ಆತುರದಲ್ಲಿ ನಿರ್ಧಾರ ತಗೋಬೇಡಿ ಅಂತ ಹೇಳಿದರೂ ಈಶ್ವರಪ್ಪ ದುಡುಕಿಬಿಟ್ಟರು: ಎಂಟಿಬಿ ನಾಗರಾಜ್, ಮಾಜಿ ಸಚಿವ
ಟಿಕೆಟ್ ತಪ್ಪಲು ಯಡಿಯೂರಪ್ಪ, ವಿಜಯೇಂದ್ರ ಅಥವಾ ಬೇರೆ ಯಾರೂ ಕಾರಣರಲ್ಲ, ಅದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಸದೀಯ ಮಂಡಳಿಯ ನಿರ್ಧಾರ, ಹಾಗಾಗಿ ದುಡುಕಿ ಯಾವುದೇ ನಿರ್ಧಾರ ತಗೋಬೇಡಿ ಅಂತ ತಾನು ಫೋನ್ ಮಾಡಿ ಹೇಳಿದರೂ, ಇಲ್ಲ ನಾನು ತೀರ್ಮಾನ ತಗೊಂಡಾಗಿದೆ ಎಂದಿದ್ದರು ಎಂದು ನಾಗರಾಜ್ ಹೇಳಿದರು.
ಬೆಂಗಳೂರು: ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಹಿರಿಯ ಬಿಜೆಪಿ ನಾಯಕ ಎಂಟಿಬಿ ನಾಗರಾಜ್ (MTB Nagaraj) ಅವರು ಕೆಎಸ್ ಈಶ್ವರಪ್ಪ (KS Eshwarappa) ದುಡುಕಿ ಆತುರದ ನಿರ್ಧಾರ ತೆಗೆದುಕೊಂಡರು ಎಂದು ಹೇಳಿದರು. ಬಿಜೆಪಿ ಸರ್ಕಾರ ಅಧಿಕಾರದದಲ್ಲಿದ್ದಾಗ ಅವರು ಸಾಕಷ್ಟು ಅಧಿಕಾರ ಅನುಭವಿಸಿದರು, ಮೂರು ಮಂತ್ರಿಹುದ್ದೆಗಳನ್ನು ನಿರ್ವಹಿಸಿದರು ಮತ್ತು ಒಮ್ಮೆ ಉಪ ಮುಖ್ಯಮಂತ್ರಿಯೂ (deputy CM) ಅಗಿದ್ದರು. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಗನಿಗೆ ಟಿಕೆಟ್ ಸಿಗದೇ ಹೋಗಿದ್ದಕ್ಕೆ ಬೇಸರ ಮಾಡಿಕೊಂಡರು. ಟಿಕೆಟ್ ತಪ್ಪಲು ಯಡಿಯೂರಪ್ಪ, ವಿಜಯೇಂದ್ರ ಅಥವಾ ಬೇರೆ ಯಾರೂ ಕಾರಣರಲ್ಲ, ಅದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಸದೀಯ ಮಂಡಳಿಯ ನಿರ್ಧಾರ, ಹಾಗಾಗಿ ದುಡುಕಿ ಯಾವುದೇ ನಿರ್ಧಾರ ತಗೋಬೇಡಿ ಅಂತ ತಾನು ಫೋನ್ ಮಾಡಿ ಹೇಳಿದರೂ, ಇಲ್ಲ ನಾನು ತೀರ್ಮಾನ ತಗೊಂಡಾಗಿದೆ ಎಂದಿದ್ದರು ಎಂದು ನಾಗರಾಜ್ ಹೇಳಿದರು. ತಾನು ಮತ್ತು ಈಶ್ವರಪ್ಪ ಸಮಕಾಲೀನರು, ಅವರು ರಾಜಕೀಯದಲ್ಲಿ ಬಹಳ ಬೆಳೆದರು ಎಂದು ಮಾಜಿ ಸಚಿವ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಎಂಟಿಬಿ ನಾಗರಾಜ್ ಸ್ಪರ್ಧೆ: ಬಿವೈ ವಿಜಯೇಂದ್ರ ಹೇಳಿದ್ದೇನು?