AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Post: ಲವರ್​ ಜೊತೆ ಬ್ರೇಕಪ್​​ ಮಾಡಿಕೊಂಡ ಯುವತಿ; 1 ವರ್ಷದಲ್ಲಿ ಖರ್ಚಾದ ಹಣದ ಬಿಲ್​​ ಕಳುಹಿಸಿದ ಬಾಯ್ ಫ್ರೆಂಡ್

ಎಕ್ಸೆಲ್ ಶೀಟ್ ಸಿದ್ಧಪಡಿಸಿ ಅದರಲ್ಲಿ ಪ್ರತೀ ತಿಂಗಳು ಆದ ಖರ್ಚು ಅಂದರೆ ಕಾಫಿಯಿಂದ , ಡಿನ್ನರ್​ ಡೇಟ್​​, ನೈಟ್​​​ ಪಾರ್ಟಿ, ವ್ಯಾಲೆಂಟೈನ್‌ ಡೇ ಗಿಫ್ಟ್​​ ವರೆಗೆ ಖರ್ಚಾದ ದುಡ್ಡನ್ನು ಮರು ಪಾವತಿಸುವಂತೆ ಆಕೆಗೆ ಹೇಳಿದ್ದಾನೆ.

Viral Post: ಲವರ್​ ಜೊತೆ ಬ್ರೇಕಪ್​​ ಮಾಡಿಕೊಂಡ ಯುವತಿ; 1 ವರ್ಷದಲ್ಲಿ ಖರ್ಚಾದ ಹಣದ ಬಿಲ್​​ ಕಳುಹಿಸಿದ ಬಾಯ್ ಫ್ರೆಂಡ್
1 ವರ್ಷದಲ್ಲಿ ಖರ್ಚಾದ ಹಣದ ಬಿಲ್​​ ಕಳುಹಿಸಿದ ಬಾಯ್ ಫ್ರೆಂಡ್
ಅಕ್ಷತಾ ವರ್ಕಾಡಿ
|

Updated on: May 29, 2024 | 5:43 PM

Share

ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ ಬ್ರೇಕಪ್ ಸ್ಟೋರಿ ವೈರಲ್ ಆಗುತ್ತಿದ್ದು, ಬ್ರೇಕಪ್ ನಂತರ ಸಿಎ ಬಾಯ್ ಫ್ರೆಂಡ್ ತನ್ನ ಮಾಜಿ ಗೆಳತಿಗೆ ಖರ್ಚಿನ ಸಂಪೂರ್ಣ ಪಟ್ಟಿಯನ್ನು ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ . ಒಟ್ಟು 7 ತಿಂಗಳ ಸಂಬಂಧದಲ್ಲಿ ಆತ ಆಕೆಗಾಗಿ ಖರ್ಚು ಮಾಡಿದ ಪ್ರತಿಯೊಂದು ದುಡ್ಡನ್ನು ಕೂಡ ಲೆಕ್ಕ ಹಾಕಿ ಆಕೆಗೆ ಸಂಪೂರ್ಣ ಬಿಲ್​​​ ಕಳುಹಿಸಿದ್ದಾನೆ. ಎಕ್ಸೆಲ್ ಶೀಟ್ ಸಿದ್ಧಪಡಿಸಿ ಅದರಲ್ಲಿ ಪ್ರತೀ ತಿಂಗಳು ಆದ ಖರ್ಚು ಅಂದರೆ ಕಾಫಿಯಿಂದ , ಡಿನ್ನರ್​ ಡೇಟ್​​, ನೈಟ್​​​ ಪಾರ್ಟಿ, ವ್ಯಾಲೆಂಟೈನ್‌ ಡೇ ಗಿಫ್ಟ್​​ ವರೆಗೆ ಖರ್ಚಾದ ದುಡ್ಡನ್ನು ಮರು ಪಾವತಿಸುವಂತೆ ಹೇಳಿದ್ದಾನೆ.

ಇದೀಗ ಒಟ್ಟು ಖರ್ಚಾದ ಹಣದ ಬಿಲ್​​​ನ ಎಕ್ಸೆಲ್ ಶೀಟ್ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​​​ ಆಗುತ್ತಿದೆ. @trolls_official ಎಂಬ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ಹರಿದಾಡುತ್ತಿದೆ. ಈ ಪೋಸ್ಟ್​​ ಹಂಚಿಕೊಂಡ ಒಂದೇ ದಿನದಲ್ಲಿ ಒಂದು ಲಕ್ಷಕ್ಕೂ ಹೆಚ್ಚುಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

1 ವರ್ಷದಲ್ಲಿ ಖರ್ಚಾದ ಹಣದ ಬಿಲ್​​ನ ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

ಇದನ್ನೂ ಓದಿ: ಗುಪ್ತಾಂಗವನ್ನು ಕಚ್ಚಿ ಹಿಡಿದ ಹಾವು; ಹಾವಿನಿಂದ ಬಿಡಿಸಿಕೊಳ್ಳಲು ಪರದಾಡಿದ ವ್ಯಕ್ತಿ

ವ್ಯಕ್ತಿ ಪೋಸ್ಟ್​ನಲ್ಲಿ ಹೇಳಿದ ಪ್ರಕಾರ ಏಳು ತಿಂಗಳಿನಿಂದ ಯುವತಿಯೊಂದಿಗೆ ಸಂಬಂಧ ಹೊಂದಿದ್ದು, ಅದರಲ್ಲಿ ಒಟ್ಟು ಸುಮಾರು 1 ಲಕ್ಷದ 2 ಸಾವಿರ ರೂ. ಖರ್ಚಾಗಿದೆ. ಅದರಲ್ಲಿ ಅರ್ಧದಷ್ಟು ಕಡಿಮೆ ಮಾಡಿ, ಜೊತೆಗೆ ವೆಚ್ಚಕ್ಕೆ 18 ಪರ್ಸೆಂಟ್ ಜಿಎಸ್ಟಿ ಕೂಡ ಸೇರಿಸಿ ಬಿಲ್​​ನ ಎಕ್ಸೆಲ್ ಶೀಟ್ ಸಿದ್ಧಪಡಿಸಿ ಯುವತಿಗೆ ಕಳುಹಿಸಿದ್ದಾನೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ