ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಮೇಲೆ ಕಣ್ಣಿಟ್ಟಿದ್ದ ನೀಲಿ ಚಿತ್ರಗಳ ಆರೋಪಿ ರಾಜ್​ ಕುಂದ್ರಾ

ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಅವರು ಬಾಲಿವುಡ್​ಗೆ ಹೊಸಬರೇನೂ ಅಲ್ಲ. ಬೇವಫಾ, ಜೆಹರ್​ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಮೇಲೆ ಕಣ್ಣಿಟ್ಟಿದ್ದ ನೀಲಿ ಚಿತ್ರಗಳ ಆರೋಪಿ ರಾಜ್​ ಕುಂದ್ರಾ
ರಾಜ್​ ಕುಂದ್ರಾ, ಶಿಲ್ಪಾ ಶೆಟ್ಟಿ, ಶಮಿತಾ ಶೆಟ್ಟಿ
Follow us
TV9 Web
| Updated By: ಮದನ್​ ಕುಮಾರ್​

Updated on: Jul 23, 2021 | 2:34 PM

ನೀಲಿ ಚಿತ್ರಗಳ ನಿರ್ಮಾಣದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ರಾಜ್​ ಕುಂದ್ರಾ (Raj Kundra) ಬಗ್ಗೆ ಶಾಕಿಂಗ್​ ವಿಚಾರಗಳು ಹೊರಬರುತ್ತಿವೆ. ಶಿಲ್ಪಾ ಶೆಟ್ಟಿ (Shilpa Shetty) ಪತಿ ಎಂಬ ಕಾರಣಕ್ಕೆ ಸಿಕ್ಕಾಪಟ್ಟೆ ಫೇಮಸ್​ ಆಗಿದ್ದರು ಉದ್ಯಮಿ ರಾಜ್​ ಕುಂದ್ರಾ. ಹಲವು ಬ್ಯುಸಿನೆಸ್​ಗಳನ್ನು ಹೊಂದಿದ್ದ ಅವರು ನೀಲಿ ಚಿತ್ರಗಳ ದಂಧೆಗೆ ಇಳಿದಿದ್ದು ಇಡೀ ಚಿತ್ರರಂಗಕ್ಕೆ ಶಾಕ್​ ನೀಡಿದೆ. ಅವರ ಜೊತೆ ಅನೇಕ ಮಾಡೆಲ್​ಗಳು ಮತ್ತು ನಟಿಯರು ಸಂಪರ್ಕ ಹೊಂದಿದ್ದರು. ಆ ಪೈಕಿ ಹಲವರು ಅಶ್ಲೀಲ ಸಿನಿಮಾಗಳಲ್ಲಿ ನಟಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ (Shamita Shetty) ಜೊತೆಗೂ ಸಿನಿಮಾ ಮಾಡಲು ರಾಜ್​ ಕುಂದ್ರಾ ಪ್ಲ್ಯಾನ್ ಮಾಡಿದ್ದರು ಎಂಬ ವಿಷಯ ಈಗ ಬಹಿರಂಗ ಆಗಿದೆ.

ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಅವರು ಬಾಲಿವುಡ್​ಗೆ ಹೊಸಬರೇನೂ ಅಲ್ಲ. ಬೇವಫಾ, ಜೆಹರ್​ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಆದರೆ 2008ರ ನಂತರ ಅವರು ಚಿತ್ರರಂಗದಲ್ಲಿ ಸಕ್ರಿಯವಾಗಿಲ್ಲ. ಅವರ ಜೊತೆ ಒಂದು ಸಿನಿಮಾ ಮಾಡಲು ರಾಜ್​ ಕುಂದ್ರಾ ಪ್ಲ್ಯಾನ್​ ಮಾಡಿದ್ದರು ಎಂಬ ವಿಚಾರವನ್ನು ನಟಿ ಗೆಹನಾ ವಸಿಷ್ಠ ಬಾಯಿ ಬಿಟ್ಟಿದ್ದಾರೆ. ನೀಲಿ ಚಿತ್ರಗಳ ನಿರ್ಮಾಣದಲ್ಲಿ ಗೆಹನಾ ವಸಿಷ್ಠ ಕೂಡ ಭಾಗಿ ಆಗಿದ್ದರು ಎಂಬ ಗಂಭೀರ ಆರೋಪ ಇದೆ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಚಾರವನ್ನು ಗೆಹನಾ ಬಹಿರಂಗಪಡಿಸಿದ್ದಾರೆ. ‘ರಾಜ್​ ಕುಂದ್ರಾ ಅರೆಸ್ಟ್​ ಆಗುವುದಕ್ಕಿಂತ ಕೆಲವೇ ದಿನಗಳ ಮುನ್ನ ನಾನು ಅವರು ಆಫೀಸ್​ಗೆ ಹೋಗಿದ್ದೆ. ಅವರು ಬಾಲಿಫೇಮ್​ ಎಂಬ ಹೊಸ ಆ್ಯಪ್​ ಲಾಂಚ್​ ಮಾಡಲು ಪ್ಲ್ಯಾನ್​ ರೂಪಿಸಿದ್ದಾರೆ ಎಂಬುದು ನನಗೆ ಆಗ ಗೊತ್ತಾಯಿತು. ಆ ಆ್ಯಪ್​ಗಾಗಿ ಸಿನಿಮಾ, ಚಾಟ್​ ಶೋ, ರಿಯಾಲಿಟಿ ಶೋ, ಮ್ಯೂಸಿಕ್​ ವಿಡಿಯೋಗಳನ್ನು ತಯಾರಿಸುವ ಐಡಿಯಾ ಇತ್ತು. ಹಲವು ಸ್ಕ್ರಿಪ್ಟ್​ಗಳ ಬಗ್ಗೆ ನಾವು ಚರ್ಚೆ ಮಾಡಿದ್ವಿ. ಆ ಪೈಕಿ ಒಂದು ಸಿನಿಮಾದಲ್ಲಿ ಶಮಿತಾ ಶೆಟ್ಟಿ ನಟಿಸುವುದು ಎಂದು ಪ್ಲ್ಯಾನ್​ ಆಗಿತ್ತು’ ಅಂತ ಗೆಹನಾ ವಸಿಷ್ಠ ಹೇಳಿದ್ದಾರೆ.

ಅನೇಕ ನಟಿಯರನ್ನು ಮತ್ತು ಮಾಡೆಲ್​ಗಳನ್ನು ಬಳಸಿಕೊಂಡು ರಾಜ್​ ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಪೊಲೀಸರ ಬಳಿ ಹಲವು ಸಾಕ್ಷ್ಯಗಳು ಇವೆ ಎನ್ನಲಾಗಿದೆ. ಆದರೂ ಕೂಡ ರಾಜ್ ಕುಂದ್ರಾ ಈ ಆರೋಪಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಅವರು ಹೊಸ ವಾದವನ್ನು ಮಾಡುತ್ತಿದ್ದಾರೆ. ‘ನಾನು ಮಾಡಿದ್ದು ನೀಲಿ ಚಿತ್ರಗಳಲ್ಲ. ಅವು ಬರೀ ಕಾಮೋದ್ರೇಕ (Erotic) ಸಿನಿಮಾಗಳು’ ಎಂದು ರಾಜ್​ ಕುಂದ್ರಾ ಹೇಳುತ್ತಿದ್ದಾರೆ. ಈ ವಾದವನ್ನು ನ್ಯಾಯಾಲಯ ಯಾವ ರೀತಿ ಒಪ್ಪಲಿದೆ ಎಂಬ ಕೌತುಕ ಈಗ ಮೂಡಿದೆ.

ಇದನ್ನೂ ಓದಿ:

ಅಶ್ಲೀಲ ಸಿನಿಮಾ ದಂಧೆ: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜೊತೆ ಈ ಸುಂದರಿಯರಿಗೆ ಏನು ಸಂಬಂಧ?

ನೀಲಿ ಚಿತ್ರ ದಂಧೆಯ ಆರೋಪಿ ರಾಜ್​ ಕುಂದ್ರಾ ಒಟ್ಟು ಆಸ್ತಿ ಮೊತ್ತ ಎಷ್ಟು? ಇದು ದಂಗಾಗಿಸುವ ನಂಬರ್​

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ