ನಾಮಪತ್ರ ಸಲ್ಲಿಸುವ ಮೊದಲು ಎಂಟಿಬಿ ನಾಗರಾಜ್ ಕಾಲಿಗೆ ನಮಸ್ಕರಿಸಿದ ಡಾ ಕೆ ಸುಧಾಕರ್
ಧಾಕರ್ ತಮ್ಮೊಂದಿಗಿದ್ದ ಬೇರೆ ನಾಯಕರ ಪಾದಗಳಿಗೂ ನಮಸ್ಕರಿಸಿ ಆಶೀರ್ವಾದ ಪಡೆದರು. ನಾಮಪತ್ರ ಸಲ್ಲಿಸುವಾಗ ಸುಧಾಕರ್ ಜೊತೆ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ವರ್ತೂರು ಪ್ರಕಾಶ್, ನಿಸರ್ಗ ನಾರಾಯಣಸ್ವಾಮಿ ಮೊದಲಾದವರಿದ್ದರು. ಕ್ಷೇತ್ರದಲ್ಲಿ ಸುಧಾಕರ್ ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ರಕ್ಷಾ ರಾಮಯ್ಯ ಆಗಿದ್ದಾರೆ.
ಚಿಕ್ಕಬಳ್ಳಾಪುರ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್ (Dr K Sudhakar) ಇಂದು ನಅಮಪತ್ರ ಸಲ್ಲಿಸಿದರು. ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ಮೊದಲು ಅವರು ಪಕ್ಷದ ಹಿರಿಯ ನಾಯಕ ಎಮ್ಟಿಬಿ ನಾಗರಾಜ್ (MTB Nagaraj) ಪಾದಗಳಿಗೆ ನಮಸ್ಕರಿಸಿದರು. ಸುಧಾಕರ್ ಮತ್ತು ನಾಗರಾಜ್ ನಡುವೆ ಆತ್ಮೀಯ ಬಾಂಧವ್ಯವಿದೆ. ನಮಗೆ ಲಭ್ಯವಿರುವ ಮೂಲಗಳ ಪ್ರಕಾರ ನಾಮಪತ್ರದ ಸಲ್ಲಿಸುವಾಗ ಸಲ್ಲಿಸಬೇಕಿರುವ ₹ 25,000 ಶುಲ್ಕವನ್ನು (fee) ನಾಗರಾಜ್ ಅವರೇ ಪಾವತಿಸಿದ್ದಾರೆ. ನಿಮಗೆ ನೆನಪಿರಬಹುದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್ ಅಭ್ಯರ್ಥಿಯಾಗಬೇಕೆಂದು ನಾಗರಾಜ್ ರಾಜ್ಯ ಬಿಜೆಪಿ ನಾಯಕರ ಮೇಲೆ ಒತ್ತಡವನ್ನೂ ಹೇರಿದ್ದರು. ಮಾಜಿ ಸಚಿವ ನಾಗರಾಜ್ ಸಕ್ರಿಯ ರಾಜಕಾರಣದಿಂದ ದೂರವಾಗಿರುವಂತೆ ಕನ್ನಡಿಗರಿಗೆ ಅನಿಸುತ್ತಿರುವುದು ನಿಜವಾದರೂ ಹೊಸಕೋಟೆ ಭಾಗದಲ್ಲಿ ಭಾರೀ ಪ್ರಭಾವಿ ನಾಯಕರಾಗಿದ್ದಾರೆ. ಸುಧಾಕರ್ ತಮ್ಮೊಂದಿಗಿದ್ದ ಬೇರೆ ನಾಯಕರ ಪಾದಗಳಿಗೂ ನಮಸ್ಕರಿಸಿ ಆಶೀರ್ವಾದ ಪಡೆದರು. ನಾಮಪತ್ರ ಸಲ್ಲಿಸುವಾಗ ಸುಧಾಕರ್ ಜೊತೆ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ವರ್ತೂರು ಪ್ರಕಾಶ್, ನಿಸರ್ಗ ನಾರಾಯಣಸ್ವಾಮಿ ಮೊದಲಾದವರಿದ್ದರು. ಕ್ಷೇತ್ರದಲ್ಲಿ ಸುಧಾಕರ್ ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ರಕ್ಷಾ ರಾಮಯ್ಯ ಆಗಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ