ಈ ಸೆಲೆಬ್ರಿಟಿಗಳ ಸಾವಿಗೆ ಕೋವಿಶೀಲ್ಡ್ ಅಡ್ಡಪರಿಣಾಮ ಕಾರಣ? ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ ಚರ್ಚೆ
ಕೋವಿಶೀಲ್ಡ್ ಲಸಿಕೆ ಪಡೆದವರ ಮೇಲ ಅಡ್ಡಪರಿಣಾಮ ಉಂಟಾಗಲಿದೆ ಎಂದು ಕೊರೊನಾ ಔಷಧಗಳ ತಯಾರಿಕಾ ಸಂಸ್ಥೆ ಆಸ್ಟ್ರಾಜೆನೆಕಾ ಇತ್ತೀಚೆಗೆ ಒಪ್ಪಿಕೊಂಡಿದೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ. 2021ರ ಈಚೆಗೆ ಅನೇಕ ಸೆಲೆಬ್ರಿಟಿಗಳು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆ ಬಗ್ಗೆ ಚರ್ಚೆ ಜೋರಾಗಿದೆ.
ಕೋವಿಶೀಲ್ಡ್ನಿಂದ ಅಡ್ಡಪರಿಣಾಮ ಉಂಟಾಗಲಿದೆ ಎಂದು ಇದನ್ನು ತಯಾರಿಸಿರುವ ಸಂಸ್ಥೆ ಆಸ್ಟ್ರಾಜೆನೆಕಾ ಕೋರ್ಟ್ ಎದುರು ಒಪ್ಪಿಕೊಂಡಿದೆ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಲಸಿಕೆಯಿಂದ ರಕ್ತನಾಳಗಳಲ್ಲಿ ಬ್ಲಡ್ಕ್ಲಾಟ್ ಉಂಟಾಗುವ ಸಾಧ್ಯತೆ ಇರುತ್ತದೆ. ಇದರಿಂದ ಹೃದಯಾಘಾತ ಹೆಚ್ಚುವ ಸಾಧ್ಯತೆಗಳು ಇವೆ ಎನ್ನುವ ಎಚ್ಚರಿಕೆ ನೀಡಲಾಗಿದೆ. 2021ರ ಈಚೆಗೆ ಅನೇಕ ಸೆಲೆಬ್ರಿಟಿಗಳು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈಗ ಆಸ್ಟ್ರಾಜೆನೆಕಾ ತನ್ನ ತಪ್ಪನ್ನು ಒಪ್ಪಿಕೊಂಡ ಬೆನ್ನಲ್ಲೇ ಕೊವಿಡ್ ಲಸಿಕೆ (Covid Vaccine) ಹಾಗೂ ಹೃದಯಘಾತಕ್ಕೆ ಸಂಬಂಧವಿದೆ ಎಂದು ಕೆಲವರು ಹೋಲಿಕೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಇದನ್ನು ಕಾಕತಾಳೀಯ ಎನ್ನುತ್ತಿದ್ದಾರೆ.
ಪುನೀತ್ ರಾಜ್ಕುಮಾರ್
ಪುನೀತ್ ರಾಜ್ಕುಮಾರ್ ಅವರು 2021ರ ಏಪ್ರಿಲ್ 7ರಂದು ಕೊವಿಡ್ ಲಸಿಕೆ ಪಡೆದಿದ್ದರು. ಇದಾದ ಕೆಲವೇ ತಿಂಗಳಲ್ಲಿ ಅವರು ಹೃದಯಾಘಾತದಿಂದ ಮೃತಪಟ್ಟರು. ‘ಕೋವಿಶೀಲ್ಡ್ ತೆಗೆದುಕೊಳ್ಳಬೇಡಿ. 45 ವರ್ಷ ಮೇಲ್ಪಟ್ಟವರಿಗೆ ಒಳ್ಳೆಯದಲ್ಲ’ ಎಂದು ಅಭಿಮಾನಿಯೋರ್ವ ಕಮೆಂಟ್ ಮಾಡಿದ್ದ. ಈ ಕಮೆಂಟ್ ಈಗ ವೈರಲ್ ಆಗುತ್ತಿದೆ.
ಸಿದ್ದಾರ್ಥ್ ಶುಕ್ಲಾ
‘ಬಿಗ್ ಬಾಸ್ ಹಿಂದಿ ಸೀಸನ್ 13’ ವಿನ್ನರ್ ಸಿದ್ದಾರ್ಥ್ ಶುಕ್ಲಾ 2021ರ ಸೆಪ್ಟೆಂಬರ್ 2ರಂದು ನಿಧನ ಹೊಂದಿದರು. ಪುನೀತ್ ನಿಧನದ ಕೆಲವೇ ವಾರಗಳ ಮೊದಲು ಇವರು ಮೃತಪಟ್ಟಿದ್ದರು. ಅವರಿಗೆ ಹೃದಯಾಘಾತ ಆಗಿತ್ತು. ಅವರು ಪಡೆದ ಕೊವಿಡ್ ಲಸಿಕೆ ಸಾವಿಗೆ ಕಾರಣ ಎಂದು ಅಂದು ಕೆಲವರು ಆರೋಪಿಸಿದ್ದರು.
ಗಾಯಕ ಕೆಕೆ
ಖ್ಯಾತ ಬಾಲಿವುಡ್ ಗಾಯಕ ಕೆಕೆ ಅವರು ಹೃದಯಾಘಾತದಿಂದ ಮೃತಪಟ್ಟರು. ಕೋಲ್ಕತ್ತಾದಲ್ಲಿ ಹಾಡುತ್ತಿರುವಾಗಲೇ ಅವರಿಗೆ ಸುಸ್ತು ಕಾಣಿಸಿಕೊಂಡಿತ್ತು. ಆ ಬಳಿಕ ಅವರನ್ನು ಅಲ್ಲಿಂದ ಕರೆದುಕೊಂಡು ಹೋಗಲಾಯಿತು. ‘ವ್ಯಾಕ್ಸಿನ್ನ ಅಡ್ಡಪರಿಣಾಮ’ ಎಂದು ಅಂದು ಚರ್ಚೆಗಳು ನಡೆದಿದ್ದವು.
ರಾಜು ಶ್ರೀವಾಸ್ತವ
ಕಾಮಿಡಿಯನ್ ಹಾಗೂ ರಾಜಕಾರಣಿ ರಾಜು ಶ್ರೀವಾಸ್ತವ ಅವರು 2023ರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಈಗ ಕೋವಿಶೀಲ್ಡ್ ತಪ್ಪೊಪ್ಪಿಕೊಂಡ ಬಳಿಕ ಅನೇಕರು ಅವರ ಸಾವನ್ನು ಕೊರೊನಾ ಲಸಿಕೆ ಜೊತೆ ಲಿಂಕ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕೋವಿಶೀಲ್ಡ್ ತೆಗೆದುಕೊಳ್ಳಬೇಡಿ ಎಂದು ಅಪ್ಪುಗೆ ಮನವಿ ಮಾಡಿದ್ದ ಅಭಿಮಾನಿ; ಹಳೆಯ ಪೋಸ್ಟ್ ವೈರಲ್
ಸಂಸ್ಥೆ ಹೇಳಿದ್ದು ಏನು?
ಲಸಿಕೆಯಿಂದ ಅಪರೂಪದ ಪ್ರಕರಣಗಳಲ್ಲಿ ಅಡ್ಡಪರಿಣಾಮ ಉಂಟಾಗಬಹುದು ಎಂದು ಸಂಸ್ಥೆ ಹೇಳಿದೆ. ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ ಕಾಣಿಸಿಕೊಳ್ಳುತ್ತದೆ ಎಂದು ಸಂಸ್ಥೆ ಹೇಳಿದೆ. ಈ ಸಿಂಡ್ರೋಮ್ ಕಾಣಿಸಿಕೊಂಡರೆ ದೇಹದಲ್ಲಿ ರಕ್ತದ ಹೆಪ್ಪುಗಟ್ಟುವಿಕೆಯನ್ನು ಉಂಟು ಮಾಡುತ್ತದೆ. ರಕ್ತದ ಹೆಪ್ಪುಗಟ್ಟುವಿಕೆಯಿಂದಾಗಿ ಪಾರ್ಶ್ವವಾಯು, ಹೃದಯಸ್ತಂಭನ ಸಾಧ್ಯತೆ ಹೆಚ್ಚಿರುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.