‘ಬಿಗ್ ಬಾಸ್ ಮನೆ ತಲುಪುವ ಮೊದಲು ಸ್ಪರ್ಧಿಗಳು ದಟ್ಟ ಅರಣ್ಯವನ್ನು ಹಾದು ಬರಬೇಕು’; ಕುತೂಹಲ ಹೆಚ್ಚಿಸಿದ ನೂತನ ಪ್ರೊಮೊ
ಬಿಗ್ ಬಾಸ್ 15ರ ನೂತನ ಪ್ರೊಮೊ ಬಿಡುಗಡೆಯಾಗಿದ್ದು, ‘ಸ್ಪರ್ಧಿಗಳು ದಟ್ಟ ಅರಣ್ಯವನ್ನು ದಾಟಿ ಮನೆಯೊಳಗೆ ಬರಬೇಕು’ ಎಂದು ಹೇಳಿರುವುದು ವೀಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.
ಬಿಗ್ ಬಾಸ್ ಒಟಿಟಿ ಯಲ್ಲಿ ಸ್ಪರ್ಧೆ ಕಾವೇರುತ್ತಿರುವಂತೆಯೇ, ಬಿಗ್ ಬಾಸ್ 15ಕ್ಕೆ ತಯಾರಿ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಪ್ರೊಮೊವೊಂದನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಸಲ್ಮಾನ್ ಖಾನ್ ಹೇಳಿಕೆಗಳು ಎಲ್ಲರ ಗಮನ ಸೆಳೆದಿವೆ. ಇಂದು (ಭಾನುವಾರ) ಬಿಡುಗಡೆಯಾದ ಹೊಸ ಪ್ರೊಮೊದಲ್ಲಿ ‘ಬಿಗ್ ಬಾಸ್ 15ರ ಮನೆಯೊಳಗೆ ಕಾಲಿಡಲು ಸ್ಪರ್ಧಿಗಳು ಮೊದಲು ದಟ್ಟ ಅರಣ್ಯವನ್ನು ದಾಟಬೇಕು’ ಎಂದು ಹೇಳಲಾಗಿದೆ. ಈ ಹೇಳಿಕೆ ಬಿಗ್ ಬಾಸ್ ನೂತನ ಸೀಸನ್ನ ಕುರಿತು ಮತ್ತಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿರುವ ಹೊಸ ಪ್ರೊಮೊಕ್ಕೆ, ‘ದಟ್ಟ ಅರಣ್ಯದಲ್ಲಿ ಅಪಾಯವಿದೆ. ಪ್ರತೀ ಹೆಜ್ಜೆಗೂ ಹೋರಡಬೇಕಿದದೆ’ ಎಂಬರ್ಥದಲ್ಲಿ ಕ್ಯಾಪ್ಶನ್ ನೀಡಿ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಪ್ರೊಮೊದಲ್ಲಿ ತೋರಿಸಿರುವಂತೆ, ಸಲ್ಮಾನ್ ಖಾನ್ ಮರದ ಬುಡವೊಂದರ ಬಳಿ ಕುಳಿತು, ಅದರೊಂದಿಗೆ ಮಾತನಾಡುತ್ತಿದ್ದಾರೆ. ಆ ಮರಕ್ಕೆ ‘ವಿಶ್ವಸುಂತ್ರಿ’(Vishwasuntree) ಎಂದು ಹೆಸರಿಡಲಾಗಿದ್ದು, ಖ್ಯಾತ ನಟಿ ರೇಖಾ ಧ್ವನಿ ನೀಡಿದ್ದಾರೆ. ಈ ಬಾರಿ ಹೊಸದಾಗಿ ಪರಿಚಯಿಸಲಾಗಿರುವ ಈ ಕಲ್ಪನೆ ಈಗಾಗಲೇ ಮೆಚ್ಚುಗೆ ಗಳಿಸಿದೆ.
ಸಲ್ಮಾನ್ ಅವರನ್ನು ಸ್ವಾಗತಿಸುವ ‘ವಿಶ್ವಸುಂತ್ರಿ’(Vishwasuntree), ನಿಮಗಾಗಿ 15 ವರ್ಷಗಳಿಂದ ನಾನು ಕಾಯುತ್ತಿದ್ದೆ ಎಂದು ಹೇಳುತ್ತದೆ. ಆಗ ಸಲ್ಮಾನ್, ‘‘ನಿಮಗೆ ನಾನು ಋಣಿ. ಬಿಗ್ಬಾಸ್ ಮನೆ ಇಲ್ಲೇ ಎಲ್ಲೋ ಇದೆ ಎಂದು ಹೇಳಿದ್ದರು. ಆದರೆ ಇಲ್ಲೆಲ್ಲೂ ಕಾಣಿಸುತ್ತಿಲ್ಲವಲ್ಲ’’ ಎಂದು ಪ್ರಶ್ನಿಸುತ್ತಾರೆ. ಆಗ ಮರವು, ‘‘ಸ್ಪರ್ಧಿಗಳು ಇಲ್ಲಿ ಬರಬೇಕಾದರೆ ದಟ್ಟ ಕಾನನವನ್ನು ಹಾದು ಬರಬೇಕು’’ ಎನ್ನುತ್ತದೆ. ನಂತರ ಮಾತನಾಡುವ ಸಲ್ಮಾನ್, ‘‘ಸ್ಪರ್ಧಿಗಳಿಗೆ ಈ ಬಾರಿ ಬಹಳ ಕಷ್ಟಕರವಾಗಿದ್ದರೂ, ನಿಮಗೆ ಮನರಂಜನೆ ಮೊದಲಿಗಿಂತ ಹೆಚ್ಚೇ ಸಿಗುತ್ತದೆ’’ ಎಂದಿದ್ಧಾರೆ. ಸಲ್ಮಾನ್ ಹಾಗೂ ವಿಶ್ವಸುಂತ್ರಿ ಮಾತಿನ ಮೂಲಕ ವೀಕ್ಷಕರ ಕುತೂಹಲ ಮತ್ತಷ್ಟು ಹೆಚ್ಚಾಗಿದ್ದು, ಈಗಾಗಲೇ ಹಲವು ಹೊಸತನಗಳನ್ನು ಹೊಂದಿರುವ ಬಿಗ್ ಬಾಸ್ 15 ಮತ್ತಷ್ಟು ವಿನೂತನವಾಗಿ ಮೂಡಿಬರಲಿದೆಯೇ ಎಂಬ ಕುತೂಹಲ ಮೂಡಿಸಿದೆ.
View this post on Instagram
ಕಳೆದ ವಾರ, ರೇಖಾ ಅವರ ಧ್ವನಿ ಬಿಗ್ ಬಾಸ್ನಲ್ಲಿರಲಿದೆ ಎಂಬುದನ್ನು ಪ್ರೊಮೊ ಮೂಲಕ ಪರಿಚಯಿಸಿದ್ದ ಚಾನೆಲ್, ಈ ಬಾರಿ ವಿನೂತನ ಕಲ್ಪನೆಯ ಪ್ರೊಮೊ ಬಿಡುಗಡೆ ಮಾಡಿದೆ. ರೇಖಾ ಮೊದಲ ಬಾರಿಗೆ ಬಿಗ್ ಬಾಸ್ ಸ್ಪರ್ಧೆಯ ಭಾಗವಾಗಿದ್ದಾರೆ. ಪ್ರಸ್ತುತ ಬಿಗ್ ಬಾಸ್ ಮುಖ್ಯ ಸ್ಪರ್ಧೆಗೂ ಮುನ್ನ ಬಿಗ್ ಬಾಸ್ ಒಟಿಟಿ ಕಾರ್ಯಕ್ರಮ ನಡೆಯುತ್ತಿದ್ದು, ಕರಣ್ ಜೋಹರ್ ನಡೆಸಿಕೊಡುತ್ತಿದ್ದಾರೆ. ಶಮಿತಾ ಶೆಟ್ಟಿ, ರಾಕೇಶ್ ಬಾಪಟ್, ಮಿಲಿಂದ್ ಗಾಬಾ, ನೇಹಾ ಭಾಸಿನ್, ದಿವ್ಯಾ ಅಗರವಾಲ್ ಮೊದಲಾದವರು ಭಾಗವಾಗಿರುವ ಈ ಸ್ಪರ್ಧೆಯು ಮೊದಲಿಗಿಂತ ಭಿನ್ನವಾಗಿ ನಡೆದುಬರುತ್ತಿದೆ.
ಇದನ್ನೂ ಓದಿ:
ರಾಜ್ಕುಮಾರ್ ಸಿನಿಮಾ ಟೈಟಲ್ ಮರುಬಳಕೆಗೆ ಶೀಘ್ರವೇ ಬೀಳಲಿದೆ ಬ್ರೇಕ್?
‘ಲೇಡಿ ಗ್ಯಾಂಗ್’ನೊಂದಿಗೆ ಕರೀನಾ ಕಪೂರ್; ಮಲೈಕಾ ಅರೋರಾ, ಕರಿಷ್ಮಾ ಮೊದಲಾದವರ ಜೊತೆ ಫೊಟೊಗೆ ಭರ್ಜರಿ ಪೋಸ್
(Salman Khan reveals in a promo that contestants have to cross jungle before entering Big Boss house)