ಶಾರುಖ್​ ಖಾನ್​ ಮಗಳು ಸುಹಾನಾಗೆ ಬಂತು ಮ್ಯಾರೇಜ್​ ಪ್ರಪೋಸಲ್​; ಹುಡುಗನ ಸ್ಯಾಲರಿ ಎಷ್ಟು ಗೊತ್ತಾ?

ಶಾರುಖ್​ ಖಾನ್​ ಬಾಲಿವುಡ್​ನ ಕಿಂಗ್​ ಖಾನ್​. ಬಾಲಿವುಡ್​ನಲ್ಲಿ ಸಿದ್ಧವಾಗುತ್ತಿರುವ ‘ಪಠಾಣ್’​ ಚಿತ್ರಕ್ಕಾಗಿ ಅವರು ಬರೋಬ್ಬರಿ 100 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಶಾರುಖ್​ ಆದಾಯ ಸಿನಿಮಾ ರಂಗಕ್ಕೆ ಮಾತ್ರ ಸೀಮಿತವಾಗಿಲ್ಲ.

ಶಾರುಖ್​ ಖಾನ್​ ಮಗಳು ಸುಹಾನಾಗೆ ಬಂತು ಮ್ಯಾರೇಜ್​ ಪ್ರಪೋಸಲ್​; ಹುಡುಗನ ಸ್ಯಾಲರಿ ಎಷ್ಟು ಗೊತ್ತಾ?
ಸುಹಾನಾ ಖಾನ್
Follow us
ರಾಜೇಶ್ ದುಗ್ಗುಮನೆ
|

Updated on: May 26, 2021 | 3:18 PM

ಸ್ಟಾರ್​ ಮಕ್ಕಳ ಮದುವೆ ಎಂದರೆ ಅದ್ದೂರಿಯಾಗಿ ನಡೆಯುತ್ತದೆ. ಇನ್ನು, ಅವರಿಗೆ ಬರುವ ಸಂಬಂಧ ಕೂಡ ದೊಡ್ಡದೇ ಆಗಿರುತ್ತದೆ. ಸಾಕಷ್ಟು ಐಶ್ವರ್ಯ ಇದ್ದು ಚಿತ್ರರಂಗದವರು ಸಾಮಾನ್ಯರನ್ನು ಮದುವೆ ಆದ ಉದಾಹರಣೆ ಇಲ್ಲ. ಅದೇನಿದ್ದರೂ ಸಿನಿಮಾ ಕಥೆಗೆ ಮಾತ್ರ ಸೀಮಿತ. ಈಗ ಶಾರುಖ್​ ಖಾನ್​ ಮಗಳಿಗೆ ಮದುವೆ ಪ್ರಪೋಸಲ್​ ಒಂದು ಬಂದಿದೆ. ಹುಡುಗನ ಸ್ಯಾಲರಿ ಕೇಳಿ ಎಲ್ಲರೂ ಅಚ್ಚರಿಪಟ್ಟಿದ್ದಾರೆ.

ಶಾರುಖ್​ ಖಾನ್​ ಬಾಲಿವುಡ್​ನ ಕಿಂಗ್​ ಖಾನ್​. ಬಾಲಿವುಡ್​ನಲ್ಲಿ ಸಿದ್ಧವಾಗುತ್ತಿರುವ ‘ಪಠಾಣ್’​ ಚಿತ್ರಕ್ಕಾಗಿ ಅವರು ಬರೋಬ್ಬರಿ 100 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಶಾರುಖ್​ ಆದಾಯ ಸಿನಿಮಾ ರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರದೇ ಆದ ಕ್ರಿಕೆಟ್​ ಟೀಂ, ಪ್ರೊಡಕ್ಷನ್​ ಹೌಸ್​​ ಇದೆ. ಸಾಕಷ್ಟು ಉದ್ಯಮಗಳಲ್ಲಿ ಅವರು ಪಾಲುದಾರರು. ಸಾಕಷ್ಟು ಪ್ರತಿಷ್ಠಿತ ಕಂಪೆನಿಗಳಿಗೆ ಶಾರುಖ್​ ರಾಯಭಾರಿ. ಹೀಗಾಗಿ, ಶಾರುಖ್​ ವರ್ಷದ ಆದಾಯ ಸಾಮಾನ್ಯರ ಲೆಕ್ಕಕ್ಕೆ ಸಿಗುವಂತದ್ದಲ್ಲ.

ಇಂಥ ಸ್ಟಾರ್​ ನಟನ ಮಗಳು ಸುಹಾನಾ. ಅವರು ಸದ್ಯ, ಅಮೆರಿಕದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಅವರು ಇತ್ತೀಚೆಗಷ್ಟೇ 21ನೇ ವರ್ಷದ ಜನ್ಮದಿನಾಚರಣೆ ಆಚರಿಸಿಕೊಂಡಿದ್ದರು. ಅವರ ಬರ್ತ್​​ಡೇ ಆಚರಣೆ ಜೋರಾಗಿಯೇ ಇತ್ತು. ಅವರ ತಾಯಿ ಗೌರಿ ಖಾನ್​ ಟ್ವಿಟರ್​ನಲ್ಲಿ ವಿಶ್​ ಮಾಡಿದ್ದರು. ಇದಕ್ಕೆ ಸಾಕಷ್ಟು ಜನರು ಕಮೆಂಟ್​ ಮಾಡಿ ಶುಭ ಹಾರೈಸಿದ್ದರು.

ಈ ವೇಳೆ ಸುಹೈಬ್​ ಹೆಸರಿನ ವ್ಯಕ್ತಿಯ ಕಮೆಂಟ್​ ಎಲ್ಲರನ್ನು ಆಕರ್ಷಿಸಿತ್ತು. ಗೌರಿ ಮೇಡಮ್​ ನನ್ನ ಮದುವೆಯನ್ನು ಸುಹಾನಾ ಜತೆ ಮಾಡಿ. ನನ್ನ ತಿಂಗಳ ಸ್ಯಾಲರಿ 1 ಲಕ್ಷಕ್ಕೂ ಅಧಿಕವಾಗಿದೆ ಎಂದು ಬರೆದುಕೊಂಡಿದ್ದಾನೆ.

ಈ ಕಮೆಂಟ್​ ನೋಡಿದ ಸಾಕಷ್ಟು ಮಂದಿ ನಕ್ಕಿದ್ದಾರೆ. ಸುಹಾನಾ ನಿತ್ಯದ ಖರ್ಚು 1 ಲಕ್ಷಕ್ಕೂ ಅಧಿಕ ಇರಬಹುದು. ಹೀಗಿರುವಾಗ ಕೇವಲ ಒಂದು ಲಕ್ಷ ಸ್ಯಾಲರಿ ಹೊಂದಿರುವ ವ್ಯಕ್ತಿ ಸುಹಾನಾ ಅವರನ್ನು ವರಿಸುತ್ತಾರೆಯೇ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಸದ್ಯ, ಈ ಟ್ವೀಟ್​ನ ಕಮೆಂಟ್​ ಸಾಕಷ್ಟು ವೈರಲ್​ ಆಗಿದೆ.

ಶಾರುಖ್​ ಮಗಳ ಮೇಲೆ ಹೆಚ್ಚು ಕಾಳಜಿ ಹೊಂದಿದ್ದಾರೆ. ತಮ್ಮ ಮಗಳನ್ನು ಮದುವೆ ಆಗುವ ಹುಡುಗ ಹೇಗಿರಬೇಕು ಎಂಬ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆ ವಿಡಿಯೋ ಇತ್ತೀಚೆಗೆ ಸಾಕಷ್ಟು ವೈರಲ್​ ಆಗಿತ್ತು.

ಇದನ್ನೂ ಓದಿ: Suhana Khan: ಗರ್ಲ್ಸ್​ ಗ್ಯಾಂಗ್​ನಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ಶಾರುಖ್​ ಮಗಳು ಸುಹಾನಾ ಖಾನ್​

‘ನಾನು ಜೈಲಿಗೆ ಹೋಗಲು ಹಿಂಜರಿಯುವುದಿಲ್ಲ’; ಪುತ್ರಿ ಸುಹಾನಾ ಬಾಯ್​ಫ್ರೆಂಡ್​ ಬಗ್ಗೆ ಶಾರುಖ್​ ಖಡಕ್​ ವಾರ್ನಿಂಗ್​

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ