AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರಮಂದಿರದಲ್ಲಿ ಹಾರರ್ ಅವತಾರದಲ್ಲಿ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಲಿದ್ದಾರೆ ನಟಿ ಶಾನ್ವಿ ಶ್ರೀವಾಸ್ತವ

Shanvi Srivastava | Kasturi Mahal Movie: ಟ್ರೇಲರ್, ಹಾಡುಗಳು ಮೂಲಕ ಗಮನ ಸೆಳೆದಿರುವ ‘ಕಸ್ತೂರಿ ಮಹಲ್’ ಚಿತ್ರ ಮೇ 13ರಂದು ರಿಲೀಸ್​ ಆಗಲಿದೆ. ಈ ಸಿನಿಮಾಗೆ ಶಾನ್ವಿ ಶ್ರೀವಾಸ್ತವ ನಾಯಕಿ.

ಚಿತ್ರಮಂದಿರದಲ್ಲಿ ಹಾರರ್ ಅವತಾರದಲ್ಲಿ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಲಿದ್ದಾರೆ ನಟಿ ಶಾನ್ವಿ ಶ್ರೀವಾಸ್ತವ
ಶಾನ್ವಿ ಶ್ರೀವಾಸ್ತವ
TV9 Web
| Updated By: ಮದನ್​ ಕುಮಾರ್​|

Updated on:May 12, 2022 | 11:36 AM

Share

ಸ್ಯಾಂಡಲ್​ವುಡ್​ನಲ್ಲಿ ಈ ವಾರ (ಮೇ 13) ತೆರೆ ಕಾಣುತ್ತಿರುವ ಚಿತ್ರಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಿನಿಮಾ ‘ಕಸ್ತೂರಿ ಮಹಲ್’. ಖ್ಯಾತ ನಿರ್ದೇಶಕ ದಿನೇಶ್ ಬಾಬು (Dinesh Babu) ನಿರ್ದೇಶನದ 50ನೇ ಸಿನಿಮಾ ಇದಾಗಿದೆ. ಆ ಕಾರಣದಿಂದಲೂ ‘ಕಸ್ತೂರಿ ಮಹಲ್’ ವಿಶೇಷ ಎನಿಸಿಕೊಂಡಿದೆ. ಬಹುಭಾಷಾ ನಟಿ, ಕ್ಯೂಟ್ ಬೆಡಗಿ ಶಾನ್ವಿ ಶ್ರೀವಾಸ್ತವ (Shanvi Srivastava) ಈ ಚಿತ್ರದ ನಾಯಕಿ. ಬರೋಬ್ಬರಿ ಎರಡೂವರೆ ವರ್ಷದ ನಂತರ ಶಾನ್ವಿ ಶ್ರೀವಾಸ್ತವ ಅಭಿನಯದ ಸಿನಿಮಾ ತೆರೆ ಕಾಣುತ್ತಿದ್ದು ಪ್ರೇಕ್ಷಕರಷ್ಟೇ ಅವರು ಕೂಡ ಸಖತ್ ಎಕ್ಸೈಟ್ ಆಗಿದ್ದಾರೆ. ತಮ್ಮ ಮುದ್ದಾದ ಅಭಿನಯದ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದ ನಟಿ ಶಾನ್ವಿ ಶ್ರೀವಾಸ್ತವ. ಆದರೆ ಈಗ ನಾಯಕನ ಜೊತೆ ಕೈ ಕೈ ಹಿಡಿದು ನಡೆದು, ಡ್ಯುಯೆಟ್ ಹಾಡುವ ಬದಲು ಅವರು ಹೊಸ ಅವತಾರ ತಾಳಿರುವ ಚಿತ್ರ ‘ಕಸ್ತೂರಿ ಮಹಲ್’ (Kasturi Mahal Movie). ಹಾರರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ ಹೊಸ ಗೆಟಪ್ ಮೂಲಕ ಪ್ರೇಕ್ಷಕರನ್ನು ಎದುರುಗೊಳ್ಳಲಿದ್ದಾರೆ. ಅದು ಹೇಗೆ ಅನ್ನೋರಿಗೆ ಟ್ರೇಲರ್ ತುಣುಕು ಒಂದಿಷ್ಟು ಹಿಂಟ್ ನೀಡಿದೆ.

ತಮ್ಮ ಪಾತ್ರದ ಬಗ್ಗೆ ಸಂತಸ ವ್ಯಕ್ತ ಪಡಿಸಿರುವ ಶಾನ್ವಿ ಶ್ರೀವಾಸ್ತವ ಅವರು ‘ದಿನೇಶ್ ಬಾಬು ನಿರ್ದೇಶನದಲ್ಲಿ ಕೆಲಸ ಮಾಡಿರೋದಕ್ಕೆ ಹೆಮ್ಮೆ ಇದೆ’ ಎಂದಿದ್ದಾರೆ. ಪ್ರೇಕ್ಷಕರು ತಮ್ಮ ಪಾತ್ರವನ್ನು ಯಾವ ರೀತಿ ಸ್ವೀಕರಿಸುತ್ತಾರೆ, ಏನು ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕೇಳಲು ಎದುರು ನೋಡುತ್ತಿದ್ದೇನೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಹಾರಾರ್ ಕಥಾಹಂದರ ಒಳಗೊಂಡ ಚಿತ್ರಕ್ಕೆ ದಿನೇಶ್ ಬಾಬು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದು, ಶ್ರೀ ಭವಾನಿ ಆರ್ಟ್ಸ್ ಮೂಲಕ ರವೀಶ್ ಆರ್. ಸಿ. ನಿರ್ಮಾಣ ಮಾಡಿದ್ದಾರೆ. ಪಿಕೆಹೆಚ್ ದಾಸ್ ಛಾಯಾಗ್ರಹಣ, ರಮೇಶ್ ಕೃಷ್ಣ ಸಂಗೀತ ನಿರ್ದೇಶನ ಈ ಚಿತ್ರಕ್ಕಿವಿದೆ. ಕೊಟ್ಟಿಗೆಹಾರ, ಬಾಲೂರು ಸುತ್ತಮುತ್ತ ‘ಕಸ್ತೂರಿ ಮಹಲ್​’ ಸಿನಿಮಾದ ಶೂಟಿಂಗ್​ ಮಾಡಲಾಗಿದೆ. ಸ್ಕಂದ ಅಶೋಕ್, ಶ್ರುತಿ ಪ್ರಕಾಶ್, ರಂಗಾಯಣ ರಘು, ನೀನಾಸಂ ಅಶ್ವಥ್, ಕೆಂಪೇಗೌಡ ಮುಂತಾದವರನ್ನು ಒಳಗೊಂಡ ತಾರಾಗಣ ಚಿತ್ರದಲ್ಲಿದೆ. ಟ್ರೇಲರ್, ಹಾಡುಗಳು ಮೂಲಕ ಗಮನ ಸೆಳೆದಿರುವ ‘ಕಸ್ತೂರಿ ಮಹಲ್’ ಮೇ 13ರಂದು ಚಿತ್ರಮಂದಿರದ ಅಂಗಳಕ್ಕೆ ಎಂಟ್ರಿ ಕೊಡಲಿದೆ.

ಇದನ್ನೂ ಓದಿ
Image
ಡಾನ್​ ಆದ ರಘು ದೀಕ್ಷಿತ್​ಗೆ ಡ್ಯಾಡಿ ಅಂತಾರೆ; ‘ಬ್ಯಾಂಗ್​’ ಚಿತ್ರದಲ್ಲಿ ನಟಿ ಶಾನ್ವಿಗೆ ಹೊಸ ಅವತಾರ
Image
Shanvi Srivastava: ಸಿನಿಮಾ ಶೂಟಿಂಗ್ ವೇಳೆ ಅವಘಡ; ನಟಿ ಶಾನ್ವಿ ಕೈಗೆ ಪೆಟ್ಟು
Image
Are you a Virgin? ಎಂದು ಕೇಳಿದ ಅಭಿಮಾನಿಗೆ ನಟಿ ಶಾನ್ವಿ ಶ್ರೀವಾಸ್ತವ ನೀಡಿದ ಬೋಲ್ಡ್ ಉತ್ತರ ಇದು!
Image
ಅವನೇ ಶ್ರೀಮನ್ನಾರಾಯಣ ಸುಂದರಿಗೆ ಬರ್ತಡೇ ಸಂಭ್ರಮ

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:36 am, Thu, 12 May 22