ರಾಜ್ಕುಮಾರ್ ಸಿನಿಮಾ ಟೈಟಲ್ ಮರುಬಳಕೆಗೆ ಶೀಘ್ರವೇ ಬೀಳಲಿದೆ ಬ್ರೇಕ್?
ರಾಜ್ಕುಮಾರ್ ನಟನೆಯ ಬಹುತೇಕ ಚಿತ್ರಗಳು ಹಿಟ್ ಲಿಸ್ಟ್ನಲ್ಲಿವೆ. ಈ ಸಿನಿಮಾದ ಟೈಟಲ್ ಮರುಬಳಕೆಯಾದರೆ ಹೊಸ ಚಿತ್ರಕ್ಕೆ ಇದು ಪ್ಲಸ್ ಪಾಯಿಂಟ್ ಆಗುವುದರಲ್ಲಿ ಅನುಮಾನವಿಲ್ಲ.
ಹಳೆಯ ಸಿನಿಮಾಗಳ ಟೈಟಲ್ ಮರುಬಳಕೆ ಮಾಡಿಕೊಂಡು ಸಿನಿಮಾ ಮಾಡುವ ಟ್ರೆಂಡ್ ಸ್ಯಾಂಡಲ್ವುಡ್ ಸೇರಿದಂತೆ ಬಹುತೇಕ ಚಿತ್ರರಂಗದಲ್ಲಿದೆ. ಹಳೆಯ ಹಿಟ್ ಚಿತ್ರಗಳ ಹೆಸರನ್ನು ಮರುಬಳಕೆ ಮಾಡಿದರೆ ಸಿನಿಮಾಗೆ ಮೈಲೇಜ್ ಸಿಗುತ್ತದೆ ಎಂಬುದು ನಿರ್ದೇಶಕರು ಹಾಗೂ ನಿರ್ಮಾಪಕರ ಲೆಕ್ಕಾಚಾರ. ಈಗ ಸ್ಯಾಂಡಲ್ವುಡ್ನಲ್ಲಿ ಈ ಬಗ್ಗೆ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ. ಅದರಲ್ಲೂ ರಾಜ್ಕುಮಾರ್ ಸಿನಿಮಾದ ಟೈಟಲ್ ಮರುಬಳಕೆ ಆಗಬಾರದು ಎನ್ನುವ ಆಗ್ರಹ ಜೋರಾಗಿದೆ. ಒಂದೊಮ್ಮೆ ಇದಕ್ಕೆ ಕಡಿವಾಣ ಬೀಳದೇ ಇದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನೂ ನೀಡಲಾಗಿದೆ.
ರಾಜ್ಕುಮಾರ್ ನಟನೆಯ ಬಹುತೇಕ ಚಿತ್ರಗಳು ಹಿಟ್ ಲಿಸ್ಟ್ನಲ್ಲಿವೆ. ಈ ಸಿನಿಮಾದ ಟೈಟಲ್ ಮರುಬಳಕೆಯಾದರೆ ಹೊಸ ಚಿತ್ರಕ್ಕೆ ಇದು ಪ್ಲಸ್ ಪಾಯಿಂಟ್ ಆಗುವುದರಲ್ಲಿ ಅನುಮಾನವಿಲ್ಲ. ಆದರೆ, ರಾಜ್ಕುಮಾರ್ ಅವರ ಚಿತ್ರದ ಟೈಟಲ್‌ಗಳಿಗೆ ತಕ್ಕಂತೆ ಸಿನಿಮಾಗಳು ಸಿದ್ಧವಾಗುತ್ತಿಲ್ಲ ಎಂಬುದು ರಾಜ್ ಕುಮಾರ್ ಅಭಿಮಾನಿ ಸಂಘಗಳ ಅಭಿಪ್ರಾಯ.
ಈ ಕಾರಣಕ್ಕೆ ರಾಜ್ಕುಮಾರ್ ಅವರ ಹಳೆಯ ಸಿನಿಮಾದ ಟೈಟಲ್ಗಳ ಮರು ಬಳಕೆಗೆ ಬ್ರೇಕ್ ಬೀಳಬೇಕು ಎಂದು ಅಣ್ಣಾವ್ರ ಅಭಿಮಾನಿ ಸಂಘದವರು ಒತ್ತಾಯಿಸಿದ್ದಾರೆ. ಸೋಮವಾರ (ಆಗಸ್ಟ್ 30) ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಲಿದ್ದಾರೆ. ಈ ಮನವಿಯನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಹೇಗೆ ಸ್ವೀಕರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು, ಚಲನಚಿತ್ರ ವಾಣಿಜ್ಯ ಮಂಡಳಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೆ ಇದ್ದರೆ ಉಗ್ರ ಹೋರಾಟ ಮಾಡುವುದಾಗಿ ರಾಜ್ಕುಮಾರ್ ಅಭಿಮಾನಿ ಸಂಘದವರು ಎಚ್ಚರಿಕೆ ನೀಡಿದ್ದಾರೆ. ರಾಜ್ಕುಮಾರ್ ಸಿನಿಮಾ ಬಗ್ಗೆ ಯೂಟ್ಯೂಬ್ ಮೊದಲಾದ ಕಡೆ ಹುಡುಕಾಟ ನಡೆಸಿದರೆ ಮರುಬಳಕೆಯಾದ ಸಿನಿಮಾಗಳ ಟೈಟಲ್ ರಾರಾಜಿಸುತ್ತದೆ. ಇದಕ್ಕೆ ಕಡಿವಾಣ ಹಾಕಬೇಕು ಅನ್ನೋ ಉದ್ದೇಶವೂ ಇದರಲ್ಲಿ ಸೇರಿದೆ. ಸೋಮವಾರ (ಆಗಸ್ಟ್ 29) ಬೆಳಿಗ್ಗೆ 11 ಘಂಟೆಗೆ ಮನವಿ ಮಾಡಲು ಅಣ್ಣಾವ್ರ ಅಭಿಮಾನಿ ಸಂಘಟನೆಯವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ತೆರಳುತ್ತಿದ್ದಾರೆ.
ಇದನ್ನೂ ಓದಿ: ಶಾರುಖ್ ಸ್ಟಾರ್ ಆಗಲು ಕಾರಣವೇ ಡ್ರಗ್ಸ್ ಕೇಸ್ ಆರೋಪಿ ಅರ್ಮಾನ್ ಕೊಹ್ಲಿ; ಇಲ್ಲಿದೆ ಪೂರ್ತಿ ಚರಿತ್ರೆ