ಪತಿ ಡೇನಿಯಲ್ ಜತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಸನ್ನಿ ಲಿಯೋನ್?
ಸನ್ನಿ ಲಿಯೋನ್ ಹಾಗೂ ಅವರ ಪಾರ್ಟ್ನರ್ ಡೇನಿಯಲ್ ವೆಬರ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ.
‘ಬಿಗ್ ಬಾಸ್ ಒಟಿಟಿ’ ಎಂಬ ಹೊಸ ಪ್ರಯತ್ನವನ್ನು ಮಾಡಿದೆ ಹಿಂದಿ ಕಲರ್ಸ್ ವಾಹಿನಿ. ಮೊದಲ ಆರು ವಾರ ಕೇವಲ ಒಟಿಟಿಯಲ್ಲಿ ಮಾತ್ರ ಪ್ರಸಾರವಾಗುವ ಈ ಶೋ ನಂತರ ಟಿವಿಗೆ ಶಿಫ್ಟ್ ಆಗಲಿದೆ. ಬಿಗ್ ಬಾಸ್ ಒಟಿಟಿ ಅಂದುಕೊಂಡ ಮಟ್ಟಿಗೆ ಯಶಸ್ವಿ ಆಗಿಲ್ಲ ಎನ್ನುವ ಮಾತಿದೆ. ಈ ಕಾರಣಕ್ಕೆ ಮನೆಯ ಒಳಗೆ ಸ್ಟಾರ್ ದಂಪತಿಯನ್ನು ಕಳಿಸೋಕೆ ವಾಹಿನಿ ಆಲೋಚನೆ ಮಾಡಿದೆ.
ಹೌದು, ಸನ್ನಿ ಲಿಯೋನ್ ಹಾಗೂ ಅವರ ಪತಿ ಡೇನಿಯಲ್ ವೆಬರ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಅವರು ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಬರುತ್ತಾರೋ ಅಥವಾ ಚಾಲೆಂಜರ್ ಆಗಿ ದೊಡ್ಮನೆ ಒಳಗೆ ಪ್ರವೇಶ ಮಾಡುತ್ತಾರೋ ಅನ್ನೋದು ಸದ್ಯದ ಕುತೂಹಲ. ಈ ವಿಚಾರಕ್ಕೆ ಸದ್ಯವಂತೂ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ವಾಹಿನಿಯವರೇ ಅಧಿಕೃತ ಮಾಡಬೇಕಿದೆ.
ಬಿಗ್ ಬಾಸ್ ಒಟಿಟಿಗೆ ಜನರು ಅಷ್ಟಾಗಿ ಆಕರ್ಷಿತಗೊಂಡಿಲ್ಲ. ದಿನದ 24 ಗಂಟೆಯೂ ಈ ಶೋ ಪ್ರಸಾರವಾದರೂ ಜನರು ಇದನ್ನು ಅಷ್ಟಾಗಿ ವೀಕ್ಷಿಸುತ್ತಿಲ್ಲ ಎನ್ನಲಾಗಿದೆ. ಇದು ವಾಹಿನಿಯವರ ಚಿಂತೆಗೆ ಕಾರಣವಾಗಿದೆ. ಹೀಗಾಗಿ, ಜನರನ್ನು ಸೆಳೆಯೋಕೆ ಸನ್ನಿ ಮತ್ತು ಅವರ ಪತಿಯನ್ನು ಕಳಿಸುವ ಆಲೋಚನೆ ಮಾಡಿದೆ ಬಿಗ್ ಬಾಸ್ ಒಟಿಟಿ ತಂಡ.
ಸನ್ನಿ ಲಿಯೋನ್ ಬಿಗ್ ಬಾಸ್ನ ದೊಡ್ಡ ಫ್ಯಾನ್. ಅವರು ಈ ಶೋಅನ್ನು ತುಂಬಾನೇ ಇಷ್ಟಪಡುತ್ತಾರೆ. ಇನ್ನು, ಸನ್ನಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಪಡ್ಡೆ ಹುಡುಗರಿಗೆ ಈಗಲೂ ಸನ್ನಿ ಅಚ್ಚುಮೆಚ್ಚು. ಈ ಕಾರಣಕ್ಕೆ ಅವರು ಬಿಗ್ ಬಾಸ್ ಪ್ರವೇಶಿಸಿದರೆ ಟಿಆರ್ಪಿ ಹೆಚ್ಚಬಹುದು ಎನ್ನುವ ಆಲೋಚನೆ ವಾಹಿನಿಯದ್ದು. ಆರಂಭದಲ್ಲಿ ಡೇನಿಯಲ್ ಇದಕ್ಕೆ ಒಪ್ಪಿರಲಿಲ್ಲ. ಆದರೆ, ಸನ್ನಿಗೆ ಮನೆ ಒಳಗೆ ತೆರಳುವ ಆಸೆ ಇತ್ತು. ಹೀಗಾಗಿ, ಅವರು ಪತಿಯ ಮನ ಒಲಿಸಿದ್ದಾರೆ. ಇವರು ಯಾವಾಗ ಮನೆ ಒಳಗೆ ಪ್ರವೇಶ ಪಡೆಯುತ್ತಾರೆ ಎನ್ನುವುದು ಇನ್ನೂ ಗೊತ್ತಾಗಿಲ್ಲ.
ಇತ್ತೀಚೆಗೆ ಬಿಗ್ ಬಾಸ್ ಒಟಿಟಿ ಸಾಕಷ್ಟು ಸುದ್ದಿಯಾಗಿತ್ತು. ಜೀಶನ್ ಖಾನ್ ಅವರು ಪ್ರತಿ ಸ್ಪರ್ಧಿ ಪ್ರತೀಕ್ ಸೆಹಜ್ಪಾಲ್ ಜತೆ ಕಿತ್ತಾಟ ನಡೆಸಿದ್ದರು. ಈ ವೇಳೆ ಪ್ರತೀಕ್ಗೆ ಗಾಯಗಳಾಗಿವೆ. ಹೀಗಾಗಿ, ಜೀಶನ್ ಅವರನ್ನು ಮನೆಯಿಂದ ಹೊರ ಹಾಕಲಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಶೋನಲ್ಲೇ ಮಾರಾಮಾರಿ; ಸ್ಪರ್ಧಿಯನ್ನು ತಕ್ಷಣ ಮನೆಯಿಂದ ಹೊರ ಹಾಕಿ ಆದೇಶ
Published On - 5:52 pm, Sat, 28 August 21