ಸುಡು ಸುಡು ಬಿಸಿಲಲ್ಲಿ ಬೇಯುತ್ತಿದ್ದ ದೇವನಹಳ್ಳಿ ತಂಪೆರದ ಮಳೆರಾಯ

Rain in Devanahalli: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ದೇವನಹಳ್ಳಿ ತಾಲೂಕಿನಲ್ಲಿ ಮೇ 6, ಸೋಮವಾರದಂದು ಮಳೆ ಸುರಿದಿದೆ. ಸುಮಾರು 40 ಡಿಗ್ರಿಯಷ್ಟು ಉಷ್ಣಾಂಶದಿಂದ ಬೇಯುತ್ತಿದ್ದ ದೇವನಹಳ್ಳಿ ನೆಲಕ್ಕೆ ಮಳೆರಾಯ ತಂಪು ತಂದಿದ್ದಾನೆ. ಜನರ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನೂ ಕೆಲ ದಿನ ಮಳೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಸುಡು ಸುಡು ಬಿಸಿಲಲ್ಲಿ ಬೇಯುತ್ತಿದ್ದ ದೇವನಹಳ್ಳಿ ತಂಪೆರದ ಮಳೆರಾಯ
|

Updated on: May 06, 2024 | 6:11 PM

ಬೆಂಗಳೂರು, ಮೇ 6: ಏರ್ಪೋರ್ಟ್ ಇರುವ ದೇವನಹಳ್ಳಿಯಲ್ಲಿ (rain in Devanahalli) ಸುಡು ಬಿಸಿಲಿನಿಂದ ಕಂಗೆಟ್ಟುಹೋಗಿದ್ದ ಜನರಿಗೆ ಮಳೆರಾಯ ಇಂದು ಸೋಮವಾರ ತಂಪೆರದಿದ್ದಾನೆ. ಏರ್ಪೋರ್ಟ್ ಸೇರಿದಂತೆ ದೇವನಹಳ್ಳಿಯ ವಿವಿಧ ಭಾಗಗಳಲ್ಲಿ ಮಳೆಯ ಸಿಂಚನವಾಗಿದೆ. ಏರ್ಪೋರ್ಟ್​ಗೆ ಹೋಗಿ ಬರುವ ಪ್ರಯಾಣಿಕರ ಮೊಗದಲ್ಲಿ ಮಳೆಯಿಂದ ಮಂದಹಾಸ ಬಂದಿತ್ತು. ಬಹಳಷ್ಟು ಜನರು ಮೊಬೈಲ್​ನಲ್ಲಿ ಮಳೆಯ ಅಪರೂಪದ ದೃಶ್ಯವನ್ನು ಸೆರೆ ಹಿಡಿಯಲು ಬ್ಯುಸಿಯಾಗಿದ್ದರು.

ಈ ಬಾರಿಯ ಬೇಸಿಗೆಯಲ್ಲಿ ನಿರೀಕ್ಷೆಯಂತೆ ಮಳೆ ಆಗಿಲ್ಲ. ವಾಡಿಕೆಯ ಮಳೆ ಒಂದೂ ಆಗಿಲ್ಲ. ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ ಅಲ್ಲಲ್ಲಿ ಮಳೆಯಾಗಿದೆ. ಮುಂದಿನ ಕೆಲ ದಿನಗಳ ಕಾಲ ವಿವಿಧೆಡೆ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮೊನ್ನೆ ಭರ್ಜರಿ ಮಳೆಯಾಗಿತ್ತು. ಶನಿವಾರದವರೆಗೂ ಬೆಂಗಳೂರು ಹಾಗೂ ಸುತ್ತಮುತ್ತ ಮಳೆ ಆಗಬಹುದು ಎಂಬ ಮುನ್ಸೂಚನೆ ಇದೆ.

ಇದನ್ನೂ ಓದಿ: ಪ್ರಜ್ವಲ್​ ವಿಡಿಯೋ ಕೇಸ್: ಅಶ್ಲೀಲ ವಿಡಿಯೋ ಶೇರ್ ಮಾಡಿದ್ರೆ ಜೈಲಿಗೆ ಹೋಗ್ತೀರಿ ಹುಷಾರ್..!

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow us