ಅಶ್ಲೀಲ ಸಿನಿಮಾ ದಂಧೆ: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜೊತೆ ಈ ಸುಂದರಿಯರಿಗೆ ಏನು ಸಂಬಂಧ?

ರಾಜ್​ ಕುಂದ್ರಾ ನಡೆಸುತ್ತಿದ್ದ ಅಶ್ಲೀಲ ಸಿನಿಮಾ ದಂಧೆಯಲ್ಲಿ ನಟಿ-ಮಾಡೆಲ್​ ಗೆಹನಾ ವಸಿಷ್ಠ ಕೂಡ ಅರೆಸ್ಟ್​ ಆಗಿದ್ದಾರೆ. ಈ ಬಗ್ಗೆ ಗೆಹನಾ ಪರ ವಕ್ತಾರರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಗೆಹನಾ ಬೋಲ್ಡ್​ ದೃಶ್ಯಗಳಲ್ಲಿ ನಟಿಸುತ್ತಿದ್ದರು.

ಅಶ್ಲೀಲ ಸಿನಿಮಾ ದಂಧೆ: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜೊತೆ ಈ ಸುಂದರಿಯರಿಗೆ ಏನು ಸಂಬಂಧ?
ಅಶ್ಲೀಲ ಸಿನಿಮಾ ದಂದೆ: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜೊತೆ ಈ ಸುಂದರಿಯರಿಗೆ ಏನು ಸಂಬಂಧ?
TV9kannada Web Team

| Edited By: Madan Kumar

Jul 21, 2021 | 5:26 PM

ಶಿಲ್ಪಾ ಶೆಟ್ಟಿ (Shilpa Shetty) ಪತಿ, ಉದ್ಯಮಿ ರಾಜ್​ ಕುಂದ್ರಾ (Raj Kundra) ಬಗ್ಗೆ ಶಾಕಿಂಗ್​ ಆದಂತಹ ವಿವರಗಳು ಹೊರಬರುತ್ತಲೇ ಇವೆ. ನೀಲಿ ಚಿತ್ರಗಳ ದಂಧೆಯಲ್ಲಿ ತೊಡಗಿಕೊಂಡ ಅವರೀಗ ಪೊಲೀಸರ ಅತಿಥಿ ಆಗಿದ್ದಾರೆ. ಅತ್ತ ಅವರು ಅರೆಸ್ಟ್​ ಆಗುತ್ತಿದ್ದಂತೆಯೇ ಅನೇಕ ನಟಿಯರ ಹೆಸರು ಕೂಡ ಹೊರಬರುತ್ತಿವೆ. ಅಶ್ಲೀಲ ಸಿನಿಮಾಗಳನ್ನು ತಯಾರಿಸಿ, ಆ್ಯಪ್​ಗಳ ಮೂಲಕ ಹಣ ಸಂಪಾದನೆ ಮಾಡುವ ಈ ಕೃತ್ಯದಲ್ಲಿ ಹಲವು ಸುಂದರಿಯರು ಭಾಗಿ ಆಗಿರುವ ಸಾಧ್ಯತೆ ದಟ್ಟವಾಗಿದೆ. ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ರಾಜ್​ ಕುಂದ್ರಾ ಜೊತೆ ಒಡನಾಟ ಹೊಂದಿದ್ದ ಅನೇಕ ನಟಿಯರು ಈಗ ಸುದ್ದಿ ಆಗುತ್ತಿದ್ದಾರೆ.

ಬಾಲಿವುಡ್​ ನಟಿ ಶರ್ಲಿನ್​ ಚೋಪ್ರಾ ಅವರು ಕೂಡ ನೀಲಿ ಚಿತ್ರಗಳ ದಂಧೆಯಲ್ಲಿ ಭಾಗಿ ಆಗಿದ್ದರು. ಈ ಬಗ್ಗೆ ಅವರನ್ನು ಪೊಲೀಸರು ಈ ಮೊದಲೇ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ರಾಜ್​ ಕುಂದ್ರಾ ಬಗ್ಗೆ ಶರ್ಲಿನ್​ ಚೋಪ್ರಾ ಬಾಯಿ ಬಿಟ್ಟಿದ್ದರು. ‘ಈ ದಂಧೆಗೆ ರಾಜ್​ ಕುಂದ್ರಾ ನನ್ನನ್ನು ನೂಕಿದರು’ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ. ಪ್ರತಿ ಪ್ರಾಜೆಕ್ಟ್​ನಲ್ಲಿ ಶರ್ಲಿನ್​ ಚೋಪ್ರಾಗೆ 30 ಲಕ್ಷ ರೂ. ಸಿಗುತ್ತಿತ್ತು. ಆ ರೀತಿ 15ರಿಂದ 30 ಪ್ರಾಜೆಕ್ಟ್​ಗಳಲ್ಲಿ ರಾಜ್​ ಕುಂದ್ರಾ ಜೊತೆ ಶರ್ಲಿನ್​ ಚೋಪ್ರಾ ಕೆಲಸ ಮಾಡಿದ್ದರು ಎಂಬುದು ಮೂಲಗಳ ಮಾಹಿತಿ.

2019ರಲ್ಲಿಯೇ ನಟಿ ಪೂನಂ ಪಾಂಡೆ ಮತ್ತು ರಾಜ್​ ಕುಂದ್ರಾ ನಡುವೆ ಕಿರಿಕ್​ ಆಗಿತ್ತು. ತಮ್ಮ ಮೊಬೈಲ್​ ಆ್ಯಪ್​ಗಾಗಿ ಪೂನಂ ಅವರು ರಾಜ್​ ಕುಂದ್ರಾ ಜೊತೆ ಕೈ ಜೋಡಿಸಿದ್ದರು. ಆದರೆ ಅವರಿಬ್ಬರ ವ್ಯವಹಾರದಲ್ಲಿ ಜಟಾಪಟಿ ಉಂಟಾಯಿತು. ತಮ್ಮ ಫೋಟೋ ಮತ್ತು ವಿಡಿಯೋಗಳನ್ನು ಅನುಮತಿ ಇಲ್ಲದೆ ರಾಜ್​ ಕುಂದ್ರಾ ಬಳಸಿಕೊಳ್ಳುತ್ತಿದ್ದಾರೆ ಎಂದು ಪೂನಂ ಪಾಂಡೆ ತಕರಾರು ತೆಗೆದಿದ್ದರು. ಪೂನಂ ಪಾಂಡೆ ಕೂಡ ಮಾದಕ​ ಫೋಟೋ ಮತ್ತು ವಿಡಿಯೋಗಳ ಮೂಲಕ ಜನಪ್ರಿಯರಾಗಿದ್ದಾರೆ.

ರಾಜ್​ ಕುಂದ್ರಾ ನಡೆಸುತ್ತಿದ್ದ ಅಶ್ಲೀಲ ಸಿನಿಮಾ ದಂಧೆಯಲ್ಲಿ ನಟಿ-ಮಾಡೆಲ್​ ಗೆಹನಾ ವಸಿಷ್ಠ ಕೂಡ ಅರೆಸ್ಟ್​ ಆಗಿದ್ದಾರೆ. ಈ ಬಗ್ಗೆ ಗೆಹನಾ ಪರ ವಕ್ತಾರರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಗೆಹನಾ ಬೋಲ್ಡ್​ ದೃಶ್ಯಗಳಲ್ಲಿ ನಟಿಸುತ್ತಿದ್ದರು. ಅದನ್ನು ಅಶ್ಲೀಲ/ನೀಲಿ ಚಿತ್ರಗಳ ಜೊತೆ ಹೋಲಿಸಬಾರದು. ಮುಂಬೈ ಪೊಲೀಸರ ಮೇಲೆ ನಮಗೆ ನಂಬಿಕೆ ಇದೆ. ಯಾರು ನಿಜವಾದ ಅಪರಾಧಿಗಳು ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸದ್ಯ ಗೆಹನಾ ಜಾಮೀನು ಪಡೆದು ಹೊರಬಂದಿದ್ದಾರೆ.

ಇದನ್ನೂ ಓದಿ:

ಪಾರ್ನ್​ ದಂಧೆ ಆರೋಪ; ನಟಿ ಶಿಲ್ಪಾಶೆಟ್ಟಿ ಪತಿ ರಾಜ್‌ ಕುಂದ್ರಾ ಜುಲೈ 23ರವರೆಗೆ ಪೊಲೀಸ್ ಕಸ್ಟಡಿಗೆ

ಖ್ಯಾತ ನಟಿ ಶಿಲ್ಪಾ ಶೆಟ್ಟಿಗೆ ರಾಜ್​ ಕುಂದ್ರಾ ಸಿಕ್ಕಿದ್ದು ಹೇಗೆ? ಆ ಬಗ್ಗೆ ರಾಜ್​ನ ಮೊದಲ ಪತ್ನಿ ಕವಿತಾ ಏನೆಂದಿದ್ದರು?

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada