ನೇಹಾ ಹಿರೇಮಠ ತಂದೆಗೆ ಫೋನಲ್ಲಿ ವೆರಿ ಸಾರಿ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ದ್ದರಾಮಯ್ಯ ಜೊತೆ ಮಾತಾಡಿದ ನಿರಂಜನ್, ನೇಹಾ ಕೊಲೆ ಪ್ರಕರಣನ್ನು ಸಿಐಡಿ ತನಿಖೆಗೆ ಒಪ್ಪಿಸಿದ್ದನ್ನು ಮತ್ತು ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸುವ ನಿರ್ಣಯವನ್ನು ಸ್ವಾಗತಿಸಿ ಅಭಿನಂದನೆ ಸಲ್ಲಿಸಿದರು. ಅವರು ತಮ್ಮೊಂದಿಗೆ ಮಾತಾಡಿದ್ದಕ್ಕೂ ನಿರಂಜನ ಧನ್ಯವಾದ ಸಲ್ಲಿಸಿದರು. ನಿರಂಜನ್ ಫೋನಿನ ಸ್ಪೀಕರ್ ಆನ್ ಮಾಡಿದ್ದು ನಿಜವಾದರೂ ಆ ಕಡೆಯಿಂದ ಮುಖ್ಯಮಂತ್ರಿಯವರು ಮಾತಾಡಿದ್ದು ಸರಿಯಾಗಿ ಕೇಳಿಸುವುದಿಲ್ಲ,
ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ನೇಹಾ ಹಿರೇಮಠ ತಂದೆ ನಿರಂಜನ ಹಿರೇಮಠ (Niranjan Hiremath) ಅವರೊಂದಿಗೆ ಫೋನಲ್ಲಿ ಮಾತಾಡಿ ವೆರಿ ಸಾರಿ ಎಂದು ಹೇಳುವ ಮೂಲಕ ದೊಡ್ಡತನ ಪ್ರದರ್ಶಿಸಿದರು. ಅಸಲಿಗೆ ಸರ್ಕಾರದ ಪರವಾಗಿ ಹಿರಿಯ ನಾಯಕ ಮತ್ತು ಸಚಿವ ಹೆಚ್ ಕೆ ಪಾಟೀಲ್ (HK Patil) ಇಂದು ನಿರಂಜನ ಮನೆಗೆ ಭೇಟಿ ನೀಡಿದರು. ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಮುಖ್ಯಮಂತ್ರಿ ಅವರಿಗೆ ಫೋನಾಯಿಸಿದ ಪಾಟೀಲ್; ತಮ್ಮಿಬ್ಬರ ನಡುವೆ ಮಾತುಕತೆಯ ಪ್ರಕಾರ ನೇಹಾ ಕೊಲೆ ಪ್ರಕರಣದಲ್ಲಿ ಸರ್ಕಾರ ತೆಗೆದುಕೊಂಡಿರುವ ಎಲ್ಲ ಕ್ರಮಗಳನ್ನು ನಿರಂಜನ್ ಅವರಿಗೆ ತಿಳಿಸಿದ್ದಾಗಿ ಹೇಳಿ ನಿಮ್ಮೊಂದಿಗೆ ನಿರಂಜನ್ ಮಾತಾಡುತ್ತಾರೆ ಅಂತ ತಮ್ಮ ಫೋನನ್ನು ನಿರಂಜನ ಅವರಿಗೆ ನೀಡಿದರು. ಸಿದ್ದರಾಮಯ್ಯ ಜೊತೆ ಮಾತಾಡಿದ ನಿರಂಜನ್, ನೇಹಾ ಕೊಲೆ ಪ್ರಕರಣನ್ನು ಸಿಐಡಿ ತನಿಖೆಗೆ ಒಪ್ಪಿಸಿದ್ದನ್ನು ಮತ್ತು ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸುವ ನಿರ್ಣಯವನ್ನು ಸ್ವಾಗತಿಸಿ ಅಭಿನಂದನೆ ಸಲ್ಲಿಸಿದರು. ಅವರು ತಮ್ಮೊಂದಿಗೆ ಮಾತಾಡಿದ್ದಕ್ಕೂ ನಿರಂಜನ ಧನ್ಯವಾದ ಸಲ್ಲಿಸಿದರು. ನಿರಂಜನ್ ಫೋನಿನ ಸ್ಪೀಕರ್ ಆನ್ ಮಾಡಿದ್ದು ನಿಜವಾದರೂ ಆ ಕಡೆಯಿಂದ ಮುಖ್ಯಮಂತ್ರಿಯವರು ಮಾತಾಡಿದ್ದು ಸರಿಯಾಗಿ ಕೇಳಿಸುವುದಿಲ್ಲ, ಅದರೆ ಅವರು ಕೊನೆಯಲ್ಲಿ, ‘ನಿರಂಜನ್ ವೆರಿ ಸಾರಿ’ ಅಂತ ಗಟ್ಟಿಧ್ವನಿಯಲ್ಲಿ ಹೇಳಿದ್ದು ಸ್ಪಷ್ಟವಾಗಿ ಕೇಳುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ನೇಹಾ ಹಿರೇಮಠ ಹತ್ಯೆ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿದ್ದನ್ನು ಸ್ವಾಗತಿಸಿದ ನಿರಂಜನ ಹಿರೇಮಠ