ಶಾರುಖ್​ ಸ್ಟಾರ್​ ಆಗಲು ಕಾರಣವೇ ಡ್ರಗ್ಸ್​ ಕೇಸ್​ ಆರೋಪಿ ಅರ್ಮಾನ್​ ಕೊಹ್ಲಿ; ಇಲ್ಲಿದೆ ಪೂರ್ತಿ ಚರಿತ್ರೆ

ಶಾರುಖ್​ ಸ್ಟಾರ್​ ಆಗಲು ಕಾರಣವೇ ಡ್ರಗ್ಸ್​ ಕೇಸ್​ ಆರೋಪಿ ಅರ್ಮಾನ್​ ಕೊಹ್ಲಿ; ಇಲ್ಲಿದೆ ಪೂರ್ತಿ ಚರಿತ್ರೆ
ಅರ್ಮಾನ್​ ಕೊಹ್ಲಿ, ಶಾರುಖ್​ ಖಾನ್

Armaan Kohli | Shah Rukh Khan: ಶಾರುಖ್​ ಖಾನ್​ ನಟಿಸಿದ ಮೊದಲ ಸಿನಿಮಾ ‘ದೀವಾನಾ’ 1992ರಲ್ಲಿ ತೆರಕಂಡಿತು. ಆ ಚಿತ್ರಕ್ಕೆ ಶಾರುಖ್​ ಖಾನ್​ಗಿಂತಲೂ ಮುಂಚೆ ಆಯ್ಕೆ ಆಗಿದ್ದವರು ಇದೇ ಡ್ರಗ್​ ಕೇಸ್​ ಆರೋಪಿ ಅರ್ಮಾನ್ ಕೊಹ್ಲಿ!

TV9kannada Web Team

| Edited By: Madan Kumar

Aug 29, 2021 | 1:18 PM

ಬಾಲಿವುಡ್​ ನಟ ಅರ್ಮಾನ್​ ಕೊಹ್ಲಿ (Armaan Kohli) ಅವರು ಡ್ರಗ್ಸ್​ ಕೇಸ್​ನಲ್ಲಿ ಆರೋಪಿಯಾಗಿ ಈಗ ಪೊಲೀಸರ ವಶದಲ್ಲಿದ್ದಾರೆ. ಎನ್​ಸಿಬಿ ಅಧಿಕಾರಿಗಳು ಭಾನುವಾರ (ಆ.29) ಮುಂಜಾನೆ ಅವರನ್ನು ಬಂಧಿಸಿದ್ದಾರೆ. ಶನಿವಾರ ಅರ್ಮಾನ್​ ಕೊಹ್ಲಿ ಮನೆ ಮೇಲೆ ದಾಳಿ ನಡೆಸಿದಾಗ ಅನೇಕ ಮಾದಕ ವಸ್ತುಗಳು ಪತ್ತೆ ಆಗಿವೆ ಎನ್ನಲಾಗಿದೆ. ಬಾಲಿವುಡ್​ನ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದರೂ ಕೂಡ ಇತ್ತೀಚಿನ ವರ್ಷಗಳಲ್ಲಿ ಅವರ ಜನಪ್ರಿಯತೆ ಕಡಿಮೆ ಆಗಿತ್ತು. ಈಗ ಡ್ರಗ್ಸ್​ ಕೇಸ್ (Drugs Case)​ ಕಾರಣದಿಂದ ಏಕಾಏಕಿ ಅರ್ಮಾನ್​ ಕೊಹ್ಲಿಯ ಹಳೇ ಚರಿತ್ರೆಯಲ್ಲ ಚರ್ಚೆಗೆ ಬರುತ್ತಿದೆ. ಅಚ್ಚರಿ ಎಂದರೆ ಅವರ ಬಗ್ಗೆ ನಟ ಶಾರುಖ್​ ಖಾನ್​ (Shah Rukh Khan) ಕೂಡ ಹಲವು ಬಾರಿ ಮಾತನಾಡಿದ್ದರು. ಶಾರುಖ್​ಗೆ ಸ್ಟಾರ್​ ಪಟ್ಟ ಸಿಗಲು ಅರ್ಮಾನ್​ ಕೊಹ್ಲಿ ಕೂಡ ಪರೋಕ್ಷವಾಗಿ ಕಾರಣ ಆಗಿದ್ದರು ಎಂಬುದು ವಿಶೇಷ.

ಶಾರುಖ್​ ಖಾನ್​ ನಟಿಸಿದ ಮೊದಲ ಸಿನಿಮಾ ‘ದೀವಾನಾ’ 1992ರಲ್ಲಿ ತೆರಕಂಡಿತು. ಆ ಚಿತ್ರದಲ್ಲಿ ಶಾರುಖ್​ ಜೊತೆ ರಿಷಿ ಕಪೂರ್​ ಕೂಡ ನಟಿಸಿದ್ದರು. ಅಚ್ಚರಿ ಎಂದರೆ ‘ದೀವಾನಾ’ ಸಿನಿಮಾಗೆ ಶಾರುಖ್​ ಖಾನ್​ಗಿಂತಲೂ ಮುಂಚೆ ಆಯ್ಕೆ ಆಗಿದ್ದವರು ಇದೇ ಅರ್ಮಾನ್ ಕೊಹ್ಲಿ! ಅವರು ಒಂದು ಹಂತದ ಶೂಟಿಂಗ್ ಕೂಡ ಮುಗಿಸಿದ್ದರು. ಆದರೆ ಮಧ್ಯದಲ್ಲಿ ಚಿತ್ರತಂಡದ ಜೊತೆ ಭಿನ್ನಾಭಿಪ್ರಾಯ ಮೂಡಿದ್ದರಿಂದ ಅವರು ಆ ಸಿನಿಮಾದಿಂದ ಹಿಂದೆ ಸರಿದರು. ಅವರು ಬಿಟ್ಟುಹೋದ ಸ್ಥಾನಕ್ಕೆ ಬೇರೆ ಹೀರೋ ಆಯ್ಕೆ ಮಾಡಲು ನಿರ್ದೇಶಕ ರಾಜ್​ ಕನ್ವರ್​ ತುಂಬ ಹುಡುಕಾಡಿದರು.

ಅನಿಲ್​ ಕಪೂರ್​, ಸನ್ನಿ ಡಿಯೋಲ್​, ಗೋವಿಂದ ಮತ್ತು ಟಾಲಿವುಡ್​ ನಟ ನಾಗಾರ್ಜುನ ಅವರಿಗೂ ಆಫರ್​ ನೀಡಲಾಯಿತು. ಆದರೆ ಯಾರೂ ಆ ಪಾತ್ರವನ್ನು ಒಪ್ಪಿಕೊಳ್ಳಲಿಲ್ಲ. ಆಗ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಶಾರುಖ್​ ಖಾನ್​ಗೆ ಈ ಆಫರ್​ ಹೋಯಿತು. ಆರಂಭದಲ್ಲಿ ಡೇಟ್​ ಸಮಸ್ಯೆ ಎದುರಾದರೂ ಕೂಡ ಅಂತಿಮವಾಗಿ ಅದರಲ್ಲಿ ನಟಿಸಲು ಶಾರುಖ್​ ಒಪ್ಪಿಕೊಂಡರು. ಸಿನಿಮಾ​ ಹಿಟ್​ ಆಯಿತು! ಮೊದಲ ಚಿತ್ರದಲ್ಲಿಯೇ ಶಾರುಖ್​ ಖಾನ್​ ಅವರನ್ನು ಜನರು ಮೆಚ್ಚಿಕೊಂಡರು. ಫಿಲ್ಮ್​ ಫೇರ್​ ಪ್ರಶಸ್ತಿ ಕೂಡ ಅವರಿಗೆ ಸಿಕ್ಕಿತು.

ಅರ್ಮಾನ್​ ಕೊಹ್ಲಿ ಬಿಟ್ಟು ಹೋದ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಶಾರುಖ್​ಗೆ ಹೀರೋ ಪಟ್ಟ ಸಿಕ್ಕಿತು. ಬಳಿಕ ಅವರು ಸ್ಟಾರ್​ ಆದರು. ಈ ಮಾತನ್ನು ಕೆಲವು ಸಂದರ್ಶನದಲ್ಲಿ ಸ್ವತಃ ಶಾರುಖ್​ ಹೇಳಿಕೊಂಡಿದ್ದುಂಟು. ‘ನಾನು ಸ್ಟಾರ್​ ಆಗಿದ್ದಕ್ಕೆ ಅರ್ಮಾನ್​ ಕೊಹ್ಲಿಯೇ ಕಾರಣ. ದೀವಾನಾ ಸಿನಿಮಾದ ಮೊದಲಿನ ಪೋಸ್ಟರ್​ನಲ್ಲಿ ಅವರು ನಟಿ ದಿವ್ಯಾ ಭಾರತಿ ಜೊತೆ ಕಾಣಿಸಿಕೊಂಡಿದ್ದರು. ನಾನು ಇಂದಿಗೂ ಆ ಪೋಸ್ಟರ್​ ಇಟ್ಟುಕೊಂಡಿದ್ದೇನೆ. ನನ್ನನ್ನು ಸ್ಟಾರ್​ ಮಾಡಿದ್ದಕ್ಕೆ ಧನ್ಯವಾದಗಳು’ ಎಂದು ಶಾರುಖ್​ ಹೇಳಿದ್ದರು.

ಅರ್ಮಾನ್​ ಕೊಹ್ಲಿ ಹಿನ್ನಲೆ:

ಬಾಲಿವುಡ್​ ನಿರ್ದೇಶಕ ರಾಜ್​ಕುಮಾರ್​ ಕೊಹ್ಲಿ ಹಾಗೂ ನಟಿ ನಿಶಿ ಅವರ ಪುತ್ರ ಅರ್ಮಾನ್​ ಕೊಹ್ಲಿ. ಬಾಲನಟನಾಗಿಯೇ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. 1992ರಲ್ಲಿ ಅವರ ತಂದೆಯೇ ನಿರ್ದೇಶಿಸಿದ ‘ವಿರೋಧಿ’ ಸಿನಿಮಾ ಮೂಲಕ ಅವರು ಹೀರೋ ಆದರು. ನಂತರ ಅನೇಕ ಸಿನಿಮಾಗಳಲ್ಲಿ ಅವರು ನಾಯಕನಾಗಿ ನಟಿಸಿದರು. ಹಿಂದಿ ಬಿಗ್​ ಬಾಸ್​ ಸೀಸನ್​ 7ರಲ್ಲಿ ಅವರು ಸ್ಪರ್ಧಿಸಿದ್ದರು. 98 ದಿನಗಳ ಕಾಲ ಪೈಪೋಟಿ ನೀಡಿದ್ದರು.

ಇದನ್ನೂ ಓದಿ:

‘ನಾನು ಜೈಲಿಗೆ ಹೋಗಲು ಹಿಂಜರಿಯುವುದಿಲ್ಲ’; ಪುತ್ರಿ ಸುಹಾನಾ ಬಾಯ್​ಫ್ರೆಂಡ್​ ಬಗ್ಗೆ ಶಾರುಖ್​ ಖಡಕ್​ ವಾರ್ನಿಂಗ್​

Armaan Kohli: ಡ್ರಗ್ಸ್​ ಕೇಸ್​ನಲ್ಲಿ ನಟ ಅರ್ಮಾನ್​ ಕೊಹ್ಲಿ ಬಂಧನ; ಮನೆಯಲ್ಲಿ ಮಾದಕ ವಸ್ತು​ ಪತ್ತೆ

Follow us on

Related Stories

Most Read Stories

Click on your DTH Provider to Add TV9 Kannada