ಹೆಚ್.ಡಿ.ಕುಮಾರಸ್ವಾಮಿ, ಇಂದ್ರಜಿತ್ ಲಂಕೇಶ್ ಇರುವ ಫೋಟೋ ವೈರಲ್; ಅವಾಚ್ಯ ಪದ ಬಳಸಿದ ಟ್ರೋಲ್ ಮಗ ಪೇಜ್ ಅಡ್ಮಿನ್ ವಿರುದ್ಧ ದೂರು

ಅತ್ತ ಇಂದ್ರಜಿತ್ ಲಂಕೇಶ್ರಿಂದ ಸ್ಯಾಂಡಲ್ವುಡ್ ನಟ ದರ್ಶನ್ ಹಿಂಬಾಲಕರ ವಿರುದ್ಧ ದೂರು ಸಲ್ಲಿಕೆಯಾಗಿದ್ದು, ಇತ್ತ ಜೆಡಿಎಸ್ನಿಂದಲೂ ಟ್ರೋಲ್ ಪೇಜ್ ಅಡ್ಮಿನ್ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.

ಹೆಚ್.ಡಿ.ಕುಮಾರಸ್ವಾಮಿ, ಇಂದ್ರಜಿತ್ ಲಂಕೇಶ್ ಇರುವ ಫೋಟೋ ವೈರಲ್; ಅವಾಚ್ಯ ಪದ ಬಳಸಿದ ಟ್ರೋಲ್ ಮಗ ಪೇಜ್ ಅಡ್ಮಿನ್ ವಿರುದ್ಧ ದೂರು
ಅವಾಚ್ಯ ಪದ ಬಳಸಿ ಪೋಸ್ಟ್ ಮಾಡಿದ ಟ್ರೋಲ್ ಮಗ ಪೇಜ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ನಿರ್ದೇಶಕ ಇಂದ್ರಜಿತ್ ಲಂಕೇಶ್ ಒಟ್ಟಿಗೆ ಕುಳಿತಿರುವ ಫೋಟೋವೊಂದು ವೈರಲ್ ಆಗಿದೆ. ಅವಾಚ್ಯ ಪದ ಬಳಸಿ ನಿಂದಿಸಿದ ಫೋಟೋ ವೈರಲ್ ಆಗಿದ್ದು, ಟ್ರೋಲ್ ಮಗ ಪೇಜ್ ಅಡ್ಮಿನ್ ವಿರುದ್ಧ ದೂರು ಸಲ್ಲಿಕೆಯಾಗಿದೆ. ಜೆಡಿಎಸ್ ಕಾನೂನು ಘಟಕದ ಕಾರ್ಯದರ್ಶಿ ಪ್ರದೀಪ್ ಕುಮಾರ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಅತ್ತ ಇಂದ್ರಜಿತ್ ಲಂಕೇಶ್​ರಿಂದ ಸ್ಯಾಂಡಲ್​ಬುಡ್​ ನಟ ದರ್ಶನ್ ಹಿಂಬಾಲಕರ ವಿರುದ್ಧ ದೂರು ಸಲ್ಲಿಕೆಯಾಗಿದ್ದು, ಇತ್ತ ಜೆಡಿಎಸ್ನಿಂದಲೂ ಟ್ರೋಲ್ ಪೇಜ್ ಅಡ್ಮಿನ್ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ‘ಸೂತ್ರಧಾರಿ ಕರಿ ಇಡ್ಲಿ, ಪಾತ್ರಧಾರಿ ಬಿಳಿ ಬಾಂಡ್ಲಿ’ಅಂತ ಟ್ರೋಲ್ ಮಾಡಿದ್ದಾರೆ. ಈ ಹಿಂದೆ ಕೂಡ ಕುಮಾರಸ್ವಾಮಿ ಸೇರಿದಂತೆ ಅನೇಕ ಜೆಡಿಎಸ್ ಮುಖಂಡರನ್ನ ತೇಜೋವಧೆ ಮಾಡಲಾಗಿದೆ. ಟ್ರೋಲ್ ಪೇಜ್ ಅಡ್ಮಿನ್ ವಿರುದ್ಧ ಕ್ರಮ ಜರುಗಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಸ್ಪಷ್ಟನೆ ನೀಡಿದ್ದ ಕುಮಾರಸ್ವಾಮಿ
ನಟ ದರ್ಶನ್ ಹೋಟೆಲ್​ನಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಿಸುತ್ತಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಇಂದ್ರಜಿತ್ ಲಂಕೇಶ್ ಇರುವ ಫೋಟೋ ವೈರಲ್ ಆಗಿತ್ತು. ಫೋಟೋದಲ್ಲಿ ಇಬ್ಬರು ಒಟ್ಟಿಗೆ ಇರುವುದನ್ನು ನೋಡಿ ಕೆಲ ಅನುಮಾನಕ್ಕೆ ಕಾರಣವಾಗಿತ್ತು. ಆದರೆ ಈ ಬಗ್ಗೆ ಸ್ವತಃ ಕುಮಾರಸ್ವಾಮಿಯವರೇ ಸ್ಪಷ್ಟನೆ ನೀಡಿದ್ದರು. ಈ ಫೋಟೋವನ್ನು ಯಾಕೆ ವೈರಲ್ ಮಾಡಿದ್ದಾರೋ ಗೊತ್ತಿಲ್ಲ. ಪ್ರತಿದಿನ ನನ್ನನ್ನು ನೂರಾರು ಜನ ಭೇಟಿ ಮಾಡುತ್ತಾರೆ. ನನ್ನ ಜೊತೆ ಫೋಟೋ ತೆಗೆದುಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ಇಂದ್ರಜಿತ್ ಲಂಕೇಶ್ ನನ್ನ ಭೇಟಿ ಮಾಡಿಲ್ಲ ಅಂತ ತಿಳಿಸಿದ್ದರು.

ಇದನ್ನೂ ಓದಿ

ನನ್ನ ಮತ್ತು ಇಂದ್ರಜಿತ್ ಭೇಟಿಯ ಚಿತ್ರ ಹಳೆಯದು: ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಸ್ಪಷ್ಟನೆ

ಈ ಪ್ರಕರಣಕ್ಕೂ ಕುಮಾರಸ್ವಾಮಿಗೂ ಸಂಬಂಧವಿಲ್ಲ ಎಂದ ಇಂದ್ರಜಿತ್​

(secretary of JDS legal unit has filed a complaint against the troll maga Page Admin)