ಖ್ಯಾತ ನಟಿ ಶಿಲ್ಪಾ ಶೆಟ್ಟಿಗೆ ರಾಜ್​ ಕುಂದ್ರಾ ಸಿಕ್ಕಿದ್ದು ಹೇಗೆ? ಆ ಬಗ್ಗೆ ರಾಜ್​ನ ಮೊದಲ ಪತ್ನಿ ಕವಿತಾ ಏನೆಂದಿದ್ದರು?

Shilpa Shetty and Raj Kundra: ರಾಜ್​ ಹಾಗೂ ಶಿಲ್ಪಾ ಇಬ್ಬರಲ್ಲಿ ಮದುವೆಯಾಗುವ ಬಗ್ಗೆ ಮೊದಲು ಪ್ರಸ್ತಾಪ ಮಾಡಿದ್ದು ರಾಜ್​ ಕುಂದ್ರಾ. ಪ್ಯಾರಿಸ್​ನಲ್ಲಿದ್ದಾಗ ಪ್ರಪೋಸ್​ ಮಾಡಿದ್ದ ರಾಜ್​ ಕುಂದ್ರಾ ಐದು ಕ್ಯಾರೆಟ್​ನ ವಜ್ರದ ಉಂಗುರ ಕೊಟ್ಟು ಪ್ರೇಮ ನಿವೇದನೆ ಮಾಡಿಕೊಂಡಿದ್ದರಂತೆ.

ಖ್ಯಾತ ನಟಿ ಶಿಲ್ಪಾ ಶೆಟ್ಟಿಗೆ ರಾಜ್​ ಕುಂದ್ರಾ ಸಿಕ್ಕಿದ್ದು ಹೇಗೆ? ಆ ಬಗ್ಗೆ ರಾಜ್​ನ ಮೊದಲ ಪತ್ನಿ ಕವಿತಾ ಏನೆಂದಿದ್ದರು?
ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾ ದಂಪತಿ
TV9kannada Web Team

| Edited By: Skanda

Jul 20, 2021 | 3:10 PM

ಬಾಲಿವುಡ್​ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ (Shilpa Shetty and Raj Kundra) ಸದ್ಯ ಭಾರೀ ಸುದ್ದಿಯಲ್ಲಿದ್ದಾರೆ. ರಾಜ್​ ಕುಂದ್ರಾ ಮೇಲೆ ಗಂಭೀರ ಆರೋಪಗಳೂ ಕೇಳಿಬರುತ್ತಿದ್ದು, ಶಿಲ್ಪಾ ಶೆಟ್ಟಿ ಅಭಿಮಾನಿಗಳಿಗೂ ಇದು ಶಾಕ್​ ನೀಡಿದೆ. ಬಾಲಿವುಡ್​ ಸೆಲೆಬ್ರಿಟಿ ಜೋಡಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಶಿಲ್ಪಾ ಹಾಗೂ ರಾಜ್​ ಕುಂದ್ರಾ ದಂಪತಿ (Couple) ಒಂದು ದಶಕಕ್ಕೂ ಹೆಚ್ಚು ಅವಧಿಯ ದಾಂಪತ್ಯ ಜೀವನದಲ್ಲಿ ಒಂದಾಗಿ ಹೆಜ್ಜೆ ಹಾಕಿಕೊಂಡು ಬಂದಿದ್ದಾರೆ. 2009ರ ಅಕ್ಟೋಬರ್ 24ರಂದು ಸತಿಪತಿಗಳಾದ (Marriage) ಇವರು ಅದಕ್ಕೂ ಮುನ್ನ ಸಾಕಷ್ಟು ವಿವಾದಗಳಿಗೆ, ಊಹಾಪೋಹಗಳಿಗೆ, ಗಾಳಿ ಸುದ್ದಿಗಳಿಗೆ ಆಹಾರವಾಗಿದ್ದರು. ಆದರೂ ಎರಡು ವರ್ಷಕ್ಕಿಂತಲೂ ಕಡಿಮೆ ಕಾಲದ ಡೇಟಿಂಗ್ (Dating) ಮೂಲಕ ಹತ್ತಿರಾದ ಅವರು ದೃಢ ನಿರ್ಧಾರ ಮಾಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟು, ಸುದೀರ್ಘ ಪಯಣದಲ್ಲಿ ಖುಷಿಖುಷಿಯಾಗಿಯೇ ಸಾಗಿಬಂದಿದ್ದಾರೆ.

ಶಿಲ್ಪಾ ಶೆಟ್ಟಿ ಮೊದಲ ಬಾರಿಗೆ ರಾಜ್​ ಕುಂದ್ರಾ ಅವರನ್ನು ಭೇಟಿಯಾಗಿದ್ದು ಲಂಡನ್​ನಲ್ಲಿ. ಒಂದು ವ್ಯಾವಹಾರಿಕ ಮಾತುಕತೆಗೆ ಸಂಬಂಧಿಸಿದಂತೆ ಸ್ನೇಹಿತರ ಮೂಲಕ ಕುಂದ್ರಾ ಅವರನ್ನು ಭೇಟಿ ಮಾಡಿದ್ದ ಶಿಲ್ಪಾ ಆಗಷ್ಟೇ ಬಿಗ್​ ಬ್ರದರ್ ಶೋ ಪಟ್ಟವನ್ನು ಅಲಂಕರಿಸಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಮೊದಲ ಭೇಟಿಯಲ್ಲೇ ರಾಜ್​ ಕುಂದ್ರಾ ಅವರ ನಗು, ಮಾತು, ವ್ಯಕ್ತಿತ್ವಕ್ಕೆ ಮಾರು ಹೋದ ಶಿಲ್ಪಾಗೆ ಅವರೆಡೆಗೆ ವಿಶೇಷ ಸೆಳೆತ ಮೂಡಿತ್ತಂತೆ. ಆದರೆ, ಆ ಬಗ್ಗೆ ಸ್ನೇಹಿತರೊಟ್ಟಿಗೆ ಮಾತನಾಡುವಾಗ ರಾಜ್​ ಕುಂದ್ರಾಗೆ ವಿವಾಹವಾಗಿದೆ ಎಂಬ ವಿಚಾರ ತಿಳಿದು ಬಹಳ ಬೇಸರವಾಗಿತ್ತಂತೆ. ಇತ್ತ ರಾಜ್​ ಕುಂದ್ರಾ ತಮ್ಮ ಮೊದಲ ಪತ್ನಿಗೆ ವಿಚ್ಛೇದನ ಕೊಡುವ ಯೋಚನೆಯನ್ನು ಅದಾಗಲೇ ಮಾಡಿದ್ದರಾದರೂ ಆ ವಿಷಯ ತಿಳಿಯದ ಕಾರಣ ಶಿಲ್ಪಾ ಶೆಟ್ಟಿ ಈ ಸಂಬಂಧ ಕೈಗೂಡುವುದಿಲ್ಲ ಎಂದೇ ಭಾವಿಸಿದ್ದರಂತೆ.

ಆದರೆ, ಅದಾದ ನಾಲ್ಕೇ ನಾಲ್ಕು ತಿಂಗಳ ಬಳಿಕ ಅವರಿಬ್ಬರೂ ಮತ್ತೊಮ್ಮೆ ಭೇಟಿಯಾಗುವ ಸಮಯ ಬಂದೊದಗಿದ ಕಾರಣ ಮಾತುಕತೆಗೆ ಅವಕಾಶ ಸಿಕ್ಕಿದೆ. ಆಗ ತಾನು ವಿಚ್ಛೇದನ ನೀಡುತ್ತಿರುವ ವಿಷಯವನ್ನೂ ರಾಜ್​ ಕುಂದ್ರಾ ಶಿಲ್ಪಾ ಬಳಿ ಹಂಚಿಕೊಂಡಿದ್ದರಂತೆ. ಅನಿವಾಸಿ ಭಾರತೀಯ ಉದ್ಯಮಿಯೊಬ್ಬರ ಪುತ್ರಿಯಾದ ಕವಿತಾ ಎನ್ನುವವರನ್ನು ಮದುವೆಯಾಗಿದ್ದ ರಾಜ್​ ಕುಂದ್ರಾ ಆಗಷ್ಟೇ ಡೆಲಿನಾ ಎಂಬ ಮಗುವಿಗೆ ತಂದೆಯೂ ಆಗಿದ್ದರು.

2007ರಲ್ಲಿ ಆರಂಭವಾಯ್ತು ಶಿಲ್ಪಾ-ರಾಜ್ ಡೇಟಿಂಗ್ ಅದು 2007ರ ಸಮಯ. ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಶಿಲ್ಪಾ ಶೆಟ್ಟಿ ಯಾರ ಹೆಸರು ಹೇಳದಿದ್ದರೂ ಒಬ್ಬರೊಟ್ಟಿಗೆ ಡೇಟಿಂಗ್ ಮಾಡುತ್ತಿದ್ದೇನೆ ಎಂದು ಒಪ್ಪಿಕೊಂಡಿದ್ದರು. ಅದರ ಹೊರತಾಗಿ ಹೆಚ್ಚೇನು ಮಾಹಿತಿ ನೀಡಿರದಿದ್ದ ಅವರು, ಅದೇ ವ್ಯಕ್ತಿಯ ಜತೆಗೆ ಹೆಜ್ಜೆ ಹಾಕುವುದಾಗಿ ಆಶಿಸುತ್ತೇನೆ. ಆದರೆ, ವಿವರವಾಗಿ ಮಾತನಾಡುವುದಕ್ಕೆ ಇದು ಸೂಕ್ತ ಸಮಯವಲ್ಲ. ಆ ವ್ಯಕ್ತಿ ನನ್ನನ್ನು ಗೌರವಿಸುತ್ತಾರೆ, ನನ್ನನ್ನು ಅರ್ಥ ಮಾಡಿಕೊಳ್ಳುತ್ತಾರೆ. ದಿನದ ಅಂತ್ಯದಲ್ಲಿ ಅವರ ಮುಖವನ್ನು ನೋಡಿದರೆ ನನಗೂ ಖುಷಿಯೆನಿಸುತ್ತದೆ. ಇದಕ್ಕಿಂತ ಹೆಚ್ಚು ಇನ್ನೇನು ಕೇಳಬೇಡಿ ಎಂದಿದ್ದರು.

ನನ್ನನ್ನು ಮದುವೆಯಾಗುತ್ತೀಯಾ ಎಂದು ಕೇಳಿದ್ದ ರಾಜ್​ ರಾಜ್​ ಹಾಗೂ ಶಿಲ್ಪಾ ಇಬ್ಬರಲ್ಲಿ ಮದುವೆಯಾಗುವ ಬಗ್ಗೆ ಮೊದಲು ಪ್ರಸ್ತಾಪ ಮಾಡಿದ್ದು ರಾಜ್​ ಕುಂದ್ರಾ. ಪ್ಯಾರಿಸ್​ನಲ್ಲಿದ್ದಾಗ ಪ್ರಪೋಸ್​ ಮಾಡಿದ್ದ ರಾಜ್​ ಕುಂದ್ರಾ ಐದು ಕ್ಯಾರೆಟ್​ನ ವಜ್ರದ ಉಂಗುರ ಕೊಟ್ಟು ಪ್ರೇಮ ನಿವೇದನೆ ಮಾಡಿಕೊಂಡಿದ್ದರಂತೆ. ಔತಣ ಕೂಟ ಏರ್ಪಡಿಸಿದ್ದ ಅವರು ಕೊನೆಯಲ್ಲಿ ಶಿಲ್ಪಾಗೆ ಅಚ್ಚರಿಯಾಗುವ ರೀತಿಯಲ್ಲಿ ಪ್ರಪೋಸ್ ಮಾಡಿ ಮದುವೆಯ ಉಂಗುರ ಇನ್ನೂ ದೊಡ್ಡದಿರಲಿದೆ ಎಂದು ತಮಾಷೆ ಮಾಡಿದ್ದರಂತೆ. ಅಂದು ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲು ಅಧಿಕೃತವಾಗಿ ತೀರ್ಮಾನಿಸಿದರಂತೆ.

ರಾಜ್​ ಕುಂದ್ರಾ ಮೊದಲ ಪತ್ನಿಯ ದೂಷಣೆ ಏನು? ರಾಜ್ ಕುಂದ್ರಾ ಅವರ ಮೊದಲ ಪತ್ನಿ ಕವಿತಾ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಶಿಲ್ಪಾ ಶೆಟ್ಟಿಯಿಂದಾಗಿಯೇ ಕುಂದ್ರಾ ನನ್ನನ್ನೂ, ನನ್ನ ಎಳೆ ಮಗುವನ್ನೂ ತೊರೆದಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಅದನ್ನು ನಿರಾಕರಿಸಿದ್ದ ಶಿಲ್ಪಾ ಹಾಗೂ ರಾಜ್​ ಕುಂದ್ರಾ ನಾವಿಬ್ಬರೂ ಭೇಟಿಯಾಗುವ ಮುನ್ನವೇ ಆ ಸಂಬಂಧ ಅಂತ್ಯವಾಗಿತ್ತು ಎಂದು ಹೇಳಿದ್ದರು.

ರಾಜ್​-ಶಿಲ್ಪಾ ದಾಂಪತ್ಯ ಜೀವನ 2009ನೇ ಇಸವಿಯ ನವೆಂಬರ್ 22ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಿಲ್ಪಾ ಶೆಟ್ಟಿ ಹಾಗೂ ರಾಜ್​ ಕುಂದ್ರಾ ಮಡಿಲಿಗೆ 2012 ಮೇ 21ರಂದು ಮಗನ ಆಗಮನವಾಯಿತು. ಮಗನಿಗೆ ವಿವಾನ್​ ಎಂದು ಹೆಸರಿಟ್ಟ ಶಿಲ್ಪಾ-ರಾಜ್ ದಂಪತಿ ಅದಾದ 8 ವರ್ಷಗಳ ಬಳಿಕ ಅಂದರೆ 2020ನೇ ಇಸವಿಯ ಫೆಬ್ರವರಿ ತಿಂಗಳಲ್ಲಿ ಬಾಡಿಗೆ ತಾಯಿ ಮೂಲಕ ಹೆಣ್ಣು ಮಗುವೊಂದನ್ನು ಪಡೆದು ಆಕೆಗೆ ಸಮಿಶಾ ಎಂದು ಹೆಸರಿಟ್ಟಿದ್ದಾರೆ. ಆರೋಗ್ಯ ಸಮಸ್ಯೆಯ ಕಾರಣದಿಂದಾಗಿ ಒಂದೆರೆಡು ಬಾರಿ ಗರ್ಭಪಾತವಾದ ಕಾರಣ ಬಾಡಿಗೆ ತಾಯಿ ಮೂಲಕ ಮಗು ಪಡೆದೆವು ಎನ್ನುವುದನ್ನೂ ಶಿಲ್ಪಾ ಶೆಟ್ಟಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Sagarika Shona: ರಾಜ್ ಕುಂದ್ರಾ ನಗ್ನವಾಗಿ ಆಡಿಶನ್ ಕೊಡಲು ಹೇಳಿದ್ದರು: ನಟಿ ಸಾಗರಿಕಾ ಶೋನಾ ಗಂಭೀರ ಆರೋಪ Raj Kundra: ರಾಜ್​ ಕುಂದ್ರಾ ಬಂಧನ; ಶಿಲ್ಪಾ ಶೆಟ್ಟಿ ಪತಿ ನಡೆಸುತ್ತಿದ್ದರು ಪಾರ್ನ್​ ಸಿನಿಮಾ ಜಾಲ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada