ಹಾಲಿವುಡ್​ಗೆ ಹಾರಲಿದ್ದಾರೆ ಪ್ರಭಾಸ್​? ಹಾರರ್​ ಕಥೆಯಲ್ಲಿ ಸಲಾರ್​ ಹೀರೋ

ಪ್ರಭಾಸ್ ಸಿನಿಮಾ ವಿಚಾರದಲ್ಲಿ ಈ ಮೊದಲು ಸಾಕಷ್ಟು ವದಂತಿಗಳು ಹಬ್ಬಿವೆ. ಅವರ ಮುಂದಿನ ಚಿತ್ರಗಳ ಬಗ್ಗೆ ಈಗಾಗಲೇ ಟಾಲಿವುಡ್​ ಅಂಗಳದಲ್ಲಿ ಸಾಕಷ್ಟು ವದಂತಿಗಳು ಹುಟ್ಟಿ ಅಲ್ಲೇ ಕಾಣೆ ಆಗಿವೆ.

ಹಾಲಿವುಡ್​ಗೆ ಹಾರಲಿದ್ದಾರೆ ಪ್ರಭಾಸ್​? ಹಾರರ್​ ಕಥೆಯಲ್ಲಿ ಸಲಾರ್​ ಹೀರೋ
ಪ್ರಭಾಸ್​

ತೆಲುಗು ನಟ ಪ್ರಭಾಸ್​ ಖ್ಯಾತಿ ದೇಶಾದ್ಯಂತ ಹಬ್ಬಿದೆ. ‘ಬಾಹುಬಲಿ’ ಸರಣಿಯ ಸಿನಿಮಾಗಳು ತೆರೆಕಂಡ ನಂತರದಲ್ಲಿ ಅವರಿಗೆ ಸಿನಿಮಾ ಆಫರ್ ಹೆಚ್ಚಿದೆ. ಪರಿಣಾಮ ಮೂರು ಪ್ಯಾನ್​ ಇಂಡಿಯಾ ಚಿತ್ರಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಈ ಮಧ್ಯೆ ಪ್ರಭಾಸ್​ಗೆ ಹಾಲಿವುಡ್​ ಆಫರ್ ಒಂದು ಬಂದಿದೆ ಎನ್ನುವ ಸುದ್ದಿ ಕೇಳಿ ಬಂದಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಸಖತ್​ ಖುಷಿಪಟ್ಟಿದ್ದಾರೆ.

ಪ್ರಭಾಸ್ ಸಿನಿಮಾ ವಿಚಾರದಲ್ಲಿ ಈ ಮೊದಲು ಸಾಕಷ್ಟು ವದಂತಿಗಳು ಹಬ್ಬಿವೆ. ಅವರ ಮುಂದಿನ ಚಿತ್ರಗಳ ಬಗ್ಗೆ ಈಗಾಗಲೇ ಟಾಲಿವುಡ್​ ಅಂಗಳದಲ್ಲಿ ಸಾಕಷ್ಟು ವದಂತಿಗಳು ಹುಟ್ಟಿ ಅಲ್ಲೇ ಕಾಣೆ ಆಗಿವೆ. ಈಗ ಪ್ರಭಾಸ್ ಮುಂದಿನ ಪ್ರಾಜೆಕ್ಟ್​ ಬಗ್ಗೆ ಅಚ್ಚರಿಯ ಮಾಹಿತಿಯೊಂದು ಹೊರ ಬಿದ್ದಿದೆ.

ಹಾಲಿವುಡ್​ನ ಹಾರರ್​ ಸಿನಿಮಾವೊಂದಕ್ಕೆ ನಟಿಸೋಕೆ ಪ್ರಭಾಸ್​ಗೆ ಆಫರ್​ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಚಿತ್ರ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ರಿಲೀಸ್​ ಆಗಲಿದೆ. ಈ ಸಿನಿಮಾ ಯಾವುದು? ಯಾವ ಒಟಿಟಿ ಎಂಬಿತ್ಯಾದಿ ವಿಚಾರಗಳ ಬಗ್ಗೆ ಸದ್ಯ ಅಭಿಮಾನಿಗಳು ಸಾಕಷ್ಟು ಕುತೂಹಲ ಇಟ್ಟುಕೊಂಡಿದ್ದಾರೆ. ಸದ್ಯ, ಚಿತ್ರತಂಡದವರು ಪ್ರಭಾಸ್​ಗೆ ಕಥೆ ವಿವರಿಸಿದ್ದಾರೆ. ಪ್ರಭಾಸ್​ ಸಿನಿಮಾದ ಕಥೆ ಇಷ್ಟಪಟ್ಟರೆ ಶೂಟಿಂಗ್​ ಮತ್ತಿತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ.

ಸಾಕಷ್ಟು ಹೀರೋಗಳು ಹಾರರ್​ ಸಿನಿಮಾಗಳಲ್ಲಿ ನಟಿಸಿರುತ್ತಾರೆ. ಆದರೆ, ಪ್ರಭಾಸ್​ ಈವರೆಗೆ ಒಂದೇಒಂದು ಹಾರರ್​ ಚಿತ್ರದಲ್ಲಿ ನಟಿಸಿಲ್ಲ. ಹಾರರ್​ ಸಿನಿಮಾಗಳೆಂದರೆ ಭಯ ಎಂಬುದಾಗಿ ಅನೇಕ ಬಾರಿ ಅವರೇ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಅವರು ಈ ಆಫರ್ ಒಪ್ಪಿಕೊಳ್ಳುತ್ತಾರಾ ಅನ್ನೋದು ಸದ್ಯದ ಕುತೂಹಲ.

ಪ್ರಭಾಸ್​ ಹಿಂದಿ ಸಿನಿಮಾ ಮಾಡುವ ಬಗ್ಗೆಯೂ ಇತ್ತೀಚೆಗೆ ಸುದ್ದಿಯೊಂದು ಹಬ್ಬಿತ್ತು. ಪ್ರಭಾಸ್​ ನಟನೆಯ ಸಿನಿಮಾಗಳು ಹಿಂದಿಗೆ ಡಬ್​ ಆಗಿ ತೆರೆಕಂಡಿವೆ. ಆದರೆ, ಹಿಂದಿಯಲ್ಲೇ ಸಿದ್ಧಗೊಂಡಿರುವ ಚಿತ್ರದಲ್ಲಿ ಅವರು ಈವರೆಗೆ ನಟಿಸಿಲ್ಲ. ಈ ಬಗ್ಗೆಯೂ ಕೆಲ ವಿಚಾರಗಳು ಸುದ್ದಿಯಲ್ಲಿದ್ದು, ಯಾವುದೂ ಆಧಿಕೃತವಾಗಿಲ್ಲ.

ಟಾಲಿವುಡ್​ನಲ್ಲಿ ಪ್ರಭಾಸ್​ ಬ್ಯುಸಿಯಾಗಿದ್ದಾರೆ. ಪ್ರಭಾಸ್​ ಅವರು ‘ಆದಿಪುರುಷ್​’ ಚಿತ್ರದ ಶೂಟಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ. ಪೂಜಾ ಹೆಗ್ಡೆ ಜೊತೆ ಅವರು ನಟಿಸಿರುವ ‘ರಾಧೆ ಶ್ಯಾಮ್’​ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, 2022ರ ಜ.14ರಂದು ವಿಶ್ವಾದ್ಯಂತ ರಿಲೀಸ್​ ಆಗಲಿದೆ. ‘ಸಲಾರ್’​ನಲ್ಲಿ ಪ್ರಭಾಸ್​ಗೆ ಜೋಡಿಯಾಗಿ ನಟಿ ಶ್ರುತಿ ಹಾಸನ್​ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ.

ಇದನ್ನೂ ಓದಿ: ‘ಪ್ರಭಾಸ್​ ಜತೆ ಇದ್ದರೆ ಫಿಟ್​ನೆಸ್​ ಕಳೆದುಕೊಳ್ತೀರಿ’; ಟಾಲಿವುಡ್​ ನಟನ ವಿಚಿತ್ರ ಆರೋಪ

Read Full Article

Click on your DTH Provider to Add TV9 Kannada