ ಕೇಸ್ ಅಲ್ಲ, ಮಾಹಿತಿ ಇಟ್ಟುಕೊಂಡೇ ಮಾತಾಡೋದು ಎಂದು ಹೇಳಿದ ಗಣಿಗ, ಈ ಪ್ರಕರಣದ ಹಿಂದೆ ರಾಜ್ಯಮಟ್ಟದ ಬಿಜೆಪಿ ನಾಯಕನ ಕೈವಾಡವಿದೆ ಮತ್ತು ಇದರಲ್ಲಿ ಒಬ್ಬ ಮಾರ್ಕೆಟಿಂಗ್ ಮ್ಯಾನೇಜರ್ ಹಾಗೆ ಪ್ಲ್ಯಾನ್ ಎಕ್ಸಿಕ್ಯೂಟ್ ಮಾಡಿದ್ದು ಹಾಸನದ ಮಾಜಿ ಬಿಜೆಪಿ ಶಾಸಕ ಎಂದರು. ಈ ಶಾಸಕನ ಬಲಗೈ ಮತ್ತು ಎಡಗೈಯನ್ನು ಎಸ್ಐಟಿ ಅಧಿಕಾರಿಗಳು ಈಗಾಗಲೇ ವಶಕ್ಕೆ ಪಡೆದಿದ್ದಾರೆ ಅವರು ಬಾಯಿ ಬಿಡಿಸಲಿದ್ದಾರೆ ಎಂದು ಗಣಿಗ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜ್ವಲ್ ರೇವಣ್ಣ ಅಶ್ಲೀಲ‌ ವಿಡಿಯೋ ಕೇಸ್: 3 ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ ದೇವರಾಜೇಗೌಡ