ಪ್ರಜಾಪ್ರಭುತ್ವ ವ್ಯವಸ್ಥೆಗೆ ದ್ರೋಹ ಬಗೆದಿರುವ ರಾಘವೇಂದ್ರ ವಿರುದ್ಧ ಎಫ್ಐಆರ್ ದಾಖಲಾಗಬೇಕು: ಕೆಎಸ್ ಈಶ್ವರಪ್ಪ
ರಾಘವೇಂದ್ರನಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗಿದೆ, ಚುನಾವಣಾ ಆಯೋಗ ಅವರ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಪೊಲೀಸರು ಅಪರಚಿತ ವ್ಯಕ್ತಿಯ ಹೆಸರಲ್ಲಿ ಎಫ್ಐಅರ್ ದಾಖಲಿಸಿದ್ದಾರೆ, ಆದರೆ ರಾಘವೇಂದ್ರ ವಿರುದ್ಧವೇ ಅದು ದಾಖಲಾಗಬೇಕು ಎಂದು ಈಶ್ವರಪ್ಪ ಹೇಳಿದರು.
ಬೆಂಗಳೂರು: ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸೋಲು ಭೀತಿಯಿಂದ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ (BY Raghavendra) ಅವರು ತನ್ನ ವಿರುದ್ಧ ಅಪಪ್ರಚಾರ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಗೆ (democracy) ದ್ರೋಹ ಬಗೆದಿರುವರೆಂದು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಬಳಿಕ ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಒಂದು ಪತ್ರಿಕಾ ಗೋಷ್ಟಿ ನಡೆಸಿ ದೂರಿನ ವಿವರಗಳನ್ನು ನೀಡಿದರು. ತಮ್ಮ ಬಗ್ಗೆ ಜನರಲ್ಲಿ ತಪ್ಪು ಮಾಹಿತಿ ರವಾನೆಯಾಗಲು ರಾಘವೇಂದ್ರ ಅವರು ತನ್ನ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಡೂಪ್ಲಿಕೇಟ್ ಫೋಟೋಗಳನ್ನು ಬಳಸಿದ್ದಾರೆ ಮತ್ತು ತಾನೊಂದು ಪತ್ರಿಕಾ ಗೋಷ್ಟಿ ನಡೆಸಿರುವ ಹಾಗೆ ಸನ್ನಿವೇಶವೊಂದನ್ನು ಸೃಷ್ಟಿಸಿ ಅದರಲ್ಲಿ ತಾನು, ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರಿಗೆ ವೋಟು ನೀಡಿ, ತನಗೆ ತಪ್ಪಿನ ಅರಿವಾಗಿದೆ, ಕಾಂಗ್ರೆಸ್ ಗೆ ಪ್ರಯೋಜನ ಅಗೋದು ಬೇಡ ಎಂದು ಹೇಳಿರುವಂತೆ ಅಚ್ಚು ಹಾಕಿಸಿ, ಮತದಾನಕ್ಕೆ ಒಂದು ದಿನ ಮುಂಚೆ ಜನರಿಗೆ ಹಂಚಲಾಗಿದೆ ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ತಾನು ರಾಘವೇಂದ್ರ ಪರ ಪ್ರಚಾರ ಮಾಡಿದ್ದ ವಿಡಿಯೋ ಬಳಸಿ ಪೆನ್ ಡ್ರೈವ್ ಗಳನ್ನು ತಯಾರು ಮಾಡಿ ಅವುಗಳನ್ನೂ ಜನರಿಗೆ ಹಂಚಲಾಗಿದೆ, ಎಂದು ಈಶ್ವರಪ್ಪ ಹೇಳಿದರು. ರಾಘವೇಂದ್ರನಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗಿದೆ, ಚುನಾವಣಾ ಆಯೋಗ ಅವರ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಪೊಲೀಸರು ಅಪರಚಿತ ವ್ಯಕ್ತಿಯ ಹೆಸರಲ್ಲಿ ಎಫ್ಐಅರ್ ದಾಖಲಿಸಿದ್ದಾರೆ, ಆದರೆ ರಾಘವೇಂದ್ರ ವಿರುದ್ಧವೇ ಅದು ದಾಖಲಾಗಬೇಕು ಎಂದು ಈಶ್ವರಪ್ಪ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಆತುರದಲ್ಲಿ ನಿರ್ಧಾರ ತಗೋಬೇಡಿ ಅಂತ ಹೇಳಿದರೂ ಈಶ್ವರಪ್ಪ ದುಡುಕಿಬಿಟ್ಟರು: ಎಂಟಿಬಿ ನಾಗರಾಜ್, ಮಾಜಿ ಸಚಿವ