AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Raj Kundra: ರಾಜ್​ ಕುಂದ್ರಾ ಬಂಧನ; ಶಿಲ್ಪಾ ಶೆಟ್ಟಿ ಪತಿ ನಡೆಸುತ್ತಿದ್ದರು ಪಾರ್ನ್​ ಸಿನಿಮಾ ಜಾಲ

Raj Kundra Arrested: ಸೋಮವಾರ (ಜುಲೈ 19) ರಾಜ್​ ಕುಂದ್ರಾ ಅವರನ್ನು ಬಂಧಿಸಲಾಗಿದೆ. ಪಾರ್ನ್​ ಸಿನಿಮಾಗಳನ್ನು ಮಾಡುತ್ತಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಫೆಬ್ರವರಿಯಲ್ಲೇ ದೂರು ದಾಖಲಾಗಿತ್ತು.

Raj Kundra: ರಾಜ್​ ಕುಂದ್ರಾ ಬಂಧನ; ಶಿಲ್ಪಾ ಶೆಟ್ಟಿ ಪತಿ ನಡೆಸುತ್ತಿದ್ದರು ಪಾರ್ನ್​ ಸಿನಿಮಾ ಜಾಲ
ಶಿಲ್ಪಾ ಶೆಟ್ಟಿ-ರಾಜ್​​ ಕುಂದ್ರಾ
TV9 Web
| Edited By: |

Updated on:Jul 19, 2021 | 11:39 PM

Share

ನೀಲಿ ಸಿನಿಮಾಗಳನ್ನು ಮಾಡಿ ಅದನ್ನು ಬೇರೆಬೇರೆ ಆ್ಯಪ್​ಗಳಲ್ಲಿ ಅಪ್​ಲೋಡ್​ ಮಾಡುತ್ತಿದ್ದ ಆರೋಪದ ಮೇಲೆ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್​ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ವಿಚಾರ ಶಿಲ್ಪಾ  ಶೆಟ್ಟಿ ಅಭಿಮಾನಿಗಳಿಗೆ ಅಕ್ಷಕರಶಃ ಶಾಕ್​ ನೀಡಿದೆ. ಸೋಮವಾರ (ಜುಲೈ 19) ರಾಜ್​ ಕುಂದ್ರಾ ಅವರನ್ನು ಬಂಧಿಸಲಾಗಿದೆ. ಪಾರ್ನ್​ ಸಿನಿಮಾಗಳನ್ನು ಮಾಡುತ್ತಿದ್ದ ಜಾಲ ಆ್ಯಕ್ಟಿವ್​ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಫೆಬ್ರವರಿಯಲ್ಲೇ ದೂರು ದಾಖಲಾಗಿತ್ತು. ರಾಜ್​ ಕುಂದ್ರಾ ಈ ಪ್ರಕರಣದ ಪ್ರಮುಖ ರುವಾರಿ. ಈ ಪ್ರಕರಣದ ಕುರಿತು ಮುಂಬೈ ಪೊಲೀಸರಿಗೆ ಸಾಕ್ಷ್ಯ ಕೂಡ ದೊರೆತಿದೆ.

‘ಫೆಬ್ರವರಿ 2021ರಂದು ಕ್ರೈಮ್​ ಬ್ರ್ಯಾಂಚ್​ನಲ್ಲಿ ಪ್ರಕರಣ ದಾಖಲಾಗಿತ್ತು. ನೀಲಿ ಸಿನಿಮಾಗಳನ್ನು ಚಿತ್ರೀಕರಣ ಮಾಡಿ, ಕೆಲ ಆ್ಯಪ್​ಗಳ ಮೂಲಕ ಇದನ್ನು ಅಪ್​ಲೋಡ್​ ಮಾಡಲಾಗುತ್ತಿದೆ ಎನ್ನುವ ಮಾಹಿತಿ ನಮಗೆ ಲಭ್ಯವಾಗಿತ್ತು. ಇಂದು (ಜುಲೈ 19) ನಾವು ರಾಜ್​ ಕುಂದ್ರಾ ಅವರನ್ನು ಬಂಧಿಸಿದ್ದೇವೆ. ಇಡೀ ಪ್ರಕರಣದ ರುವಾರಿ ಅವರೇ ಆಗಿದ್ದಾರೆ. ತನಿಖೆ ಪ್ರಗತಿಯಲ್ಲಿದೆ. ತನಿಖೆ ಪೂರ್ಣಗೊಳ್ಳುವವರೆಗೂ ಏನನ್ನೂ ಹೇಳುವುದಿಲ್ಲ’ ಎಂದು ಮುಂಬೈ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಂಡ್ರಿಂಗ್​ ಹೆಸರಿನ ಇಂಗ್ಲೆಂಡ್​ ಮೂಲದ ಕಂಪನಿ ಮೇಲೆ ರಾಜ್​ 10 ಕೋಟಿ ಹೂಡಿಕೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಉಮೇಶ್ ಎಂಬಾತನನ್ನು ಬಂಧಿಸಲಾಗಿದೆ. ಕುಂದ್ರಾ ಹಾಗೂ ಉಮೇಶ್​ ನಡುವೆ ಒಪ್ಪಂದ ಇತ್ತು ಎನ್ನಲಾಗಿದೆ.

ನಟಿ ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್​ಕುಂದ್ರಾ 2009ರಲ್ಲಿ ಮದುವೆ ಆದರು. ಇಬ್ಬರೂ ಸುಖ ಸಂಸಾರ ನಡೆಸುತ್ತಿದ್ದಾರೆ. ಹೀಗಿರುವಾಗಲೇ ಈ ಸುದ್ದಿ ಬರ ಸಿಡಿಲಿನಂತೆ ಬಂದಪ್ಪಳಿಸಿದ್ದು, ಅಭಿಮಾನಿಗಳು ಹಾಗೂ ಶಿಲ್ಪಾ ಶೆಟ್ಟಿ ಕುಟುಂಬಕ್ಕೆ ಇದು ಶಾಕ್​ ನೀಡಿದೆ.

ಶಿಲ್ಪಾ-ರಾಜ್​ ಕುಂದ್ರಾ ಲವ್​ ಸ್ಟೋರಿ:

ಬ್ರ್ಯಾಂಡ್​ವೊಂದರ ಪ್ರಮೋಷನ್​ಗಾಗಿ ಶಿಲ್ಪಾ ಅವರು ರಾಜ್ ಕುಂದ್ರಾ ಜೊತೆ ಬ್ಯುಸಿನೆಸ್​ನಲ್ಲಿ ಕೈ ಜೋಡಿಸಿದ್ದರು. ಆಗಲೇ ಅವರಿಬ್ಬರಿಗೂ ಪರಿಚಯ ಬೆಳೆಯಿತು. ರಾಜ್​ ಅವರ ವ್ಯಕ್ತಿತ್ವ ಕಂಡು ಶಿಲ್ಪಾ ಫಿದಾ ಆದರು. ಆದರೆ ರಾಜ್​ಗೆ ಈಗಾಗಲೇ ಮದುವೆ ಆಗಿದೆ ಎಂಬ ವಿಷಯ ತಿಳಿದಾಗ ಶಿಲ್ಪಾಗೆ ಕೊಂಚ ನಿರಾಸೆ ಆಯಿತು. ಶೀಘ್ರದಲ್ಲೇ ತಮ್ಮ ಹೆಂಡತಿಗೆ ರಾಜ್​ ವಿಚ್ಛೇದನ ನೀಡಲಿದ್ದಾರೆ ಎಂಬುದು ಶಿಲ್ಪಾಗೆ ತಿಳಿಯಿತು. ನಂತರ ಇಬ್ಬರೂ ಡೇಟಿಂಗ್​ ಮಾಡಲು ಶುರು ಮಾಡಿದರು. ಆಗಲೇ ಅನುಮಾನ ಹೊಗೆಯಾಡುತ್ತಿತ್ತು. ಇಂಗ್ಲೆಂಡ್​ನ ರೆಸ್ಟೋರೆಂಟ್​ವೊಂದರಲ್ಲಿ ರಾಜ್​ ತುಂಬ ರೊಮ್ಯಾಂಟಿಕ್​ ಆಗಿ ಪ್ರಪೋಸ್​ ಮಾಡಿದರು. ಡೈಮಂಡ್​ ರಿಂಗ್​ ನೀಡಿ ಪ್ರೇಮ ನಿವೇದನೆ ಮಾಡಿಕೊಂಡರು. ಶಿಲ್ಪಾ ಒಪ್ಪಿಗೆ ಸೂಚಿಸಿದರು.  2009ರ ಅಕ್ಟೋಬರ್​ನಲ್ಲಿ ರಾಜ್​ ಕುಂದ್ರಾ ಮನೆಯಲ್ಲಿ ನಿಶ್ಚಿತಾರ್ಥ ನೆರವೇರಿತು. ಆಗ ಶಿಲ್ಪಾಗೆ ಅವರು 3 ಕೋಟಿ ರೂ. ಬೆಲೆ ಬಾಳುವ ವಜ್ರದ ಉಂಗುರ ನೀಡಿದರಂತೆ! ಅದೇ ವರ್ಷ ನವೆಂಬರ್​ 22ರಂದು ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ಅದ್ದೂರಿಯಾಗಿ ಮದುವೆಯಾದರು. ಪುತ್ರ ವಿಹಾನ್​ಗೆ 2012ರಲ್ಲಿ ಶಿಲ್ಪಾ ಜನ್ಮ ನೀಡಿದರು. 2020ರ ಫೆಬ್ರವರಿಯಲ್ಲಿ ಬಾಡಿಗೆ ತಾಯಿ ಮೂಲಕ ಹೆಣ್ಣು ಮಗುವನ್ನು ಪಡೆದು, ಆ ಮಗುವಿಗೆ ಸಮಿಶಾ ಎಂದು ಹೆಸರಿಟ್ಟಿದ್ದಾರೆ.

ಇದನ್ನೂ ಓದಿ: ಪತಿಯ ಶಾಕಿಂಗ್​ ಹೇಳಿಕೆ ಬೆನ್ನಲ್ಲೇ ಉದ್ದನೆಯ ಸಾಲುಗಳನ್ನು ಬರೆದ ಶಿಲ್ಪಾ; ಕೆಲವೇ ಗಂಟೆಗಳಲ್ಲಿ ಡಿಲೀಟ್​

Shilpa Shetty: ಅಕ್ರಮ ಸಂಬಂಧದಿಂದ ಮುರಿದು ಬಿದ್ದಿತ್ತು ರಾಜ್ ಕುಂದ್ರಾ ಮೊದಲ ಮದುವೆ; ಅಪ್ಸೆಟ್ ಆದ ಶಿಲ್ಪಾ ಶೆಟ್ಟಿ

Published On - 11:12 pm, Mon, 19 July 21

ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
ಎ ಯು ಜ್ಯುವೆಲ್ಲರ್ಸ್‌ನಿಂದ 140 ಕೆಜಿ ಬೆಳ್ಳಿ ದೋಚಿದವರು ಅಂದರ್!
ಎ ಯು ಜ್ಯುವೆಲ್ಲರ್ಸ್‌ನಿಂದ 140 ಕೆಜಿ ಬೆಳ್ಳಿ ದೋಚಿದವರು ಅಂದರ್!
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ಕೃಷಿ ಅಧಿಕಾರಿ ಬಳಿ 2.50 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ!
ಕೃಷಿ ಅಧಿಕಾರಿ ಬಳಿ 2.50 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ!