‘Uninstall Hotstar’: ಬಾಬರ್​ ಕುರಿತು ವೆಬ್​ ಸೀರಿಸ್​ ರಿಲೀಸ್​ ಮಾಡಿ ಇಕ್ಕಟ್ಟಿಗೆ ಸಿಲುಕಿದ ಹಾಟ್​ಸ್ಟಾರ್​

The Empire: ನಿಖಿಲ್​ ಅಡ್ವಾಣಿ ನಿರ್ಮಾಣದ ‘ದಿ ಎಂಪೈರ್’​ ಶುಕ್ರವಾರ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ರಿಲೀಸ್​ ಆಗಿದೆ. ಈ ಸೀರಿಸ್​ನಲ್ಲಿ ದೊಡ್ಡ ಪಾತ್ರವರ್ಗವೇ ಇದೆ.

‘Uninstall Hotstar’: ಬಾಬರ್​ ಕುರಿತು ವೆಬ್​ ಸೀರಿಸ್​ ರಿಲೀಸ್​ ಮಾಡಿ ಇಕ್ಕಟ್ಟಿಗೆ ಸಿಲುಕಿದ ಹಾಟ್​ಸ್ಟಾರ್​
ಬಾಬರ್​ ಕುರಿತು ವೆಬ್​ ಸೀರಿಸ್​ ರಿಲೀಸ್​ ಮಾಡಿ ಇಕ್ಕಟ್ಟಿಗೆ ಸಿಲುಕಿದ ಹಾಟ್​ಸ್ಟಾರ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 27, 2021 | 5:55 PM

ಒಟಿಟಿ ವ್ಯಾಪ್ತಿ ಹೆಚ್ಚಿದಂತೆ ವೆಬ್​ ಸೀರಿಸ್​ಗಳನ್ನು ನಿರ್ಮಾಣ ಮಾಡುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಸಾಕಷ್ಟು ವೆಬ್​ ಸೀರಿಸ್​ಗಳು ಈಗಾಗಲೇ ಸಿದ್ಧಗೊಂಡು ರಿಲೀಸ್​ ಆಗಿವೆ. ಈ ವೇಳೆ ಕೆಲವು ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿವೆ. ಇದಕ್ಕೆ ಈಗ ಹೊಸ ಸೇರ್ಪಡೆ ‘ದಿ ಎಂಪೈರ್​’. ಬಾಬರ್​ ಜೀವನ ಕಥೆ ಆಧರಿಸಿ ಸಿದ್ಧಗೊಂಡಿರುವ ಈ ವೆಬ್​ ಸೀರಿಸ್ ಎಲ್ಲ ಕಡೆಗಳಿಂದ ವಿರೋಧ ಎದುರಿಸುತ್ತಿದೆ.

ನಿಖಿಲ್​ ಅಡ್ವಾಣಿ ನಿರ್ಮಾಣದ ‘ದಿ ಎಂಪೈರ್’​ ಶುಕ್ರವಾರ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ರಿಲೀಸ್​ ಆಗಿದೆ. ಈ ಸೀರಿಸ್​ನಲ್ಲಿ ದೊಡ್ಡ ಪಾತ್ರವರ್ಗವೇ ಇದೆ. ಅಲೆಕ್ಸ್​ ರುದರ್​ಫೋರ್ಡ್​ ಬರೆದ ‘ಎಂಪೈರ್​ ಆಫ್​ ದಿ ಮೊಘಲ್​; ರೈಡರ್ಸ್​ ಫ್ರಮ್​ ದಿ ನಾರ್ಥ್​’ ಪುಸ್ತಕ ಆಧರಿಸಿ ಈ ವೆಬ್​ ಸೀರಿಸ್​ ಸಿದ್ಧಗೊಂಡಿದೆ.

ಭಾರತದ ಇತಿಹಾಸದ ಪ್ರಕಾರ ಬಾಬರ್​ ಓರ್ವ ಆಕ್ರಮಣಕಾರ. ಆದರೆ, ಈ ವೆಬ್​ ಸೀರಿಸ್​ನಲ್ಲಿ ಆಕ್ರಮಣಕಾರನನ್ನು ವೈಭವೀಕರಿಸಲಾಗಿದೆ ಎಂಬುದು ಪ್ರೇಕ್ಷಕರ ಆರೋಪ. ಈ ಕಾರಣಕ್ಕೆ ವೆಬ್​ ಸೀರಿಸ್​ ಪ್ರಸಾರವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ. ಆದರೆ, ಇದಕ್ಕೆ ಹಾಟ್​ಸ್ಟಾರ್​ ಜಗ್ಗಿಲ್ಲ. ‘ದಿ ಎಂಪೈರ್​ನಲ್ಲಿ ಯಾವುದೇ ವಿವಾದಾತ್ಮಕ ಅಂಶವಿಲ್ಲ. ಇಲ್ಲಿ ಬಾಬರ್​ನನ್ನು ವೈಭವೀಕರಿಸಿಲ್ಲ’ ಎಂದು ಸ್ಪಷ್ಟನೆ ನೀಡಿದೆ.

ಹಾಟ್​ಸ್ಟಾರ್​ ಕಡೆಯಿಂದ ಬಂದ ಉತ್ತರ ಅನೇಕರ ಕೋಪಕ್ಕೆ ಕಾರಣವಾಗಿದೆ. ಈ ಕಾರಣಕ್ಕೆ # UninstallHotstar ಹ್ಯಾಶ್​ಟ್ಯಾಗ್​ ಅಡಿಯಲ್ಲಿ ಜನರು ಟ್ವೀಟ್​ ಮಾಡುತ್ತಿದ್ದಾರೆ. ಅಲ್ಲದೆ, ಹಾಟ್​ಸ್ಟಾರ್​ ಅನ್​ ಇನ್ಸ್ಟಾಲ್​ ಮಾಡುವಂತೆ ಆಗ್ರಹಿಸಲಾಗುತ್ತಿದೆ. ಇದು ಹಾಟ್​ಸ್ಟಾರ್​ ಸಂಸ್ಥೆಗೆ ತಲೆನೋವಾಗಿ ಪರಿಣಮಿಸಿದೆ. ಈ ಬೆಳವಣಿಗೆಯಿಂದ ಒಂದಷ್ಟು ಬಳಕೆದಾರರನ್ನು ಕಳೆದುಕೊಳ್ಳುವ ಭೀತಿ ಸಂಸ್ಥೆಗೆ ಎದುರಾಗಿದೆ.

ಮಾಹಿತಿ ತಂತ್ರಜ್ಞಾನ ನಿಯಮ 2021ರ ಅಡಿಯಲ್ಲಿ ನೇಮಕಗೊಂಡ ಕುಂದುಕೊರತೆ ಅಧಿಕಾರಿಗೆ ಈ ಸರಣಿ ಬಗ್ಗೆ ದೂರು ಬಂದಿತ್ತು. ಈ ದೂರಿನಲ್ಲಿ ಬಾಬರ್​ಅನ್ನು ವೈಭವೀಕರಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಅಧಿಕಾರಿಗಳು ಕೂಡ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಅಯೋಧ್ಯೆಯಲ್ಲಿದ್ದ ರಾಮ ಮಂದಿರವನ್ನು ಕೆಡವಿ ಅಲ್ಲಿ ಮಸೀದಿ ಕಟ್ಟಿದ್ದು ಬಾಬರ್​ ಎನ್ನುವುದನ್ನು ಇತಿಹಾಸದಲ್ಲಿ ಬರೆಯಲಾಗಿದೆ. ಇದಲ್ಲದೆ, ಭಾರತವನ್ನು ಅತಿಕ್ರಮಣ ಮಾಡಿ ಆತ ಭಾರತಕ್ಕೆ ಸಾಕಷ್ಟು ನಷ್ಟ ಉಂಟು ಮಾಡಿದ್ದಾನೆ ಎಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ.

ಇದನ್ನೂ ಓದಿ: ‘ಮೊಘಲರೇ ನಿಜವಾಗಿ ಈ ದೇಶ ಕಟ್ಟಿದ್ದು; ಅವರ ಬಗ್ಗೆ ಕೆಟ್ಟ ಮಾತು ಸರಿಯಲ್ಲ’: ನಿರ್ದೇಶಕ ಕಬೀರ್​ ಖಾನ್​

ಈ ರಿಚಾರ್ಜ್ ಮಾಡಿದ್ರೆ ನಿಮಗೆ ಅಮೆಜಾನ್, ನೆಟ್​ಫ್ಲಿಕ್ಸ್, ಹಾಟ್​ಸ್ಟಾರ್ ಉಚಿತವಾಗಿ ಸಿಗಲಿದೆ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ