AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Are you a Virgin? ಎಂದು ಕೇಳಿದ ಅಭಿಮಾನಿಗೆ ನಟಿ ಶಾನ್ವಿ ಶ್ರೀವಾಸ್ತವ ನೀಡಿದ ಬೋಲ್ಡ್ ಉತ್ತರ ಇದು!

ಶಾನ್ವಿ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಏನಾದರೂ ಕೇಳಿ ಎಂದು ಅಭಿಮಾನಿಗಳೊಂದಿಗೆ ಮಾತುಕತೆಗೆ ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ಅಭಿಮಾನಿ ಮಹಾಶಯನೊಬ್ಬ Are you a Virgin? ಎಂಬ ಪ್ರಶ್ನೆ ಕೇಳಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.

Are you a Virgin? ಎಂದು ಕೇಳಿದ ಅಭಿಮಾನಿಗೆ ನಟಿ ಶಾನ್ವಿ ಶ್ರೀವಾಸ್ತವ ನೀಡಿದ ಬೋಲ್ಡ್ ಉತ್ತರ ಇದು!
ಇನ್​​ಸ್ಟಾಗ್ರಾಂನಲ್ಲಿ Are you a Virgin? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾನ್ವಿ
Skanda
| Edited By: ಸಾಧು ಶ್ರೀನಾಥ್​|

Updated on:Feb 03, 2021 | 11:12 AM

Share

ಚಂದನವನದ ನಟಿ ಶಾನ್ವಿ ಶ್ರೀವಾಸ್ತವ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಆಗಾಗ ಸಂವಹನ ನಡೆಸುತ್ತಿರುತ್ತಾರೆ. ಅಂತೆಯೇ, ನಿನ್ನೆ (ಫೆ. 2) ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಏನಾದರೂ ಕೇಳಿ ಎಂದು ಅಭಿಮಾನಿಗಳೊಂದಿಗೆ ಮಾತುಕತೆಗೆ ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ಅಭಿಮಾನಿ ಮಹಾಶಯನೊಬ್ಬ Are you a Virgin? ಎಂಬ ಶಾನ್ವಿಗೆ ಪ್ರಶ್ನೆ ಕೇಳಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.

ನಟ ನಟಿಯರು, ಖ್ಯಾತನಾಮರು ತಮ್ಮ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಾರೆ. ತಮ್ಮನ್ನು ಅನುಸರಿಸುವವರೊಂದಿಗೆ ಆಗಾಗ ಮಾತುಕತೆ, ಪ್ರಶ್ನೋತ್ತರ ಅಥವಾ ಲೈವ್​ ಮೂಲಕ ಕೆಲ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ.

ಆದರೆ, ಕೆಲ ಸಂದರ್ಭಗಳಲ್ಲಿ ಅಭಿಮಾನಿಗಳು ಎನ್ನಿಸಿಕೊಂಡವರು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಕಾಲೆಳೆಯಲೆಂದೇ ಕಾದು ಕುಳಿತುಕೊಂಡಿರುವವರು ಸೆಲೆಬ್ರಿಟಿಗಳಿಗೆ ಮುಜುಗರ ಉಂಟುಮಾಡುವಂತೆ ಪ್ರಶ್ನೆಗಳನ್ನು ಕೇಳಿ ಪೇಚಿಗೆ ಸಿಲುಕಿಸುತ್ತಾರೆ.

ತೀರಾ ವೈಯಕ್ತಿಕ ವಿಚಾರಗಳಿಂದ ಹಿಡಿದು, ಎಂದೋ ಘಟಿಸಿದ ವಿಷಯಗಳನ್ನೂ ಎಳೆದುತಂದು ಸೆಲೆಬ್ರಿಟಿಗಳ ಮುಂದಿಡುತ್ತಾರೆ. ಅಂತೆಯೇ ಈ ಬಾರಿ ನಟಿ ಶಾನ್ವಿ ಶ್ರೀವಾಸ್ತವ ಅವರಿಗೆ ಇನ್​ಸ್ಟಾಗ್ರಾಂನಲ್ಲಿ ವ್ಯಕ್ತಿಯೊಬ್ಬ ಮುಜುಗರ ಉಂಟುಮಾಡುವ ಪ್ರಶ್ನೆ ಕೇಳಿದ್ದಾನೆ.

ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನರು ಈ ತೆರನಾದ ಮುಜುಗರಕ್ಕೆ ಒಳಗಾಗಿದ್ದಾರೆ. ಹಾಗಾಗಿಯೇ, ಕೆಲವರು ಉದ್ದೇಶಪೂರ್ವಕವಾಗಿ ಕಸಿವಿಸಿ ಉಂಟುಮಾಡುವ ಪ್ರಶ್ನೆಗಳನ್ನು ಕಡೆಗಣಿಸಿಬಿಡುತ್ತಾರೆ. ಆದರೆ, ಶಾನ್ವಿ ಶ್ರೀವಾಸ್ತವ ಮುಜುಗರ ತರುವ ಪ್ರಶ್ನೆಯನ್ನು ಕಡೆಗಣಿಸದೆ ಅದಕ್ಕೆ ಪ್ರತ್ಯುತ್ತರ ನೀಡಿ ಹುಬ್ಬೇರಿಸುವಂತೆ ಮಾಡಿದ್ದಾರೆ.

ಶಾನ್ವಿ ಶ್ರೀವಾಸ್ತವ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಏನಾದರೂ ಕೇಳಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದೇ ತಡ ಒಂದರ ಹಿಂದೊಂದು ಪ್ರಶ್ನೆಗಳು ಬಂದಿವೆ. ನೀವು ನಿಮ್ಮ ಅಭಿಮಾನಿಗಳನ್ನು ಇಷ್ಟಪಡುತ್ತೀರಾ? ಕನ್ನಡ ಹೇಗೆ ಕಲಿತಿದ್ದು? ಕನ್ನಡ ಚಿತ್ರರಂಗ ನಿಮಗೆ ಎಷ್ಟು ಸಹಾಯ ಮಾಡಿದೆ? ನಿಮ್ಮ ಸೌಂದರ್ಯದ ಗುಟ್ಟೇನು? ಎಂಬಲ್ಲಿಂದ ಹಿಡಿದು ನಿಮಗೆ ಅಡುಗೆ ಮಾಡಲು ಬರುತ್ತಾ? ನಿಮ್ಮ ತಲೆಗೂದಲನ್ನು ಕಟ್​ ಮಾಡಿಕೊಳ್ಳುತ್ತೀರಾ? ಎಂಬಲ್ಲಿಯ ತನಕ ತರಹೇವಾರಿ ಪ್ರಶ್ನೆಗಳು ಹರಿದುಬಂದಿವೆ ಹಾಗೂ ಅದೆಲ್ಲಾ ಪ್ರಶ್ನೆಗಳಿಗೂ ಶಾನ್ವಿ ತಮ್ಮದೇ ರೀತಿಯಲ್ಲಿ ಉತ್ತರಿಸಿದ್ದಾರೆ.

ಶಾನ್ವಿ ಶ್ರೀವಾಸ್ತವ ಉತ್ತರ ಹೀಗಿದೆ.. ಆದರೆ, ಒಬ್ಬ ಅಭಿಮಾನಿ ಮಾತ್ರ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ತೀರಾ ವೈಯಕ್ತಿಕ ಪ್ರಶ್ನೆ ಕೇಳಿದ್ದಾನೆ. Are you a Virgin? ಎಂದು ಶಾನ್ವಿಯ ಮುಂದೆ ಪ್ರಶ್ನೆಯಿಟ್ಟಿದ್ದಾನೆ. ಮಿಕ್ಕೆಲ್ಲಾ ಪ್ರಶ್ನೆಗಳು ಸ್ವಲ್ಪ ತಮಾಷೆಯಾಗಿದ್ದ ಕಾರಣ ಅದಕ್ಕೆ ತಮಾಷೆಯಾಗಿಯೇ ಉತ್ತರಿಸುತ್ತಿದ್ದ ಶಾನ್ವಿ ಬಹುಶಃ ಇಂತಹ ಪ್ರಶ್ನೆಯನ್ನು ನಿರೀಕ್ಷೆ ಮಾಡಿರಲಿಲ್ಲ ಅನ್ನಿಸುತ್ತೆ. ಆದರೂ ಈ ಪ್ರಶ್ನೆಯನ್ನು ಮುಚ್ಚಿಡದ ಶಾನ್ವಿ, ತಾವು ತುಸು ಗಂಭೀರವಾಗಿ ಚಪ್ಪಾಳೆ ತಟ್ಟುತ್ತಿರುವ ವಿಡಿಯೋ ಮಾಡಿ, ಕೊನೆಯಲ್ಲಿ ಎಂತಹ ಪ್ರಶ್ನೆ ಕೇಳ್ತೀರಪ್ಪಾ? ಎಂಬ ಭಾವದಲ್ಲಿ ಸನ್ನೆ ಮಾಡಿದ್ದಾರೆ.

ಸಾಮಾನ್ಯವಾಗಿ ನಟ, ನಟಿಯರಿಗೆ ಎಂತಹ ಪ್ರಶ್ನೆ ಕೇಳಿದರೂ ನಡೆಯುತ್ತದೆ ಎಂಬಂತೆ ಕೆಲವರು ವರ್ತಿಸುತ್ತಾರೆ. ಇದೆಲ್ಲಾ ಸೆಲೆಬ್ರಿಟಿಗಳಿಗೆ ಹೊಸತೇನಲ್ಲ. ಆದರೂ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಮಾನಿಗಳನ್ನು ಮಾತನಾಡಿಸೋಣ ಎಂದು ಬರುವವರಿಗೆ ಇಂತಹ ಪ್ರಶ್ನೆಗಳು ಕೆಲ ಸಂದರ್ಭದಲ್ಲಿ ಬೇಸರವನ್ನೂ ಉಂಟುಮಾಡಿಬಿಡುತ್ತದೆ. ಸದ್ಯ ಶಾನ್ವಿ ಶ್ರೀವಾಸ್ತವ ಇದಕ್ಕೆ ಬೋಲ್ಡ್ ಆಗಿಯೇ ಉತ್ತರಿಸಿದ್ದಾರೆ. ಆದರೆ, ಜನರು ಸಾಮಾಜಿಕ ಜಾಲತಾಣಗಳಲ್ಲಿ ಏನೇನೋ ಕೇಳುವ ಮೊದಲು ಒಮ್ಮೆ ಸಾವಧಾನದಿಂದ ಯೋಚಿಸಬೇಕು ಎನ್ನುವುದಂತೂ ಸತ್ಯ.

Published On - 11:02 am, Wed, 3 February 21

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ