ಶಾರುಖ್​ ಪುತ್ರಿ ಸುಹಾನಾ ಖಾನ್​ ಹಾಟ್​ ಫೋಟೋಶೂಟ್ ವೈರಲ್​; ಅಪ್ಪನ ಕಮೆಂಟ್​ ಏನು?​

ಶಾರುಖ್​ ಖಾನ್​ ಮಗಳು ಸುಹಾನಾ ಖಾನ್​ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಸದ್ಯಕ್ಕೆ ಕೇವಲ ಫೋಟೋಶೂಟ್​ಗಳ ಮೂಲಕ ಝಲಕ್​ ನೀಡುತ್ತಿರುವ ಅವರು ಆದಷ್ಟು ಬೇಗ ಸಿನಿಮಾರಂಗಕ್ಕೆ ಕಾಲಿಡಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.

ಶಾರುಖ್​ ಪುತ್ರಿ ಸುಹಾನಾ ಖಾನ್​ ಹಾಟ್​ ಫೋಟೋಶೂಟ್ ವೈರಲ್​; ಅಪ್ಪನ ಕಮೆಂಟ್​ ಏನು?​
ಸುಹಾನಾ ಖಾನ್​
Follow us
TV9 Web
| Updated By: ಮದನ್​ ಕುಮಾರ್​

Updated on: Jul 25, 2021 | 9:56 AM

ಬಾಲಿವುಡ್​ ಸ್ಟಾರ್​ ನಟ ಶಾರುಖ್​ ಖಾನ್​ (Shah Rukh Khan) ಅವರ ಪುತ್ರಿ ಸುಹಾನಾ ಖಾನ್​ (Suhana Khan) ಇನ್ನೂ ಚಿತ್ರರಂಗಕ್ಕೆ ಕಾಲಿಟ್ಟಿಲ್ಲ. ನ್ಯೂಯಾರ್ಕ್​ ಯೂನಿವರ್ಸಿಟಿಯಲ್ಲಿ ಅವರು ನಟನೆಯ ಪಾಠಗಳನ್ನು ಕಲಿಯುತ್ತಿದ್ದಾರೆ. ಇಂಗ್ಲೆಂಡ್​ನಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಬಣ್ಣದ ಲೋಕಕ್ಕೆ ಎಂಟ್ರಿ ನೀಡುವುದಕ್ಕೂ ಮುನ್ನವೇ ಅವರು ಫೇಮಸ್​ ಆಗಿದ್ದಾರೆ. ಆಗಾಗ ಫೋಟೋಶೂಟ್​ ಮೂಲಕ ಹೆಚ್ಚು ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಸುಹಾನಾ ಖಾನ್​ ಮಾಡಿಸಿರುವ ಹೊಸ ಫೋಟೋಶೂಟ್​  (Photoshoot) ಕಂಡು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಗ್ಲಾಮರಸ್​​ ಆಗಿರುವ ಈ ಫೋಟೋಗಳು ವೈರಲ್ ಆಗಿವೆ. ಅದಕ್ಕೆ ಸ್ವತಃ ಶಾರುಖ್​ ಖಾನ್​ ಕೂಡ ಕಮೆಂಟ್​ ಮಾಡಿದ್ದಾರೆ.

ಈಜುಕೊಳದ ಪಕ್ಕದಲ್ಲಿ ಕುಳಿತು, ಕೈಯಲ್ಲಿ ಕೋಕ್​ ಬಾಟಲಿ ಹಿಡಿದುಕೊಂಡು ಸುಹಾನಾ ಖಾನ್​ ಪೋಸ್​​ ನೀಡಿದ್ದಾರೆ. ಅಂದಹಾಗೆ ಈ ಫೋಟೋ ಕ್ಲಿಕ್ಕಿಸಿರುವುದು ಸುಹಾನಾ ತಾಯಿ ಗೌರಿ ಖಾನ್​. ‘ಇದನ್ನು ಪೆಪ್ಸಿ ಎಂದುಕೊಳ್ಳಿ. ನನ್ನನ್ನು ನಟಿ ಸಿಂಡಿ ಕ್ರಾಫರ್ಡ್​ ಅಂತ ಭಾವಿಸಿಕೊಳ್ಳಿ’ ಎಂದು ಈ ಫೋಟೋಗಳಿಗೆ ಸುಹಾನಾ ಕ್ಯಾಪ್ಷನ್​ ನೀಡಿದ್ದಾರೆ.

ಪುತ್ರಿಯ ಫೋಟೋ ಕಂಡು ಶಾರುಖ್​ಗೆ ಖುಷಿ ಆಗಿದೆ. ‘ಇದನ್ನು ನೀನೇ ಎಂದುಕೊಳ್ಳಲಾ? ಪೆಪ್ಸಿ ಅಷ್ಟೇನೂ ಮುಖ್ಯವಲ್ಲ ಎಂದುಕೊಂಡ ನಂತರವೂ ಈ ಫೋಟೋಗೆ ಮೆಚ್ಚುಗೆ ಸೂಚಿಸಲೇ? ಎಂದು ಶಾರುಖ್​ ಕಮೆಂಟ್​ ಮಾಡಿದ್ದಾರೆ. ಶಾರುಖ್​ ಅವರ ಈ ಕಮೆಂಟ್​ ಅನ್ನು ಸಾವಿರಾರು ಜನರು ಲೈಕ್​ ಮಾಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಸುಹಾನಾ ಹಂಚಿಕೊಂಡ ಈ ಫೋಟೋಗಳಿಗೆ 4.6 ಲಕ್ಷಕ್ಕೂ ಅಧಿಕ ಲೈಕ್ಸ್​ ಸಿಕ್ಕಿದೆ.

View this post on Instagram

A post shared by Suhana Khan (@suhanakhan2)

View this post on Instagram

A post shared by Gauri Khan (@gaurikhan)

ಈವರೆಗೆ ಸುಹಾನಾ ಒಂದೇ ಒಂದು ಸಿನಿಮಾದಲ್ಲಿ ನಟಿಸದಿದ್ದರೂ ಕೂಡ ಅವರ ಜನಪ್ರಿಯತೆ ಯಾವ ನಟಿಗಿಂತಲೂ ಕಡಿಮೆ ಏನಿಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಅವರು ಸಕ್ರಿಯರಾಗಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರ ಅಧಿಕೃತ ಖಾತೆಯನ್ನು 19 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ. ಸದ್ಯಕ್ಕೆ ಕೇವಲ ಫೋಟೋಶೂಟ್​ಗಳ ಮೂಲಕ ಝಲಕ್​ ನೀಡುತ್ತಿರುವ ಶಾರುಖ್​ ಪುತ್ರಿ ಆದಷ್ಟು ಬೇಗ ಸಿನಿಮಾರಂಗಕ್ಕೆ ಕಾಲಿಡಲಿ ಎಂದು ಅವರ ಅಭಿಮಾನಿಗಳು ಬಯಸುತ್ತಿದ್ದಾರೆ. ಕೆಲವು ನಾಟಕ ಮತ್ತು ಕಿರುಚಿತ್ರಗಳಲ್ಲಿ ಸುಹಾನಾ ನಟಿಸಿದ್ದಾರೆ.

ಶಾರುಖ್​ ಸಿನಿಮಾ ವಿಚಾರಕ್ಕೆ ಬರುವುದಾದರೆ, ಸದ್ಯ ಅವರು ‘ಪಠಾಣ್​’​ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಸತತ ಸೋಲುಗಳ ಬಳಿಕ ಒಂದಷ್ಟು ಕಾಲ ಬ್ರೇಕ್​ ಪಡೆದುಕೊಂಡಿದ್ದ ಅವರು ‘ಪಟಾಣ್​’ ಸಿನಿಮಾ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ:

‘ನಾನು ಜೈಲಿಗೆ ಹೋಗಲು ಹಿಂಜರಿಯುವುದಿಲ್ಲ’; ಪುತ್ರಿ ಸುಹಾನಾ ಬಾಯ್​ಫ್ರೆಂಡ್​ ಬಗ್ಗೆ ಶಾರುಖ್​ ಖಡಕ್​ ವಾರ್ನಿಂಗ್​

ಶಾರುಖ್​ ಖಾನ್​ ಮಗಳು ಸುಹಾನಾಗೆ ಬಂತು ಮ್ಯಾರೇಜ್​ ಪ್ರಪೋಸಲ್​; ಹುಡುಗನ ಸ್ಯಾಲರಿ ಎಷ್ಟು ಗೊತ್ತಾ?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ