‘ತಾಯ್ನಾಡು ತೊರೆಯುತ್ತಿದ್ದೇನೆ, ಮತ್ತೆ ಎಲ್ಲವೂ ಶೂನ್ಯದಿಂದ ಆರಂಭ’; ಭಾವನಾತ್ಮಕ ಪತ್ರ ಬರೆದ ಆಫ್ಘನ್ ನಿರ್ದೇಶಕಿ
ಮನೆ, ಜಾಗ, ಹಣ ಎಲ್ಲವನ್ನೂ ಬಿಟ್ಟು ಅಪ್ಘಾನಿಸ್ತಾನದ ಜನರು ದೇಶ ತೊರೆಯುತ್ತಿದ್ದಾರೆ. ತಮ್ಮ ಹುಟ್ಟೂರನ್ನೂ ತೊರೆಯುವುದಕ್ಕೂ ಮೊದಲು ಭಾವನಾತ್ಮಕವಾಗಿ ಗುಡ್ ಬೈ ಹೇಳುತ್ತಿದ್ದಾರೆ.
ಅಪ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನಿಗಳ ಕಪಿಮುಷ್ಟಿ ಸೇರಿದೆ. ಈ ಕಾರಣಕ್ಕೆ ಅನೇಕರು ದೇಶಬಿಟ್ಟು ತೆರಳುತ್ತಿದ್ದಾರೆ. ಈ ಮಧ್ಯೆ ತಾಲಿಬಾನಿಗಳು ಸಿನಿಮಾ ನಿರ್ಮಾಣದ ಮೇಲೆ ತಾಲಿಬಾನಿಗಳು ನಿರ್ಬಂಧ ಹೇರಿದ್ದಾರೆ. ಹೀಗಾಗಿ, ಅಲ್ಲಿನ ಸಿನಿಮಾ ನಿರ್ಮಾತೃರರು ದೇಶ ಬಿಟ್ಟು ತೊರೆಯುತ್ತಿದ್ದಾರೆ. ಈಗ ಫಿಲ್ಮ್ ಮೇಕರ್ ಹಾಗೂ ಫೋಟೋ ಜರ್ನಲಿಸ್ಟ್ ರೋಯಾ ಹೈದರಿ ಅಪ್ಘಾನಿಸ್ತಾನ ತೊರೆದು ಫ್ರಾನ್ಸ್ ಸೇರಿದ್ದಾರೆ. ಅವರು ಭಾವನಾತ್ಮಕ ಪತ್ರ ಒಂದನ್ನು ಬರೆದುಕೊಂಡಿದ್ದಾರೆ.
ಮನೆ, ಜಾಗ, ಹಣ ಎಲ್ಲವನ್ನೂ ಬಿಟ್ಟು ಅಪ್ಘಾನಿಸ್ತಾನದ ಜನರು ದೇಶ ತೊರೆಯುತ್ತಿದ್ದಾರೆ. ತಮ್ಮ ಹುಟ್ಟೂರನ್ನೂ ತೊರೆಯುವುದಕ್ಕೂ ಮೊದಲು ಭಾವನಾತ್ಮಕವಾಗಿ ಗುಡ್ ಬೈ ಹೇಳುತ್ತಿದ್ದಾರೆ. ಅಲ್ಲದೆ, ಹೊಸ ಜೀವನದ ಹುಡುಕಾಟ ನಡೆಸುತ್ತಿದ್ದಾರೆ. ರೋಯಾ ಕೂಡ ಈಗ ಬೇರೆ ಜೀವನ ಹುಡುಕಿ ದೇಶ ಬಿಟ್ಟಿದ್ದಾರೆ. ಹೊರಡುವುದಕ್ಕೂ ಮೊದಲು ಅವರು ಪತ್ರ ಒಂದನ್ನು ಬರೆದುಕೊಂಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ನಿಂತಿರುವ ಫೋಟೋ ಹಾಕಿರುವ ಅವರು ‘ಮತ್ತೊಮ್ಮೆ ನಾನು ನನ್ನ ತಾಯ್ನಾಡಿನಿಂದ ಓಡುತ್ತಿದ್ದೇನೆ. ಮತ್ತೊಮ್ಮೆ, ನನ್ನ ಜೀವನವನ್ನು ನಾನು ಶೂನ್ಯದಿಂದ ಪ್ರಾರಂಭಿಸಲಿದ್ದೇನೆ. ನಾನು ನನ್ನ ಕ್ಯಾಮೆರಾಗಳನ್ನು ಮತ್ತು ಮೃತಪಟ್ಟ ಆತ್ಮವನ್ನು ನನ್ನೊಂದಿಗೆ ಸಾಗರದಾಚೆ ತೆಗೆದುಕೊಂಡು ಹೋಗುತ್ತಿದ್ದೇನೆ. ನಾವು ಮತ್ತೆ ಭೇಟಿಯಾಗುವವರೆಗೂ ಭಾರವಾದ ಹೃದಯದಿಂದ ಮಾತೃಭೂಮಿಗೆ ವಿದಾಯ’ ಎಂದಿದ್ದಾರೆ.
I left my whole life, my home in order to continue to have a voice. Once again,I am running from my motherland. Once again, I am going to start from zero. I took only my cameras and a dead soul with me across an ocean. With a heavy heart, goodbye motherland. Until we meet again pic.twitter.com/MI3H8lQ5e4
— Roya Heydari (@heydari_roya) August 26, 2021
‘ಸಾವು ಒಮ್ಮೆ ಮಾತ್ರ ಬರುತ್ತದೆ. ಅವರು ನನ್ನನ್ನು ಕೊಂದರೆ ನಾನು ಹೆದರುವುದಿಲ್ಲ. ಆದರೆ, ನನ್ನನ್ನು ಜೈಲಿನಲ್ಲಿ ಹಾಕಿಟ್ಟರೆ ನನ್ನ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎನ್ನುವ ಭಯವಷ್ಟೇ’ ಎಂದಿದ್ದಾರೆ.
ಅಪ್ಘಾನಿಸ್ತಾನದ ಪ್ರಾಂತ್ಯಗಳು ತಾಲೀಬಾನಿಗಳ ವಶವಾಗಿದೆ. ಸಾಕಷ್ಟು ಜನರು ಹತ್ಯೆಗೊಳಗಾಗಿದ್ದಾರೆ. ಹೆಣ್ಣು ಮಕ್ಕಳನ್ನು ಕಂಡ ಕಂಡಲ್ಲಿ ಅತ್ಯಾಚಾರ ಮಾಡಲಾಗುತ್ತಿದೆ. ಅನೇಕ ಶಾಲೆಗಳು ನೆಲಸಮಗೊಂಡಿವೆ. ಈಗ ಅಪ್ಘಾನಿಸ್ತಾನದ ನಿರ್ದೇಶಕಿ ಸಹ್ರಾ ಕರೀಮಿ ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದನ್ನು ಬರೆದುಕೊಂಡು ಸಹಾಯ ಕೇಳಿದ್ದರು. ‘ಚಲನಚಿತ್ರ ನಿರ್ಮಾತೃರರನ್ನು ತಾಲೀಬಾನ್ನಿಂದ ರಕ್ಷಿಸಬೇಕು ಎಂದು ನಾನು ನೋವಿನಿಂದ ಕೇಳಿಕೊಳ್ಳುತ್ತಿದ್ದೇನೆ. ಕಳೆದ ಕೆಲವು ವಾರಗಳಲ್ಲಿ ಹಲವು ಪ್ರಾಂತ್ಯಗಳ ಮೇಲೆ ತಾಲಿಬಾನ್ ಉಗ್ರರು ನಿಯಂತ್ರಣ ಸಾಧಿಸಿದ್ದಾರೆ. ಅವರು ಇಲ್ಲಿ ಹತ್ಯಾಕಾಂಡ ಮಾಡುತ್ತಿದ್ದಾರೆ. ಅನೇಕ ಮಕ್ಕಳನ್ನು ಅವರು ಅಪಹರಿಸಿದ್ದಾರೆ. ಹುಡುಗಿಯರನ್ನು ಮಾರಿದ್ದಾರೆ’ ಎಂದು ಅವರು ಬರೆದುಕೊಂಡಿದ್ದರು.
ಇದನ್ನೂ ಓದಿ: ಪ್ರಾಣ ಉಳಿಸಿಕೊಳ್ಳಲು ಅಫ್ಘಾನಿಸ್ತಾನದ ರಸ್ತೆಗಳಲ್ಲಿ ಭಯದಿಂದ ಓಡಿದ ನಿರ್ದೇಶಕಿ; ವಿಡಿಯೋ ವೈರಲ್