AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಯಾನಕ ಪೋಸ್ಟರ್​ನಿಂದ ಗಮನ ಸೆಳೆದ ‘ಯೂ ಆರ್​ ಮೈ ಹೀರೋ’; ಕನ್ನಡತಿ ಸಂಹಿತಾ ವಿನ್ಯಾ ನಾಯಕಿ

ಈ ಸಿನಿಮಾದ ಕಥೆಯ ಎಳೆ ಏನು ಎಂಬುದನ್ನು ಸಂಹಿತಾ ತಿಳಿಸಿದ್ದಾರೆ. ಹಾರರ್‌ ಜೊತೆಗೆ ಸಸ್ಪೆನ್ಸ್‌ ಅಂಶಗಳು ಕೂಡ ಇವೆ ಎಂದು ಅವರು ಹೇಳಿದ್ದಾರೆ.

ಭಯಾನಕ ಪೋಸ್ಟರ್​ನಿಂದ ಗಮನ ಸೆಳೆದ ‘ಯೂ ಆರ್​ ಮೈ ಹೀರೋ’; ಕನ್ನಡತಿ ಸಂಹಿತಾ ವಿನ್ಯಾ ನಾಯಕಿ
ಸಂಹಿತಾ ವಿನ್ಯಾ
TV9 Web
| Updated By: ಮದನ್​ ಕುಮಾರ್​|

Updated on: Jun 11, 2022 | 7:30 AM

Share

ಈಗ ಪ್ಯಾನ್​ ಇಂಡಿಯಾ ಸಿನಿಮಾಗಳದ್ದೇ ಜಮಾನಾ. ಎಲ್ಲ ಭಾಷೆಯಲ್ಲೂ ಈ ರೀತಿಯ ಚಿತ್ರಗಳನ್ನು ನಿರ್ಮಾಣ ಮಾಡಲು ನಿರ್ಮಾಪಕರು ಮುಂದೆ ಬರುತ್ತಿದ್ದಾರೆ. ಪ್ಯಾನ್​ ಇಂಡಿಯಾ (Pan India Movie) ಸಿನಿಮಾದಲ್ಲಿ ನಟಿಸೋದು ಅಂದರೆ ಕಲಾವಿದರಿಗೂ ಹೆಮ್ಮೆ. ಕನ್ನಡದ ನಟಿ ಸಂಹಿತಾ ವಿನ್ಯಾ (Samhita Vinya) ಅವರೀಗ ‘ಯೂ ಆರ್​ ಮೈ ಹೀರೋ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು, ಅದು ಕೂಡ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗಲು ಸಜ್ಜಾಗಿದೆ. ಈ ಸಿನಿಮಾ ಜೂನ್​ 17ರಂದು ಬಿಡುಗಡೆ ಆಗುತ್ತಿದೆ. ತೆಲುಗು ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಸಿದ್ಧವಾದ ‘ಯೂ ಆರ್​ ಮೈ ಹೀರೋ’ (You Are My Hero) ಚಿತ್ರ ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗೆ ಡಬ್​ ಆಗಿದೆ. ಮೊದಲು ತೆಲುಗು ವರ್ಷನ್​ ರಿಲೀಸ್​ ಆಗಲಿದೆ. ಈ ಸಿನಿಮಾದಲ್ಲಿ ಹಾರರ್​ ಕಥಾಹಂದರ ಇರಲಿದ್ದು, ಭಯಾನಕ ಪೋಸ್ಟರ್​ ಗಮನ ಸೆಳೆಯುತ್ತಿದೆ.

ಮೂಲತಃ ಮಾಡೆಲ್​ ಆಗಿದ್ದ ಸಂಹಿತಾ ವಿನ್ಯಾ ಅವರು ನಂತರ ನಟನೆಗೆ ಬಂದರು. ಈವರೆಗೂ ಹಲವು ಸಿನಿಮಾಗಳಲ್ಲಿ ನಟಿಸಿದ ಅನುಭವ ಅವರಿಗೆ ಇದೆ. ಆ ಪೈಕಿ ‘ಯೂ ಆರ್​ ಮೈ ಹೀರೋ’ ಚಿತ್ರದ ಮೇಲೆ ಅವರು ವಿಶೇಷ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಈ ಹಿಂದಿನ ನನ್ನ ಬೇರೆಲ್ಲಾ ಸಿನಿಮಾಗಳಿಗಿಂತ ಈ ಚಿತ್ರ ತುಂಬ ಭಿನ್ನವಾಗಿದೆ.‌ ಏಕೆಂದರೆ, ಮೊದಲ ಬಾರಿಗೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ನನ್ನ ಸಿನಿಮಾ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಆಗುತ್ತಿದೆ. ಮೊದಲ ಸಲ ತೆಲುಗು ಟೀಮ್‌ ಜೊತೆಗೆ ಕೆಲಸ ಮಾಡಿದ್ದೇನೆ. ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿದರೂ, ಟಾಲಿವುಡ್​ ವಾತಾರಣವೇ ಬೇರೆ ಇತ್ತು. ಈ ಸಿನಿಮಾದ ಭಾಗಶಃ ಚಿತ್ರೀಕರಣ ಹೈದರಾಬಾದ್‌ನಲ್ಲಿಯೇ ಮಾಡಿದ್ದೇವೆ’ ಎಂದಿದ್ದಾರೆ ಸಂಹಿತಾ ವಿನ್ಯಾ.

ಈ ಸಿನಿಮಾದ ಕಥೆಯ ಎಳೆ ಏನು ಎಂಬುದನ್ನು ಕೂಡ ಸಂಹಿತಾ ತಿಳಿಸಿದ್ದಾರೆ. ‘ಯಾವುದೋ ಒಂದು ಕಾರಣಕ್ಕೆ ಮನೆಯೊಂದರಲ್ಲಿ ಸೇರಿಕೊಳ್ಳುತ್ತೇನೆ. ಅಲ್ಲಿ ದೆವ್ವದ ಕಾಟ ಶುರುವಾಗುತ್ತದೆ. ನನಗೆ ಅದರ ಮೇಲೆ ನಂಬಿಕೆ ಇಲ್ಲದಿದ್ದರೂ, ಒಂದಷ್ಟು ಅನುಭವ ಆಗುತ್ತದೆ. ಅದರ ಕಾಟ ಹೇಗಿರುತ್ತದೆ? ಕೊನೆಗೆ ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದನ್ನು ಸಿನಿಮಾ ನೋಡಿ ತಿಳಿಯಬೇಕು. ಹಾರರ್‌ ಜೊತೆಗೆ ಸಸ್ಪೆನ್ಸ್‌ ಅಂಶಗಳು ಕೂಡ ಇವೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ
Image
ಅಬ್ದುಲ್​ ಕಲಾಂ ಕಾರು ಚಾಲಕನಾಗಿದ್ದ ನಂದನ​ ಪ್ರಭು ನಿರ್ದೇಶನದಲ್ಲಿ ‘ಓರಿಯೋ’ ಸಿನಿಮಾ: ಏನಿದರ ಕಥೆ?
Image
ಚಿತ್ರಮಂದಿರದಲ್ಲಿ ಹಾರರ್ ಅವತಾರದಲ್ಲಿ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಲಿದ್ದಾರೆ ನಟಿ ಶಾನ್ವಿ ಶ್ರೀವಾಸ್ತವ
Image
‘ಗಟ್ಟಿಮೇಳ’ ಧಾರಾವಾಹಿಯ ಕಿಶನ್​ ಈಗ ಸಿನಿಮಾ ಹೀರೋ; ‘ನಾನೇ ನರರಾಕ್ಷಸ’ ಎಂದ ನಟ ರಾಜ್​ ಮನೀಶ್​
Image
‘ಏಷ್ಯಾ ಸ್ಟಾರ್​ ಗಾಲಾ’ದಲ್ಲಿ ಕನ್ನಡದ ನಟಿ ಸಂಹಿತಾ ವಿನ್ಯಾ, ಫಾರೆವರ್​ ನವೀನ್​ ಕುಮಾರ್​ ಭಾಗಿ

ಸಂಹಿತಾ ವಿನ್ಯಾ ಜೊತೆ ಫಿರೋಜ್‌ ಖಾನ್‌, ಸನಾ ಖಾನ್, ಐಶ್ವರ್ಯಾ, ಮಿಲಿಂದ್‌ ಗುನಾಜಿ, ಮೇಕಾ ರಾಮಕೃಷ್ಣ, ಆನಂದ್‌ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಶೇರ್‌ ನಿರ್ದೇಶನ ಮಾಡಿದ್ದು, ಸಂಗೀತ, ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.