ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿ ಕ್ರೌರ್ಯಕ್ಕೆ ಬಲಿಯಾಗಿದ್ದು ಸರ್ಕಾರ ಮತ್ತು ಪೊಲೀಸ್ ನಿಷ್ಕ್ರಿಯತೆ ಕಾರಣ?

ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿ ಕ್ರೌರ್ಯಕ್ಕೆ ಬಲಿಯಾಗಿದ್ದು ಸರ್ಕಾರ ಮತ್ತು ಪೊಲೀಸ್ ನಿಷ್ಕ್ರಿಯತೆ ಕಾರಣ?

ಅರುಣ್​ ಕುಮಾರ್​ ಬೆಳ್ಳಿ
|

Updated on:May 15, 2024 | 4:46 PM

ನೇಹಾ ಕೊಲೆ ನಡೆದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸರ್ಕಾರದ ಹಲವಾರು ಪ್ರತಿನಿಧಿಗಳು ನಿರಂಜನ್ ಮನೆಗೆ ಭೇಟಿ ಮಗಳ ಸಾವಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದರು. ಆ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಅಂತ ಗೃಹ ಸಚಿವರಿಗೂ ಗೊತ್ತಿರಲಿಕ್ಕಿಲ್ಲ. ತ್ವರಿತ ವಿಚಾರಣೆಗಾಗಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ರಚಿಸುವುದಾಗಿ ಸರ್ಕಾರ ಹೇಳಿತ್ತು. ಹತ್ಯೆ ನಡೆದು ಒಂದು ತಿಂಗಳಾಗುತ್ತಾ ಬಂದರೂ ಕೋರ್ಟ್ ರಚನೆ ಬಗ್ಗೆ ಸರ್ಕಾರದಿಂದ ಸುಳಿವಿಲ್ಲ.

ಹುಬ್ಳಳ್ಳಿ: ರಾಜ್ಯ ಸರ್ಕಾರ (state government) ಮತ್ತು ನಗರ ಪೊಲೀಸ್ ವ್ಯವಸ್ಥೆ ನಿಷ್ಕ್ರಿಯ ಮತ್ತು ನಿರ್ಲಿಪ್ತವಾಗಿರುವುದನ್ನು ಸಾಬೀತು ಮಾಡುವ ಮತ್ತೊಂದು ಬರ್ಬರ ಕೊಲೆ ನಗರದಲ್ಲಿ ನಡೆದಿದೆ. ಅಂಜಲಿ ಅಂಬಿಗೇರ್ (Anjali Ambiger) ಹೆಸರಿನ ಯುವತಿ ತನ್ನ ಪ್ರೀತಿ ನಿರಾಕರಿಸಿದ್ದಕ್ಕೆ 21-ವರ್ಷ ವಯಸ್ಸಿನ ಗಿರೀಶ್ ಸಾವಂತ್ (Girish Sawant) (ವಿಶ್ವ) ಎಂಬ ಯುವಕ ನಗರದ ವೀರಾಪುರ ಓಣಿಯಲ್ಲಿರುವ ಅಂಜಲಿ ಮನೆ ನುಗ್ಗಿ ಮನ ಬಂದಂತೆ ತಿವಿದು ಆಕೆ ಸತ್ತಳೆಂದು ಖಾತ್ರಿಯಾದ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ನೇಹಾ ಹಿರೇಮಠ ಭೀಕರ ಹತ್ಯೆ ಜನರ ಸ್ಮೃತಿಪಟಲದಿಂದ ಮರೆಯಾಗುವ ಮೊದಲೇ ನಗರದಲ್ಲಿ ಕ್ರೌರ್ಯ ಮತ್ತೊಮ್ಮೆ ವಿಜೃಂಭಿಸಿದೆ ಮತ್ತು ಇನ್ನೊಬ್ಬ ಯುವತಿ ಬಲಿಯಾಗಿದ್ದಾಳೆ. ನೇಹಾಳ ತಂದೆ ನಿರಂಜನ್ ಹಿರೆಮಠರನ್ನು ಅಂಜಲಿ ಸಂಬಂಧಿಕರೊಂದಿಗೆ ಇಲ್ಲಿ ನೋಡಬಹುದು. ನೇಹಾ ಕೊಲೆ ನಡೆದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸರ್ಕಾರದ ಹಲವಾರು ಪ್ರತಿನಿಧಿಗಳು ನಿರಂಜನ್ ಮನೆಗೆ ಭೇಟಿ ಮಗಳ ಸಾವಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದರು. ಆ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಅಂತ ಗೃಹ ಸಚಿವರಿಗೂ ಗೊತ್ತಿರಲಿಕ್ಕಿಲ್ಲ. ತ್ವರಿತ ವಿಚಾರಣೆಗಾಗಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ರಚಿಸುವುದಾಗಿ ಸರ್ಕಾರ ಹೇಳಿತ್ತು. ಹತ್ಯೆ ನಡೆದು ಒಂದು ತಿಂಗಳಾಗುತ್ತಾ ಬಂದರೂ ಕೋರ್ಟ್ ರಚನೆ ಬಗ್ಗೆ ಸರ್ಕಾರದಿಂದ ಸುಳಿವಿಲ್ಲ. ನೇಹಾ ಕೊಲೆಗಡುಕನಿಗೆ ಇಷ್ಟರಲ್ಲಾಗಲೇ ಕಠಿಣಾತಿ ಕಠಿಣ ಶಿಕ್ಷೆ ಆಗಿದ್ದರೆ, ಅಥವಾ ಸರ್ಕಾರದಿಂದ ಅಂಥ ಸ್ಟೇಟ್ ಮೆಂಟ್ ಬಂದಿದ್ದರೆ ಅಂಜಲಿಯ ಕೊಲೆ ನಡೆಯುತ್ತಿರಲಿಲ್ಲವೆನೋ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನೇಹಾ ಹಿರೇಮಠ ತಂದೆಗೆ ಫೋನಲ್ಲಿ ವೆರಿ ಸಾರಿ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Published on: May 15, 2024 04:41 PM