AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾನ್​ ಆದ ರಘು ದೀಕ್ಷಿತ್​ಗೆ ಡ್ಯಾಡಿ ಅಂತಾರೆ; ‘ಬ್ಯಾಂಗ್​’ ಚಿತ್ರದಲ್ಲಿ ನಟಿ ಶಾನ್ವಿಗೆ ಹೊಸ ಅವತಾರ

Bang Kannada Movie: ಗ್ಯಾಂಗ್​ಸ್ಟರ್​ ಪಾತ್ರದಲ್ಲಿ ನಟಿ ಶಾನ್ವಿ ಶ್ರೀವಾಸ್ತವ ಅವರಿಗೆ ಇದು ಮೊದಲ ಅನುಭವ. ರಘು ದೀಕ್ಷಿತ್​ ಕೂಡ ಮೊದಲ ಬಾರಿಗೆ ಡಾನ್​ ಆಗಿ ಗನ್​ ಹಿಡಿದಿದ್ದಾರೆ.

ಡಾನ್​ ಆದ ರಘು ದೀಕ್ಷಿತ್​ಗೆ ಡ್ಯಾಡಿ ಅಂತಾರೆ; ‘ಬ್ಯಾಂಗ್​’ ಚಿತ್ರದಲ್ಲಿ ನಟಿ ಶಾನ್ವಿಗೆ ಹೊಸ ಅವತಾರ
‘ಬ್ಯಾಂಗ್​’ ಚಿತ್ರದಲ್ಲಿ ರಘು ದೀಕ್ಷಿತ್​, ಶಾನ್ವಿ ಶ್ರೀವಾಸ್ತವ
Follow us
TV9 Web
| Updated By: ಮದನ್​ ಕುಮಾರ್​

Updated on: Dec 02, 2021 | 8:23 AM

ಇಷ್ಟು ದಿನಗಳ ಕಾಲ ರಘು ದೀಕ್ಷಿತ್​ (Raghu Dixit) ಅವರನ್ನು ಸಂಗೀತ ನಿರ್ದೇಶಕನಾಗಿ, ಗಾಯಕನಾಗಿ ಜನರು ಗುರುತಿಸುತ್ತಿದ್ದರು. ಆದರೆ ಇನ್ಮುಂದೆ ಅವರನ್ನು ಒಬ್ಬ ಡಾನ್​ ಆಗಿಯೂ ನೋಡಬಹುದು! ಹಾಗಂತ ಅವರು ರಿಯಲ್​ ಲೈಫ್​ನಲ್ಲಿ ಡಾನ್​ ಆಗಿಲ್ಲ. ಗಣೇಶ್​ ಪುರುಷೋತ್ತಮ್​ ನಿರ್ದೇಶನ ಮಾಡಿರುವ ‘ಬ್ಯಾಂಗ್​’ (Bang Kannada Movie) ಸಿನಿಮಾದಲ್ಲಿ ರಘು ದೀಕ್ಷಿತ್​ ಅವರಿಗೆ ಡಾನ್​ ಪಾತ್ರ ನೀಡಲಾಗಿದೆ. ಈ ಚಿತ್ರಕ್ಕೆ ಶಾನ್ವಿ ಶ್ರೀವಾಸ್ತವ (Shanvi Srivastava) ಅವರು ನಾಯಕಿ. ಇಬ್ಬರ ಕಾಂಬಿನೇಷನ್​ನಲ್ಲಿ ‘ಬ್ಯಾಂಗ್​’ ಚಿತ್ರ ಮೂಡಿಬಂದಿದೆ. ಡ್ಯಾಡಿ ಎಂಬ ಡಾನ್​ ಪಾತ್ರವನ್ನು ರಘು ದೀಕ್ಷಿತ್​ ನಿಭಾಯಿಸಿದ್ದು, ಶಾನ್ವಿ ಕೂಡ ಗ್ಯಾಂಗ್​ಸ್ಟರ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈಗ ಈ ಸಿನಿಮಾದ ಟೀಸರ್ ಮತ್ತು ಫಸ್ಟ್​ಲುಕ್​​ ಬಿಡುಗಡೆ ಮಾಡುವ ಮೂಲಕ ಸಿನಿಪ್ರಿಯರ ಗಮನ ಸೆಳೆಯಲಾಗಿದೆ. ನಿರ್ಮಾಪಕ ವಸಂತ್ ಕುಮಾರ್ ಅವರ ಪುತ್ರರಾದ ನಕುಲ್ ಹಾಗೂ ತೇಜಸ್ ಅವರು ಫಸ್ಟ್ ಲುಕ್ ಅನಾವರಣಗೊಳಿಸಿದರು. ನಿರ್ಮಾಪಕಿ ಪೂಜಾ ವಸಂತ್ ಕುಮಾರ್ ಟೀಸರ್ ಬಿಡುಗಡೆ ಮಾಡಿದರು.

‘ಇದೊಂದು ಡಾರ್ಕ್‌ ಕಾಮಿಡಿ ಹಾಗೂ ಆಕ್ಷನ್ ಥ್ರಿಲ್ಲರ್ ಚಿತ್ರ. ಯಾವುದೇ ಒಂದು ವರ್ಗಕ್ಕೆ ಸೀಮಿತವಾಗದೇ ಎಲ್ಲರಿಗೂ ಹಿಡಿಸುವ ಕಥೆಯಿದೆ. ನಲವತ್ತೆಂಟು ಘಂಟೆಗಳಲ್ಲಿ ನಡೆಯುವ ಘಟನೆಯೊಂದನ್ನು ವಿಭಿನ್ನವಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ಈ ಚಿತ್ರ ಫೆಬ್ರವರಿಯಲ್ಲಿ ತೆರೆಗೆ ಬರಲಿದೆ. ಅದಕ್ಕೂ‌ ಮುನ್ನ ‌ಜನವರಿಯಲ್ಲಿ ಟ್ರೇಲರ್ ಬರಲಿದೆ’ ಎಂದಿದ್ದಾರೆ ನಿರ್ದೇಶಕ ಗಣೇಶ್ ಪರಶುರಾಮ್.

ಗ್ಯಾಂಗ್​ಸ್ಟರ್​ ಪಾತ್ರದಲ್ಲಿ ಶಾನ್ವಿ ಅವರಿಗೆ ಇದು ಮೊದಲ ಅನುಭವ. ‘ನಾನು ಈ ರೀತಿ ಪಾತ್ರ ಯಾವತ್ತೂ ಮಾಡಿಲ್ಲ.‌ ನನಗೆ ಈ ಪಾತ್ರ ಸರಿ ಹೊಂದುತ್ತೋ ಇಲ್ಲವೋ ಅಂತ ಮೊದಲು ಯೋಚನೆ ಮಾಡಿದ್ದೆ. ಮೊದಲ ದಿನ ಚಿತ್ರೀಕರಣಕ್ಕೆ ಹೋದಾಗ ನನ್ನ ನಿರ್ಧಾರ ಸರಿ ಅನಿಸಿತು. ಹೀರೋಯಿನ್ ಆಗಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಆದರೆ ಇಂತಹ ಪಾತ್ರಗಳು ಬರುವುದು ಕಡಿಮೆ’ ಎಂದಿದ್ದಾರೆ ಶಾನ್ವಿ ಶ್ರೀವಾಸ್ತವ.

ರಘು ದೀಕ್ಷಿತ್​ ಕೂಡ ಡಾನ್​ ಪಾತ್ರ ಮಾಡಲು ಆರಂಭದಲ್ಲಿ ಒಪ್ಪಿಕೊಂಡಿರಲಿಲ್ಲ. ‘ಈ ಚಿತ್ರತಂಡದವರು ಮಾತನಾಡಲು ನಮ್ಮ ಮನೆಗೆ ಬಂದಾಗ ಸಂಗೀತ ನಿರ್ದೇಶನ ಅಥವಾ ಹಾಡು ಹಾಡಿಸುವುದಕ್ಕಾಗಿ ಬಂದಿದ್ದಾರೆ ಅಂದುಕೊಂಡೆ. ಈ ಚಿತ್ರದಲ್ಲಿ ನಟಿಸಬೇಕು ಎಂದಾಗ‌ ಒಂದು ಸಲ ಆಶ್ಚರ್ಯವಾಯಿತು. ಮೊದಲು ನಾನು ಒಪ್ಪಲಿಲ್ಲ. ನಂತರ ಅವರ ಒತ್ತಡಕ್ಕೆ ಮಣಿದು ಒಪ್ಪಿಕೊಂಡೆ’ ಎಂದಿದ್ದಾರೆ ರಘು ದೀಕ್ಷಿತ್.

ಶಾನ್ವಿ ಶ್ರೀವಾಸ್ತವ ಮತ್ತು ರಘು ದೀಕ್ಷಿತ್ ಅವರಲ್ಲದೇ ಈ ಸಿನಿಮಾದಲ್ಲಿ ಇನ್ನೂ ನಾಲ್ಕು ಮುಖ್ಯ ಪಾತ್ರಗಳು ಬರುತ್ತವೆ. ಅವುಗಳಿಗೆ ರಿತ್ವಿಕ್​ ಮುರಳಿಧರ್​, ಸಾತ್ವಿಕಾ, ನಾಟ್ಯರಂಗ, ಸುನೀಲ್​ ಬಣ್ಣ ಹಚ್ಚಿದ್ದಾರೆ. ಉದಯಲೀಲ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನ, ನವೀನ್ ಕುಮಾರ್ ಸೌಂಡ್ ಡಿಸೈನ್, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ. ಕಾಸ್ಟಿಂಗ್ ಡೈರೆಕ್ಟರ್ ಹಾಗೂ ವಸ್ತ್ರವಿನ್ಯಾಸಕಿಯಾಗಿ ಮಾಧುರಿ ಪರಶುರಾಮ ಕೆಲಸ ಮಾಡಿದ್ದಾರೆ. ಯು.ಕೆ. ಪ್ರೊಡಕ್ಷನ್ಸ್ ಲಾಂಛನದಲ್ಲಿ ಪೂಜಾ ವಸಂತ ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಇದನ್ನೂ ಓದಿ:

ಹೀರೋ ಆಗಿ ಪುನೀತ್​ ಮೊದಲು ನಟಿಸಿದ ‘ಅಪ್ಪು’ ಚಿತ್ರಕ್ಕೆ ಸಂಗೀತ ನೀಡಲು ಗುರುಕಿರಣ್​ಗೆ ಚಾನ್ಸ್​ ಸಿಕ್ಕಿದ್ದು ಹೇಗೆ?

ಕ್ರಿಕೆಟ್​, ಸಿನಿಮಾ ಪ್ರಿಯರಿಗೆ ಗುಡ್​ ನ್ಯೂಸ್​; ‘83’ ಟೀಮ್​ ಜತೆ ಸೇರಿಕೊಂಡ ಕಿಚ್ಚ ಸುದೀಪ್​

ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್