AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮೆಜೆಸ್ಟಿಕ್ 2’ ಸಿನಿಮಾದ ಬಿಡುಗಡೆಯ ಖುಷಿಯಲ್ಲಿ ನಟಿ ಸಂಹಿತಾ ವಿನ್ಯಾ

ಭರತ್ ಕುಮಾರ್, ಸಂಹಿತಾ ವಿನ್ಯಾ ನಟಿಸಿದ ‘ಮೆಜೆಸ್ಟಿಕ್ 2’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ಮಾಲಾಶ್ರೀ, ಶ್ರುತಿ, ಕೋಟೆ ಪ್ರಭಾಕರ್, ಪೆಟ್ರೋಲ್ ಪ್ರಸನ್ನ ಮುಂತಾದವರು ನಟಿಸಿದ್ದಾರೆ. ತಾವು ನಟಿಸಿದ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ತೆರೆಕಾಣುತ್ತಿರುವುದಕ್ಕೆ ಸಂಹಿತಾ ವಿನ್ಯಾ ಖುಷಿಯಾಗಿದ್ದಾರೆ.

‘ಮೆಜೆಸ್ಟಿಕ್ 2’ ಸಿನಿಮಾದ ಬಿಡುಗಡೆಯ ಖುಷಿಯಲ್ಲಿ ನಟಿ ಸಂಹಿತಾ ವಿನ್ಯಾ
Samhita Vinya
ಮದನ್​ ಕುಮಾರ್​
|

Updated on: Mar 03, 2026 | 7:10 PM

Share

ಶೀರ್ಷಿಕೆ ಕಾರಣದಿಂದಲೇ ‘ಮೆಜೆಸ್ಟಿಕ್ 2’ (Majestic 2) ಸಿನಿಮಾ ಗಮನ ಸೆಳೆದಿದೆ. ದರ್ಶನ್ ಅವರು ನಟಿಸಿದ ‘ಮೆಜೆಸ್ಟಿಕ್’ ಸಿನಿಮಾ 2002ರಲ್ಲಿ ಬಿಡುಗಡೆ ಆಗಿತ್ತು. ಈಗ ‘ಮೆಜೆಸ್ಟಿಕ್ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ನಟ ಭರತ್ ಕುಮಾರ್ ಅವರಿಗೆ ಜೋಡಿಯಾಗಿ ನಟಿ ಸಂಹಿತಾ ವಿನ್ಯಾ ಅಭಿನಯಿಸಿದ್ದಾರೆ. ರಾಮು ಎಸ್. ಅವರು ನಿರ್ದೇಶನ ಮಾಡಿದ ಈ ಸಿನಿಮಾದಲ್ಲಿ ತಮ್ಮ ಪಾತ್ರ ವಿಶೇಷವಾಗಿದೆ ಎಂದು ಸಂಹಿತಾ ವಿನ್ಯಾ (Samhita Vinya) ಅವರು ಖುಷಿಯಾಗಿದ್ದಾರೆ. ಬಿಡುಗಡೆ ಹೊಸ್ತಿಲಲ್ಲಿ ಅವರ ಎಗ್ಸೈಟ್​ಮೆಂಟ್ ಹೆಚ್ಚಿದೆ.

2026ರ ವರ್ಷವನ್ನು ತಮ್ಮ ಪಾಲಿನ ಲಕ್ಕಿ ಇಯರ್ ಎನ್ನುತ್ತಿದ್ದಾರೆ ನಟಿ ಸಂಹಿತಾ ವಿನ್ಯಾ. ‘ಮೆಜೆಸ್ಟಿಕ್ 2’ ಸಿನಿಮಾದಲ್ಲಿ ಅವರ ಪಾತ್ರ ಹೇಗಿರಲಿದೆ ಎಂಬುದು ಟ್ರೇಲರ್ ಮೂಲಕ ಗೊತ್ತಾಗಿದೆ. ಎರಡು ತಿಂಗಳ‌ ಹಿಂದಷ್ಟೇ ಸಂಹಿತಾ ಅಭಿನಯದ ‘ಜಿ.ಎಸ್.ಟಿ’ ಸಿನಿಮಾ ರಿಲೀಸ್ ಆಗಿತ್ತು. ಅಲ್ಲದೇ, ಕಳೆದ ತಿಂಗಳು ‘ಮಿಕ್ಸಿಂಗ್ ಪ್ರೀತಿ’ ಸಿನಿಮಾ ತೆರೆಕಂಡಿತ್ತು.

ಹೀಗೆ ಒಂದರ ಮೇಲೊಂದರಂತೆ ಸಿನಿಮಾಗಳು ಬಿಡುಗಡೆ ಆಗುತ್ತಿರುವುದು ಸಂಹಿತಾ ವಿನ್ಯಾ ಅವರಿಗೆ ಖುಷಿ ನೀಡಿದೆ. ‘ಮೆಜೆಸ್ಟಿಕ್ 2’ ಸಿನಿಮಾಗೆ ಜನರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ತಿಳಿಯಲು ಅವರು ಕಾದಿದ್ದಾರೆ. ಈಗಾಗಲೇ ಕನ್ನಡ, ತೆಲುಗು, ತಮಿಳು ಸೇರಿದಂತೆ 18ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲೂ ಅವರು ಸಕ್ರಿಯರಾಗಿದ್ದಾರೆ.

‘ಮೆಜೆಸ್ಟಿಕ್ 2’ ಸಿನಿಮಾದ ಟ್ರೇಲರ್:

‘ಮೆಜೆಸ್ಟಿಕ್ 2’ ಸಿನಿಮಾದಲ್ಲಿ ತಮ್ಮ ಪಾತ್ರ ಹೇಗಿರಲಿದೆ ಎಂಬುದನ್ನು ಸಂಹಿತಾ ವಿನ್ಯಾ ಅವರು ವಿವರಿಸಿದ್ದಾರೆ. ಕೆಲಸ ಹುಡುಕಿಕೊಂಡು ಹಳ್ಳಿಯಿಂದ ಮಹಾನಗರಕ್ಕೆ ಬರುವ ಬಡ ಯುವತಿಯ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಮಾಲಾಶ್ರೀ, ಶ್ರುತಿ ಮುಂತಾದ ಅನುಭವಿ ಕಲಾವಿದರ ನಟಿಸಿದ್ದಾರೆ. ಅವರ ಜೊತೆ ಅಭಿನಯಿಸಿದ್ದಕ್ಕೆ ಸಂಹಿತಾ ವಿನ್ಯಾ ಖುಷಿಯಾಗಿದ್ದಾರೆ.

ಇದನ್ನೂ ಓದಿ: ಭಯಾನಕ ಪೋಸ್ಟರ್​ನಿಂದ ಗಮನ ಸೆಳೆದ ‘ಯೂ ಆರ್​ ಮೈ ಹೀರೋ’; ಕನ್ನಡತಿ ಸಂಹಿತಾ ವಿನ್ಯಾ ನಾಯಕಿ

‘ಮೊದಲ ಬಾರಿಗೆ ಮೆಜೆಸ್ಟಿಕ್​ಗೆ ಬಂದಿಳಿಯುವ ಬಡ ಹುಡುಗಿಗೆ, ರೌಡಿಸಂ ಮಾಡಿಕೊಂಡಿದ್ದ ನಾಯಕ ಮರಿದಾಸನ ಪರಿಚಯ ಆಗುತ್ತದೆ. ಆತನ ಜತೆ ಲವ್ ಕೂಡ ಆಗಿ ನಂತರ ಏನೇನೆಲ್ಲ ನಡೆದು ಹೋಗುತ್ತದೆ ಎನ್ನುವುದೇ ‘ಮೆಜೆಸ್ಟಿಕ್ 2’ ಚಿತ್ರದ ಕಥೆಯ ಒಂದೆಳೆ. ಮಾಲಾಶ್ರೀ, ಶೃತಿಯಂಥ ಹಿರಿಯ ನಟಿಯರ ಜೊತೆ ಅಭಿನಯಿಸಿದ್ದು ನನ್ನ ಜೀವನದ ಮರೆಯಲಾಗದ ಅನುಭವ’ ಎಂದು ಸಂಹಿತಾ ವಿನ್ಯಾ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More