‘ರಾಜ್ ಕುಂದ್ರಾ ರಾತ್ರಿಯ ಯೋಗ ಪೋಸ್ ಕಲಿಸುತ್ತಾರೆ’; ಶಿಲ್ಪಾ ಶೆಟ್ಟಿ ತಂಗಿಗೆ ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್
ಶಿಲ್ಪಾ ಶೆಟ್ಟಿಯನ್ನು ಬೆಂಬಲಿಸಿ ಅವರ ತಂಗಿ ಶಮಿತಾ ಶೆಟ್ಟಿ ಮಾಡಿರುವ ಪೋಸ್ಟ್ಗೆ ಕಮೆಂಟ್ ಮಾಡಿದ ಬಹುತೇಕರು ರಾಜ್ ಕುಂದ್ರಾ ವಿಚಾರವನ್ನು ಎಳೆದು ತಂದಿದ್ದಾರೆ. ತುಂಬ ಕಟುವಾಗಿ ಟ್ರೋಲ್ ಮಾಡಿದ್ದಾರೆ.
ರಾಜ್ ಕುಂದ್ರಾ (Raj Kundra) ಮಾಡಿದ ತಪ್ಪಿನಿಂದಾಗಿ ಅವರ ಇಡೀ ಕುಟುಂಬವೇ ಮುಜುಗರ ಅನುಭವಿಸುವಂತಾಗಿದೆ. ಅಶ್ಲೀಲ ಸಿನಿಮಾಗಳನ್ನು ನಿರ್ಮಾಣ ಮಾಡಿ, ಆ್ಯಪ್ಗಳ ಮೂಲಕ ಅಪ್ಲೋಡ್ ಮಾಡಿ ಹಣ ಗಳಿಸುತ್ತಿದ್ದ ಆರೋಪದಲ್ಲಿ ರಾಜ್ ಕುಂದ್ರಾ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅವರ ಪತ್ನಿ ಶಿಲ್ಪಾ ಶೆಟ್ಟಿ, ನಾದಿನಿ ಶಮಿತಾ ಶೆಟ್ಟಿ (Shamita Shetty) ಕೂಡ ಈಗ ನೆಟ್ಟಿಗರಿಂದ ಭಾರಿ ಟ್ರೋಲ್ಗೆ ಒಳಗಾಗುತ್ತಿದ್ದಾರೆ. ಈ ನಟಿಯರು ಮಾಡುವ ಸೋಶಿಯಲ್ ಮೀಡಿಯಾ ಪೋಸ್ಟ್ಗೆ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್ಗಳು ಬರುತ್ತಿವೆ. ಶಿಲ್ಪಾ ಶೆಟ್ಟಿಗೆ (Shilpa Shetty) ಬೆಂಬಲ ನೀಡಿದ ತಂಗಿ ಶಮಿತಾ ಶೆಟ್ಟಿಗೆ ಟ್ರೋಲ್ ಕಾಟ ಶುರು ಆಗಿದೆ.
ಜು.23ರಂದು ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಮೂಲಕ ‘ಹಂಗಮಾ 2’ ಸಿನಿಮಾ ರಿಲೀಸ್ ಆಯಿತು. ಹಲವು ವರ್ಷಗಳ ಬಳಿಕ ಶಿಲ್ಪಾ ಶೆಟ್ಟಿ ನಟಿಸಿರುವ ಸಿನಿಮಾ ಇದು. ಅದಕ್ಕಾಗಿ ಅಕ್ಕನಿಗೆ ಶಮಿತಾ ಶೆಟ್ಟಿ ಶುಭ ಕೋರಿದ್ದಾರೆ.
‘14 ವರ್ಷಗಳ ನಂತರ ನಿನ್ನ ನಟನೆಯ ಹಂಗಾಮಾ 2 ರಿಲೀಸ್ ಆಗುತ್ತಿದೆ. ನಿನಗೆ ಶುಭವಾಗಲಿ. ನೀನು ಇದಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದೀಯ ಎನ್ನುವುದು ಗೊತ್ತು. ನಾನು ನಿನ್ನ ಜತೆ ಸದಾ ಇರುತ್ತೇನೆ. ನೀನು ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದೀಯ. ಪ್ರತಿ ಬಾರಿ ಮತ್ತಷ್ಟು ಸ್ಟ್ರಾಂಗ್ ಆಗುತ್ತಿದ್ದೀಯ. ಈ ಕಷ್ಟವೂ ಕಳೆದು ಹೋಗುತ್ತದೆ. ಹಂಗಾಮಾ 2 ತಂಡಕ್ಕೆ ಆಲ್ ದಿ ಬೆಸ್ಟ್’ ಎಂದು ಶಮಿತಾ ಬರೆದುಕೊಂಡಿದ್ದಾರೆ.
ಆದರೆ ಆ ಪೋಸ್ಟ್ಗೆ ಕಮೆಂಟ್ ಮಾಡಿರುವ ಬಹುತೇಕರು ರಾಜ್ ಕುಂದ್ರಾ ವಿಚಾರವನ್ನು ಎಳೆದು ತಂದಿದ್ದಾರೆ. ತುಂಬ ಕಟುವಾಗಿ ಟ್ರೋಲ್ ಮಾಡಿದ್ದಾರೆ. ಅಂತಹ ಕೆಲವು ಕಮೆಂಟ್ಗಳು ಈಗ ಸಖತ್ ವೈರಲ್ ಆಗುತ್ತಿದೆ. ‘ನಿಮ್ಮ ಅಕ್ಕ ನಮಗೆ ಬೆಳಗ್ಗಿನ ಯೋಗ ಪೋಸ್ಗಳನ್ನು ಕಲಿಸಿಕೊಡುತ್ತಾರೆ. ಆದರೆ ನಿಮ್ಮ ಭಾವ ರಾತ್ರಿಯ ಯೋಗ ಪೋಸ್ಗಳನ್ನು ಕಲಿಸಿಕೊಡುತ್ತಾರೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ‘ರಾಜ್ ಕುಂದ್ರಾ ಹೇಗಿದ್ದಾರೆ? ಅವರನ್ನು ಯಾಕೆ ಪೊಲೀಸರು ಹಿಡಿದುಕೊಂಡು ಹೋಗಿದ್ದಾರೆ? ಈ ಸಂದರ್ಭದಲ್ಲಿ ಶಿಲ್ಪಾಗಿಂತಲೂ ಹೆಚ್ಚು ಶುಭ ಹಾರೈಕೆ ಬೇಕಿರುವುದು ಅವರಿಗೆ’ ಎಂಬಿತ್ಯಾದಿ ಕಮೆಂಟ್ಗಳ ಮೂಲಕ ಜನರು ಕಾಲೆಳೆದಿದ್ದಾರೆ.
ತಮ್ಮ ಹಾಟ್ಶಾಟ್ಸ್ ಆ್ಯಪ್ ಮೂಲಕ ಅಶ್ಲೀಲ ಸಿನಿಮಾಗಳನ್ನು ರಾಜ್ ಕುಂದ್ರಾ ಪ್ರಸಾರ ಮಾಡುತ್ತಿದ್ದರು ಎಂಬ ಆರೋಪ ಇದೆ. ಅಲ್ಲದೆ, ತಮ್ಮ ನಾದಿನಿ ಶಮಿತಾ ಶೆಟ್ಟಿ ಜೊತೆಗೂ ಅವರು ಒಂದು ಸಿನಿಮಾ ಮಾಡಿ, ಅದನ್ನು ಆ್ಯಪ್ನಲ್ಲಿ ಪ್ರಸಾರ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದರು ಎಂಬ ವಿಷಯವನ್ನು ಇತ್ತೀಚೆಗೆ ನಟಿ ಗೆಹನಾ ವಸಿಷ್ಠ್ ಬಾಯಿ ಬಿಟ್ಟಿದ್ದರು.
ಇದನ್ನೂ ಓದಿ:
ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಮೇಲೆ ಕಣ್ಣಿಟ್ಟಿದ್ದ ನೀಲಿ ಚಿತ್ರಗಳ ಆರೋಪಿ ರಾಜ್ ಕುಂದ್ರಾ
‘ಕುಟುಂಬ ಸಮೇತ ಈ ಸಿನಿಮಾ ನೋಡಿ’; ಗಂಡನ ನೀಲಿ ಚಿತ್ರ ದಂಧೆ ನಡುವೆಯೂ ಶಿಲ್ಪಾ ಶೆಟ್ಟಿ ಹೀಗೆ ಹೇಳಿದ್ದೇಕೆ?
Published On - 8:08 am, Sun, 25 July 21